ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Shankara Jayanti 2024: ಅಹಂ ಬ್ರಹ್ಮಾಸ್ಮಿ; ಶಂಕರಾಚಾರ್ಯರ ಬೋಧನೆಗಳ ಮೂಲಕವೇ ಆತ್ಮೀಯರಿಗೆ ಶಂಕರ ಜಯಂತಿಯ ಶುಭಾಶಯ ಕೋರಿ

Shankara Jayanti 2024: ಅಹಂ ಬ್ರಹ್ಮಾಸ್ಮಿ; ಶಂಕರಾಚಾರ್ಯರ ಬೋಧನೆಗಳ ಮೂಲಕವೇ ಆತ್ಮೀಯರಿಗೆ ಶಂಕರ ಜಯಂತಿಯ ಶುಭಾಶಯ ಕೋರಿ

Shankara Jayanti Wishes 2024: ಆದಿ ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತವನ್ನು ಇಂದಿಗೂ ಅನೇಕರು ಅನುಸರಿಸುತ್ತಿದ್ದಾರೆ. ಮೇ 12 ರಂದು ಶಂಕರ ಜಯಂತಿ ಆಚರಿಸಲಾಗುತ್ತಿದೆ. ಶಂಕರಾಚಾರ್ಯರ ತತ್ವಗಳ ಮೂಲಕವೇ ಆತ್ಮೀಯರಿಗೆ ಶಂಕರ ಜಯಂತಿಯ ಶುಭಾಶಯ ಕೋರಿ.

ಶಂಕರಾಚಾರ್ಯರ ಬೋಧನೆಗಳ ಮೂಲಕವೇ ಆತ್ಮೀಯರಿಗೆ ಶಂಕರ ಜಯಂತಿಯ ಶುಭಾಶಯ ಕೋರಿ
ಶಂಕರಾಚಾರ್ಯರ ಬೋಧನೆಗಳ ಮೂಲಕವೇ ಆತ್ಮೀಯರಿಗೆ ಶಂಕರ ಜಯಂತಿಯ ಶುಭಾಶಯ ಕೋರಿ (PC: Canva)

ಶಂಕರ ಜಯಂತಿ ಶುಭಾಶಯಗಳು 2024: ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದವರಲ್ಲಿ ಶಂಕರಾಚಾರ್ಯರು ಪ್ರಮುಖರು. ಶಂಕರರು ಬದುಕಿದ್ದು 32 ವರ್ಷಗಳು ಮಾತ್ರ. ಅಷ್ಟು ವಯಸ್ಸಿನಲ್ಲೇ ಅವರು ದೇಶಾದ್ಯಂತ ಕಾಲ್ನಡಿಗೆಯಲ್ಲಿ ಸಂಚರಿಸಿ ಸನಾತನ ಧರ್ಮವನ್ನು ಸಾರಿದರು. ಭಾರತದ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬರಾದ ಆದಿಶಂಕರರ ಜನ್ಮದಿನವನ್ನು ಪ್ರತಿ ವರ್ಷ ಶಂಕರ ಜಯಂತಿ ಹೆಸರಿನಲ್ಲಿ ಆಚರಿಸುತ್ತಾ ಬರಲಾಗಿದೆ.

