ವೃಶ್ಚಿಕ ರಾಶಿ ವಾರ ಭವಿಷ್ಯ; ಮುಂಗೋಪದಿಂದ ಹಾನಿ, ಪರಸ್ಥಳಕ್ಕೆ ವರ್ಗಾವಣೆ, ಪಿತ್ರಾರ್ಜಿತ ಆಸ್ತಿ ಸಿಗಲಿದೆ
Scorpio Weekly Horoscope July 14 20; ರಾಶಿಚಕ್ರದಲ್ಲಿ ಇದು ಎಂಟನೇ ಚಿಹ್ನೆ. ಜನನದ ಸಮಯದಲ್ಲಿ ಚಂದ್ರನು ವೃಶ್ಚಿಕ ರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆ ವೃಶ್ಚಿಕ. ಈ ವಾರದ ವೃಶ್ಚಿಕ ರಾಶಿ ವಾರ ಭವಿಷ್ಯದ ಪ್ರಕಾರ, ಮುಂಗೋಪದಿಂದ ಹಾನಿ ಉಂಟಾಗಬಹುದು. ಉದ್ಯೋಗದಲ್ಲಿ ಪರಸ್ಥಳಕ್ಕೆ ವರ್ಗಾವಣೆ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿ ಸಿಗಬಹುದು.
ಬಹುತೇಕ ಜನರು ತಮ್ಮ ದಿನಚರಿ ಆರಂಭಿಸುವ ಮೊದಲು, ಮಹತ್ವದ ಕೆಲಸ ಕೈಗೊಳ್ಳುವ ಮೊದಲು ತಮ್ಮ ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ನೀಡಿರುವ ವಾರ ಭವಿಷ್ಯವನ್ನು ಆಧರಿಸಿದ ವೃಶ್ಚಿಕ ರಾಶಿಯ ವಾರ ಭವಿಷ್ಯ ಇಲ್ಲಿದೆ.
ವೃಶ್ಚಿಕ ರಾಶಿ ವಾರ ಭವಿಷ್ಯ ಪ್ರಕಾರ, ಈ ವಾರ ಅಂದರೆ ಜುಲೈ 14 ರಿಂದ 20ರ ಅವಧಿಯಲ್ಲಿ ಮುಂಗೋಪದಿಂದ ಹಾನಿ ಉಂಟಾಗಬಹುದು. ಉದ್ಯೋಗದಲ್ಲಿ ಪರಸ್ಥಳಕ್ಕೆ ವರ್ಗಾವಣೆ ಆಗುವ ಸಾಧ್ಯತೆಯೂ ಇದೆ. ಉಳಿದಂತೆ ಶುಭಫಲವಿದೆ. ಈ ವಾರದ ಉದ್ಯೋಗ, ಆದಾಯ, ಆರೋಗ್ಯ ಭವಿಷ್ಯದ ವಿವರ ಹೀಗಿದೆ.
ವೃಶ್ಚಿಕ ರಾಶಿ ಲವ್ ಲೈಫ್ (Scorpio love relation): ಈ ವಾರ ಈ ರಾಶಿಯವರ ಲವ್ ಲೈಫ್ ಚೆನ್ನಾಗಿದೆ. ದಾಂಪತ್ಯ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರಲಿವೆ. ನೆರೆಹೊರೆಯ ಜನರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯಿರಿ. ಆದಾಗ್ಯೂ, ಕೌಟುಂಬಿಕ ವಿವಾದದ ಕಾರಣ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ.
ವೃಶ್ಚಿಕ ರಾಶಿ ವಾರ ಭವಿಷ್ಯ ಜುಲೈ 14- 20; ಉದ್ಯೋಗ, ಆದಾಯ, ಆರೋಗ್ಯ ವಿಚಾರ
ವೃಶ್ಚಿಕ ರಾಶಿ ವೃತ್ತಿ ಭವಿಷ್ಯ (Scorpio Professional Horoscope): ನಿಂತುಹೋಗಿದ್ದ ವ್ಯಾಪಾರವನ್ನು ಆರಂಭಿಸಿ ಉತ್ತಮ ಲಾಭ ಗಳಿಸುವಿರಿ. ಉದ್ಯೋಗದಲ್ಲಿ ನಿಮಗೆ ಉನ್ನತ ಸ್ಥಾನ ದೊರೆತು ಹಣದ ತೊಂದರೆ ನಿವಾರಣೆಯಾಗಲಿದೆ. ಉದ್ಯೋಗದಲ್ಲಿದ್ದರೆ ಪರಸ್ಥಳಕ್ಕೆ ವರ್ಗಾವಣೆಯ ಸಾಧ್ಯತೆಯೂ ಇದೆ. ಉದ್ಯೋಗವನ್ನು ಬದಲಿಸುವಿರಿ. ನಿಮ್ಮ ಮಕ್ಕಳಿಗೆ ಪರಸ್ಥಳದಲ್ಲಿ ಉದ್ಯೋಗ ದೊರೆಯುತ್ತದೆ.
