ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೃಶ್ಚಿಕ ರಾಶಿ ಭವಿಷ್ಯ ಜುಲೈ 11; ಪ್ರೀತಿ ಪ್ರೇಮ ಚಿಗುರುವ ದಿನ, ವೃತ್ತಿಬದುಕಿನಲ್ಲೂ ಬದಲಾವಣೆ, ಕೈಯಲ್ಲಿ ಕಾಸಿದೆ ಅಂತ ಖರ್ಚು ಮಾಡದಿರಿ

ವೃಶ್ಚಿಕ ರಾಶಿ ಭವಿಷ್ಯ ಜುಲೈ 11; ಪ್ರೀತಿ ಪ್ರೇಮ ಚಿಗುರುವ ದಿನ, ವೃತ್ತಿಬದುಕಿನಲ್ಲೂ ಬದಲಾವಣೆ, ಕೈಯಲ್ಲಿ ಕಾಸಿದೆ ಅಂತ ಖರ್ಚು ಮಾಡದಿರಿ

Scorpio Daily Horoscope July 11, 2024: ರಾಶಿಚಕ್ರದಲ್ಲಿ ಇದು ಎಂಟನೇ ಚಿಹ್ನೆ. ಜನನದ ಸಮಯದಲ್ಲಿ ಚಂದ್ರನು ವೃಶ್ಚಿಕ ರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆಯನ್ನು ವೃಶ್ಚಿಕ ಎಂದು ಪರಿಗಣಿಸಲಾಗುತ್ತದೆ. ಜುಲೈ 11ರ ವೃಶ್ಚಿಕ ರಾಶಿ ಭವಿಷ್ಯದ ಪ್ರಕಾರ, ಪ್ರೀತಿ ಪ್ರೇಮ ಚಿಗುರುವ ದಿನ, ವೃತ್ತಿಬದುಕಿನಲ್ಲೂ ಬದಲಾವಣೆ ನಿರೀಕ್ಷಿಸಬಹುದು.

ವೃಶ್ಚಿಕ ರಾಶಿ ಭವಿಷ್ಯ ಜುಲೈ 11; ಪ್ರೀತಿ ಪ್ರೇಮ ಚಿಗುರುವ ದಿನ, ವೃತ್ತಿಬದುಕಿನಲ್ಲೂ ಬದಲಾವಣೆ ನಿರೀಕ್ಷಿಸಬಹುದು. ಕೈಯಲ್ಲಿ ಕಾಸಿದೆ ಅಂತ ಖರ್ಚು ಮಾಡದಿರಿ
ವೃಶ್ಚಿಕ ರಾಶಿ ಭವಿಷ್ಯ ಜುಲೈ 11; ಪ್ರೀತಿ ಪ್ರೇಮ ಚಿಗುರುವ ದಿನ, ವೃತ್ತಿಬದುಕಿನಲ್ಲೂ ಬದಲಾವಣೆ ನಿರೀಕ್ಷಿಸಬಹುದು. ಕೈಯಲ್ಲಿ ಕಾಸಿದೆ ಅಂತ ಖರ್ಚು ಮಾಡದಿರಿ

ವೃಶ್ಚಿಕ ರಾಶಿಯವರಿಗೆ ಈ ದಿನವು (ಜುಲೈ 11) ಪ್ರೀತಿ, ವೃತ್ತಿ, ಹಣ ಮತ್ತು ಆರೋಗ್ಯದಲ್ಲಿ ಧನಾತ್ಮಕ ಬದಲಾವಣೆಗಳೊಂದಿಗೆ ಉತ್ತಮ ಫಲ ಪ್ರಾಪ್ತಿಯ ದಿನವಾಗಲಿದೆ. ವೃಶ್ಚಿಕ ರಾಶಿಯ ಜನರು ಇಂದು (ಗುರುವಾರ) ಜೀವನದ ಅನೇಕ ವಿಚಾರಗಳಲ್ಲಿ ಪರಿವರ್ತನೆಯ ಶಕ್ತಿಯ ಅನುಭವ ಪಡೆಯಬಹುದು. ಬದಲಾವಣೆಗೆ, ಪರಿವರ್ತನೆಗೆ ಹೊಂದಿಕೊಂಡು ಹೊಸ ಅವಕಾಶಗಳಿಗೆ ಸಿದ್ಧರಾದರೆ ಉತ್ತಮ ಫಲವಿದೆ. ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯದಲ್ಲಿ ಧನಾತ್ಮಕ ಬದಲಾವಣೆಗಳ ಸಾಧ್ಯತೆಯಿದೆ. ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ.

