ಮಹಾ ಶಿವರಾತ್ರಿಯಲ್ಲಿ 4 ಯಾಮ ಪೂಜೆ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ; ಸಂಪೂರ್ಣ ಮಾಹಿತಿ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾ ಶಿವರಾತ್ರಿಯಲ್ಲಿ 4 ಯಾಮ ಪೂಜೆ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ; ಸಂಪೂರ್ಣ ಮಾಹಿತಿ ಇಲ್ಲಿದೆ

ಮಹಾ ಶಿವರಾತ್ರಿಯಲ್ಲಿ 4 ಯಾಮ ಪೂಜೆ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ; ಸಂಪೂರ್ಣ ಮಾಹಿತಿ ಇಲ್ಲಿದೆ

Maha Shivaratri 2025: ಶಿವರಾತ್ರಿಯ ದಿನದಂದು 4 ಯಾಮದ ಪೂಜೆಯನ್ನು ಮಾಡಲಾಗುತ್ತದೆ. ಮೊದಲ ಮೂರು ಯಾಮಗಳಲ್ಲಿ ಉಪವಾಸವನ್ನು ಆಚರಿಸುವುದು ಒಳ್ಳೆಯದು. ಆದರೆ ಕೊನೆಯ ಯಾಮದಲ್ಲಿ ಉಪವಾಸ ಮಾಡಬೇಕೆಂಬ ನಿಯಮವಿಲ್ಲ.

Maha Shivaratri 2025: ಮಹಾ ಶಿವರಾತ್ರಿಯಂದು 4 ಯಾಮ ಪೂಜೆ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
Maha Shivaratri 2025: ಮಹಾ ಶಿವರಾತ್ರಿಯಂದು 4 ಯಾಮ ಪೂಜೆ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.

Maha Shivaratri 2025: ಮಾಘ ಮಾಸದಲ್ಲಿ ಮಾಡುವ ಪೂಜೆ ಮತ್ತು ದಾನ ಧರ್ಮಗಳಿಂದ ಸಂಪೂರ್ಣವಾದ ಶುಭಫಲಗಳು ದೊರೆಯುತ್ತವೆ. ಈ ಮಾಸದಲ್ಲಿ ಶಿವ ಪೂಜೆಗೆ ವಿಶೇಷ ಆಧ್ಯತೆ ನೀಡಲಾಗುತ್ತದೆ. 2025 ರ ಫೆಬ್ರವರಿಯ 25 ರಂದು ಮಹಾ ಪ್ರದೋಷದ ಪೂಜೆಯನ್ನು ಮಾಡಬೇಕು. ಫೆಬ್ರವರಿ 26 ರಂದು ಮಹಾಶಿವರಾತ್ರಿಯ ಪೂಜೆಯನ್ನು ಮಾಡಬೇಕು. ಇದೇ ದಿನದಂದು ಶನೈಶ್ಚರ ಜಯಂತಿಯ ಪೂಜೆಯನ್ನೂ ಮಾಡಬೇಕಾಗುತ್ತದೆ. ಮಾಘಮಾಸದ ಅಮಾವಾಸ್ಯೆಯ ದಿನದಂದು ಮಹಾ ರುದ್ರಹೋಮವನ್ನು ಮಾಡಿದಲ್ಲಿ ಜೀವನದ ಕಷ್ಟ ನಷ್ಟಗಳು ದೂರವಾಗುತ್ತವೆ.

