ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  2025ರಲ್ಲಿ ಮೇಷ ರಾಶಿಗೆ ಶನಿ ಸಾಡೇಸಾತಿ ಆರಂಭ; ಉಳಿದ ರಾಶಿಗಳಿಗೆ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

2025ರಲ್ಲಿ ಮೇಷ ರಾಶಿಗೆ ಶನಿ ಸಾಡೇಸಾತಿ ಆರಂಭ; ಉಳಿದ ರಾಶಿಗಳಿಗೆ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

Shani Sade Sati: ಶನಿಯು ಪ್ರತಿಯೊಬ್ಬರಿಗೂ ಅವರವರ ಕರ್ಮಕ್ಕೆ ತಕ್ಕಂತ ಫಲಗಳನ್ನು ನೀಡುತ್ತಾನೆ. 2025ರಲ್ಲಿ ಮೇಷ ರಾಶಿಗೆ ಶನಿ ಸಾಡೇಸಾತಿ ಆರಂಭವಾಗಲಿದೆ. ಉಳಿದ ರಾಶಿಗಳಿಗೆ ಶನಿಯ ಸಾಡೇಸಾತಿ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ.

2025ರಲ್ಲಿ ಮೇಷ ರಾಶಿಗೆ ಶನಿ ಸಾಡೇಸಾತಿ ಆರಂಭ; ಉಳಿದ ರಾಶಿಗಳಿಗೆ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ
2025ರಲ್ಲಿ ಮೇಷ ರಾಶಿಗೆ ಶನಿ ಸಾಡೇಸಾತಿ ಆರಂಭ; ಉಳಿದ ರಾಶಿಗಳಿಗೆ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

ಶನಿಯು ಎರಡೂವರೆ ವರ್ಷಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಸದ್ಯಕ್ಕೆ ಕುಂಭ, ಮಕರ, ಮೀನ ರಾಶಿಗಳಲ್ಲಿ ಶನಿಯ ಸಾಡೇಸಾತಿ ನಡೆಯುತ್ತಿದ್ದು, ಕರ್ಕಾಟಕ ಮತ್ತು ವೃಶ್ಚಿಕ ರಾಶಿಗಳಲ್ಲಿ ಶನಿಯ ಧೈಯಾ ನಡೆಯುತ್ತಿದೆ. ಶನಿಯ ರಾಶಿ ಬದಲಾವಣೆಯಿಂದ ಮಕರ ರಾಶಿಯಿಂದ ಶನಿಯ ಸಾಡೇಸಾತಿ ದೂರವಾಗಲಿದ್ದು, ವೃಶ್ಚಿಕ ಹಾಗೂ ಕರ್ಕಾಟಕ ರಾಶಿಯವರಿಗೆ ಶನಿಯ ಪ್ರಭಾವದಿಂದ ಮುಕ್ತಿ ಸಿಗಲಿದೆ.

ಜ್ಯೋತಿಷ್ಯಶಾಸ್ತ್ರದಲ್ಲಿ ಶನಿದೇವನಿಗೆ ವಿಶೇಷ ಸ್ಥಾನವಿದೆ. ಶನಿಯನ್ನು ಕರ್ಮಕಾರಕ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯದಲ್ಲಿ ಶನಿಯ ರಾಶಿ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಶನಿಯ ರಾಶಿ ಬದಲಾವಣೆಯಿಂದಾಗಿ, ಶನಿಗ್ರಹದ ಸಾಡೇಸಾತಿ, ಧೈಯಾ ಹಾಗೂ ಮಹಾದಶವು ಕೆಲವು ರಾಶಿಗಳ ಮೇಲೆ ಕೊನೆಗೊಳ್ಳುತ್ತದೆ. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಮ್ಮೆಯಾದರೂ ಶನಿಯ ಸಾಡೇಸಾತಿ ಮತ್ತು ಧೈಯದಿಂದ ಪ್ರಭಾವಿತನಾಗಿರುತ್ತಾನೆ.