ವೃಶ್ಚಿಕ ರಾಶಿ ಆರ್ಥಿಕ ಜಾತಕ (Scorpio money horoscope): ಆರ್ಥಿಕವಾಗಿ ಈ ವಾರ ಸಂಕಷ್ಟಕರವೇನೂ ಅಲ್ಲ. ಆದಾಗ್ಯೂ, ಅನಗತ್ಯ ಖರ್ಚು ವೆಚ್ಚಗಳ ಮೇಲೆ ಕಡಿವಾಣ ಹಾಕುವುದು ಒಳಿತು. ತಂದೆಗೆ ಸೇರಿದ ಭೂಮಿಯು ನಿಮ್ಮ ಪಾಲಾಗುತ್ತದೆ. ಹಳೆಯ ವಾಹನವನ್ನು ಮಾರಾಟದ ಮಾಡಿ ಹೊಸ ವಾಹನ ಕೊಳ್ಳುವಿರಿ.
ವೃಶ್ಚಿಕ ರಾಶಿ ಆರೋಗ್ಯ ಭವಿಷ್ಯ (Scorpio Health Horoscope): ಆರೋಗ್ಯದಲ್ಲಿ ತೊಂದರೆ ಕಂಡುಬರಲಿದೆ. ಮುಂಗೋಪವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಆಹಾರ ಕ್ರಮ ಸುಧಾರಿಸಿಕೊಳ್ಳಬೇಕು. ಅದೇ ರೀತಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಅಗತ್ಯ ಯೋಗ, ಪ್ರಾಣಾಯಾಮ ಅಥವಾ ವ್ಯಾಯಾಮ ಶುರುಮಾಡುವುದರಿಂದ ಒಳಿತಿದೆ.
ವೃಶ್ಚಿಕ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ವೃಶ್ಚಿಕ ರಾಶಿಯ ಅಧಿಪತಿ: ಮಂಗಳ, ಶುಭ ದಿನಾಂಕಗಳು: 1, 2, 3, 4, 7, 9, ವೃಶ್ಚಿಕ ರಾಶಿಯವರಿಗೆ ಶುಭ ದಿನಗಳು: ಭಾನುವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರ, ವೃಶ್ಚಿಕ ರಾಶಿಯವರಿಗೆ ಶುಭ ವರ್ಣ: ಹಳದಿ, ಕೆಂಪು, ಕಿತ್ತಳೆ ಮತ್ತು ಕೆನೆಬಣ್ಣ, ವೃಶ್ಚಿಕ ರಾಶಿಯವರಿಗೆ ಅಶುಭ ವರ್ಣ: ಹಳದಿ ಮಿಶ್ರಿತ ಹಸಿರು, ವೃಶ್ಚಿಕ ರಾಶಿಯವರಿಗೆ ಶುಭ ದಿಕ್ಕು: ಪೂರ್ವ ಮತ್ತು ಉತ್ತರ, ವೃಶ್ಚಿಕ ರಾಶಿಯವರಿಗೆ ಶುಭ ತಿಂಗಳು: ಆಗಸ್ಟ್ 15 ರಿಂದ ಅಕ್ಟೋಬರ್ 14, ವೃಶ್ಚಿಕ ರಾಶಿಯವರಿಗೆ ಶುಭ ಹರಳು: ಮಾಣಿಕ್ಯ, ಹವಳ, ಮುತ್ತು ಮತ್ತು ಕನಕ ಪುಷ್ಯರಾಗ, ವೃಶ್ಚಿಕ ರಾಶಿಯವರಿಗೆ ಶುಭ ರಾಶಿ: ಧನಸ್ಸು, ಮೀನ, ಕಟಕ ಮತ್ತು ಸಿಂಹ, ವೃಶ್ಚಿಕ ರಾಶಿಯವರಿಗೆ ಅಶುಭ ರಾಶಿ: ಮಕರ, ಮೇಷ, ವೃಷಭ ಮತ್ತು ತುಲಾ.
ವೃಶ್ಚಿಕ ರಾಶಿಯವರು ಶುಭ ಫಲ ಪಡೆಯಲು ಸರಳ ಪರಿಹಾರಗಳು
1) ಹನುಮಾನ ಚಾಲೀಸಾ: ಪ್ರತಿದಿನ ಹನುಮಾನ್ ಚಾಲಿಸಾ ಪಠಿಸುವುದರಿಂದ ಅಥವಾ ಕೇಳುವುದರಿಂದ ಕೈಹಿಡಿದ ಕೆಲಸ-ಕಾರ್ಯಗಳು ಯಶಸ್ವಿಯಾಗಲಿವೆ.
2) ಈ ದಾನಗಳಿಂದ ಶುಭಫಲ: ಉದ್ದಿನಬೇಳೆ ಮತ್ತು ಕಪ್ಪುಬಟ್ಟೆ ದಾನ ನೀಡುವುದರಿಂದ ವಿದ್ಯಾರ್ಥಿಗಳಿಗೆ ಶುಭವಾಗಲಿದೆ.
3) ದೇವಾಲಯ, ಗುರುಪೂಜೆ: ಶ್ರೀ ಶನೇಶ್ವರನ ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ನೀಡುವುದರಿಂದ ಕುಟುಂಬದಲ್ಲಿ ಧನಾತ್ಮಕ ಪ್ರಗತಿ ದೊರೆಯುತ್ತದೆ. ಶ್ರೀ ಗುರುಪೂಜೆ ಮಾಡುವುದರಿಂದ ಭೂ ವಿವಾದಗಳು ದೂರವಾಗಲಿದೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಕೆಂಪು, ಕೇಸರಿ ಮತ್ತು ಹಾಲಿನ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.
ವಿಭಾಗ