ಕುಳಿತುಕೊಂಡಾಗ ಕಾಲು ಅಲ್ಲಾಡಿಸುವ ಅಭ್ಯಾಸವಿದ್ದರೆ ಇಂದೇ ಬಿಟ್ಟು ಬಿಡಿ; ಜೀವನದ ಮೇಲೆ ಈ ರೀತಿ ನಕಾರಾತ್ಮಕ ಪರಿಣಾಮ ಬೀರಬಹುದು
ನಮಗೆ ತಿಳಿಯದೆ ನಾವು ಮಾಡುವ ಸಣ್ಣ ತಪ್ಪುಗಳು ಸಹ ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಬಹುದು.ಕುಳಿತುಕೊಂಡಾಗ ಕೆಲವರಿಗೆ ಕಾಲು ಅಲ್ಲಾಡಿಸುವ ಅಭ್ಯಾಸವಿರುತ್ತದೆ.ನಿಮಗೂ ಈ ಅಭ್ಯಾಸವಿದ್ದರೆ ಇಂದೇ ಬಿಟ್ಟು ಬಿಡಿ.ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.

ನಮಗೆ ತಿಳಿಯದೆ ನಾವು ಮಾಡುವ ಸಣ್ಣ ತಪ್ಪುಗಳು ಸಹ ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಜ್ಯೋತಿಷ್ಯದ ಪ್ರಕಾರ, ಕೆಲವು ತಪ್ಪುಗಳಿಂದಾಗಿ ಭಾರಿ ನಷ್ಟವನ್ನು ಎದುರಿಸಬೇಕಾಗಬಹುದು. ಕುಳಿತುಕೊಂಡಾಗ ಕೆಲವರಿಗೆ ಕಾಲು ಅಲ್ಲಾಡಿಸುವ ಅಭ್ಯಾಸವಿರುತ್ತದೆ. ನಿಮಗೂ ಆ ಅಭ್ಯಾಸವಿರಬಹುದು. ಈ ರೀತಿ ಮಾಡಿದಾಗ ಮನೆಯಲ್ಲಿದ್ದ ಹಿರಿಯರು ನಿಮ್ಮನ್ನು ಬೈಯ್ದಿರಬಹುದು. ಕುಳಿತುಕೊಂಡಾಗ ಕಾಲು ಅಲ್ಲಾಡಿಸುವುದು ಸರಿಯಲ್ಲ. ಅನೇಕ ಜನರು ಕುಳಿತುಕೊಳ್ಳುವಾಗ ಕಾಲುಗಳನ್ನು ಅಲ್ಲಾಡಿಸುತ್ತಾರೆ. ನಿಮಗೂ ಈ ಅಭ್ಯಾಸವಿದ್ದರೆ ಇಂದೇ ಬಿಟ್ಟು ಬಿಡಿ.
ಜ್ಯೋತಿಷ್ಯದ ಪ್ರಕಾರ ಕುಳಿತುಕೊಂಡಾಗ ಕಾಲು ಅಲ್ಲಾಡಿಸುವುದು ಯಾಕೆ ಸರಿಯಲ್ಲ
- ಕುಳಿತುಕೊಂಡಾಗ ಕಾಲುಗಳನ್ನು ಅಲ್ಲಾಡಿಸುವುದರಿಂದ ನಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
- ಹೆಚ್ಚಿನ ಜನರು ಕುಳಿತುಕೊಳ್ಳುವಾಗ ತಮ್ಮ ಕಾಲುಗಳನ್ನು ಅಲ್ಲಾಡಿಸುವ ಪ್ರವೃತ್ತಿಯು ಜಾತಕದಲ್ಲಿ ಚಂದ್ರನ ಸ್ಥಾನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
- ಚಂದ್ರನು ಮನಸ್ಸಿನ ಶಾಂತಿ ಮತ್ತು ಭಾವನೆಗಳ ಸಂಕೇತ. ಚಂದ್ರನು ದುರ್ಬಲನಾಗಿದ್ದರೆ, ವ್ಯಕ್ತಿಯು ಒತ್ತಡ, ಭಯ ಮತ್ತು ಮನಸ್ಸಿನಲ್ಲಿ ಅಶಾಂತಿಯನ್ನು ಎದುರಿಸಬೇಕಾಗುತ್ತದೆ.
