ಶನಿ ಸಂಕ್ರಮಣ 2025: ಕುಂಭ ರಾಶಿಯವರಿಗೆ ಸಾಡೇಸಾತಿ ಅಂತಿಮ ಹಂತ, ಮೀನ ರಾಶಿಯವರಿಗೆ 2ನೇ ಹಂತ, ಮಾನಸಿಕ ಒತ್ತಡ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶನಿ ಸಂಕ್ರಮಣ 2025: ಕುಂಭ ರಾಶಿಯವರಿಗೆ ಸಾಡೇಸಾತಿ ಅಂತಿಮ ಹಂತ, ಮೀನ ರಾಶಿಯವರಿಗೆ 2ನೇ ಹಂತ, ಮಾನಸಿಕ ಒತ್ತಡ

ಶನಿ ಸಂಕ್ರಮಣ 2025: ಕುಂಭ ರಾಶಿಯವರಿಗೆ ಸಾಡೇಸಾತಿ ಅಂತಿಮ ಹಂತ, ಮೀನ ರಾಶಿಯವರಿಗೆ 2ನೇ ಹಂತ, ಮಾನಸಿಕ ಒತ್ತಡ

Saturn Transit 2025: ಶನಿಯು ಮುಂದಿನ ವರ್ಷ ಮಾರ್ಚ್‌ 29ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸುತ್ತಾನೆ. ಈ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕುಂಭ, ಮೀನ ರಾಶಿಯವರಿಗೆ ಕರ್ಮಕಾರಕ ಶನಿ ಏನು ಫಲ ನೀಡಲಿದ್ದಾನೆ, ಪರಿಹಾರಗಳೇನು? ಇಲ್ಲಿದೆ ಮಾಹಿತಿ.

ಶನಿ ಸಂಕ್ರಮಣ 2025: ಕುಂಭ, ಮೀನ ರಾಶಿಗಳ ಮೇಲೆ ಶನಿ ಸಂಚಾರ ಪ್ರಭಾವ
ಶನಿ ಸಂಕ್ರಮಣ 2025: ಕುಂಭ, ಮೀನ ರಾಶಿಗಳ ಮೇಲೆ ಶನಿ ಸಂಚಾರ ಪ್ರಭಾವ (PC: Canva)

ಶನಿ ಸಂಕ್ರಮಣ 2025: ಶನಿಯನ್ನು ಕರ್ಮಕಾರಕ ಎಂದು ಕರೆಯಲಾಗುತ್ತದೆ. ಎರಡೂವರೆ ವರ್ಷಗಳಿಗೊಮ್ಮೆ ಸ್ಥಾನ ಬದಲಿಸುವ ಶನಿಯು 29 ಮಾರ್ಚ್‌ 2025 ರಾತ್ರಿ ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಮಕರ ರಾಶಿಯವರಿಗೆ ಸಾಡೇ ಸಾತಿ ಮುಕ್ತಾಯವಾಗುತ್ತದೆ. ಮೇಷ ರಾಶಿಗೆ ಸಾಡೇಸಾತಿ ಪ್ರಾರಂಭವಾಗುತ್ತದೆ. ಶನಿ ಸಂಕ್ರಮಣವು ಎಲ್ಲಾ 12 ರಾಶಿಗಳ ಮೇಲೆ ವಿವಿಧ ಪರಿಣಾಮ ಬೀರುತ್ತದೆ.

