ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Shakti Pitha: ಪರಮೇಶ್ವರನ ಪತ್ನಿ ಸತಿಯ ದೇಹದ ಭಾಗಗಳು ಬಿದ್ದ 12 ಸ್ಥಳಗಳೇ ಈ ಶಕ್ತಿಪೀಠಗಳು; ಭಾರತದ ಹೊರಗೆ ಇರುವ ಪೀಠಗಳ ಬಗ್ಗೆ ಮಾಹಿತಿ

Shakti Pitha: ಪರಮೇಶ್ವರನ ಪತ್ನಿ ಸತಿಯ ದೇಹದ ಭಾಗಗಳು ಬಿದ್ದ 12 ಸ್ಥಳಗಳೇ ಈ ಶಕ್ತಿಪೀಠಗಳು; ಭಾರತದ ಹೊರಗೆ ಇರುವ ಪೀಠಗಳ ಬಗ್ಗೆ ಮಾಹಿತಿ

Shakti Pitha: ಪರಮೇಶ್ವರನ ಪತ್ನಿ ಸತಿಯ ದೇಹದ ಭಾಗಗಳು ಬಿದ್ದ ಸ್ಥಳಗಳನ್ನು ಶಕ್ತಿಪೀಠಗಳು ಎಂದು ಕರೆಯುತ್ತಾರೆ. ಈ ಶಕ್ತಿಪೀಠಗಳು ಭಾರತದಲ್ಲಿ ಮಾತ್ರವಲ್ಲ ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲೂ ಇವೆ. ಭಾರತದ ಹೊರಗೆ ಇರುವ 12 ಶಕ್ತಿಪೀಠಗಳ ಬಗ್ಗೆ ಇಲ್ಲಿದೆ ಮಾಹಿತಿ.

ಭಾರತದ ಹೊರಗೆ ಇರುವ 12 ಶಕ್ತಿಪೀಠಗಳು
ಭಾರತದ ಹೊರಗೆ ಇರುವ 12 ಶಕ್ತಿಪೀಠಗಳು (PC: Unsplash)

Shakti Pitha: ಪರಮೇಶ್ವರನ ಬಗ್ಗೆ ಹಲವಾರು ಕಥೆಗಳನ್ನು ನೀವು ಪುರಾಣದಲ್ಲಿ ಓದಿರಬಹುದು. ಈಶ್ವರನ ಮಡದಿ ಪಾರ್ವತಿಯನ್ನು ತನ್ನ ಸಮಾನವಾಗಿ ಕಂಡ ಮೊದಲ ಪುರುಷನೆಂದರೆ ಈಶ್ವರ. ಅದರಲ್ಲೂ ಈಶ್ವರನ ಪತ್ನಿ ಸತಿ ಮರಣದ ಕಥೆಯನ್ನು ನೀವು ಕೇಳಿರಬಹುದು. ಆಕೆಯ ದೇಹದ ಭಾಗಗಳು ಭೂಮಂಡಲಕ್ಕೆ ಚೂರು ಚೂರಾಗಿ ಬಿದ್ದಿತು. ಅಂಥ ಸ್ಥಳಗಳು ಶಕ್ತಿ ಪೀಠವಾಯಿತು. ಆದರೆ, ಈ ಶಕ್ತಿ ಪೀಠಗಳು ಭಾರತದಲ್ಲಿಲ್ಲ. ಬೇರೆ-ಬೇರೆ ದೇಶಗಳಲ್ಲಿ ಬಿದ್ದಿದ್ದು, ಹಿಂದೂಗಳು ಈಗಲೂ ಪೂಜಿಸುತ್ತಿದ್ದಾರೆ.

ಈ ಪೂಜ್ಯನೀಯ ಸ್ಥಳವು ಬಾಂಗ್ಲಾದೇಶದಲ್ಲಿ ಏಳು, ನೇಪಾಳದಲ್ಲಿ ನಾಲ್ಕು, ಪಾಕಿಸ್ತಾನದಲ್ಲಿ ಮೂರು, ಟಿಬೆಟ್, ಶ್ರೀಲಂಕಾ ಮತ್ತು ಭೂತಾನ್‌ನಲ್ಲಿ ತಲಾ ಒಂದು ಶಕ್ತಿ ಪೀಠವಿದೆ. ಭಾರತದ ಹೊರಗೆ ಇರುವ 12 ಮಹತ್ವದ ದೇವಿ ಶಕ್ತಿ ಪೀಠಗಳ ಬಗ್ಗೆ ಇಲ್ಲಿದೆ ಮಾಹಿತಿ.