ವೃಶ್ಚಿಕ ರಾಶಿಯವರ ಪ್ರೀತಿ ಪ್ರೇಮ ವಿಚಾರ (love relation)- ವೃಶ್ಚಿಕ ರಾಶಿಯ ಜನರು ಇಂದು ತಮ್ಮ ಸಂಬಂಧಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಬಹುದು. ಒಂಟಿಯಾಗಿರುವವರು ಇಂದು ಇದ್ದಕ್ಕಿದ್ದಂತೆ ಯಾರನ್ನಾದರೂ ಭೇಟಿಯಾಗಬಹುದು. ಅವರ ಮೇಲೆ ಒಲವು ಉಂಟಾಗಬಹುದು. ಸತಿ ಪತಿಗಳಾಗಿರುವವರು ತಮ್ಮ ಸಂಬಂಧವನ್ನು ಬಲಪಡಿಸುವತ್ತ ಗಮನಹರಿಸಬೇಕು. ಈ ರಾಶಿಯವರು ಒಂಟಿಯಾಗಿರಲಿ ಅಥವಾ ಪ್ರೇಮ ಸಂಬಂಧದಲ್ಲಿದ್ದರೂ, ಪ್ರೀತಿ ಪ್ರೇಮದ ವಿಚಾರದಲ್ಲಿ ಯಶಸ್ಸಿಗೆ ಸಂವಹನವು ಬಹಳ ಮುಖ್ಯವಾಗಿದೆ. ನಿಮ್ಮ ಭಾವನೆಗಳನ್ನು ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ವ್ಯಕ್ತಪಡಿಸಬೇಕಾದ್ದು ಅವಶ್ಯ. ಇಂದು ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ.

ವೃಶ್ಚಿಕ ರಾಶಿ ದಿನ ಭವಿಷ್ಯ ಜುಲೈ 11; ಉದ್ಯೋಗ, ಆದಾಯ, ಆರೋಗ್ಯ ವಿಚಾರ

ವೃಶ್ಚಿಕ ರಾಶಿಯವರ ವೃತ್ತಿ ಸಂಬಂಧ ಭವಿಷ್ಯ (Professional Horoscope)- ಇಂದು ನೀವು ವೃತ್ತಿ ಜೀವನದಲ್ಲಿ ಗಮನಾರ್ಹ ಅಭಿವೃದ್ಧಿಯನ್ನು ನಿರೀಕ್ಷಿಸಬಹುದು. ಬಡ್ತಿ ಅಥವಾ ಹೊಸ ಪ್ರಾಜೆಕ್ಟ್‌ಗಳು ನಿಮ್ಮ ಹೊಣೆಗಾರಿಕೆಗೆ ಬರಬಹುದು. ಆದ್ದರಿಂದ, ಅದಕ್ಕೆ ಅಗತ್ಯ ಕೌಶಲಗಳೊಂದಿಗೆ ಅವಕಾಶಗಳನ್ನು ಬಳಸಿಕೊಂಡು ಅದರ ಪ್ರಯೋಜನ ಪಡೆಯಲು ಸಿದ್ಧರಾಗಿರಿ. ಯಾವುದೇ ಸಮಸ್ಯೆಗಳನ್ನು ಜಯಿಸಲು ನಿಮ್ಮ ಅನುಭವವನ್ನು ಬಳಸಿ. ಇಂದು ನಿಮ್ಮ ಯಶಸ್ಸಿನಲ್ಲಿ ನೆಟ್‌ವರ್ಕಿಂಗ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಸಹೋದ್ಯೋಗಿಗಳು ಮತ್ತು ವ್ಯಾಪಾರ ಪಾಲುದಾರರೊಂದಿಗೆ ಸಂಪರ್ಕ ಸಾಧಿಸಲು ಹಿಂಜರಿಯಬೇಡಿ. ಅಂತಿಮವಾಗಿ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ.

ವೃಶ್ಚಿಕ ರಾಶಿಯವರ ಆರ್ಥಿಕ ಜಾತಕ (money horoscope)- ಇಂದು ವೃಶ್ಚಿಕ ರಾಶಿಯವರಿಗೆ ಆರ್ಥಿಕವಾಗಿ ಅನುಕೂಲಕರ ದಿನ. ಮಧ್ಯಾಹ್ನದೊಳಗೆ ಅನಿರೀಕ್ಷಿತ ಪ್ರಯೋಜನಗಳನ್ನು ಅಥವಾ ಲಾಭದಾಯಕ ಅವಕಾಶಗಳು ಎದುರಾಗಬಹುದು. ನಿಮ್ಮ ಹಣಕಾಸು ಯೋಜನೆಯನ್ನು ಪರಿಶೀಲಿಸಲು ಇದು ಉತ್ತಮ ಸಮಯ. ಹೂಡಿಕೆಯ ಬಗ್ಗೆ ಜಾಗರೂಕರಾಗಿರಿ. ಹಠಾತ್ ವೆಚ್ಚವನ್ನು ತಪ್ಪಿಸಿ. ಇಂದು ತೆಗೆದುಕೊಳ್ಳುವ ಬುದ್ಧಿವಂತಿಕೆಯ ಅಥವಾ ವಿವೇಚನೆಯುಳ್ಳ ಹಣಕಾಸಿನ ನಿರ್ಧಾರಗಳು ಭವಿಷ್ಯದಲ್ಲಿ ಗಮನಾರ್ಹ ಪ್ರತಿಫಲವನ್ನು ನೀಡಬಹುದು. ಆದ್ದರಿಂದ ನಿಮ್ಮ ಹಣಕಾಸಿನ ವಹಿವಾಟುಗಳಲ್ಲಿ ಬುದ್ಧಿವಂತಿಕೆ ಮತ್ತು ವಿವೇಚನೆಯನ್ನು ಬಳಸುವುದು ಉತ್ತಮ.

