Sankashti Chaturthi 2025: ಚೈತ್ರಮಾಸದ ಸಂಕಷ್ಟಹರ ಗಣಪತಿ ಪೂಜೆಯ ವಿಶೇಷ; ವ್ರತವನ್ನು ಆಚರಿಸುವುದು ಹೇಗೆಂದು ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Sankashti Chaturthi 2025: ಚೈತ್ರಮಾಸದ ಸಂಕಷ್ಟಹರ ಗಣಪತಿ ಪೂಜೆಯ ವಿಶೇಷ; ವ್ರತವನ್ನು ಆಚರಿಸುವುದು ಹೇಗೆಂದು ತಿಳಿಯಿರಿ

Sankashti Chaturthi 2025: ಚೈತ್ರಮಾಸದ ಸಂಕಷ್ಟಹರ ಗಣಪತಿ ಪೂಜೆಯ ವಿಶೇಷ; ವ್ರತವನ್ನು ಆಚರಿಸುವುದು ಹೇಗೆಂದು ತಿಳಿಯಿರಿ

ಧರ್ಮರಾಯನು ತಮ್ಮೆಲ್ಲರನ್ನೂ ಸದಾಕಾಲ ಕಾಪಾಡುತ್ತಿರುವ ಶ್ರೀಕೃಷ್ಣನನ್ನು ತಾನು ಮತ್ತು ತನ್ನ ಸೋದರರು ಎದುರಾಗಿರುವ ಕಷ್ಟಗಳಿಂದ ಪಾರಾಗಲು ಹಾಗು ಕಳೆದುಕೊಂಡ ಸಾಮ್ರಾಜ್ಯವನ್ನು ಮರಳಿ ಪಡೆಯಲು ಮಾಡಬೇಕಾದ ವ್ರತ್ಗಗಳ ಬಗ್ಗೆ ತಿಳಿಸಲು ಬಿನ್ನವಿಸಿಕೊಳ್ಳುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಿಗೆ ಸಂಕಷ್ಟಹರ ಚತುರ್ಥಿ ವ್ರತ ಆಚರಿಸುವಂತೆ ತಿಳಿಸುತ್ತಾನೆ.

ಚೈತ್ರಮಾಸದ ಸಂಕಷ್ಟಹರ ಗಣಪತಿ ಪೂಜೆಯ ವಿಶೇಷ
ಚೈತ್ರಮಾಸದ ಸಂಕಷ್ಟಹರ ಗಣಪತಿ ಪೂಜೆಯ ವಿಶೇಷ

ವಿಶ್ವಾವಸುನಾಮ ಸಂವತ್ಗರದ ಮೊದಲ ಸಂಕಷ್ಟಹರ ಗಣಪತಿ ವ್ರತವು ಏಪ್ರಿಲ್ ತಿಂಗಳ 16 ನೆಯ ದಿನಾಂಕ, ಬುಧವಾರ ಬರಲಿದೆ. ಈ ವ್ರತವನ್ನು ಆಚರಿಸುವುದು ಬಲುಮುಖ್ಯವಾಗುತ್ತದೆ. ಸೂರ್ಯನು ಮೇಷರಾಶಿಯಲ್ಲಿ ಶಕ್ತಿಶಾಲಿಯಾಗಿ ಸಂಚರಿಸುತ್ತಿದ್ದಾನೆ. ಆದ್ದರಿಂದ ಈ ದಿನ ಶ್ರೀಸೂರ್ಯ ದೇವರ ಪೂಜೆಯನ್ನು ಮಾಡಿದಲ್ಲಿ ಆರೋಗ್ಯದಲ್ಲಿನ ಸಮಸ್ಯೆಗಳು ಬಗೆಹರಿಯುತ್ತವೆ. ಕುಟುಂಬದ ಹಿರಿತನವು ನಿಮ್ಮದಾಗುತ್ತದೆ. ಮನೆತನದ ಹಿರಿಯರ ಜೊತೆಯಲ್ಲಿ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಮನದಲ್ಲಿನ ದುಗುಡವು ದೂರವಾಗುತ್ತದೆ. ರವಿಯು ಅಶ್ವಿನಿ ನಕ್ಷತ್ರದಲ್ಲಿ ನೆಲೆಸಿದ್ದಾನೆ. ಅಶ್ವಿನಿ ಕೇತುವಿನ ನಕ್ಷತ್ರವಾಗುತ್ತದೆ.