1. ಹಿಂಗ್ಲಾಜ್ ಶಕ್ತಿ ಪೀಠ, ಪಾಕಿಸ್ತಾನ

ಪಾಕಿಸ್ತಾನದ ಕರಾಚಿಯ ಈಶಾನ್ಯದಿಂದ 125 ಕಿ.ಮೀ ದೂರದಲ್ಲಿರುವ ಬಲೂಚಿಸ್ತಾನ್ ಪ್ರಾಂತ್ಯದ ಲಯರಿ ತಹಸಿಲ್‌ನಲ್ಲಿ ಸತಿಯ ಬ್ರಹ್ಮರಂಧ್ರ ಬಿದ್ದಿತು. ಈ ದೇವಾಲಯವು ಒಂದು ಪುಟ್ಟದಾದ ಗುಹೆಯಲ್ಲಿ ನೆಲೆಗೊಂಡಿದೆ. ಅಲ್ಲಿ ದೇವಿಯನ್ನು ಸಿಂಧೂರದಿಂದ ಹೊದಿಸಿದ ಸಣ್ಣ ಸುತ್ತಿನ ಕಲ್ಲಿನಲ್ಲಿ ಪೂಜಿಸಲಾಗುತ್ತದೆ.

2. ಶಿವಹರ್ಕರೇ ಶಕ್ತಿ ಪೀಠ, ಪಾಕಿಸ್ತಾನ

ಇದು ಪಾಕಿಸ್ತಾನದ ಕರಾಚಿ ಬಳಿಯ ಪರ್ಕೈ ರೈಲು ನಿಲ್ದಾಣದ ಬಳಿ ಇದೆ. ಹಿಂದೂ ಪುರಾಣಗಳ ಪ್ರಕಾರ, ಸತಿ ದೇವಿಯ ಕಣ್ಣುಗಳು ಇಲ್ಲಿ ಬಿದ್ದಿದ್ದವು ಎಂದು ನಂಬಲಾಗಿದೆ. ದೇವಿಯನ್ನು ಮಹಿಷ-ಮರ್ಧಿನಿ ಮತ್ತು ಕ್ರೋಡಿಶ್ (ಶಿವನ ಕೋಪದ ಆಕೃತಿಯನ್ನು ಸಂಕೇತಿಸುತ್ತದೆ) ಎಂದು ಪೂಜಿಸಲಾಗುತ್ತದೆ.

3. ಸುಗಂಧ ಶಕ್ತಿ ಪೀಠ, ಬಾಂಗ್ಲಾದೇಶ

ಶಕ್ತಿ ಅಥವಾ ದೇವಿ ಸುಗಂಧವನ್ನು ಏಕಜಾತ ಎಂದೂ ಹೇಳಲಾಗುತ್ತದೆ. ಇದು ಬಾಂಗ್ಲಾದೇಶದ ಬರಿಸಾಲ್ ಜಿಲ್ಲೆಯ ಉತ್ತರಕ್ಕೆ 20 ಕಿ.ಮೀ ದೂರದ ಶಿಕಾರ್ಪುರದಲ್ಲಿದೆ. ಇಲ್ಲಿ ಶಿವನ ಸತಿಯ ಮೂಗು ಬಿದ್ದಿತ್ತು ಎಂದು ನಂಬಲಾಗಿದೆ. ಇಲ್ಲಿ ಸುನಂದಾ ಅಥವಾ ದೇವಿ ತಾರಾ ಅಥವಾ ಏಕಜಾತ ಮತ್ತು ತ್ರಯಂಬಕ್ ರೂಪದಲ್ಲಿ ಪೂಜಿಸಲಾಗುತ್ತಿದೆ. ಈ ದೇವಾಲಯವು ಶಿವರಾತ್ರಿ ಅಥವಾ ಶಿವ ಚತುರ್ದಶಿ ಮೇಳದಲ್ಲಿ ನಡೆಯುವ ಹಬ್ಬಕ್ಕೆ ಹೆಸರುವಾಸಿಯಾಗಿದೆ.

