ಶ್ರಾವಣ ಮಾಸದಲ್ಲಿ ತುಳಸಿ ಗಿಡ ನೆಟ್ಟರೆ ಹಲವು ಶುಭ ಫಲ; ಹೀಗೆ ಹೇಳಲು ಇವೆ ಹಲವು ಕಾರಣಗಳು-shravan month rituals plant this holy basil plant to get auspicious result in home hindu religion arc ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶ್ರಾವಣ ಮಾಸದಲ್ಲಿ ತುಳಸಿ ಗಿಡ ನೆಟ್ಟರೆ ಹಲವು ಶುಭ ಫಲ; ಹೀಗೆ ಹೇಳಲು ಇವೆ ಹಲವು ಕಾರಣಗಳು

ಶ್ರಾವಣ ಮಾಸದಲ್ಲಿ ತುಳಸಿ ಗಿಡ ನೆಟ್ಟರೆ ಹಲವು ಶುಭ ಫಲ; ಹೀಗೆ ಹೇಳಲು ಇವೆ ಹಲವು ಕಾರಣಗಳು

Holy Basil Plant: ಹಿಂದೂ ಧರ್ಮದಲ್ಲಿ ಮರ, ಗಿಡಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಅವುಗಳನ್ನು ದೇವರು ಎಂದು ಪೂಜಿಸುತ್ತಾರೆ. ಅದೇ ರೀತಿ ತುಳಸಿ ಗಿಡವೂ ಕೂಡಾ ಅತ್ಯಂತ ಪೂಜನೀಯ ಗಿಡವೆಂದು ಅದನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ.

ಶ್ರಾವಣ ಮಾಸದಲ್ಲಿ ತುಳಸಿ ಗಿಡ ನೆಟ್ಟರೆ ಹಲವು ಶುಭ ಫಲ
ಶ್ರಾವಣ ಮಾಸದಲ್ಲಿ ತುಳಸಿ ಗಿಡ ನೆಟ್ಟರೆ ಹಲವು ಶುಭ ಫಲ

ಶ್ರಾವಣ ಮಾಸ ಪ್ರಾರಂಭವಾಗಿ ಅರ್ಧ ತಿಂಗಳು ಕಳೆದಿದೆ. ಹಿಂದೂಗಳಿಗೆ ಇದು ಬಹಳ ಪವಿತ್ರವಾದ ಮಾಸವಾಗಿದೆ. ಈ ಮಾಸದಲ್ಲಿ ಅನೇಕ ಹಬ್ಬ, ವ್ರತಾಚರಣೆಗಳನ್ನು ಮಾಡಲಾಗುತ್ತದೆ. ಈ ತಿಂಗಳಿನಲ್ಲಿ ಶಿವನನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ. ಸೋಲಾ ಸೋಮವಾರ ಅಂದರೆ 16 ವಾರಗಳ ಕಾಲ ಶಿವನನ್ನು ಪೂಜಿಸುವ ವೃತವನ್ನು ಈ ತಿಂಗಳಿನಿಂದ ಪ್ರಾರಂಭಿಸಲಾಗುತ್ತದೆ. ಅದೇ ರೀತಿ ಈ ಮಾಸದಲ್ಲಿ ಕೆಲವು ಗಿಡಗಳನ್ನು ಪೂಜಿಸಲಾಗುತ್ತದೆ ಮತ್ತು ಗಿಡಗಳನ್ನು ನೆಡಲಾಗುತ್ತದೆ. ಅವುಗಳಲ್ಲಿ ತುಳಸಿ ಗಿಡವೂ ಒಂದು. ಈ ತಿಂಗಳಿನಲ್ಲಿ ತುಳಸಿ ಗಿಡ ನೆಡುವುದರಿಂದ ಹಲವು ಶುಭ ಫಲಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ. ತ್ರಿಮೂರ್ತಿಗಳ ಕೃಪೆ ಜನರ ಮೇಲೆ ಇರುತ್ತದೆ ಎಂದು ನಂಬಲಾಗಿದೆ.