ಸಾಮಾನ್ಯವಾಗಿ ಶಿವರಾತ್ರಿಯ ದಿನದಂದು 4 ಯಾಮದ ಪೂಜೆಯನ್ನು ಮಾಡುತ್ತೇವೆ. ಮೊದಲ ಮೂರು ಯಾಮಗಳಲ್ಲಿ ಉಪವಾಸವನ್ನು ಆಚರಿಸುವುದು ಒಳ್ಳೆಯದು. ಆದರೆ ಕೊನೆಯ ಯಾಮದಲ್ಲಿ ಉಪವಾಸ ಮಾಡಬೇಕೆಂಬ ನಿಯಮವಿಲ್ಲ. ಅನಾರೋಗ್ಯವಿದ್ದಲ್ಲಿ ಶಿವರಾತ್ರಿಯ ದಿನದಂದು ಹಗಲಿನಲ್ಲಿ ಆಹಾರವನ್ನು ಸೇವಿಸಬಹುದು. ಈ ದಿನದಂದು ಎಳ್ಳುಬೆರೆಸಿದ ನೀರಿನಿಂದ ಸ್ನಾನವನ್ನು ಮಾಡುವುದು ಫಲದಾಯಕ. ಹಣೆಯಲ್ಲಿ ವಿಭೂತಿ ಧರಿಸಿ ರುದ್ರಾಕ್ಷಿಮಾಲೆಯನ್ನು ಕೊರಳಲ್ಲಿ ಧರಿಸಬೇಕು. ಮೊದಲು ಶಿವನ ದೇಗುಲಕ್ಕೆ ತೆರಳಿ ಪೂಜೆ ಮಾಡಿಸಬೇಕು.

ಸಾಮಾನ್ಯವಾಗಿ ನಾವು ಪೂರ್ವದಿಕ್ಕಿಗೆ ಮುಖವನ್ನು ಮಾಡಿ ಸಂಕಲ್ಪವನ್ನು ಮಾಡುವುದು ಸಂಪ್ರದಾಯವಾಗಿದೆ. ಆದರೆ ಈ ದಿನದಂದು ಮನೆಯಲ್ಲಿ ನಾಲ್ಕೂ ಯಾಮದ ಪೂಜೆಯನ್ನು ಮಾಡುವವರು ಉತ್ತರ ದಿಕ್ಕಿಗೆ ಮುಖಮಾಡಿ ಕುಳಿತು ದಿನ ಶುದ್ಧಿಯನ್ನು ಪಠಿಸುವ ಮೂಲಕ ಶಿವರಾತ್ರಿಯ ಪೂಜೆಯನ್ನು ಆರಂಭಿಸಬೇಕು. ನಾಲ್ಕೂ ಯಾಮದ ಪೂಜೆ ಮಾಡಲಾಗದಿದ್ದಲ್ಲಿ ಸೂರ್ಯೋದಯದ ವೇಳೆಯಲ್ಲಿ ಶಿವನ ಪೂಜೆಯನ್ನು ಮಾಡುವುದು ಬಹಳ ಮುಖ್ಯ. ಶಿವರಾತ್ರಿಯ ದಿನದಂದು ಏಕಾದಶ ರುದ್ರಾಭಿಷೇಕವನ್ನು ಮಾಡುವುದು ಸೂಕ್ತ. ಪಂಚಾಮೃತದಿಂದ ಅಭಿಷೇಕವನ್ನು ಮಾಡಿದರೂ ಅಂದು ಶಿವನಿಗೆ ಜಲಾಭಿಷೇಕವು ಅತಿ ಮುಖ್ಯವಾಗುತ್ತದೆ. ಆದ್ದರಿಂದಲೇ ರುದ್ರಾಭಿಷೇಕವನ್ನು ನೀರು ಅಥವಾ ಎಳನೀರಿನಿಂದ ಮಾಡಬಹುದುದಾಗಿದೆ.

