Solar eclipse 2025: ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ: ಎಲ್ಲೆಲ್ಲಿ ಗೋಚರಿಸುತ್ತೆ, ಇನ್ನಿತರೆ ಮಾಹಿತಿಗಳು ಇಲ್ಲಿವೆ
Solar eclipse 2025: ಜ್ಯೋತಿಷ್ಯದಲ್ಲಿ, ಸೂರ್ಯಗ್ರಹಣವನ್ನು ಒಂದು ಮಹತ್ವದ ಘಟನೆ ಎಂದು ಪರಿಗಣಿಸಲಾಗುತ್ತದೆ. 2025ರವರ್ಷದ ಮೊದಲ ಸೂರ್ಯಗ್ರಹಣವು ಯಾವಾಗ ಸಂಭವಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯಗ್ರಹಣದ ಸಮಯದಲ್ಲಿ ಉತ್ತಮ ಕಾರ್ಯಗಳನ್ನು ನಿಷೇಧಿಸಲಾಗಿದೆ. ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬೇಕು ಎಂಬಿತ್ಯಾದಿ ಬಗ್ಗೆ ಇಲ್ಲಿದೆ ಮಾಹಿತಿ.

ಜ್ಯೋತಿಷ್ಯದಲ್ಲಿ, ಸೂರ್ಯಗ್ರಹಣವನ್ನು ಒಂದು ಮಹತ್ವದ ಘಟನೆ ಎಂದು ಪರಿಗಣಿಸಲಾಗುತ್ತದೆ. ಚಂದ್ರನು ಭೂಮಿಯ ಸುತ್ತ ಸುತ್ತುತ್ತಿರುವಾಗ ಸೂರ್ಯ ಮತ್ತು ಭೂಮಿಯ ನಡುವೆ ಬರುತ್ತಾನೆ. ಇದರಿಂದ ಸೂರ್ಯನ ಬೆಳಕು ಭೂಮಿಯನ್ನು ತಲುಪುವುದಿಲ್ಲ ಅಥವಾ ಕಡಿಮೆ ತಲುಪುತ್ತದೆ. ಈ ಖಗೋಳ ವಿದ್ಯಮಾನವನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯಗ್ರಹಣದ ಸಮಯದಲ್ಲಿ ಉತ್ತಮ ಕಾರ್ಯಗಳನ್ನು ನಿಷೇಧಿಸಲಾಗಿದೆ. 2025ರ ಮೊದಲ ಸೂರ್ಯಗ್ರಹಣ ಮಾರ್ಚ್ 29 ರಂದು ಸಂಭವಿಸಲಿದೆ.
ಭಾರತದಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಗೋಚರಿಸುವುದಿಲ್ಲ
ಮಾರ್ಚ್ 29 ರಂದು ಮಧ್ಯಾಹ್ನ 2.20 ಕ್ಕೆ ಪ್ರಾರಂಭವಾಗುವ ಸೂರ್ಯಗ್ರಹಣವು ಸಂಜೆ 6.16 ಕ್ಕೆ ಕೊನೆಗೊಳ್ಳುತ್ತದೆ. 2025 ರ ಮೊದಲ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಸೂರ್ಯಗ್ರಹಣದ ಸೂತಕ ಅವಧಿಯು ಸೂರ್ಯಗ್ರಹಣ ಪ್ರಾರಂಭವಾಗುವ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಆದರೆ, ಭಾರತದಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಗೋಚರಿಸದ ಕಾರಣ, ಸೂತಕ ಅವಧಿ ಮಾನ್ಯವಾಗಿರುವುದಿಲ್ಲ.
ಮಾರ್ಚ್ 29, 2025 ರಂದು ಸಂಭವಿಸುವ ಸೂರ್ಯಗ್ರಹಣವು ಆಫ್ರಿಕಾ, ಯುರೋಪ್, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಆರ್ಕ್ಟಿಕ್ ಮಹಾಸಾಗರ ಮತ್ತು ಅಟ್ಲಾಂಟಿಕ್ ಮಹಾಸಾಗರದಲ್ಲಿ ಗೋಚರಿಸುತ್ತದೆ ಎಂದು ನಾಸಾ ವೆಬ್ಸೈಟ್ ತಿಳಿಸಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂರ್ಯಗ್ರಹಣದ ಸಮಯದಲ್ಲಿ, ವಿಶೇಷವಾಗಿ ಗರ್ಭಿಣಿಯರು ಮನೆಯಿಂದ ಹೊರಬರಬಾರದು ಮತ್ತು ಸೂರ್ಯಗ್ರಹಣವನ್ನು ಎಂದಿಗೂ ಕಣ್ಣುಗಳಿಂದ ನೋಡಬಾರದು ಎಂದು ಹೇಳಲಾಗುತ್ತದೆ. ಬರೀಗಣ್ಣಿನಿಂದ ನೋಡುವುದು ಬಹಳ ಅಪಾಯಕಾರಿ. ಗ್ರಹಣ ಸಮಯದಲ್ಲಿ ಹೊರಸೂಸುವ ಕಿರಣಗಳು ಕಣ್ಣುಗಳಿಗೆ ಹಾನಿ ಮಾಡಬಹುದು. ಗ್ರಹಣ ಸಮಯದಲ್ಲಿ ಪೂಜೆ ಮಾಡುವುದನ್ನು ನಿಷೇಧಿಸಲಾಗಿದೆ. ಈ ಸಮಯದಲ್ಲಿ ಸೂಜಿದಾರಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಬಾರದು ಎಂದು ಹೇಳಲಾಗುತ್ತದೆ.
ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬೇಕು?
- ಸೂರ್ಯಗ್ರಹಣದ ಅಡ್ಡಪರಿಣಾಮಗಳನ್ನು ತಪ್ಪಿಸಲು, ಸೂರ್ಯಗ್ರಹಣದ ನಂತರ ಸ್ನಾನ ಮಾಡಬೇಕು.
- ಬಡವರು ಅಥವಾ ನಿರ್ಗತಿಕರಿಗೆ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನ ಮಾಡಬೇಕು.
- ಸೂರ್ಯ ದೇವ ಓಂ ಘ್ರುಣಿ ಸೂರ್ಯಾಯ ನಮಃ ಎಂದು ಪಠಿಸಿ.
(ಗಮನಿಸಿ: ಈ ಲೇಖನದಲ್ಲಿ ನಿಮಗೆ ಒದಗಿಸಲಾದ ಮಾಹಿತಿ ಮತ್ತು ಸಲಹೆಗಳು ಸಂಪೂರ್ಣವಾಗಿ ಸತ್ಯ ಮತ್ತು ನಿಖರವಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆಯನ್ನು ಪಡೆಯುವುದು ಸೂಕ್ತ.)

ವಿಭಾಗ