4. ಗುಹ್ಯೇಶ್ವರಿ ಶಕ್ತಿ ಪೀಠ, ನೇಪಾಳ

ಆದ್ಯ ಶಕ್ತಿಯ ಈ ದೇವಾಲಯವು ನೇಪಾಳದ ಕಠ್ಮಂಡುವಿನ ಪಶುಪತಿನಾಥ ಮಂದಿರದ ಬಳಿ ಇದೆ. ಗುಹ್ಯೇಶ್ವರಿಯು ಪಶುಪತಿನಾಥ ದೇವಾಲಯದ ಪೂರ್ವಕ್ಕೆ 1 ಕಿ.ಮೀ ದೂರದಲ್ಲಿದೆ. ಇಲ್ಲಿ ಸತಿಯ ಮೊಣಕಾಲುಗಳು ಬಿದ್ದಿವೆ ಎಂದು ನಂಬಲಾಗಿದೆ. ಇಲ್ಲಿ ದೇವಿ ಮಹಾಶಿರಾ ರೂಪದಲ್ಲಿದ್ದು ಕಪಾಲಿ ವೈರಭ್ ಆಗಿ ಕಾಣಿಸಿಕೊಳ್ಳುತ್ತಾಳೆ. ಈ ದೇವಾಲಯವು ಪಶುಪತಿನಾಥ ದೇವಾಲಯದ ಬಳಿಯ ಭಾಗಮತಿ ನದಿಯ ದಡದಲ್ಲಿದೆ. ಹಿಂದೂಗಳನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಪ್ರವೇಶವನ್ನು ನಿಷೇಧಿಸಲಾಗಿದೆ.

5. ದಾಕ್ಷಾಯಣಿ ಶಕ್ತಿ ಪೀಠ, ಟಿಬೆಟ್

ಈ ಶಕ್ತಿ ಪೀಠವು ಟಿಬೆಟ್‌ನ ಮಾನಸ ಸರೋವರದ ಕೈಲಾಸ ಪರ್ವತದ ಬಳಿ ಕಲ್ಲಿನ ಚಪ್ಪಡಿಯ ರೂಪದಲ್ಲಿದೆ. ಇಲ್ಲಿ ಸತಿಯ ಬಲಗೈ ಬಿದ್ದಿದೆ ಎಂದು ನಂಬಲಾಗಿದೆ. ಇಲ್ಲಿ ದೇವಿ ದಾಕ್ಷಾಯಣಿ (ದಕ್ಷಯಜ್ಞವನ್ನು ನಾಶಪಡಿಸಿದ) ರೂಪದಲ್ಲಿದ್ದಾಳೆ.

6. ಗಂಡಕಿ ಚಂಡಿ ಶಕ್ತಿ ಪೀಠ, ನೇಪಾಳ

ಈ ಶಕ್ತಿ ಪೀಠವು ನೇಪಾಳದ ಮುಕ್ತಿನಾಥದಲ್ಲಿ ಗಂಡಕಿ ನದಿಯ ದಡದಲ್ಲಿದೆ. ಇಲ್ಲಿ, ಸತಿಯ ಬಲ ಕೆನ್ನೆ ಬಿದ್ದಿದೆ ಎಂದು ನಂಬಲಾಗಿದೆ. ದೇವಿಯು ಗಂಡಕಿ-ಚಂಡಿ ರೂಪದಲ್ಲಿ ಮತ್ತು ಚಕ್ರಪಾಣಿ ವೈರಭ್ ಆಗಿ ಪೂಜಿಸಲ್ಪಡುತ್ತಾಳೆ. ಈ ಪವಿತ್ರ ಸ್ಥಳದ ಪ್ರಾಮುಖ್ಯತೆಯನ್ನು ವಿಷ್ಣು ಪುರಾಣದಲ್ಲಿ ವಿವರಿಸಲಾಗಿದೆ. ಮುಕ್ತಿನಾಥ್ ಹಿಂದೂಗಳು ಮತ್ತು ಬೌದ್ಧರಿಗೆ ಪವಿತ್ರ ಸ್ಥಳವಾಗಿದೆ.

7. ಭವಾನಿ ಶಕ್ತಿ ಪೀಠ, ಬಾಂಗ್ಲಾದೇಶ

ಈ ಶಕ್ತಿ ಪೀಠವು ಸೀತಾಕುಂಡ ಚಂದ್ರನಾಥ ಎಂದು ಪ್ರಸಿದ್ಧವಾಗಿದೆ. ಈ ಪೀಠವು ಬಾಂಗ್ಲಾದೇಶದ ಚಿತ್ತಗಾಂಗ್‌ನ ಸೀತಾಕುಂದ ನಿಲ್ದಾಣದ ಬಳಿ ಚಂದ್ರನಾಥ ಬೆಟ್ಟಗಳ ಮೇಲಿದೆ. ಇಲ್ಲಿ, ಸತಿಯ ಬಲಗೈ ಬಿದ್ದಿದೆ ಎಂದು ನಂಬಲಾಗಿದ್ದು, ದೇವಿ ಭವಾನಿಯ ರೂಪದಲ್ಲಿದ್ದಾಳೆ. ಚಂದ್ರಶೇಖರ ವೈರಭನಾಗಿ ಕಾಣಿಸಿಕೊಳ್ಳುತ್ತಾನೆ.