ಶಿವರಾತ್ರಿಯ ದಿನ ಶಿವನ ಪೂಜೆ ಹೇಗಿರಬೇಕು, ಏನೆಲ್ಲಾ ಲಾಭಗಳಿವೆ

  • ಶಿವರಾತ್ರಿಯ ದಿನದಂದು ಪರಮೇಶ್ವರನನ್ನು ಸಂಬಸದಾಶಿವ ಎಂಬ ಹೆಸರಿನಿಂದ ಪೂಜಿಸಬೇಕು. ಈ ದಿನ ಶಿವನಿಗೆ ಎಂಟು ಸಾಷ್ಟಾಂಗ ನಮಸ್ಕಾರಗಳನ್ನು ಮಾಡಬೇಕು. ಶಿವನ ಹನ್ನೆರಡು ನಾಮಗಳಿಂದ ಹನ್ನೆರಡು ರೀತಿಯ ಹೂಗಳಿಂದ ಪೂಜಿಸಬೇಕು. ಶಿವನ ಮೂಲ ಮಂತ್ರವನ್ನು ಅಥವಾ ಶಿವ ಪಂಚಾಕ್ಷರಿ ಮಂತ್ರವನ್ನು ಪೂರ್ವಾಭಿಮುಖವಾಗಿ ಕುಳಿತು 108 ಬಾರಿ ಜಪಿಸಬೇಕು.
  • ಸಣ್ಣಕ್ಕಿ, ಗೋಧಿ ಅಥವಾ ಜವೆಗೋಧಿಯಿಂದ ತಯಾರಿಸಿದ ಆಹಾರ ಪದಾರ್ಥವನ್ನು ಶಿವನಿಗೆ ನೇವೇಧ್ಯವನ್ನಾಗಿ ನೀಡಬೇಕು. ಪೂಜೆಯು ಸಂಪೂರ್ಣಗೊಂಡ ನಂತರ 12 ಕುಂಭಗಳನ್ನು ದಾನ ನೀಡಬೇಕು. ಸಾಧ್ಯವಾಗದ ಪಕ್ಷದಲ್ಲಿ ಒಂದು ಕುಂಭವನ್ನಾದರೂ ಕೊಳ್ಳುವುದು ಒಳ್ಳೆಯದು. ಶಿವರಾತ್ರಿಯ ಮಾರನೆಯ ದಿನದಂದು ಅನ್ನಸಂತರ್ಪಣೆ ಮಾಡಬೇಕು.
  • ನದಿ ತೀರದಲ್ಲಿ ದೊರೆಯುವ ಶುದ್ದವಾದ ಮಣ್ಣಿನಿಂದ ಶಿವಲಿಂಗವನ್ನು ಮಾಡಿ ಪೂಜಿಸುವ ಪದ್ದತಿ ಕೆಲವೆಡೆ ಇಂದಿಗೂ ಇದೆ. ಲಿಂಗದಲ್ಲಿ ಅನೇಕ ವಿಧಗಳಿವೆ. ವಜ್ರದಿಂದ ತಯಾರಿಸಲ್ಪಟ್ಟ ಲಿಂಗವನ್ನು ಪೂಜಿಸಿದಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ. ಇದರಿಂದ ದೀರ್ಘಾಯುಷ್ಯ ಉಂಟಾಗುವುದು. ಪೂಜಿಸಿದ ನೀರನ್ನು ಬಹುಕಾಲ ಬಳಸಬಹುದು. ಅದರ ಶಕ್ತಿಯು ಬಹುಕಾಲ ಉಳಿಯುತ್ತದೆ.

ಇದನ್ನೂ ಓದಿ: ಮಹಾ ಶಿವರಾತ್ರಿ ದಿನ 3 ಗ್ರಹಗಳ ಸಂಯೋಗದ ಅದೃಷ್ಟ; ಈ ರಾಶಿವರಿಗೆ ಕಷ್ಟಗಳು ದೂರವಾಗುತ್ತವೆ, ನೆಮ್ಮದಿ ಹೆಚ್ಚಾಗುತ್ತೆ