ಆದ್ದರಿಂದ ಪೂಜೆಯ ನಂತರ ಗಣಪತಿ ದೇಗುಲಕ್ಕೆ ಹುರುಳಿ ಮತ್ತು ಮಿಶ್ರವರ್ಣದ ವಸ್ತ್ರವನ್ನು ಕಾಣಿಕೆಯೊಂದಿಗೆ ನೀಡಬೇಕು. ಆ ದಿನದಂದು ಅನೂರಾದ ನಕ್ಷತ್ರವಿದೆ ಆದ್ದರಿಂದ ಶ್ರೀ ಹನುಮಂತನ ಪೂಜೆಯಿಂದ ನಿದಾನಗತಿಯಲ್ಲಿ ಸಾಗುತ್ತಿರುವ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುತ್ತವೆ. ಚಂದ್ರೋದಯವು ರಾತ್ರಿ 9.18 ಘಂಟೆ ಆಗಲಿದೆ. ಆದ್ದರಿಂದ ಆವೇಳೆಗೆ ಚಂದ್ರನಿಗೆ ಅರ್ಘ್ಯ ನೀಡುವಂತಿರಬೇಕು. ಈ ದಿನದ ಪೂಜೆಯಿಂದ ಮನಸ್ಸಿಗೆ ನೆಮ್ಮದಿಯೂ ದೊರೆಯುತ್ತದೆ. ಉದ್ಯೋಗದಲ್ಲಿನ ಅಡೆತಡೆಗಳು ಸಹ ಮರೆಯಾಗುತ್ತವೆ ಅಥವ ಕಡಿಮೆ ಆಗುತ್ತದೆ. ಈ ಪೂಜೆಯನ್ನು ದಂಪತಿಗಳು ಒಟ್ಟಾರೆ ಆಚರಿಸುವುದು ಒಳ್ಳೆಯದು. ಅ ಅಶ್ಯಕಗೆ ಇದ್ದಲ್ಲಿ ವಿದ್ಯಾರ್ಥಿಗಳು ಈ ಪೂಜೆಯನ್ನು ಮಾಡಬಹುದಾಗಿದೆ.

ಸಂಕಷ್ಠ ಹರ ಗಣಪತಿ ವ್ರತವನ್ನು ದೇವಾನನುದೇವತೆಗಳು ಆಚರಿಸುತ್ತಾರೆ. ಶಿವ ಪಾರ್ವತಿಯರು ಈ ವ್ರತವನ್ನು ಆಚರಿಸಿದ ನಂತರ ಅವರ ನಡುವೆ ಇದ್ದ ಮನಸ್ತಾಪ ಮರೆಯಾಗುತ್ತದೆ. ನ್ಯಾಯ ನೀತಿಯ ಪಕ್ಷಪಾತಿಗಳಾದ ಪಾಂಡವರಿಗೆ ಕಷ್ಟದ ಸರಮಾಲೆಯೆ ಎದುರಾಗುತ್ತದೆ. ಮೋಸಕ್ಕೆ ಒಳಗಗಿ ಪಾಂಡವರು ವನವಾಸಕ್ಕೆ ತೆರಳಬೇಕಾಗುತ್ತದೆ. ವನದಲ್ಲಿ ಯೋಚನಾಕ್ರಾಂತನಾಗಿದ್ದ ಧರ್ಮರಾಯನು ತಮ್ಮೆಲ್ಲರನ್ನೂ ಸದಾಕಾಲ ಕಾಪಾಡುತ್ತಿರುವ ಶ್ರೀಕೃಷ್ಣ ಪರಮಾತ್ಮನನ್ನು ತಾನು ಮತ್ತು ತನ್ನ ಸೋದರರು ಎದುರಾಗಿರುವ ಕಷ್ಟಗಳಿಂದ ಪಾರಾಗಲು ಹಾಗು ಕಳೆದುಕೊಂಡ ಸಾಮ್ರಾಜ್ಯವನ್ನು ಮರಳಿ ಪಡೆಯಲು ಮಾಡಬೇಕಾದ ವ್ರತ್ಗಗಳ ಬಗ್ಗೆ ತಿಳಿಸಲು ಬಿನ್ನವಿಸಿಕೊಳ್ಳುತ್ತಾನೆ. ಆಗ ಶ್ರೀಕೃಷ್ಣ ಪರಮಾತ್ಮನು ಪಾಂಡವರಿಗೆ ಸಂಕಷ್ಟಹರ ಚತುರ್ಥಿ ವ್ರತವನ್ನು ಆಚರಿಸುವಂತೆ ತಿಳಿಸುತ್ತಾನೆ.

