Shani Transit: ಮೀನ ರಾಶಿಗೆ ಶನಿ ಸಂಚಾರ: ಈ ಎರಡು ರಾಶಿಯವರಿಗೆ ಆರೋಗ್ಯ, ಹಣಕಾಸು ಸೇರಿ ಭಾರಿ ಲಾಭ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Shani Transit: ಮೀನ ರಾಶಿಗೆ ಶನಿ ಸಂಚಾರ: ಈ ಎರಡು ರಾಶಿಯವರಿಗೆ ಆರೋಗ್ಯ, ಹಣಕಾಸು ಸೇರಿ ಭಾರಿ ಲಾಭ

Shani Transit: ಮೀನ ರಾಶಿಗೆ ಶನಿ ಸಂಚಾರ: ಈ ಎರಡು ರಾಶಿಯವರಿಗೆ ಆರೋಗ್ಯ, ಹಣಕಾಸು ಸೇರಿ ಭಾರಿ ಲಾಭ

Shani Transit: 2025 ರ ಮಾರ್ಚ್ 29 ರಂದು ಮೀನ ರಾಶಿಗೆ ಶನಿ ಪ್ರವೇಶಿಸಲಿದ್ದಾನೆ. ಶನಿಯ ಈ ಸಂಕ್ರಮಣವು ಕಟಕ ಮತ್ತು ವೃಶ್ಚಿಕ ರಾಶಿಗಳ ಮೇಲಿದ್ದ ಶನಿಯ ಪ್ರಭಾವವು ದೂರವಾಗುತ್ತದೆ. ಕಟಕ ಮತ್ತು ವೃಶ್ಚಿಕ ರಾಶಿಯವರು ಶನಿಯಿಂದ ಮುಕ್ತಿ ಪಡೆಯುವುದರಿಂದ ಯಾವ ಫಲಿತಾಂಶಗಳು ಸಿಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.

Shani Transit: ಮೀನ ರಾಶಿಗೆ ಶನಿಯ ಸಂಚಾರ: ಈ ಎರಡು ರಾಶಿಯವರಿಗೆ ಆರೋಗ್ಯ, ಹಣಕಾಸು ಸೇರಿದಂತೆ ಭಾರಿ ಲಾಭ ದೊರೆಯಲಿದೆ
Shani Transit: ಮೀನ ರಾಶಿಗೆ ಶನಿಯ ಸಂಚಾರ: ಈ ಎರಡು ರಾಶಿಯವರಿಗೆ ಆರೋಗ್ಯ, ಹಣಕಾಸು ಸೇರಿದಂತೆ ಭಾರಿ ಲಾಭ ದೊರೆಯಲಿದೆ (PC: HT File Photo)

ಶನಿಯು ಕರ್ಮ ಫಲವನ್ನು ನೀಡುವ ದೇವರು ಎಂದು ಹೇಳಲಾಗುತ್ತದೆ. ಕರ್ಮದ ಆಧಾರದ ಮೇಲೆ ಶುಭ ಫಲ ಮತ್ತು ಅಶುಭ ಫಲವನ್ನು ನೀಡುತ್ತಾನೆ. ಶನಿಯು ಕೂಡಾ ಉಳಿದ ಗ್ರಹಗಳಂತೆ ನಿರ್ದಿಷ್ಟ ಸಮಯದಲ್ಲಿ ತನ್ನ ಸ್ಥಾನವನ್ನು ರಾಶಿಯಿಂದ ರಾಶಿಗೆ ಬದಲಾಯಿಸುತ್ತಾನೆ. ಹಾಗೆ ಶನಿಯು ಯಾವ ರಾಶಿಯಲ್ಲಿ ಸಂಚಾರ ಪ್ರಾರಂಭಿಸುತ್ತಾನೊ ಆಗ ಕೆಲವು ರಾಶಿಗಳಿಗೆ ದೋಷಗಳಿಂದ ಮುಕ್ತಿಯನ್ನು ನೀಡುತ್ತಾನೆ. ಶುಭ ಫಲವನ್ನು ನೀಡುತ್ತಾನೆ. ಸುಮಾರು ಎರಡೂವರೆ ವರ್ಷಗಳ ನಂತರ, ಶನಿಯು ಕುಂಭ ರಾಶಿಯಿಂದ ಹೊರ ಬಂದು, ಮೀನ ರಾಶಿಗೆ ಪ್ರವೇಶಿಸುತ್ತಾನೆ. 2025ರ ಮಾರ್ಚ್‌ 29 ರಂದು ಮೀನ ರಾಶಿಗೆ ಶನಿ ಪ್ರವೇಶಿಸಲಿದ್ದಾನೆ. ಶನಿಯು, ಮೀನ ರಾಶಿಯನ್ನು ಪ್ರವೇಶಿಸುವುದರಿಂದ ಕಟಕ ಮತ್ತು ವೃಶ್ಚಿಕ ರಾಶಿಯವರಿಗೆ ಶನಿ ದೋಷದಿಂದ ಮುಕ್ತಿ ದೊರೆಯುತ್ತದೆ. ಮೀನ ರಾಶಿಯಲ್ಲಿನ ಶನಿ ಸಂಕ್ರಮಣವು ಕಟಕ ಮತ್ತು ವೃಶ್ಚಿಕ ರಾಶಿಯವರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.