ಶನಿ ಸಂಕ್ರಮಣದಿಂದ ಮೇಷ ರಾಶಿಯವರಿಗೆ ಸಾಡೇಸಾತಿಯ ಮೊದಲ ಹಂತ, ಮೀನ ರಾಶಿಯವರಿಗೆ 2ನೇ ಹಂತ ಹಾಗೂ ಕುಂಭ ರಾಶಿಯವರಿಗೆ ಕೊನೆಯ ಹಂತದ ಪರಿಣಾಮಗಳನ್ನು ಬೀರಲಿದೆ. ಶನಿಯ ಧೈಯಾ ವೃಶ್ಚಿಕ ರಾಶಿಯವರಿಗೆ ಕೊನೆಗೊಂಡು ಧನಸ್ಸು ರಾಶಿಯಲ್ಲಿ ಶುರುವಾಗುತ್ತದೆ. ಆದರೆ ಇದು ಹೆಚ್ಚಿನ ಪರಿಣಾಮಗಳನ್ನು ಬೀರುವುದಿಲ್ಲ. ಶನಿಯು ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಲು ನಮಗೆ ಮಾರ್ಗದರ್ಶನ ನೀಡುತ್ತಾನೆ, ಅದನ್ನು ತಪ್ಪಿದಲ್ಲಿ ಎಚ್ಚರಿಸುತ್ತಾನೆ. ಶಿಕ್ಷೆಯನ್ನೂ ನೀಡುತ್ತಾನೆ. ತಪ್ಪು ದಾರಿಯಲ್ಲಿ ನಡೆದರೆ ಶಿಕ್ಷಿಸುತ್ತಾನೆ. 2025 ರಲ್ಲಿ ಶನಿಯ ಸಂಚಾರವು ನಿಮ್ಮ ವೃತ್ತಿ, ಉದ್ಯೋಗ ಮತ್ತು ವೈಯಕ್ತಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಕುಂಭ, ಮೀನ ರಾಶಿಯವರ ಶನಿ ಸಂಕ್ರಮಣ ಫಲಿತಾಂಶ ಹೀಗಿದೆ.

ಕುಂಭ ರಾಶಿ

ಶನಿ ಸಂಕ್ರಮಣ 2025 ರ ಸಮಯದಲ್ಲಿ, ಕುಂಭ ರಾಶಿಯ ಅಧಿಪತಿ ಮತ್ತು ನಿಮ್ಮ12 ಮನೆಯ ಶನಿಯು 2ನೇ ಮನೆಗೆ ಚಲಿಸುತ್ತಾನೆ. ಇದು ಕುಂಭ ರಾಶಿಯವರಿಗೆ ಸಾಡೇಸಾತಿಯ ಅಂತಿಮ ಹಂತವನ್ನು ಸೂಚಿಸುತ್ತದೆ. ಈ ಸ್ಥಾನದಿಂದ, ಶನಿಯು ನಿಮ್ಮ ನಾಲ್ಕನೇ, ಎಂಟನೇ ಮತ್ತು ಹನ್ನೊಂದನೇ ಮನೆಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತಾನೆ. ಈ ಅವಧಿಯು ಸಂಪತ್ತನ್ನು ಸಂಗ್ರಹಿಸಲು ಅನುಕೂಲ ಮಾಡಿಕೊಡುತ್ತದೆ. ಹಣ ಉಳಿತಾಯ ಮತ್ತು ಪರಿಣಾಮಕಾರಿ ನಿರ್ವಹಣೆಯ ಬಗ್ಗೆ ನೀವು ಕಲಿಯುತ್ತೀರಿ. ಆರ್ಥಿಕ ಸ್ಥಿತಿ ಉತ್ತಮವಾಗಲು ನೀವು ಸಾಕಷ್ಟು ಶ್ರಮ ವಹಿಸಬೇಕು.

ನೀವು ವಿದೇಶದಲ್ಲಿ ಉದ್ಯೋಗದಲ್ಲಿದ್ದರೆ, ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ಅಂತರಾರಾಷ್ಟ್ರೀಯ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರೆ, ಈ ಶನಿ ಸಂಕ್ರಮಣವು ಗಮನಾರ್ಹ ಯಶಸ್ಸು ಮತ್ತು ಉಳಿತಾಯದಲ್ಲಿ ಹೆಚ್ಚಳವನ್ನು ತರುತ್ತದೆ. ಕುಟುಂಬದಲ್ಲಿ ಸಂಬಂದಗಳಲ್ಲಿ ಏರಿಳಿತ ಉಂಟಾದರೂ ನಂತರ ಪರಿಸ್ಥಿತಿ ಸುಧಾರಿಸುತ್ತದೆ. ಕಟುವಾಗಿ ಮಾತನಾಡುವುದನ್ನು ತಪ್ಪಿಸಿ, ಆಸ್ತಿ ವಹಿವಾಟಿನಿಂದ ಲಾಭ ದೊರೆಯಲಿದೆ. ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಜುಲೈ ಮತ್ತು ನವೆಂಬರ್ ತಿಂಗಳ ನಡುವೆ ಕೌಟುಂಬಿಕ ಸಮಸ್ಯೆ ಉಂಟಾಗಬಹುದ, ಏನೇ ಸಮಸ್ಯೆ ಇದ್ದರೂ ನಿಮ್ಮ ನಿರಂತರ ಪ್ರಯತ್ನದ ಮೂಲಕ, ನೀವು ಸಮಸ್ಯೆಗಳನ್ನು ಬದಿಗಿರಿಸಬಹುದು ಮತ್ತು ಆರ್ಥಿಕ ಲಾಭವನ್ನು ಪಡೆಯಬಹುದು.