ವೃಶ್ಚಿಕ ರಾಶಿಯವರ ಆರೋಗ್ಯ ಆನಂದ (Health Horoscope)- ವೃಶ್ಚಿಕ ರಾಶಿಯವರ ಆರೋಗ್ಯ ಇಂದು ಸುಧಾರಿಸಬಹುದು. ಆಲಸ್ಯ ಅಥವಾ ಒತ್ತಡವನ್ನು ಅನುಭವಿಸುತ್ತಿದ್ದರೆ, ಈಗ ಸ್ವಯಂ-ಆರೈಕೆಗೆ ಆದ್ಯತೆ ನೀಡಬೇಕಾದ ಸಮಯ. ಆ ಕಡೆಗೆ ಗಮನಕೊಡಬೇಕು. ನಿಮ್ಮ ಆಹಾರಕ್ರಮವನ್ನು ಸುಧಾರಿಸಿಕೊಳ್ಳಬೇಕು. ನಿಯತವಾಗಿ ಯೋಗ, ಪ್ರಾಣಾಯಾಮ, ವ್ಯಾಯಾಮ ಮಾಡುವುದರಿಂದ ಆರೋಗ್ಯಕ್ಕೆ ಪ್ರಯೋಜನವಿದೆ. ಪರಿಣತರ ಸಲಹೆ ಪಡೆದು ಮುಂದುವರಿಯಬಹುದು.

ವೃಶ್ಚಿಕ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ವೃಶ್ಚಿಕ ರಾಶಿಯ ಅಧಿಪತಿ: ಮಂಗಳ, ಶುಭ ದಿನಾಂಕಗಳು: 1, 2, 3, 4, 7, 9, ವೃಶ್ಚಿಕ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರ, ವೃಶ್ಚಿಕ ರಾಶಿಯವರಿಗೆ ಶುಭ ವರ್ಣ: ಹಳದಿ, ಕೆಂಪು, ಕಿತ್ತಳೆ ಮತ್ತು ಕೆನೆಬಣ್ಣ, ವೃಶ್ಚಿಕ ರಾಶಿಯವರಿಗೆ ಅಶುಭ ವರ್ಣ: ಹಳದಿ ಮಿಶ್ರಿತ ಹಸಿರು, ವೃಶ್ಚಿಕ ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ವೃಶ್ಚಿಕ ರಾಶಿಯವರಿಗೆ ಶುಭ ತಿಂಗಳು: ಆಗಸ್ಟ್ 15 ರಿಂದ ಅಕ್ಟೋಬರ್ 14, ವೃಶ್ಚಿಕ ರಾಶಿಯವರಿಗೆ ಶುಭ ಹರಳು: ಮಾಣಿಕ್ಯ, ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ವೃಶ್ಚಿಕ ರಾಶಿಯವರಿಗೆ ಶುಭ ರಾಶಿ: ಧನಸ್ಸು, ಮೀನ, ಕಟಕ ಮತ್ತು ಸಿಂಹ, ವೃಶ್ಚಿಕ ರಾಶಿಯವರಿಗೆ ಅಶುಭ ರಾಶಿ: ಮಕರ, ಮೇಷ, ವೃಷಭ ಮತ್ತು ತುಲಾ.

ವೃಶ್ಚಿಕ ರಾಶಿಯವರು ಶುಭ ಫಲ ಪಡೆಯಲು ಸರಳ ಪರಿಹಾರಗಳು

1) ಹನುಮಾನ ಚಾಲೀಸಾ: ಪ್ರತಿದಿನ ಹನುಮಾನ್ ಚಾಲಿಸಾ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೈಹಿಡಿದ ಕೆಲಸ-ಕಾರ್ಯಗಳು ಯಶಸ್ವಿಯಾಗಲಿವೆ.

2) ಈ ದಾನಗಳಿಂದ ಶುಭಫಲ: ಉದ್ದಿನಬೇಳೆ ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ವಿದ್ಯಾರ್ಥಿಗಳಿಗೆ ಶುಭವಾಗಲಿದೆ.

3) ದೇವಾಲಯ, ಗುರುಪೂಜೆ: ಶ್ರೀ ಶನೇಶ್ವರನ ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಕುಟುಂಬದಲ್ಲಿ ಧನಾತ್ಮಕ ಪ್ರಗತಿ ದೊರೆಯುತ್ತದೆ. ಶ್ರೀ ಗುರುಪೂಜೆ ಮಾಡುವುದರಿಂದ ಭೂ ವಿವಾದಗಳು ದೂರವಾಗಲಿದೆ.

4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು, ಕೇಸರಿ ಮತ್ತು ಹಾಲಿನ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.