Saturn Retrograde Effect: ಶನಿ ಹಿಮ್ಮೆಟುವಿಕೆ; ಈ 3 ರಾಶಿಯವರು ಎಚ್ಚರದಿಂದಿರಿ, ಸಮಸ್ಯೆಗೆ ಪರಿಹಾರವೂ ಇಲ್ಲಿದೆ
Saturn Retrograde Effect: 29 ಜೂನ್ 2024 ರಂದು, ಶನಿಯು ಕುಂಭ ರಾಶಿಯಲ್ಲಿ ಹಿಮ್ಮೆಟ್ಟುತ್ತಾನೆ. ಇದರ ಪರಿಣಾಮ 3 ರಾಶಿಯವರಿಗೆ ಸಮಸ್ಯೆ ಉಂಟಾಗಲಿದೆ. ನಕಾರಾತ್ಮಕ ಪರಿಣಾಮಗಳನ್ನು ಅನುಭವಿಸುವವರಿಗೆ ಪರಿಹಾರ ಕೂಡಾ ಇಲ್ಲಿದೆ.
Saturn Retrograde Effect: 2024 ರಿಂದ ಅನೇಕ ರಾಶಿಗಳು ತಮ್ಮ ಸ್ಥಾನ ಬದಲಿಸಿವೆ. ಈ ಕಾರಣದಿಂದ ಕೆಲವು ರಾಶಿಗಳಿಗೆ ಸಣ್ಣ ಪುಟ್ಟ ಸಮಸ್ಯೆಗಳಾದರೆ, ಇನ್ನೂ ಕೆಲವು ರಾಶಿಯವರಿಗೆ ಶನಿಯು ಉತ್ತಮ ಫಲಗಳನ್ನು ನೀಡುತ್ತಿದ್ದಾನೆ. ಹಿಂದೂ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸಂಚಾರ ಹಾಗೂ ಹಿಮ್ಮೆಟ್ಟುವಿಕೆ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಶನಿಯು ಈ ವರ್ಷ ಕುಂಭ ರಾಶಿಯಲ್ಲಿ ನೆಲೆಸಿದ್ದಾನೆ.
ಶನಿಯು ಕರ್ಮಫಲವನ್ನು ಕೊಡುವವನೆಂದು ಪರಿಗಣಿಸಲಾಗಿದೆ. ಜನರು ಮಾಡುವ ಪಾಪ , ಕರ್ಮಗಳ ಆಧಾರದ ಮೇಲೆ ಶನೈಶ್ಚರನ ಪ್ರತಿಫಲವನ್ನು ನೀಡುತ್ತಾನೆ. ಗುರುವಿನ ನಂತರ ಶನಿಯನ್ನು ಅತಿ ದೊಡ್ಡ ಗ್ರಹವೆಂದು ಪರಿಗಣಿಸಲಾಗಿದೆ. ಎರಡೂವರೆ ವರ್ಷಕ್ಕೊಮ್ಮೆ ಶನಿಯು ರಾಶಿ ಬದಲಿಸುತ್ತಾನೆ. ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇಡೀ ವರ್ಷ ಶನಿಯು ಇದೇ ರಾಶಿಯಲ್ಲಿ ನೆಲೆಸಿದ್ದರೂ 3 ಬಾರಿ ತನ್ನ ಸ್ಥಾನ ಬದಲಿಸುತ್ತಾನೆ. ಜ್ಯೋತಿಷಿಗಳ ಪ್ರಕಾರ 29 ಜೂನ್ 2024 ರಂದು, ಶನಿಯು ಕುಂಭ ರಾಶಿಯಲ್ಲಿ ಹಿಮ್ಮೆಟ್ಟುತ್ತಾನೆ. ಈ ಹಿಮ್ಮೆಟ್ಟುವಿಕೆಯು ಕೆಲವು ರಾಶಿಚಕ್ರದ ಚಿಹ್ನೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಶನಿಯ ಋಣಾತ್ಮಕ ಪ್ರಭಾವವನ್ನು ತಪ್ಪಿಸಲು ಕೆಲವು ಪರಿಹಾರಗಳನ್ನು ಅನುಸರಿಸಿದರೆ, ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂದು ಪಂಡಿತರು ಹೇಳುತ್ತಾರೆ.
