ಕನ್ನಡ ಸುದ್ದಿ  /  Astrology  /  Shani Margi 2022: Retrograde Saturn Is Going To Happen Next Month There Will Be A Stir In The Lives Of These Zodiac Signs

Shani Margi 2022: ಮುಂದಿನ ತಿಂಗಳು ವಕ್ರ ಶನಿಗೆ ನೇರ ಪಥ; ಯಾವ ರಾಶಿಯವರ ಬದುಕಲ್ಲಿ ಸಂಚಲನ?

ಹಿಮ್ಮುಖ ಶನಿ ಮುಂದಿನ ತಿಂಗಳು ಕೊನೆಯಲ್ಲಿ ಮುಗಿದು, ಸಾದಾ ಸೀದಾ ಚಲನೆ ಶುರುವಾಗಲಿದೆ. ಈ ಸಂದರ್ಭದಲ್ಲಿ ಈ ರಾಶಿಚಕ್ರದವರ ಜೀವನದಲ್ಲಿ ಸಂಚಲನ ಉಂಟಾಗುತ್ತದೆ

ಶನಿದೇವರು
ಶನಿದೇವರು (Live Hindustan)

ಶನಿಯ ಸಾಡೇಸಾತಿ ಮತ್ತು ಅದರ ಸೈಡ್‌ ಎಫೆಕ್ಟ್‌ಗಳಿಂದಾಗಿ ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶನಿಯ ಅಶುಭ ಪರಿಣಾಮಗಳನ್ನು ತೊಡೆದುಹಾಕಲು, ದಶರಥ ರಾಜನ ಶನಿಸ್ತೋತ್ರವನ್ನು ಪ್ರತಿದಿನ ಪಠಿಸಬೇಕು.

ಶನಿ ದೇವ ಪ್ರಸ್ತುತ ವಕ್ರ ಮುಖಿಯಾಗಿ ಸಂಚರಿಸುತ್ತಿದ್ದಾರೆ. ಜೂನ್ 5 ರಂದು ಶನಿದೇವನು ಮಕರ ರಾಶಿಯಿಂದ ಹಿಮ್ಮೆಟ್ಟಿದ್ದು, 141 ದಿನಗಳ ನಂತರ, ಅಕ್ಟೋಬರ್ 23 ರಂದು ಸೀದಾ ಚಲನೆಗೆ ಬರಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹವು ಹಿಮ್ಮುಖ ಸ್ಥಿತಿಯಲ್ಲಿದ್ದಾಗ, ಅದರ ಮಂಗಳಕರ ಪರಿಣಾಮವು ಕಡಿಮೆಯಾಗುತ್ತದೆ. ಪಥ ಸ್ಥಿತಿಗೆ ಬಂದಾಗ ಶನಿಯು ದೀರ್ಘಕಾಲದವರೆಗೆ ಹಿಮ್ಮೆಟ್ಟಿದ ನಂತರ ಯಾವ ರಾಶಿಯವರಿಗೆ ಪರಿಹಾರ ಸಿಗುತ್ತದೆ ಎಂಬುದನ್ನು ಅರಿಯೋಣ.

ಪ್ರಸ್ತುತ ಶನಿಯು ಮಕರ ರಾಶಿಯಲ್ಲಿ ವಕ್ರಮುಖಿಯಾಗಿ ಸಂಚರಿಸುತ್ತಿದ್ದಾನೆ. ಇದರಿಂದ ಮಿಥುನ ಮತ್ತು ತುಲಾ ರಾಶಿಯವರಿಗೆ ಶನಿಯ ಅಡ್ಡಪರಿಣಾಮ ಇದ್ದೇ ಇದೆ. ಇದೇ ಸಮಯದಲ್ಲಿ, ಕುಂಭ, ಧನು ಮತ್ತು ಮಕರ ರಾಶಿಯ ಜನರ ಮೇಲೆ ಶನಿಯ ಸಾಡೇಸಾತಿಯ ಪ್ರಭಾವವಿದೆ. ಶನಿಯ ವಕ್ರಮುಖಿ ಸಂಚಾರ ಅಕ್ಟೋಬರ್ 23 ರ ತನಕ ಸಾಗಲಿದೆ. ನಂತರ ಸಾದಾ ಸೀದಾ ಸಾಗುವ ಶನಿ 2023ರ ಜನವರಿ 17 ರಂದು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಲಿದೆ.