ಧೈಯಾ ಎಂದರೇನು?

ಸಾಡೇಸಾತಿ ಎಂದರೆ ಶನಿಯು ಒಂದು ರಾಶಿಯಲ್ಲಿ 7 ವರ್ಷ 6 ತಿಂಗಳು ಧೈಯಾ ಎಂದರೆ 2 ವರ್ಷ 6 ತಿಂಗಳು ಹಾಗೂ ಶನಿ ಮಹಾದಶಾ ಎಂದರೆ 19 ವರ್ಷಗಳವರೆಗೆ ನೆಲೆಸುವುದು. ಈ ಸಮಯದಲ್ಲಿ ಶನಿಯು ಆಯಾ ಜಾತಕನಿಗೆ ಕರ್ಮಕ್ಕೆ ತಕ್ಕಂತೆ ಫಲಗಳನ್ನು ನೀಡುತ್ತಾನೆ. ಬಡವನನ್ನು ಶ್ರೀಮಂತನಾಗಿಯೂ, ಹಣವಂತನನ್ನು ಈ ಸಮಯದಲ್ಲಿ, ಶನಿಯು ಓರ್ವ ವ್ಯಕ್ತಿಯನ್ನು ರಾಜನಿಂದ ಬಡವನಾಗಿ ಮತ್ತು ಬಡವನನ್ನು ರಾಜನಾಗಿ ಮಾಡುವ ಶಕ್ತಿಯನ್ನು ಹೊಂದಿರುತ್ತಾನೆ. ಶನಿಯ ಸಾಡೇಸಾತಿ ಮತ್ತು ಧೈಯಾ ಯಾವ ರಾಶಿಯಲ್ಲಿ ಮತ್ತು ಯಾವಾಗ ಆರಂಭವಾಗುತ್ತದೆ ನೋಡೋಣ.