ತುಳಸಿ ಗಿಡದ ಮಹತ್ವ

ಹಿಂದೂ ಧರ್ಮದಲ್ಲಿ ತುಳಸಿ ಗಿಡವು ಬಹಳ ಪವಿತ್ರ ಗಿಡ ಎಂಬ ನಂಬಿಕೆಯಿದೆ. ಈ ಗಿಡವನ್ನು ದೇವಲೋಕದ ಗಿಡ ಎಂದು ಕರೆಯುತ್ತಾರೆ. ಇದರಲ್ಲಿ ಸಾಕ್ಷಾತ್ ಮಹಾವಿಷ್ಣು ನೆಲೆಸಿರುತ್ತಾನೆ ಎಂದು ನಂಬಲಾಗಿದೆ. ಪುರಾಣಗಳ ಪ್ರಕಾರ ತುಳಸಿ ಮಹಾವಿಷ್ಣುವಿನ ಪತ್ನಿ. ಹಾಗಾಗಿ ತುಳಸಿಯನ್ನು ಪೂಜಿಸುವುದರಿಂದ ಮಹಾವಿಷ್ಣುವಿನ ಕೃಪೆಗೆ ಪಾತ್ರರಾಗಬಹುದಾಗಿದೆ. ಶ್ರಾವಣ ಮಾಸದಲ್ಲಿ ತುಳಸಿ ಗಿಡದ ಪೂಜೆಗೆ ಬಹಳ ಮಹತ್ವವಿದೆ. ಈ ಮಾಸದಲ್ಲಿ ತುಳಸಿ ಗಿಡಕ್ಕೆ ಸಂಬಂಧಿಸಿದ ಕೆಲವು ಆಚರಣೆಗಳನ್ನು ಮಾಡುವುದರಿಂದ ಶುಭ ಫಲಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ. ಜೀವನದಲ್ಲಿ ಏನಾದರೂ ಆರ್ಥಿಕ ಸಮಸ್ಯೆಗಳಿದ್ದರೆ ಅವೆಲ್ಲವೂ ದೂರವಾಗುತ್ತವೆ.

ಶ್ರಾವಣದಲ್ಲಿ ತುಳಸಿ ಗಿಡ ಏಕೆ ನೆಡಬೇಕು?

ಶ್ರಾವಣ ಮಾಸದಲ್ಲಿ ತುಳಸಿ ಗಿಡವನ್ನು ನೆಡುವುದು ಅತ್ಯಂತ ಶುಭವನ್ನು ತರುತ್ತದೆ ಎಂದು ನಂಬಲಾಗಿದೆ. ಸಾಮಾನ್ಯವಾಗಿ ತುಳಸಿ ಗಿಡವನ್ನು ಮನೆಯ ಮುಂದೆ ಒಂದು ಕಟ್ಟೆಯನ್ನಾಗಿ ಮಾಡಿ, ಅದರಲ್ಲಿ ನೆಡಲಾಗುತ್ತದೆ. ಅದಕ್ಕೆ ಪ್ರತಿನಿತ್ಯ ನೀರೆರೆದು, ದೀಪ ಬೆಳಗಿಸಿ ಪೂಜಿಸಲಾಗುತ್ತದೆ. ಇದನ್ನು ಮನೆಯ ಅಂಗಳ ಅಥವಾ ಹೂತೋಟದಲ್ಲೂ ನೆಡಬಹುದಾಗಿದೆ. ಅದರಿಂದ ಮನೆಯಲ್ಲಿ ಧನಾತ್ಮಕ ಅಂಶ ನೆಲೆಸುತ್ತದೆ, ಸುಖ ಶಾಂತಿ ವೃದ್ಧಿಸುತ್ತದೆ ಎಂದು ಹೇಳಲಾಗುತ್ತದೆ.

ತುಳಸಿ ಗಿಡವನ್ನು ಯಾವ ದಿಕ್ಕಿಗೆ ನೆಡಬೇಕು?

ಸಾಮಾನ್ಯವಾಗಿ ತುಳಸಿ ಗಿಡವನ್ನು ಪೂರ್ವ ದಿಕ್ಕಿಗೆ ನೆಡಲಾಗುತ್ತದೆ. ಅದನ್ನು ಉತ್ತರ ಹಾಗೂ ಈಶಾನ್ಯ ದಿಕ್ಕಿಗೂ ನೆಡಬಹುದಾಗಿದೆ.

ಏನು ಎಚ್ಚರಿಕೆವಹಿಸಬೇಕು?

ಯಾವಾಗಲೂ ತುಳಸಿ ಗಿಡದ ಸುತ್ತ ಸ್ವಚ್ಛವಾಗಿಟ್ಟುಕೊಳ್ಳಬೇಕು. ತುಳಸಿ ಗಿಡವನ್ನು ಶುಚಿಯಾಗಿಯೇ ಮುಟ್ಟಬೇಕು. ತುಳಸಿ ಗಿಡವನ್ನು ಪ್ರತಿನಿತ್ಯ ಪೂಜಿಸಬೇಕು. ಏಕೆಂದರೆ ಅದರಿಂದ ಲಕ್ಷ್ಮೀ ದೇವಿಯ ಕೃಪಾ ಕಟಾಕ್ಷ ಒಲಿಯುತ್ತದೆ. ಇದರಿಂದ ಹಣದ ಕೊರತೆ ಉಂಟಾಗುವುದಿಲ್ಲ. ತುಳಸಿ ಪೂಜೆಯು ಜೊತೆಗೆ ಪ್ರತಿದಿನ ಸಂಜೆ ದೀಪ ಹಚ್ಚಬೇಕು. ಇದರಿಂದ ಮನಸ್ಸಿನ ಇಚ್ಛೆಗಳೆಲ್ಲವೂ ಈಡೇರುತ್ತದೆ ಎಂಬ ನಂಬಿಕೆ ಇದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.