ಶಂಕರಾಚಾರ್ಯರು ಸುಮಾರು 8ನೇ ಶತಮಾನದಲ್ಲಿ ಕೇರಳದ ಕಾಲಟಿ ಎಂಬಲ್ಲಿ ನಂಬೂದರಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಶಿವಗುರು ತಾಯಿ ಆರ್ಯಾಂಬೆ. ಶಂಕರರು ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡರು. ಬಾಲ್ಯದಲ್ಲೇ ಆಧ್ಯಾತ್ಮದಲ್ಲಿ ಒಲವಿದ್ದ ಶಂಕರರು ಸನ್ಯಾಸತ್ವ ಸ್ವೀಕರಿಸಲು ನಿರ್ಧರಿಸಿದರು. ಆದರೆ ಅದು ತಾಯಿಗೆ ಇಷ್ಟವಿರಲಿಲ್ಲ. ಆದರೆ ಶಂಕರರು ಮತ್ತೆ ಮನೆಗೆ ವಾಪಸ್‌ ಬರುವುದಾಗಿ ಹೇಳಿ ಮನೆ ಬಿಟ್ಟು ಹೊರಟರು. ಗೋವಿಂದ ಭಗವತ್ಪಾದರನ್ನು ಭೇಟಿ ಆದ ಶಂಕರರು ಅವರಿಂದ ಯೋಗ, ವೇದ, ಉಪನಿಷತ್ತುಗಳನ್ನು ಕಲಿತರು. ಕ್ರಮೇಣ ಕಾಶಿಗೆ ತೆರಳಿ ಅಲ್ಲಿ ತಮಗೆ ದೊರೆತ ಶಿಷ್ಯರಿಗೆ ಪಾಠ ಹೇಳಿಕೊಟ್ಟರು.

ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದ ಶಂಕರರು ದೇಶಾದ್ಯಂತ ನಾಲ್ಕು ಪೀಠಗಳನ್ನು ಸ್ಥಾಪಿಸಿದರು. ಪೂರ್ವದಲ್ಲಿ ಪುರಿ ಪೀಠದಲ್ಲಿ ಗೋವರ್ಧನ ಮಠ, ಪಶ್ಚಿಮದ ದ್ವಾರಕಾ ಪೀಠದಲ್ಲಿ ಪಶ್ಚಿಮ ಮಠ ಕಾಳಿಕಾ ಮಠ, ದಕ್ಷಿಣದ ಶೃಂಗೇರಿ ಪೀಠದಲ್ಲಿ ಶಾರದಾ ಮಠ, ಉತ್ತರದ ಬದರಿ ಪೀಠದಲ್ಲಿ ಉತ್ತರ ಜ್ಯೋತಿರ್‌ ಮಠವನ್ನು ಶಂಕರರು ಸ್ಥಾಪಿಸಿದರು. ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಶಂಕರ ಜಯಂತಿಯನ್ನು ಆಚರಿಸಲಾಗುತ್ತದೆ. ಅದರಂತೆ ಈ ಬಾರಿ ಮೇ 12 ರಂದು ಶಂಕರರ 1236ನೇ ಜಯಂತಿ ಇದೆ. ಮೇ 12 ರಂದು ಬೆಳಗ್ಗೆ 02:03 ರಿಂದ ಪಂಚಮಿ ತಿಥಿ ಆರಂಭವಾಗಲಿದ್ದು ಮೇ 13 ರಂದು ಬೆಳಗ್ಗೆ 2:03ಕ್ಕೆ ಪಂಚಮಿ ತಿಥಿ ಕೊನೆಗೊಳ್ಳಲಿದೆ.

ಶಂಕರ ಜಯಂತಿಯಂದು ಅವರ ಬೋಧನೆಗಳ ಮೂಲಕವೇ ನಿಮ್ಮ ಆತ್ಮೀಯರಿಗೆ ಶುಭ ಕೋರಬಹುದು.

 

  • ಅಹಂ ಬ್ರಹ್ಮಾಸ್ಮಿ- ಆತ್ಮ ಮತ್ತು ಪರಮಾತ್ಮ ಬೇರೆ ಬೇರೆ ಅಲ್ಲ, ಎರಡೂ ಒಂದೇ, ಆತ್ಮನಲ್ಲಿ ಪರಮಾತ್ಮನಿದ್ದಾನೆ ಶಂಕರ ಪಂಚಮಿಯ ಶುಭಾಶಯಗಳು.
  • ಲೌಕಿಕ ಪ್ರಪಂಚ ಸತ್ಯವಲ್ಲ, ಅಧ್ಯಾತ್ಮಿಕ ಪ್ರಪಂಚ ಮಾತ್ರವೇ ಸತ್ಯ - ನಿಮ್ಮೆಲ್ಲರಿಗೂ ಆದಿ ಶಂಕರಾಚಾರ್ಯ ಜಯಂತಿಯ ಶುಭಾಶಯ
  • ಬ್ರಹ್ಮಂ ಸತ್ಯಂ, ಜಗಂ ಮಿಥ್ಯಾ- ಬ್ರಹ್ಮ ಅಂತಿಮ ಸತ್ಯ, ಅವನು ನಿರ್ಗುಣ ನಿರಾಕಾರ ಶಂಕರ ಜಯಂತಿಯ ಶುಭ ಹಾರೈಕೆಗಳು.