ಪಾರ್ವತಿಯು ತನ್ನ ಚಿಕ್ಕವಯಸ್ಸಿನಲ್ಲಿಯೇ ಶ್ರೀ ಶಿವನನ್ನು ವಿವಾಹವಾಗುವ ತೀರ್ಮಾನವನ್ನು ಕೈಗೊಳ್ಳುತ್ತಾಳೆ. ತನ್ನ ಹಾದಿಯು ಸುಲಭವಲ್ಲ ಎಂದು ತಿಳಿದ ಪಾರ್ವತಿಯು ಈಶ್ವರನನ್ನು ವರಿಸಲು ತಾನು ಆಚರಿಸಬೇಕಾದ ವ್ರತದ ಬಗ್ಗೆ ತಿಳಿಯಲು ಕಠಿಣ ತಪಸ್ಸನ್ನು ಆಚರಿಸುತ್ತಾಳೆ. ಆಗ ನಾರದ ಮಹಾಮುನಿಗಳು ಸ್ವತಃ ಪಾರ್ವತಿಗೆ ಈ ಸಂಕಷ್ಟಹರ ಚತುರ್ಥಿ ವ್ರತವನ್ನು ಆಚರಿಸುವ ವಿಧಿ ವಿಧಾನಗಳನ್ನು ತಿಳಿಸುತ್ತಾರೆ. ಅವರ ಸಲಹೆಯಂತೆ ಪಾರ್ವತಿಯು ಅರುಣೋಯದಲ್ಲಿ ಎದ್ದು ಸ್ನಾನಾದಿಗಳನ್ನು ಮಾಡಿ ಸಂಜೆಯವರೆಗೂ ಉಪವಾಸ ಆಚರಿಸುತ್ತಾಳೆ. ಸೂರ್ಯಾಸ್ತವಾದ ನಂತರ ಪೂಜಾ ಸ್ಥಳವನ್ನು ಶುಚಿಗೊಳಿಸಿ, ಅಷ್ಟದಳ ಪದ್ಮವನ್ನು ಬರೆದು, ಅದರ ಮದ್ಯಭಾಗದಲ್ಲಿ ಶ್ರೀಗಣಪತಿಯ ವಿಗ್ರಹವನ್ನು ಪ್ರತಿಷ್ಟಾಪಿಸುತ್ತಾಳೆ.ಆನಂತರ ಕಲ್ಪೋಕ್ತಪ್ರಕಾರ ಪೂಜೆಯನ್ನು ಮಾಡುತ್ತಾಳೆ. ನೇವೇದ್ಯಕ್ಕಾಗಿ ಎಳ್ಳಿನಿಂದ ಮಾಡಿದ ಚಿಗುಲಿ ಮತ್ತು 21 ಮೋದಕಗಳನ್ನು ಅರ್ಪಿಸುತ್ತಾಳೆ. ಈ ಪೂಜೆಯಿಂದ ಪಾರ್ವತಿಯ ವಿವಾಹವು ಪರಮೇಶ್ವರನ ಜೊತೆಯಲ್ಲಿ ನಡೆಯಿತೆಂದು ಹೇಳಲಾಗುತ್ತದೆ.

