ರವಿ–ಗುರು ಸಂಯೋಗದಿಂದ ಈ ರಾಶಿಯವರಿಗೆ ಭಾರಿ ಅನುಕೂಲ; ಧನಲಾಭ, ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಫಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರವಿ–ಗುರು ಸಂಯೋಗದಿಂದ ಈ ರಾಶಿಯವರಿಗೆ ಭಾರಿ ಅನುಕೂಲ; ಧನಲಾಭ, ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಫಲ

ರವಿ–ಗುರು ಸಂಯೋಗದಿಂದ ಈ ರಾಶಿಯವರಿಗೆ ಭಾರಿ ಅನುಕೂಲ; ಧನಲಾಭ, ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಫಲ

ಜ್ಯೋತಿಷ್ಯದಲ್ಲಿ ಗ್ರಹಗಳ ಸ್ಥಾನ ಬದಲಾವಣೆ ಮಾತ್ರವಲ್ಲ, ಗ್ರಹಗಳ ಸಂಯೋಗಕ್ಕೂ ವಿಶೇಷ ಮಹತ್ವವಿದೆ. ಸದ್ಯದಲ್ಲೇ ಸೂರ್ಯ–ಗುರು ಸಂಯೋಗವಾಗಲಿದೆ. ಇದನ್ನು ಜೀವಾತ್ಮ ಸಂಯೋಗ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಈ ರಾಶಿಯವರಿಗೆ ಬಾಳಿನಲ್ಲಿ ಅದೃಷ್ಟದ ಬಾಗಿಲು ತೆರೆಯಲಿದೆ. ಅವರ ಬದುಕಿನಲ್ಲಿ ಎಲ್ಲವೂ ಒಳಿತಾಗಲಿದೆ. ಆ ರಾಶಿ ಯಾವುದು ನೋಡಿ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ರವಿ–ಗುರು ಸಂಯೋಗದಿಂದ ಈ ರಾಶಿಯವರಿಗೆ ಭಾರಿ ಅನುಕೂಲ
ರವಿ–ಗುರು ಸಂಯೋಗದಿಂದ ಈ ರಾಶಿಯವರಿಗೆ ಭಾರಿ ಅನುಕೂಲ

ನವೆಂಬರ್ 16ರಂದು ರವಿಯು ವೃಶ್ಚಿಕರಾಶಿಯನ್ನು ಪ್ರವೇಶಿಸುತ್ತಾನೆ. ಈ ಅವಧಿಯಲ್ಲಿ ರವಿ ಮತ್ತು ಗುರುವಿನ ನಡುವೆ ಪರಸ್ಪರ ದೃಷ್ಟಿ ಇರುತ್ತದೆ. ರವಿಯನ್ನು ಆತ್ಮಕಾರಕ ಮತ್ತು ಗುರುವನ್ನು ಜೀವಕಾರಕ ಎಂದು ಕರೆಯುತ್ತೇವೆ. ನಾಡಿಜೋತಿಷ್ಯದಲ್ಲಿ ಇದನ್ನು ಜೀವಾತ್ಮ ಸಂಯೋಗ ಎಂದು ಕರೆಯುತ್ತೇವೆ. ಈ ಸಮಯದಲ್ಲಿ ದ್ವಾದಶ ರಾಶಿಯಗಳಲ್ಲಿ ಒಂದು ರಾಶಿಗೆ ಭಾರಿ ಲಾಭವಾಗಲಿದೆ. ಅವರ ಬದುಕಿನಲ್ಲಿ ಹಲವು ಬದಲಾವಣೆಗಳಾಗಲಿವೆ. ಆ ರಾಶಿಯವರು ಯಾರು, ಅವರಿಗೆ ಏನೆಲ್ಲಾ ಲಾಭವಿದೆ ನೋಡಿ.  

ಈ ಸಮಯದಲ್ಲಿ ಮೇಷ ರಾಶಿಯವರಿಗೆ ಉತ್ತಮ ಆದಾಯವಿದ್ದರೂ ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗುತ್ತವೆ. ಆದರೆ ಗುರುವಿನ ಪರಸ್ಪರ ದೃಷ್ಟಿಯಿಂದ ಈ ರಾಶಿಯವರಿಗೆ ವಿವಿಧ ಮೂಲಗಳ ಮೂಲಕ ಅನುಕೂಲಗಳು ದೊರೆಯುತ್ತವೆ. ಹಣಕಾಸಿನ ಕೊರತೆಯು ಕಡಿಮೆಯಾಗುತ್ತದೆ. ಕುಟುಂಬಕ್ಕೆ ಸಂಬಂಧಿಸಿದ ಆಸ್ತಿಯಲ್ಲಿನ ವಿವಾದಗಳು ದೂರವಾಗಿ ನಿಮಗೆ ನ್ಯಾಯಯುತ ಪಾಲು ದೊರೆಯುತ್ತದೆ. ಕುಟುಂಬದಲ್ಲಿ ಇದ್ದ ವಾತಾವರಣವು ಮರೆಯಾಗುತ್ತದೆ. 

