ಈ 3 ರಾಶಿಯವರು ತಮ್ಮ ಸಂಗಾತಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ, ಇವರು ಬಾಳಿಗೆ ಬಂದರೆ ಬದುಕು ಸ್ವರ್ಗವಾಗೋದು ಖಂಡಿತ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ 3 ರಾಶಿಯವರು ತಮ್ಮ ಸಂಗಾತಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ, ಇವರು ಬಾಳಿಗೆ ಬಂದರೆ ಬದುಕು ಸ್ವರ್ಗವಾಗೋದು ಖಂಡಿತ

ಈ 3 ರಾಶಿಯವರು ತಮ್ಮ ಸಂಗಾತಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ, ಇವರು ಬಾಳಿಗೆ ಬಂದರೆ ಬದುಕು ಸ್ವರ್ಗವಾಗೋದು ಖಂಡಿತ

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ 3 ರಾಶಿಯವರು ತಮ್ಮ ಸಂಗಾತಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ. ಅವರು ಯಾವಾಗಲೂ ತಮ್ಮ ಪ್ರೇಮಿ ಅಥವಾ ಸಂಗಾತಿ ಖುಷಿಯಾಗಿರುವಂತೆ ನೋಡಿಕೊಳ್ಳುತ್ತಾರೆ. ಸಂಗಾತಿಗೆ ಯಾವುದೇ ನೋವು, ಕಷ್ಟ ಬರದಂತೆ ಕಾಪಾಡುತ್ತಾರೆ.

ಈ 3 ರಾಶಿಯವರು ತಮ್ಮ ಸಂಗಾತಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ, ಇವರು ನಿಮ್ಮ ಬಾಳಿಗೆ ಬಂದರೆ ಬದುಕು ಸ್ವರ್ಗ ಖಂಡಿತ
ಈ 3 ರಾಶಿಯವರು ತಮ್ಮ ಸಂಗಾತಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ, ಇವರು ನಿಮ್ಮ ಬಾಳಿಗೆ ಬಂದರೆ ಬದುಕು ಸ್ವರ್ಗ ಖಂಡಿತ (PC: Pinterest )

ಪ್ರೀತಿ, ಮದುವೆ ಹೀಗೆ ಯಾವುದೇ ಸಂಬಂಧವಾಗಲಿ ಆ ಸಂಬಂಧದ ಬುನಾದಿ ಗಟ್ಟಿಯಾಗುವುದು ಪ್ರೀತಿ ಹಾಗೂ ನಂಬಿಕೆಯ ಮೇಲೆ. ಕೆಲವರು ಸಂಗಾತಿಯ ಬಗ್ಗೆ ತೋರಿಕೆಯ ಪ್ರೀತಿ ಇರಿಸಿಕೊಂಡಿರುತ್ತಾರೆ. ಆದರೆ ಇನ್ನೂ ಕೆಲವರು ನಿಜವಾದ ಪ್ರೀತಿ ಏನು ಎಂಬುದನ್ನು ತೋರಿಸಿ, ಅರ್ಥವಾಗುವಂತೆ ಮಾಡುತ್ತಾರೆ. ಜನ್ಮ ರಾಶಿಯ ಪ್ರಕಾರ ನೋಡುವುದಾದರೂ ಕೆಲವು ರಾಶಿಯವರು ತಮ್ಮ ಸಂಗಾತಿಯನ್ನು ಅತಿಯಾಗಿ ಪ್ರೀತಿಸುತ್ತಾರೆ.

ರಾಶಿಯ ಆಧಾರದ ಮೇಲೆ ಒಬ್ಬ ಮನುಷ್ಯನ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು. ರಾಶಿಯು ವ್ಯಕ್ತಿಯ ವಕ್ತಿತ್ವ ಹಾಗೂ ನಡವಳಿಕೆಯನ್ನೂ ಬಿಚ್ಚಿಡುತ್ತದೆ. ಅದರ ಜೊತೆಗೆ ಭವಿಷ್ಯವನ್ನು ಕೂಡ ತಿಳಿದುಕೊಳ್ಳಬಹುದು. ಪ್ರತಿಯೊಂದು ರಾಶಿಯವರಿಗೂ ಭಿನ್ನವಾದ ಸ್ವಭಾವವಿರುತ್ತದೆ. ಸಂಬಂಧದ ವಿಚಾರಕ್ಕೆ ಬಂದರೂ ಕೆಲವು ರಾಶಿಯವರು ತಮ್ಮ ಸಂಗಾತಿಯನ್ನು ಅತಿಯಾಗಿ ಪ್ರೀತಿಸಿದರೆ, ಇನ್ನೂ ಕೆಲವು ರಾಶಿಯವರು ಸಂಗಾತಿಗೆ ಪ್ರೀತಿ ನೀಡುವ ವಿಚಾರದಲ್ಲಿ ತದ್ವಿರುದ್ಧ ಗುಣ ಹೊಂದಿರುತ್ತಾರೆ.