ಮೇಷ ರಾಶಿ

ಸಾಡೇಸಾತಿ - 29 ಮಾರ್ಚ್ 2025 ರಿಂದ 31 ಮೇ 2032

ಧೈಯಾ - 13 ಜುಲೈ 2034 ರಿಂದ 27 ಆಗಸ್ಟ್ 2036 ರವರೆಗೆ

-12 ಡಿಸೆಂಬರ್ 2043 ರಿಂದ 8 ಡಿಸೆಂಬರ್ 2046 ರವರೆಗೆ

ವೃಷಭ ರಾಶಿ

ಸಾಡೇಸಾತಿ - 3 ಜೂನ್ 2027 ರಿಂದ 13 ಜುಲೈ 2034

ಧೈಯಾ- 27 ಆಗಸ್ಟ್ 2036 ರಿಂದ 22 ಅಕ್ಟೋಬರ್ 2038

ಮಿಥುನ ರಾಶಿ

ಸಾಡೇಸಾತಿ - 8 ಆಗಸ್ಟ್ 2029 ರಿಂದ 27 ಆಗಸ್ಟ್ 2036

ಧೈಯಾ - 24 ಜನವರಿ 2020 ರಿಂದ 29 ಏಪ್ರಿಲ್ 2022 ರವರೆಗೆ

-22 ಅಕ್ಟೋಬರ್ 2038 ರಿಂದ 29 ಜನವರಿ 2041 ರವರೆಗೆ

ಕರ್ಕಾಟಕ ರಾಶಿ

ಸಾಡೇಸಾತಿ - 31 ಮೇ 2032 ರಿಂದ 22 ಅಕ್ಟೋಬರ್ 2038

ಧೈಯಾ - 29 ಏಪ್ರಿಲ್ 2022 ರಿಂದ 29 ಮಾರ್ಚ್ 2025 ರವರೆಗೆ

- 29 ಜನವರಿ 2041 ರಿಂದ 12 ಡಿಸೆಂಬರ್ 2043 ರವರೆಗೆ

ಸಿಂಹ ರಾಶಿ

ಸಾಡೇಸಾತಿ - 13 ಜುಲೈ 2034 ರಿಂದ 29 ಜನವರಿ 2041

ಧೈಯಾ - 29 ಮಾರ್ಚ್ 2025 ರಿಂದ 3 ಜೂನ್ 2027 ವರೆಗೆ

- 12 ಡಿಸೆಂಬರ್ 2043 ರಿಂದ 8 ಡಿಸೆಂಬರ್ 2046 ರವರೆಗೆ

ಕನ್ಯಾ ರಾಶಿ

ಸಾಡೇಸಾತಿ - 27 ಆಗಸ್ಟ್ 2036 ರಿಂದ 12 ಡಿಸೆಂಬರ್ 2043

ಧೈಯಾ - 3 ಜೂನ್ 2027 ರಿಂದ 8 ಆಗಸ್ಟ್ 2029

ತುಲಾ ರಾಶಿ

ಸಾಡೇಸಾತಿ – 22 ಅಕ್ಟೋಬರ್ 2038 ರಿಂದ 8 ಡಿಸೆಂಬರ್ 2046

ಧೈಯಾ - 24 ಜನವರಿ 2020 ರಿಂದ 29 ಏಪ್ರಿಲ್ 2022

- 8 ಆಗಸ್ಟ್ 2029 ರಿಂದ 31 ಮೇ 2033 ರವರೆಗೆ

ವೃಶ್ಚಿಕ ರಾಶಿ

ಸಾಡೇಸಾತಿ - 28 ಜನವರಿ 2041 ರಿಂದ 3 ಡಿಸೆಂಬರ್ 2049

ಧೈಯಾ - 29 ಏಪ್ರಿಲ್ 2022 ರಿಂದ 29 ಮಾರ್ಚ್ 2025 ರವರೆಗೆ

- 31 ಮೇ 2032 ರಿಂದ 13 ಜುಲೈ 2034 ರವರೆಗೆ

ಧನು ರಾಶಿ

ಸಾಡೇಸಾತಿ – 12 ಡಿಸೆಂಬರ್ 2043 ರಿಂದ 3 ಡಿಸೆಂಬರ್ 2049

ಧೈಯಾ - 29 ಮಾರ್ಚ್ 2025 ರಿಂದ 3 ಜೂನ್ 2027

-13 ಜುಲೈ 2034 ರಿಂದ 27 ಆಗಸ್ಟ್ 2036 ರವರೆಗೆ

ಮಕರ ರಾಶಿ

ಸಾಡೇಸಾತಿ - 26 ಜನವರಿ 2017 ರಿಂದ 29 ಮಾರ್ಚ್ 2025

ಧೈಯಾ - 3 ಜೂನ್ 2027 ರಿಂದ 8 ಆಗಸ್ಟ್ 2029

- 27 ಆಗಸ್ಟ್ 2036 ರಿಂದ 22 ಅಕ್ಟೋಬರ್ 2038 ರವರೆಗೆ

ಕುಂಭ ರಾಶಿ

ಸಾಡೇಸಾತಿ - 24 ಜನವರಿ 2020 ರಿಂದ 3 ಜೂನ್ 2027

ಧೈಯಾ- 8 ಆಗಸ್ಟ್ 2029 ರಿಂದ 31 ಮೇ 2032

22 ಅಕ್ಟೋಬರ್ 2038 ರಿಂದ 29 ಜನವರಿ 2041 ರವರೆಗೆ

ಮೀನ ರಾಶಿ

ಸಾಡೇಸಾತಿ - 29 ಏಪ್ರಿಲ್ 2022 ರಿಂದ 8 ಆಗಸ್ಟ್ 2029

ಧೈಯಾ - 31 ಮೇ 2032 ರಿಂದ 13 ಜುಲೈ 2034

29 ಜನವರಿ 2041 ರಿಂದ 12 ಡಿಸೆಂಬರ್ 2043 ರವರೆಗೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ವಿಭಾಗ