ಹಿರಿಯರ ಮಾರ್ಗದರ್ಶನದಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಉತ್ತಮ ಆದಾಯವಿರುತ್ತದೆ. ಆದರೆ ಅದನ್ನು ಉಳಿಸಿಕೊಳ್ಳಲಾರದೆ ಹೋಗುವಿರಿ. ಆದರೆ ಹಿರಿಯ ಸೋದರ ಅಥವಾ ಸೋದರಿಯ ಜೊತೆಯಲ್ಲಿ ಮಾಡುವ ಹಣದ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವ ಸಲುವಾಗಿ ಹಣ ವ್ಯಯವಾಗುತ್ತದೆ. ಗಂಗಾ ಸ್ನಾನ ಅಥವಾ ಪುಣ್ಯ ಸ್ನಾನ ಮಾಡುವ ಸಾಧ್ಯತೆಗಳಿವೆ. ಕುಟುಂಬದ ಹಿರಿಯರ ಜೊತೆಯಲ್ಲಿ ಕೆಲವೊಮ್ಮೆ ವಾದ ವಿವಾದಗಳು ಎದುರಾಗುತ್ತದೆ. ಆದರೆ ಸಮಯವನ್ನು ಅರ್ಥ ಮಾಡಿಕೊಂಡು ಸರಿದಾರಿಯಲ್ಲಿ ನಡೆಯುವಿರಿ. ಬಹುದಿನದಿಂದ ನಡೆಯದೆ ಇದ್ದ ಮಂಗಳ ಕಾರ್ಯವನ್ನು ಯಶಸ್ವಿಯಾಗಿ ನಡೆಸುವಿರಿ. ಆತುರದಿಂದ ತೆಗೆದುಕೊಳ್ಳುವ ತೀರ್ಮಾನಗಳಿಂದ ಆತಂಕಕಾರಿ ಸನ್ನಿವೇಶವನ್ನು ಎದುರಿಸಬಹುದು.

ನೀವು ಅಧಿಕಾರಿಗಳಾಗಿದ್ದಲ್ಲಿ ಸಹೋದ್ಯೋಗಿಗಳ ಪ್ರೀತಿ ವಿಶ್ವಾಸವನ್ನು ಗಳಿಸುವಿರಿ. ನೀವು ತೆಗೆದುಕೊಳ್ಳುವ ತೀರ್ಮಾನಗಳು ಹೊಸ ಯೋಜನೆಗಳಿಗೆ ಧೃಡತೆಯನ್ನು ನೀಡುತ್ತದೆ. ನಿಮ್ಮಲ್ಲಿನ ಆತ್ಮವಿಶ್ವಾಸವು ಹೊಸ ಅವಕಾಶಗಳನ್ನು ನೀಡುತ್ತವೆ. ಬುದ್ಧಿವಂತಿಕೆಯ ಮಾತುಕತೆಯು ಉದ್ಯೋಗ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ನೀಡಲಿವೆ. ಹಿಂದಿನ ದಿನಗಳಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರಗಳನ್ನು ಸರಿಪಡಿಸಿಕೊಂಡು ಸರಿಯಾದ ಹಾದಿಯಲ್ಲಿ ನಡೆಯುವಿರಿ. ಉದ್ಯೋಗವನ್ನು ಬದಲಿಸಬೇಕೆನ್ನುವ ನಿಮ್ಮ ನಿರ್ಧಾರವು ಸಾಪಲ್ಯಗೊಳ್ಳುವುದಿಲ್ಲ. ಇರುವ ಉದ್ಯೋಗದಲ್ಲಿ ಉತ್ತಮ ಅನುಕೂಲ ಮತ್ತು ಅವಕಾಶಗಳು ದೊರೆಯುತ್ತವೆ. ಅನಿರೀಕ್ಷಿತ ಧನಾಗಮ ಮನಸ್ಸಿನ ಸಂತೋಷವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಯುವ ಮುನ್ನವೇ ಉದ್ಯೋಗಕ್ಕೆ ಆಯ್ಕೆಯಾಗುತ್ತಾರೆ. ತಮ್ಮ ಸ್ವಂತ ಹಣದಿಂದ ಉನ್ನತ ಅಧ್ಯಯನಕ್ಕೆ ದೂರದ ಸ್ಥಳ ಅಥವಾ ವಿದೇಶಕ್ಕೆ ತೆರಳುವ ಸಾಧ್ಯತೆ ಇರುತ್ತದೆ. ಆತುರದಿಂದ ಸ್ವಂತ ಉದ್ದಿಮೆಯನ್ನು ಆರಂಭಿಸುವ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುವಿರಿ. ಉದ್ಯೋಗದ ಸಲುವಾಗಿ ದಂಪತಿಗಳು ಪರಸ್ಪರ ದೂರ ಉಳಿಯಬೇಕಾಗುತ್ತದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು. ಕಲುಷಿತ ನೀರು ಅಥವಾ ಕಲುಷಿತ ದ್ರವರೂಪದ ಆಹಾರವನ್ನು ಸೇವಿಸುವ ಕಾರಣ ಸೋಂಕಿಗೆ ಒಳಗಾಗುವಿರಿ. ಆಹಾರ ಸೇವನೆಯ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕು.