ಜ್ಯೋತಿಷ್ಯದ ಪ್ರಕಾರ ಈ 3 ರಾಶಿಯವರು ತಮ್ಮ ಸಂಗಾತಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ, ಆದರಿಸುತ್ತಾರೆ. ಈ ರಾಶಿಯವರು ನಿಮ್ಮ ಜೀವನದಲ್ಲಿ ಬಂದರೆ ಖಂಡಿತ ನೀವು ಸದಾ ಸಂತೋಷದಿಂದ ಇರುತ್ತೀರಿ. ನಿಮ್ಮ ಜೀವನದಲ್ಲಿ ಯಾವುದೇ ಕೊರತೆ ಇರುವುದಿಲ್ಲ. ಅವರು ನಿಮ್ಮ ಬದುಕಿನಲ್ಲಿ ಯಾವುದೇ ಕಷ್ಟ ಇಲ್ಲದಂತೆ ನೋಡಿಕೊಳ್ಳುತ್ತಾರೆ. ಅಂತಹ 3 ರಾಶಿಯವರು ಯಾರು ನೋಡಿ.

1. ವೃಷಭ ರಾಶಿ

ವೃಷಭ ರಾಶಿಯವರು ಬೆಸ್ಟ್‌ ಪಾರ್ಟನರ್‌ ಆಗುತ್ತಾರೆ. ಅವರು ತುಂಬಾ ರೊಮ್ಯಾಂಟಿಕ್. ಅವರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ. ಸಂಗಾತಿಯ ಸಂತೋಷಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಅವರು ಸಂಗಾತಿಯನ್ನೂ ಗೌರವಿಸುತ್ತಾರೆ, ಆಧರಿಸುತ್ತಾರೆ. ಈ ರಾಶಿಯವರು ನಿಮ್ಮ ಬಾಳಿನಲ್ಲಿ ಬಂದರೆ ಖಂಡಿತ ಬದುಕು ಸುಂದರ.

2. ಮಕರ ರಾಶಿ

ಮಕರ ರಾಶಿಯವರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ. ಈ ರಾಶಿಯವರು ಬಹಳ ಭಾವನಾತ್ಮಕ ಜೀವಿಗಳು. ಅವರು ತಮ್ಮ ಸಂಗಾತಿಯನ್ನು ಸಂತೋಷಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಾರೆ. ಅವರು ತಮ್ಮ ಸಂಗಾತಿಯೊಂದಿಗೆ ತುಂಬಾ ಪ್ರಾಮಾಣಿಕರಾಗಿರುತ್ತಾರೆ. ಇವರನ್ನು ಪಡೆದವರು ನಿಜಕ್ಕೂ ಅದೃಷ್ಟವಂತರು.

3. ಕುಂಭ ರಾಶಿ

ಕುಂಭ ರಾಶಿಯವರು ಪ್ರಾಮಾಣಿಕವಾಗಿ ವರ್ತಿಸುತ್ತಾರೆ. ಅವರು ಒಂದು ಸಂಬಂಧವನ್ನು ಪ್ರವೇಶಿಸಿದ ನಂತರ, ಅದರಲ್ಲಿ ಸಮರ್ಪಣಾಭಾವದಿಂದ ಮುಂದುವರಿಸುತ್ತಾರೆ. ಸಂಗಾತಿಯ ಮಾತುಗಳಿಗೆ ಆದ್ಯತೆ ನೀಡುತ್ತಾರೆ. ಅವರು ತಮ್ಮ ಬುದ್ಧಿವಂತಿಕೆಯಿಂದ ಎಂತಹ ಕೆಟ್ಟ ಪರಿಸ್ಥಿತಿಯನ್ನೂ ಉತ್ತಮ ಸ್ಥಿತಿಗೆ ತರಬಲ್ಲರು. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತೀರಿ.

ನೋಡಿದ್ರಲ್ಲ ಈ 3 ರಾಶಿಯವರು ತಮ್ಮ ಸಂಗಾತಿಯನ್ನು ಅಪಾರವಾಗಿ ಪ್ರೀತಿಸುವ ಜೊತೆಗೆ ಅವರಿಗಾಗಿ ಬದುಕನ್ನು ಮೀಸಲಿಡುತ್ತಾರೆ. ಈ ರಾಶಿಯವರು ನಮ್ಮ ಬಾಳಿಗೆ ಬಂದರೆ ಬದುಕು ನಿಜಕ್ಕೂ ಸ್ವರ್ಗವಾಗುತ್ತೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.