ನಿತ್ಯ ವಿಧಿವಿಧಾನಗಳಂತೆ ಸರಳವಾಗಿ ಶೋಡಷೋಪಚಾರ ಪೂಜೆಯನ್ನು ಮಾಡಬೇಕು. ಸಂಕಲ್ಪ ಮಾಡುವಾಗ ಸಂಕಷ್ಟಹರ ಗಣಪತಿ ಪ್ರಸಾದೇನ ವಿದ್ಯಾ ಆರೋಗ್ಯ ಪುತ್ರಲಾಭಾದಿ ಫಲ ಸಿಧ್ಯರ್ಥಂ ಮನಸಾಭಿಷ್ಟ ಸಕಲ ಫಲ ಸಿಧ್ಯಾರ್ಥಂ ಶೀ ಸಂಕಷ್ಟ ಹರ ಗಣಪತಿ ಪೂಜಾನಿ ಕರೀಷ್ಯೆ ಎಂದು ಸಂಕಲ್ಪವನ್ನು ಮಾಡಬೇಕು. ಆ ನಂತರ ಕಲಶಪೂಜೆ,ಶಂಖಪೂಜೆ ಮಾಡಬೇಕು.

ಕೆಲವರು ಪ್ರತ್ಯೇಕವಾಗಿ ನಿರ್ವಿಘ್ನಗಣಪತಿ ಪೂಜೆ ಮಾಡುತ್ತಾರೆ. ಹಲವರು ನೇರವಾಗಿ ಸಂಕಷ್ಟಹರ ಚತುರ್ಥಿಪೂಜೆಯನ್ನು ಮಾಡುತ್ತಾರೆ. ಈ ವಿಚಾರವು ಅವರವರ ಆಚರಣೆ ಮತ್ತು ನಂಬಿಕೆಯನ್ನು ಅವಲಂಭಿಸಿದೆ. ಆದರೆ ಪಂಚಾಮೃತ ಸ್ನಾನದ ನಂತರ ಗಂಧ,ಪುಷ್ಪ,ಚಿನ್ನ,ರುದ್ರಾಕ್ಷಿ,ವಿಭೂತಿ,ಬಿಲ್ವಪತ್ರೆ ಮತ್ತು ಗರಿಕೆಯ ಅಭಿಷೇಕವನ್ನು ಮಾಡಬೇಕು. 21 ಗರಿಕೆಗಳಿಗೆ ಅದರ ತುದಿಗೆ ದಂಧವನ್ನು ಲೇಪಿಸಿ ಗಣಪತಿಗೆ ಅರ್ಪಿಸಬೇಕು. ಗಣಪತಿ ಯಾವುದೇ ಶ್ಲೀಕ ಅಥವ ಸೂಕ್ತವನ್ನು ಮಂತ್ರಪುಷ್ಪವನ್ನಾಗಿ ಹೇಳಬೇಕು. ಗಣಪತಿಯ 21 ನಾಮಗಳನ್ನು ಪಠಿಸುವುದು ಹೆಚ್ಚು ಲಾಭವನ್ನು ನೀಡುತ್ತದೆ. ಚಂದ್ರನಿಗೆ ಅರ್ಘ್ಯನೀಡಿದ ನಂತರ ಉಪಾಯನದಾನ ನೀಡುವ ಮೂಲಕ ವ್ರತವನ್ನು ಮುಕ್ತಾಯ ಮಾಡಬೇಕು. ಪೂಜೆಯಲ್ಲಿ ಪಾಲ್ಗೊಂಡವರಿಗೆ ಪ್ರಸಾದ ರೂಪವಾಗಿ ಮೋದಕ ಮತ್ತು ಚಿಗುಲಿಯನ್ನು ನೀಡಬೇಕು.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.