ಮಹಿಳೆಯರಿಗೆ ವಿಶೇಷವಾದ ಅನುಕೂಲಗಳು ದೊರೆಯಲಿವೆ. ಉದ್ಯೋಗಸ್ಥರಾದಲ್ಲಿ ಹಿರಿತನದ ಅನುಸಾರ ಉನ್ನತ ಅಧಿಕಾರವನ್ನು ಪಡೆಯುವರು. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ. ಅನಾವಶ್ಯಕ ಒತ್ತಡಕ್ಕೆ ಒಳಗಾಗುತ್ತಾರೆ. ಮನಸ್ಸಿನಲ್ಲಿರುವ ವಿಚಾರಗಳನ್ನು ಬೇರೆಯವರಿಗೆ ತಿಳಿಸಲು ವಿಫಲರಾಗುತ್ತಾರೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಕುಟುಂಬದ ಹಣಕಾಸಿನ ಕೊರತೆಯನ್ನು ಕಡಿಮೆಗೊಳಿಸುವಲ್ಲಿ ಯಶಸ್ಸು ಕಾಣುವರು. ಉದ್ಯೋಗದಲ್ಲಿ ಯಾವುದೇ ರೀತಿಯ ಹಿನ್ನಡೆ ಇರುವುದಿಲ್ಲ. ಮಕ್ಕಳ ಜೊತೆಯಲ್ಲಿ ಉತ್ತಮ ಅನ್ಯೋನ್ಯತೆ ಇರುತ್ತದೆ. ನಿಮ್ಮ ಮನಸ್ಸಿಗೆ ಇಷ್ಟವೆನಿಸುವ ಒಡವೆ ವಸ್ತ್ರಗಳನ್ನು ಕೊಳ್ಳುವಿರಿ. ವಿದ್ಯಾಭ್ಯಾಸದಲ್ಲಿ ಸ್ತ್ರೀಯರ ಪಾತ್ರವು ಮಹತ್ತರವಾಗುತ್ತದೆ. ನಿಮ್ಮಲ್ಲಿನ ಅನುಸರಣ ವ್ಯಕ್ತಿತ್ವವು ಕುಟುಂಬ ಮಾತ್ರವಲ್ಲದೆ ಸಮಾಜದಲ್ಲಿಯೂ ಯಶಸ್ಸು ಮತ್ತು ಕೀರ್ತಿಯನ್ನು ಗಳಿಸಿಕೊಡುತ್ತದೆ. ಕೆಲಸ ಕಾರ್ಯದ ನಡುವೆ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಮರೆಯಬಾರದು. ಆತ್ಮೀಯರೊಬ್ಬರ ಹಣದ ವ್ಯವಹಾರದಲ್ಲಿ ನಿಮಗೆ ಅಲ್ಪ ಪ್ರಮಾಣದ ತೊಂದರೆ ಉಂಟಾಗಬಹುದು. ಹಣಕಾಸಿನ ವ್ಯವಹಾರದ ವಿಚಾರದಲ್ಲಿ ಮನೆಯ ಸದಸ್ಯರೊಳಗೆ ಚರ್ಚಿಸುವುದು ಒಳ್ಳೆಯದು.

(ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.