ಶನಿಯು ಯಾವ ರಾಶಿಯಲ್ಲಿ ಹಿಮ್ಮೆಟ್ಟುತ್ತಾನೆ?
ಶನಿಯ ಹಿಮ್ಮೆಟ್ಟುವಿಕೆ ಮೇಷ, ಸಿಂಹ ಮತ್ತು ವೃಶ್ಚಿಕ ರಾಶಿಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಪರಿಣಾಮವಾಗಿ, ಈ ರಾಶಿಚಕ್ರ ಚಿಹ್ನೆಗಳು ಅನೇಕ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಯಾವುದೇ ಕಾರ್ಯ ಕೈಗೊಂಡರೆ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ. ಆದ್ದರಿಂದಲೇ ಈ ರಾಶಿಯವರು ಶನಿಯ ಕೃಪೆಗೆ ಪಾತ್ರರಾಗಲು ಪ್ರಯತ್ನಿಸಬೇಕು.
ಈ ಚಿಹ್ನೆಗಳ ಜನರು ಈ ವರ್ಷ ಜಾಗರೂಕರಾಗಿರಬೇಕು. ಹಿಂಜರಿಕೆಯು ಧನಾತ್ಮಕವಾಗಿದ್ದರೆ ಆಗ ಅವರಿಗೆ ಲಾಭವಾಗುತ್ತದೆ. ಶನಿಯ ಹಿನ್ನಡೆಯು ನಕಾರಾತ್ಮಕವಾಗಿದ್ದರೆ, ತೊಂದರೆಗಳು ಮತ್ತು ಸಮಸ್ಯೆಗಳು ಉದ್ಭವಿಸುತ್ತವೆ. ನವೆಂಬರ್ 15 ರವರೆಗೆ ಶನಿಯು ಕುಂಭ ರಾಶಿಯಲ್ಲಿ ಹಿಮ್ಮೆಟ್ಟುತ್ತಾನೆ. ಅಲ್ಲಿಯವರೆಗೆ, ಈ ಮೂರು ರಾಶಿಯ ಜನರು ಬಹಳ ಜಾಗರೂಕರಾಗಿರಬೇಕು.
ಶನಿಗ್ರಹದ ಹಿಮ್ಮೆಟ್ಟುವಿಕೆಯ ಪರಿಣಾಮವನ್ನು ಕಡಿಮೆ ಮಾಡುವ ಪರಿಹಾರ
ಶನಿಯ ಹಿನ್ನಡೆಯು ನಕಾರಾತ್ಮಕವಾಗಿದ್ದರೆ ಈ ಪರಿಹಾರಗಳನ್ನು ಅನುಸರಿಸಬೇಕು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಈ ಪರಿಹಾರವನ್ನು ಕೈಗೊಳ್ಳಲು ಜನ್ಮ ನಕ್ಷತ್ರದಲ್ಲಿ ಶನಿಯ ಸ್ಥಾನವು ಬಲವಾಗಿದೆಯೇ ಅಥವಾ ದುರ್ಬಲವಾಗಿದೆಯೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.
ಶನಿಯ ವಿರುದ್ಧ ದಿಕ್ಕಿನಿಂದ ಬಳಲುತ್ತಿರುವವರ ಪರಿಣಾಮವನ್ನು ಕಡಿಮೆ ಮಾಡಲು ಶನೈಶ್ಚರ ಮಂತ್ರವನ್ನು ಪ್ರತಿದಿನ ಪಠಿಸಬೇಕು, ಪ್ರತಿ ಶನಿವಾರ ಹನುಮಾನ್ ಚಾಲಿಸಾ ಓದಬೇಕು. ನಿಮ್ಮ ಮನೆ ಸಮೀಪದಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಅರ್ಚಕರಿಗೆ ದಾನ ನೀಡಬೇಕು. ಶನಿಯ ಹಿನ್ನಡೆಯು ಪ್ರಬಲವಾಗಿರುವುದರಿಂದ, ಈ ಪರಿಹಾರವನ್ನು ಅನುಸರಿಸಿದರೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಜ್ಯೋತಿಷಿಗಳು ಸೂಚಿಸುತ್ತಾರೆ. ಶನಿಯ ಹಿನ್ನಡೆಯಿಂದ ಬಳಲುತ್ತಿರುವ ಯಾರಾದರೂ ಈ ಪರಿಹಾರವನ್ನು ಅನುಸರಿಸಬಹುದು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.