ಕನ್ನಡ ಸುದ್ದಿ  /  Astrology  /  Shani Transit After 30 Years In Aquarius These 4 Zodiac Signs People Should Be Careful Horoscope In Kannada Rsm

Shani Transit: 30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಸಾಗಲಿರುವ ಶನಿ; ಈ 4 ರಾಶಿಯವರು ಪ್ರತಿ ಹಂತದಲ್ಲೂ ಜಾಗರೂಕರಾಗಿರಬೇಕು

Saturn Transit: ಶನಿಯು ಈ ವರ್ಷ ಪೂರ್ತಿ ಕುಂಭ ರಾಶಿಯಲ್ಲಿ ಸಾಗುತ್ತಾನೆ. ಇದರ ಪರಿಣಾಮವಾಗಿ, ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಉತ್ತಮ ಫಲಿತಾಂಶ ಎದುರಾದರೆ ಕರ್ಕಾಟಕ, ಮಕರ ಸೇರಿದಂತೆ ಇನ್ನೂ ಕೆಲವು ರಾಶಿಯವರು ಸಮಸ್ಯೆ ಅನುಭವಿಸುತ್ತಾರೆ. ಈ ರಾಶಿಯವರು ಪ್ರತಿ ಹಂತದಲ್ಲೂ ಎಚ್ಚರಿಕೆಯಿಂದ ಇರಬೇಕು.

30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಸಂಚರಿಸಲಿರುವ ಶನಿ
30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಸಂಚರಿಸಲಿರುವ ಶನಿ

ಶನಿ ಸಂಕ್ರಮಣ: ನವಗ್ರಹಗಳಲ್ಲಿ ಶನಿಯು ನಿಧಾನವಾಗಿ ಚಲಿಸುವ ಗ್ರಹಗಳಲ್ಲಿ ಒಂದಾಗಿದೆ. ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಾಗಲು ಎರಡೂವರೆ ವರ್ಷ ಬೇಕು. ಇದೀಗ 30 ವರ್ಷಗಳ ನಂತರ ಶನಿಯು ತನ್ನ ಜನ್ಮಸ್ಥಳವಾದ ಕುಂಭ ರಾಶಿಯಲ್ಲಿ ಸಂಕ್ರಮಿಸುತ್ತಿದ್ದಾನೆ.

ಶನಿಯು ಕರ್ಮಗಳ ಪ್ರಕಾರ ಫಲಿತಾಂಶವನ್ನು ನೀಡುತ್ತಾನೆ. ಒಳ್ಳೆಯದನ್ನು ಮಾಡಿದರೆ ದುಪ್ಪಟ್ಟು ಸುಖ ಸಿಗುತ್ತದೆ, ಕೆಟ್ಟ ಕೆಲಸ ಮಾಡಿದರೆ ಅದಕ್ಕಿಂತ ಎರಡರಷ್ಟು ಕಷ್ಟಗಳು ಬರುತ್ತವೆ. ಆದ್ದರಿಂದಲೇ ಎಲ್ಲರೂ ಶನಿಯನ್ನು ನ್ಯಾಯದೇವ ಎಂದು ಕರೆಯುತ್ತಾರೆ. ಪ್ರಸ್ತುತ, ಶನಿಯು ತನ್ನ ಚಲನೆಯನ್ನು ಬದಲಾಯಿಸಿ ಇಡೀ ವರ್ಷ ಕುಂಭ ರಾಶಿಯಲ್ಲಿ ಚಲಿಸುತ್ತಾನೆ. ಮುಂದಿನ 10 ತಿಂಗಳವರೆಗೆ ಶನಿಯ ವಕ್ರ ದೃಷ್ಟಿ ಕೆಲವು ರಾಶಿಗಳ ಮೇಲೆ ಇರುತ್ತದೆ. ಪರಿಣಾಮವಾಗಿ, ಆ ರಾಶಿಚಕ್ರದವರು ಕೆಲವೊಂದು ಸಮಸ್ಯೆಗಳನ್ನು ಅನುಭವಿಸುತ್ತಾರೆ.

ಕರ್ಕಾಟಕ ರಾಶಿ

ಶನಿಯ ವಕ್ರದೃಷ್ಟಿಯಿಂದ ಕರ್ಕಾಟಕ ರಾಶಿಯವರಿಗೆ ಕೆಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಬಹಳ ಜಾಗರೂಕರಾಗಿರಬೇಕು. ಕಚೇರಿಯಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಗಮನ ನೀಡಬೇಕು. ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ನಿಮ್ಮ ಮನಸ್ಸನ್ನು ಘಾಸಿಗೊಳಿಸಬಹುದು. ಮುಂದಿನ 10 ತಿಂಗಳು, ಎಲ್ಲವನ್ನೂ ಎಚ್ಚರಿಕೆಯಿಂದ ನಿಭಾಯಿಸಬೇಕು.