ಕಟಕ ರಾಶಿ

ಕಟಕ ರಾಶಿಯವರು ತಮಗೆ ವಹಿಸಿದ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಶತ್ರುಗಳನ್ನು ಸೋಲಿಸಲಿದ್ದಾರೆ. ಹೊಸ ಆರ್ಥಿಕ ಲಾಭ ಉಂಟಾಗಲಿದೆ. ಭೂಮಿ, ಕಟ್ಟಡ, ವಾಹನ ಖರೀದಿಸುವ ಸಾಧ್ಯತೆ ಇದೆ. ಕುಟುಂಬದ ಬೆಂಬಲ ದೊರೆಯುತ್ತದೆ. ಆರೋಗ್ಯ ಸುಧಾರಿಸುತ್ತದೆ. ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ. ಸಂಗಾತಿಯ ಬೆಂಬಲ ದೊರೆಯುತ್ತದೆ. ವ್ಯಾಪಾರದಲ್ಲಿ ಪಾಲುದಾರರ ಸಹಾಯದಿಂದ ಆರ್ಥಿಕವಾಗಿ ಮತ್ತು ವೃತ್ತಿಪರವಾಗಿ ಪ್ರಗತಿ ಸಾಧಿಸಬಹುದು. ಒಟ್ಟಿನಲ್ಲಿ ಕಟಕ ರಾಶಿಯವರಿಗೆ ಒಳ್ಳೆಯ ಸಮಯ ಬಂದಿದೆ.

ವೃಶ್ಚಿಕ ರಾಶಿ

2025 ರ ಮಾರ್ಚ್ 29 ರಂದು ಕುಂಭ ರಾಶಿಯಲ್ಲಿ ಶನಿಯ ಅವಧಿ ಮುಕ್ತಾಯವಾಗುತ್ತದೆ. ಶನಿಯು ಮೀನ ರಾಶಿಗೆ ಚಲಿಸುವುದರಿಂದ ವೃಶ್ಚಿಕ ರಾಶಿಯವರ ಆರೋಗ್ಯ ಸುಧಾರಿಸುತ್ತದೆ. ಪೋಷಕರೊಂದಿಗಿನ ಸಂಬಂಧಗಳು ಬಲವಾಗುತ್ತವೆ. ಜೀವನದಲ್ಲಿ ಹೊಸ ವ್ಯಕ್ತಿ ಬರಬಹುದು. ಶನಿಯ ಪ್ರಭಾವ ಮುಗಿದ ನಂತರ, ಕೆಲವು ವಿಷಯಗಳ ಬಗ್ಗೆ ನಿಮಗಿದ್ದ ಭಯವು ಕೊನೆಗೊಳ್ಳುತ್ತದೆ. ಮಾನಸಿಕ ಸ್ಥಿರತೆಯನ್ನು ಸಾಧಿಸುತ್ತೀರಿ. ಹಣಕಾಸಿನ ಪರಿಸ್ಥಿತಿಯ ಬಗ್ಗೆ ಮಾತನಾಡುವುದಾದರೆ, ಹಣದ ಹರಿವು ಹೆಚ್ಚಾಗುತ್ತದೆ. ಉತ್ತಮ ಹೂಡಿಕೆ ಅವಕಾಶಗಳು ದೊರೆಯಲಿವೆ. ಕೌಟುಂಬಿಕ ಜೀವನ ಆನಂದಮಯವಾಗಿರುತ್ತದೆ. ಆರೋಗ್ಯ ಮೊದಲಿಗಿಂತ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ಸಮಸ್ಯೆಗಳು ದೂರವಾಗುತ್ತವೆ. ನೀವು ಸಂತೋಷದ ಜೀವನವನ್ನು ನಡೆಸುತ್ತೀರಿ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.