8. ಜಯಂತಿ ಶಕ್ತಿ ಪೀಠ, ಬಾಂಗ್ಲಾದೇಶ

ಬಾಂಗ್ಲಾದೇಶದ ಸಿಲ್ಹೆಟ್ ಜಿಲ್ಲೆಯ ಜೈನ್ತಿಯಾ-ಪುರ್ ಬಳಿಯ ಬೌರ್‌ಭಾಗ್ ಗ್ರಾಮದ ಕಲಾಜೋರ್‌ನಲ್ಲಿ ಸತಿಯ ಎಡ ತೊಡೆ ಬಿದ್ದಿದೆ ಎಂದು ನಂಬಲಾಗಿದೆ. ಆಕೆಯನ್ನು ಜಯಂತಿ ಶಕ್ತಿಯ ರೂಪದಲ್ಲಿ ಪೂಜಿಸಲಾಗುತ್ತದೆ.

9. ಶ್ರಾವಣಿ ಶಕ್ತಿ ಪೀಠ, ಬಾಂಗ್ಲಾದೇಶ

ಈ ಶಕ್ತಿ ಪೀಠವು ಬಾಂಗ್ಲಾದೇಶದ ಚಿತ್ತಗಾಂಗ್ ಜಿಲ್ಲೆಯ ಕುಮಾರಿ ಕುಂಡದಲ್ಲಿದೆ. ಇಲ್ಲಿ ಸತಿಯ ಬೆನ್ನುಮೂಳೆ ಬಿದ್ದಿತ್ತು ಎಂದು ನಂಬಲಾಗಿದೆ. ದೇವಿ ಶ್ರಾವಣಿಯ ರೂಪದಲ್ಲಿ ಪೂಜಿಸಲ್ಪಡುತ್ತಾಳೆ.

10. ಮಹಾಲಕ್ಷ್ಮಿ ಶಕ್ತಿ ಪೀಠ, ಬಾಂಗ್ಲಾದೇಶ

ಬಾಂಗ್ಲಾದೇಶದ ಸಿಲ್ಹೆಟ್ ಪಟ್ಟಣದ ಈಶಾನ್ಯಕ್ಕೆ 3 ಕಿ.ಮೀ ದೂರದಲ್ಲಿರುವ ಜೌನ್‌ಪುರ್ ಗ್ರಾಮದ ಶ್ರೀ-ಶೈಲ್ ನಲ್ಲಿ ಸತಿಯ ಕತ್ತು ಬಿದ್ದಿತ್ತು ಎಂದು ನಂಬಲಾಗಿದೆ. ಇಲ್ಲಿ ಅವಳು ಮಹಾಲಕ್ಷ್ಮಿ ದೇವಿಯ ರೂಪದಲ್ಲಿ ಪೂಜಿಸಲ್ಪಡುತ್ತಾಳೆ.

11. ಅಪರ್ಣಾ ಶಕ್ತಿ ಪೀಠ, ಬಾಂಗ್ಲಾದೇಶ

ಈ ಶಕ್ತಿ ಪೀಠವು ಬಾಂಗ್ಲಾದೇಶದ ಬಾಗುರಾ ಜಿಲ್ಲೆಯ ಶೇರ್ಪುರದ ಭವಾನಿಪುರ್ ಗ್ರಾಮದಲ್ಲಿದೆ. ಇಲ್ಲಿ, ಸತಿಯ ಎಡಗಾಲು ಬಿದ್ದಿತ್ತು ಎಂದು ನಂಬಲಾಗಿದೆ. ದೇವಿಯು ಅಪರ್ಣಾ ರೂಪದಲ್ಲಿ ಪೂಜಿಸಲ್ಪಡುತ್ತಾಳೆ.

12. ಯೋಗೇಶ್ವರಿ ಶಕ್ತಿ ಪೀಠ, ಬಾಂಗ್ಲಾದೇಶ

ಈ ಶಕ್ತಿ ಪೀಠವು ಕಾಳಿಗೆ ಸಮರ್ಪಿತವಾಗಿದೆ. ಇದು ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯ ಜಶೋರ್‌ ನ ಈಸ್ವರಿಪುರ ಗ್ರಾಮದಲ್ಲಿದೆ. ಮಹಾರಾಜ ಪ್ರತಾಪಾದಿತ್ಯರು ಈ ಶಕ್ತಿ ಪೀಠವನ್ನು ಕಂಡು ಕಾಳಿಯನ್ನು ಈ ಸ್ಥಳದಲ್ಲಿ ಪೂಜಿಸಿದರು. ಇಲ್ಲಿ ಸತಿಯ ಪಾದಗಳು ಮತ್ತು ಕೈಗಳು ಬಿದ್ದಿವೆ ಎಂದು ನಂಬಲಾಗಿದೆ. ದೇವಿ ಯೋಗೇಶ್ವರಿ ಶಕ್ತಿಯ ರೂಪದಲ್ಲಿ ಪೂಜಿಸಲ್ಪಡುತ್ತಾಳೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.