ಇದನ್ನೂ ಓದಿ: ಮದುವೆಗೆ ಒಳ್ಳೆ ಸಮಯ ನೋಡ್ತಿದ್ದೀರಾ? ಮುಂದಿನ 3 ತಿಂಗಳು ಯಾವುದೇ ಶುಭ ಮುಹೂರ್ತ ಇಲ್ಲ; ಕಾರಣ ಏನು?

  • ಅಜ್ಞಾನಿಯು ತನ್ನ ಆಂತರ್ಯದಲ್ಲಿ ದೇವರನ್ನು ಹುಡುಕದೆ ಬಾಹ್ಯ ಜಗತ್ತಿನಲ್ಲಿ ಹುಡುಕುತ್ತಾನೆ - ನಿಮಗೂ ನಿಮ್ಮ ಕುಟುಂಬಕ್ಕೂ ಶಂಕರಚಾರ್ಯ ಜಯಂತಿಯ ಶುಭಾಶಯಗಳು.
  • ಸತ್ಯವನ್ನು ತಿಳಿಯಲು ಜ್ಞಾನ ಬಹಳ ಅವಶ್ಯಕ, ಅದು ಮೋಕ್ಷಕ್ಕೆ ದಾರಿ ಮಾಡಿಕೊಡುತ್ತದೆ ಇದೇ ಜ್ಞಾನ ಮಾರ್ಗ ಶಂಕರ ಪಂಚಮಿಯ ಶುಭ ಹಾರೈಕೆಗಳು
  • ಮಾತಾ ನಾಸ್ತಿ, ಪಿತಾ ನಾಸ್ತಿ, ನಾಸ್ತಿ ಬಂಧುಃ ಸಹೋದರಹಃ ಅರ್ಥೋ ನಾಸ್ತಿ ಗೃಹಂ ನಾಸ್ತಿ ತಸ್ಮಾತ್‌ ಜಾಗ್ರತ ಜಾಗ್ರತ - ಶಂಕರ ಜಯಂತಿಯ ಶುಭಾಶಯಗಳು
  • ಹುಟ್ಟುವುದು ದುಃಖ ಮುಪ್ಪು ದುಃಖ ಹೆಂಡತಿಯು ದುಃಖ ಮತ್ತೆ ಮತ್ತೆ ಯಾವಾಗಲೂ ಈ ಸಂಸಾರ ಸಾಗರವೇ ದುಃಖ ಆದ್ದರಿಂದ ಎಚ್ಚರಗೊಳ್ಳಿರಿ - ಶಂಕರ ನವಮಿಯ ಶುಭಾಶಯಗಳು
  • ಕಾಮಃ ಕ್ರೋದಶ್ಚ ಲೋಭಶ್ಚ, ದೇಹೇ ತಿಷ್ಠಂತಿ ತಸ್ಕರಾಃ! ಜ್ಞಾನರತ್ನಾಪಹಾರಾಯ ತಸ್ಮಾತ್‌ ಜಾಗ್ರತ ಜಾಗ್ರತ - ಶಂಕರಾಚಾರ್ಯ ಜಯಂತಿ ಶುಭಾಶಯ

ಇದನ್ನೂ ಓದಿ: ಯಕ್ಷ ಎಂದರೆ ಯಾರು? ಮಹಾಭಾರತದಲ್ಲಿ ಯುಧಿಷ್ಠಿರನಿಗೆ ಯಕ್ಷ ಪ್ರಶ್ನೆಗಳನ್ನು ಕೇಳಿದ್ದು ಯಾರು, ಏಕೆ?