- ಇದು ಮನೆಯ ವಾತಾವರಣದ ಮೇಲೆ ಪರಿಣಾಮ ಬೀರಬಹುದು. ಶಾಂತಿಯನ್ನು ಕಳೆದುಕೊಳ್ಳಬಹುದು. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
- ಕುಳಿತುಕೊಂಡಾಗ ಕಾಲುಗಳನ್ನು ಅಲ್ಲಾಡಿಸುವುದು ಉತ್ತಮ ಅಭ್ಯಾಸವಲ್ಲ. ಇದು ಮನಸ್ಥಿತಿಯ ಮೇಲೆ ಪರಿಣಾಮ ಬೀರುವುದಲ್ಲದೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ.
- ಆತ್ಮವಿಶ್ವಾಸವೂ ಕಡಿಮೆಯಾಗುತ್ತದೆ.
- ಕುಳಿತುಕೊಂಡಾಗ ಕಾಲುಗಳನ್ನು ಅಲ್ಲಾಡಿಸುವುದು ಲಕ್ಷ್ಮಿ ದೇವಿಗೆ ಅವಮಾನ, ಲಕ್ಷ್ಮಿ ದೇವಿಯ ಅನುಗ್ರಹವನ್ನು ಕಳೆದುಕೊಳ್ಳುವುದು. ಆರ್ಥಿಕ ತೊಂದರೆಗಳನ್ನು ಎದುರಿಸಬಹುದು ಮತ್ತು ಹಣದ ಹರಿವಿಗೆ ಅಡ್ಡಿಯಾಗಬಹುದು.
- ಕುಳಿತುಕೊಂಡಾಗ ಕಾಲುಗಳನ್ನು ಅಲ್ಲಾಡಿಸುವುದು ಅದೃಷ್ಟವನ್ನು ತರುವುದಿಲ್ಲ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಹಲವು ಅಡೆತಡೆಗಳು ಎದುರಾಗಬಹುದು.
ಯಾವ ಸಮಯದಲ್ಲಿ ಕಾಲುಗಳನ್ನು ಅಲ್ಲಾಡಿಸಬಾರದು
ಪೂಜೆಯ ಸಮಯದಲ್ಲಿ ಕಾಲುಗಳನ್ನು ಅಲ್ಲಾಡಿಸಬಾರದು: ಪೂಜೆಯ ಸಮಯದಲ್ಲಿ ಕಾಲುಗಳನ್ನು ಅಲ್ಲಾಡಿಸಬಾರದು. ಇದು ಅಶುಭ. ಪೂಜೆಯಲ್ಲಿ ಏಕಾಗ್ರತೆ, ಸಮರ್ಪಣೆ ಮತ್ತು ಮನಸ್ಸಿನ ಶಾಂತಿ ಬಹಳ ಮುಖ್ಯ. ಪೂಜೆಯಲ್ಲಿ ಕಾಲು ಅಲ್ಲಾಡಿಸುವಾಗ ಏಕಾಗ್ರತೆಗೆ ತೊಂದರೆಯಾಗುತ್ತದೆ. ಇದರಿಂದ ದೇವರು ಕೋಪಗೊಳ್ಳಬಹು. ಅಲ್ಲದೆ ಪೂಜೆಯ ಫಲಿತಾಂಶಗಳು ಸಿಗದಿರಬಹುದು.
ತಿನ್ನುವಾಗ ಕಾಲುಗಳನ್ನು ಅಲ್ಲಾಡಿಸಬಾರದು: ತಿನ್ನುವಾಗ ಕಾಲುಗಳನ್ನು ಅಲ್ಲಾಡಿಸುವುದು ಸೂಕ್ತವಲ್ಲ. ಅನ್ನವು ಪರಬ್ರಹ್ಮನ ರೂಪವಾಗಿದೆ. ಇದು ಅನ್ನಪೂರ್ಣೆಗೆ ಮಾಡಿದ ಅವಮಾನವಾಗುತ್ತದೆ. ನೀವು ತಿನ್ನುವಾಗ ಈ ಅಭ್ಯಾಸವನ್ನು ಬಿಡದಿದ್ದರೆ, ಜೀವನದಲ್ಲಿ ಸಂತೋಷ, ಶಾಂತಿ ಇರುವುದಿಲ್ಲ. ಅಲ್ಲದೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದು ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.)