  • ಮುತ್ತಿನಿಂದ ಮಾಡಿದ ಲಿಂಗವನ್ನು ಪೂಜಿಸಿದಲ್ಲಿ ರಕ್ತಕ್ಕೆ ಸಂಬಂಧಿಸಿದ ದೋಷವು ಪರಿಹಾರಗೊಳ್ಳುತ್ತದೆ. ಸೋದರ ಅಥವಾ ಸೋದರಿಯರ ನಡುವೆ ಇರುವ ಮನಸ್ತಾಪವು ದೂರವಾಗುತ್ತದೆ. ದಂಪತಿಗಳ ನಡುವಿನ ಮನಸ್ತಾಪ ಮತ್ತು ಬಿನ್ನಾಭಿಪ್ರಾಯಗಳು ಪರಿಹಾರಗೊಳ್ಳುತ್ತವೆ.
  • ವೈಡೂರ್ಯದಿಂದ ತಯಾರಿಸಿದ ಶಿವಲಿಂಗವನ್ನು ಪೂಜಿಸಿದಲ್ಲಿ ಜೀವನದಲ್ಲಿ ಎದುರಾಗುವ ಅಡೆತಡೆಗಳು ದೂರವಾಗುತ್ತವೆ. ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟ ತಲುಪಲು ಸಾಧ್ಯವಾಗುತ್ತದೆ. ವಿರೋಧಿಗಳಿಂದ ಯಾವುದೇ ತೊಂದರೆ ಇರುವುದಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಎಲ್ಲರ ಸಹಕಾರ ದೊರೆಯುತ್ತದೆ.
  • ಪಚ್ಚೆಲಿಂಗದಲ್ಲಿ ವಿಶೇಷವಾದ ಶಕ್ತಿ ಇರುತ್ತದೆ. ಇದನ್ನು ಪೂಜಿಸುವದರಿಂದ ಕುಟುಂಬದಲ್ಲಿ ಎಲ್ಲಾ ರೀತಿಯ ಪ್ರಗತಿ ಕಂಡುಬರುತ್ತದೆ. ಭೂವಿವಾದವು ಕೊನೆಗೊಳ್ಳುತ್ತದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.

ಇದನ್ನೂ ಓದಿ: ಮಹಾ ಶಿವರಾತ್ರಿಯಲ್ಲಿ ಉಪವಾಸ ಯಾವಾಗ ಆಚರಿಸಬೇಕು? ಪೂಜಾ ವಿಧಿ ವಿಧಾನಗಳ ಮಾಹಿತಿ ಇಲ್ಲಿದೆ

  • ಸ್ಪಟಿಕದ ಲಿಂಗವನ್ನು ಪೂಜಿಸಿದಲ್ಲಿ ಮನಸ್ಸಿನ ಆಸೆ ಆಕಾಂಕ್ಷೆಗಳು ಸಾಕಾರಗೊಳ್ಳುತ್ತವೆ. ಕೋಪ ತಾಪಗಳು ಕಡಿಮೆಯಾಗಿ ಎಲ್ಲರ ಮನಸ್ಸನ್ನು ಗೆಲ್ಲಲು ಸಾಧ್ಯವಾಗುತ್ತದೆ.
  • ಬೆಳ್ಳಿಯ ಲಿಂಗಕ್ಕೆ ಪೂಜೆಯನ್ನು ಸಲ್ಲಿಸಿದಲ್ಲಿ ಇಹಲೋಕ ತ್ಯಜಿಸಿದ ಮನೆತನದ ಹಿರಿಯರಿಗೆ ಮುಕ್ತಿ ದೊರೆತು, ಹಿರಿಯರ ಆಶೀರ್ವಾದ ದೊರೆಯುತ್ತದೆ.
  • ಶಿವನನ್ನು ಪೂಜಿಸಿದ ಬಿಲ್ವಪತ್ರೆಯನ್ನು ಬಳಿ ಇರಿಸಿಕೊಂಡಲ್ಲಿ , ಆತ್ಮಸ್ಥೈರ್ಯವು ಹೆಚ್ಚುವುದಲ್ಲದೆ ಮನದ ಆಸೆ ಆಕಾಂಕ್ಷೆಗಳು ಪೂರ್ಣಗೊಳ್ಳುತ್ತವೆ. (ಬರಹ: ಎಚ್ ಸತೀಶ್, ಜ್ಯೋತಿಷಿ)

ಇದನ್ನೂ ಓದಿ: ಮಹಾ ಶಿವರಾತ್ರಿ ದಿನ ಕುಂಭ ರಾಶಿಯಲ್ಲಿ ತ್ರಿಗ್ರಾಹಿ ಯೋಗ: 3 ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತೆ, ಉತ್ತಮ ಆದಾಯ ಸೇರಿ ಹಲವು ಲಾಭ

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.