ಪರಿಹಾರ: ಶನಿವಾರದಂದು ಶನಿ ಚಾಲೀಸಾವನ್ನು ಪಠಿಸಿ

ಮೀನ ರಾಶಿ

ಶನಿ ಸಂಕ್ರಮಣದಲ್ಲಿ ಮೀನ ರಾಶಿಯವರು 2ನೇ ಹಂತರವನ್ನು ಎದುರಿಸಲಿದ್ದಾರೆ. ನಿಮ್ಮ 11 ಮತ್ತು 12ನೇ ಮನೆಗಳ ಅಧಿಪತಿಯಾಗಿ, ಮೀನದಲ್ಲಿ ಶನಿಯ ಸ್ಥಾನವು ನಿಮ್ಮ ಮೂರನೇ, ಏಳನೇ ಮತ್ತು ಹತ್ತನೇ ಮನೆಗಳ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಒಡಹುಟ್ಟಿದವರ ಜೊತೆಗಿನ ಪ್ರೀತಿ ಬಲವಾಗುತ್ತದೆ. ವೈವಾಹಿಕ ಜೀವನದಲ್ಲಿ ಕೆಲವು ಏರಿಳಿತಗಳನ್ನು ಕಾಣಬಹುದು, ನಿಮ್ಮ ಸಂಗಾತಿಗೆ ಆರೋಗ್ಯ ಸಮಸ್ಯೆಗಳು ನಿಮ್ಮ ಧೈರ್ಯವನ್ನು ಕುಗ್ಗಿಸಬಹುದು, ಎಚ್ಚರಿಕೆಯಿಂದಿರಿ.

ಈ ಅವಧಿಯು ವೃತ್ತಿಪರ ಸಂಬಂಧಗಳಿಗೆ ಅನುಕೂಲಕರವಾಗಿರುತ್ತದೆ, ನಿಮ್ಮ ವ್ಯಾಪಾರಕ್ಕೆ ಪ್ರಯೋಜನವಾಗುವ ಹೊಸ ವ್ಯಾಪಾರ ಸಂಪರ್ಕಗಳನ್ನು ಸ್ಥಾಪಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ದೀರ್ಘಾವಧಿಯ ವ್ಯಾಪಾರ ಯೋಜನೆ ಪರಿಣಾಮಕಾರಿಯಾಗಿರುತ್ತದೆ. ಉದ್ಯೋಗದಲ್ಲಿರುವವರು ಬುದ್ಧಿವಂತಿಕೆಯಿಂದ ಕೆಲಸ ಮಾಡುವುದರಿಂದ ಮತ್ತು ಕಠಿಣ ಪರಿಶ್ರಮದಿಂದ ಲಾಭ ಪಡೆಯುತ್ತಾರೆ, ಆದರೂ ಮಾನಸಿಕ ಒತ್ತಡ ಇದ್ದೇ ಇರುತ್ತದೆ. ಜುಲೈನಿಂದ ನವೆಂಬರ್‌ವರೆಗೆ, ವೈವಾಹಿಕ ಸಂಬಂಧಗಳಲ್ಲಿ ಮಾನಸಿಕ ಒತ್ತಡ, ದೈಹಿಕ ಸಮಸ್ಯೆಗಳು ಉಂಟಾಗುತ್ತದೆ, ಎಚ್ಚರವಿರಿ.

ಪರಿಹಾರ: ಶನಿವಾರದಂದು ಎಳ್ಳೆಣ್ಣೆ, ಬಡವರಿಗೆ ಆಹಾರ ನೀಡಿದರೆ ಶುಭ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.