ಈ ರಾಶಿಚಕ್ರದವರಿಗೆ ಶನಿ ದೆಶೆಯಿಂದ ಮುಕ್ತಿ-

ಕುಂಭ ರಾಶಿಯಲ್ಲಿ ಶನಿಯ ಪ್ರವೇಶದಿಂದ ಧನು ರಾಶಿಯವರಿಗೆ ಶನಿಯ ಸಾಡೇಸಾತಿಯಿಂದ ಮುಕ್ತಿ ಸಿಗಲಿದೆ. ಮಿಥುನ ಮತ್ತು ತುಲಾ ರಾಶಿಯವರಿಗೆ ಶನಿಯ ಅಡ್ಡಪರಿಣಾಮದಿಂದ ಮುಕ್ತಿ ಸಿಗಲಿದೆ.

ಈ ರಾಶಿಚಕ್ರದವರಿಗೆ ಮಂಗಳಕರ ಪರಿಣಾಮ-

ಶನಿಯು ಸಾದ ಸೀದಾ ಮಾರ್ಗದಲ್ಲಿ ಸಂಚರಿಸುತ್ತಿರುವಾಗ ಕೆಲವು ರಾಶಿಚಕ್ರದವರ ಮೇಲೆ ಮಂಗಳಕರ ಪರಿಣಾಮ ಬೀರುತ್ತದೆ. ವೃಷಭ, ಕನ್ಯಾ, ಧನು ರಾಶಿಯವರಿಗೆ ಶನಿಯ ಪಥ ಶುಭವಾಗಲಿದೆ. ಈ ಅವಧಿಯಲ್ಲಿ ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹಣ ಸಿಗುವ ಸಾಧ್ಯತೆ ಇರುತ್ತದೆ. ಪ್ರಯಾಣದ ಲಕ್ಷಣಗಳು ಗೋಚರಿಸುತ್ತವೆ.

ಶನಿದೇವರನ್ನು ಒಲಿಸಿಕೊಳ್ಳುವ ಮಾರ್ಗ

ಶನಿದೇವರು ಎಂದರೆ ಕರ್ಮಫಲವನ್ನು ನೀಡುವ ದೇವರು. ಕರ್ಮಫಲಗಳಲ್ಲಿ ಶುಭ ಹಾಗೂ ಅಶುಭ ಫಲಗಳಿಗೇನೂ ಕೊರತೆ ಇಲ್ಲ. ಶನಿದೆಸೆ, ಸಾಡೇಸಾತಿ ಎಂದರೆ ಆಸ್ತಿಕರು ಸಂಕಷ್ಟಕ್ಕೆ ಬೆದರುತ್ತಾರೆ. ಆಗ ಪರಿಹಾರಕ್ಕೆ ದಶರಥ ಮಹಾರಾಜ ಶನಿದೇವನನ್ನು ಸ್ತುತಿಸಲು ರಚಿಸಿದ ಶನಿಸ್ತೋತ್ರ (Dasharatha Maharaja narrated Shani Stotra) ವನ್ನು ಹೇಳಬೇಕೆನ್ನುತ್ತಾರೆ. ಆ ಸ್ತೋತ್ರ ಇಲ್ಲಿದೆ. Dasharatha Maharaja narrated Shani Stotra: ದಶರಥ ವಿರಚಿತ ಶನಿಸ್ತೋತ್ರ

-----------------------------------------------------------------

ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಪ್ರಾಥಮಿಕ ತಿಳಿವಳಿಕೆಗಷ್ಟೇ ಸೀಮಿತ. ಇದರಲ್ಲಿ ಇರುವ ಅಂಶಗಳೆಲ್ಲವೂ ಸಾರ್ವತ್ರಿಕವಾಗಿ ಅನ್ವಯವಾಗುವ ನಿಜ ಮತ್ತು ನಿಖರವಾದುದು ಎಂದು ಹೇಳಲಾಗದು. ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆಯನ್ನು ನಿಮ್ಮ ನಿಮ್ಮ ಜಾತಕಾನುಸಾರ ಪರಿಶೀಲಿಸಿ ಪಡೆದುಕೊಳ್ಳುವುದು ಕ್ಷೇಮಕರ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

ವಿಭಾಗ