ವೃಶ್ಚಿಕ ರಾಶಿ

ಶನಿಯು ವೃಶ್ಚಿಕ ರಾಶಿಯವರಿಗೆ ನಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತಾನೆ. ಜಗಳ ಮತ್ತು ಸಮಸ್ಯೆಗಳಿರುವ ಕೌಟುಂಬಿಕ ಜೀವನವು ಮನಸ್ಸನ್ನು ಚಂಚಲಗೊಳಿಸುತ್ತದೆ. ಅರ್ಥಾಷ್ಟಮ ಶನಿಯು ಈ ರಾಶಿಯ ಮೇಲೆ ಪ್ರಭಾವ ಬೀರುತ್ತಾನೆ. ವಿಶೇಷವಾಗಿ ಹಣಕಾಸಿನ ವಿಷಯಗಳಲ್ಲಿ ಬಹಳ ಜಾಗರೂಕರಾಗಿರಬೇಕು. ಹಣದ ಕೊರತೆಯ ಸಾಧ್ಯತೆಗಳು ಹೆಚ್ಚು. ಶತ್ರುಗಳಿಂದ ಕಷ್ಟಗಳು ಉಂಟಾಗುತ್ತವೆ. ವ್ಯಾಪಾರ ಉದ್ಯಮಗಳಲ್ಲಿ ಸ್ವಲ್ಪ ನೆಮ್ಮದಿಯ ಪರಿಸ್ಥಿತಿ ಇರುತ್ತದೆ.

ಮಕರ ರಾಶಿ

ಶನಿಯು ಮಕರ ರಾಶಿಯ ಅಧಿಪತಿ. ಆದರೂ ಶನಿದೇವರನ ದೃಷ್ಟಿ ಈ ರಾಶಿಯವರ ಮೇಲಿದೆ. ನೀವು ಪ್ರತಿಯೊಂದು ಹೆಜ್ಜೆಯಲ್ಲೂ ಎಚ್ಚರವಾಗಿರಬೇಕು. ನಾನಾ ಸಮಸ್ಯೆಗಳು ಉದ್ಭವಿಸಬಹುದು. ಆದರೆ ಏನೇ ಬಂದರೂ ಧೈರ್ಯದಿಂದ ಎದುರಿಸಿ. ಕಠಿಣ ಪರಿಶ್ರಮ ಮಾತ್ರ ಉತ್ತಮ ಫಲಿತಾಂಶವನ್ನು ತರುತ್ತದೆ.

ಕುಂಭ ರಾಶಿ

ಪ್ರಸ್ತುತ ಶನಿಯು ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ವರ್ಷಪೂರ್ತಿ ಈ ರಾಶಿಯಲ್ಲಿ ಸುತ್ತಾಡುವುದರಿಂದ ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಸುತ್ತಲೂ ವಿವಾದ ಸುತ್ತುವರೆಯುತ್ತದೆ. ವ್ಯಕ್ತಿಗಳಿಂದ ನಿಮಗೆ ಸಮಸ್ಯೆಗಳಿದ್ದರೆ, ಅವರಿಂದ ದೂರವಿರುವುದು ಉತ್ತಮ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಬಹಳ ಜಾಗರೂಕರಾಗಿರಿ. ಸಹೋದ್ಯೋಗಿಗಳು ನಿಮಗೆ ನಕಾರಾತ್ಮಕ ಸಂದರ್ಭಗಳನ್ನು ಉಂಟುಮಾಡುತ್ತಾರೆ. ಕೆಲಸದ ಸ್ಥಳದಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ.

ಕುಂಭ, ಮಕರ ಮತ್ತು ಮೀನ ರಾಶಿಯವರು ಈ ವರ್ಷ ಶನಿಗ್ರಹದಿಂದ ಪ್ರಭಾವಿತರಾಗುತ್ತಾರೆ. ಅದೇ ಸಮಯದಲ್ಲಿ, ಶನಿಯು ವೃಶ್ಚಿಕ ಮತ್ತು ಕರ್ಕ ರಾಶಿಯ ಮೇಲೆ ಅರ್ಥಾಷ್ಟಮದಲ್ಲಿರುತ್ತಾನೆ. ಆದ್ದರಿಂದ ಶನಿಯು ಮುಂದಿನ 10 ತಿಂಗಳವರೆಗೆ ಈ ಐದು ರಾಶಿಗಳಿಗೆ ಸಮಸ್ಯೆ ನೀಡಬಹುದು.

ಪರಿಹಾರ

ಎಲ್ಲಾ ಸಮಸ್ಯೆಗಳಿಗೂ ಏನಾದರೊಂದು ಪರಿಹಾರ ಇದ್ದೇ ಇರುತ್ತದೆ. ಶನಿಯ ಪ್ರಭಾವ ಕಡಿಮೆ ಆಗಬೇಕೆಂದರೆ ಪ್ರತಿ ಶನಿವಾರ ಸಾಡೇ ಸಾತಿ, ಎಳ್ಳು ದಾನ ಮಾಡಬೇಕು. ಹನುಮಂತ ಮತ್ತು ಶಿವನ ಆರಾಧನೆಯಿಂದ ಶನಿಯ ಪ್ರಭಾವ ಕಡಿಮೆಯಾಗುತ್ತದೆ. ಶನೈಶ್ವರನಿಗೆ ಸೇರಿದ ಮಂತ್ರಗಳನ್ನು 108 ಬಾರಿ ಜಪಿಸಬೇಕು. ಕಪ್ಪು ಬೇಳೆ, ಸಾಸಿವೆ ಎಣ್ಣೆ ಮತ್ತು ಕಪ್ಪು ಬಟ್ಟೆಗಳನ್ನು ದಾನ ಮಾಡುವುದು ಸಹ ಮಂಗಳಕರವಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.