2025ರಲ್ಲಿ ಗೃಹ ಪ್ರವೇಶಕ್ಕೆ ಒಳ್ಳೆಯ ದಿನ ಯಾವುದಿದೆ; ತಿಂಗಳವಾರು ದಿನಾಂಕಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಗೃಹ ಪ್ರವೇಶ ಶುಭ ದಿನಾಂಕ 2025: ಗೃಹಪ್ರವೇಶವನ್ನು ಉತ್ತಮ ಮುಹೂರ್ತದಲ್ಲಿ ನಡೆಸಲಾಗುತ್ತದೆ. ಕುಟುಂಬ ಸದಸ್ಯರು ಪರಿಚಯಸ್ಥರ ಸಮ್ಮುಖದಲ್ಲಿ ಹೊಸ ಮನೆಗೆ ಕಾಲಿಡುತ್ತಾರೆ. ನೀವು ಹೊಸ ಮನೆ ಅಥವಾ ಫ್ಲ್ಯಾಟ್ ಖರೀದಿಸಿದ್ದೀರಾ? ಆದರೆ ಮನೆಗೆ ಪ್ರವೇಶಿಸಲು ಶುಭ ಮುಹೂರ್ತಗಳ ಬಗ್ಗೆ ತಿಳಿಯಿರಿ. 2025ರಲ್ಲಿ ಮನೆ ಪ್ರವೇಶಿಸಲು ಶುಭ ಮುಹೂರ್ತಗಳು ಇಲ್ಲಿವೆ.
ಗೃಹ ಪ್ರವೇಶ ಶುಭ ದಿನಾಂಕ 2025: ಸ್ವಂತ ಮನೆಯೊಂದನ್ನು ಕಟ್ಟಿಕೊಳ್ಳಬೇಕು ಎಂಬುದು ಬಹುತೇಕ ಜನರ ಕನಸಾಗಿರುತ್ತದೆ. ಆದರೆ ಅದು ಎಲ್ಲರಿಗೂ ನನಸಾಗುವುದಿಲ್ಲ. ಸ್ವಂತ ಮನೆ ಹೊಂದುವ ಕನಸನ್ನು ಈಡೇರಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಮಧ್ಯಮ ವರ್ಗಕ್ಕೆ ಸೇರಿದ ಕುಟುಂಬದವರಾಗಿದ್ದರೆ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅಂತಿಮವಾಗಿ ಸ್ವಂತ ಮನೆಯ ಕನಸನ್ನು ಈಡೇರಿಸಿಕೊಳ್ಳುತ್ತಾರೆ. ಆದರೆ ಮನೆಯನ್ನು ನಿರ್ಮಿಸಿದ ನಂತರ ಗೃಹ ಪ್ರವೇಶಕ್ಕೆ ಮುಹೂರ್ತವನ್ನು ನೋಡುತ್ತೇವೆ. ಹಿಂದೂ ಸಂಪ್ರದಾಯದ ಪ್ರಕಾರ, ಶುಭ ಮುಹೂರ್ತದಲ್ಲಿ ಗೃಹ ಪ್ರವೇಶವನ್ನು ಮಾಡಲಾಗುತ್ತದೆ. ಕುಟುಂಬ ಸದಸ್ಯರು ಪರಿಚಯಸ್ಥರ ಸಮ್ಮುಖದಲ್ಲಿ ಹೊಸ ಮನೆಗೆ ಪ್ರವೇಶಿಸುತ್ತಾರೆ. ಒಂದು ವೇಳೆ ನೀವೇನಾದರೂ ಹೊಸ ಮನೆ ಅಥವಾ ಫ್ಲ್ಯಾಟ್ ಖರೀದಿಸಿ ಗೃಹ ಪ್ರವೇಶದ ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದರೆ 2025ರಲ್ಲಿ ಬರುವ ಈ ಶುಭ ದಿನಾಂಕಗಳನ್ನು ಗಮನಿಸಿ. 2025ರಲ್ಲಿ ಗೃಹ ಪ್ರವೇಶಕ್ಕೆ ಶುಭ ಮುಹೂರ್ತಗಳನ್ನು ಇಲ್ಲಿ ನೀಡಲಾಗಿದೆ. ಈ ಮುಹೂರ್ತಗಳಲ್ಲಿ ನೀವು ಗೃಹ ಪ್ರವೇಶ ಕಾರ್ಯಕ್ರಮವನ್ನು ಆಯೋಜಿಸಿಕೊಳ್ಳಬಹುದು.
2025 ರಲ್ಲಿ ನೀವು ಯಾವಾಗ ಮನೆಯನ್ನು ಪ್ರವೇಶಿಸಬಹುದು? ಗೃಹಪ್ರವೇಶ ಮುಹೂರ್ತಗಳು
ಜನವರಿ 2025: ನೀವು 2025ರ ಜನವರಿ 15, 20, 24, 27 ಹಾಗೂ 31 ರಂದು ಗೃಹ ಪ್ರವೇಶವನ್ನು ಮಾಡಬಹುದು. ಈ ದಿನಾಂಕಗಳಲ್ಲಿ ಶುಭ ಮುಹೂರ್ತ ಲಭ್ಯವಿರುತ್ತದೆ.
ಫೆಬ್ರುವರಿ 2025: ಈ ತಿಂಗಳಲ್ಲಿ ಗೃಹ ಪ್ರವೇಶದ ಶುಭ ದಿನಾಂಕಗಳು 3, 7, 8, 10, 15, 17, 19, 26 ಇದೆ. ಈ ದಿನಾಂಕಗಳಲ್ಲಿ ಗೃಹ ಪ್ರವೇಶ ಕಾರ್ಯಕ್ರಮವನ್ನು ನಡೆಸಬಹುದು.
ಮಾರ್ಚ್ 2025: ಮಾರ್ಚ್ ತಿಂಗಳಲ್ಲಿ 6 ಮತ್ತು 10 ದಿನಾಂಕ ಮಂಗಳಕರವಾಗಿದೆ. ಈ ದಿನಾಂಕಗಳಲ್ಲಿ ಗೃಹ ಪ್ರವೇಶವನ್ನು ಸಹ ಮಾಡಬಹುದು.
ಮೇ 2025: ಗೃಹ ಪ್ರವೇಶಕ್ಕೆ ಮೇ 14 ಮಾತ್ರ ಅನುಕೂಲಕರ ದಿನಾಂಕವಾಗಿದೆ. ಬೇಸಿಗೆಯಲ್ಲಿ, ನೀವು ಈ ದಿನ ಮನೆಗೆ ಪ್ರವೇಶಿಸಬಹುದು.
ಜೂನ್ 2025: ಹೊಸ ಮನೆಯ ಗೃಹ ಪ್ರವೇಶಕ್ಕೆ ಜೂನ್ 25 ಶುಭ ದಿನವಾಗಿದೆ
ಅಕ್ಟೋಬರ್ 2025: ಈ ತಿಂಗಳಲ್ಲಿ 1 ರಂದು ಗೃಹ ಪ್ರವೇಶವನ್ನು ಮಾಡಬಹುದು. ಇದು ಆ ತಿಂಗಳಲ್ಲಿ ಲಭ್ಯವಿರುವ ಶುಭ ತಿಥಿಯಾಗಿದೆ.
ಜ್ಯೋತಿಷಿಗಳ ಪ್ರಕಾರ, ಮೇಲೆ ತಿಳಿಸಿದ ದಿನಾಂಕಗಳನ್ನು ಹೊರತುಪಡಿಸಿ, ತಿಂಗಳ ಕೆಲವು ದಿನಗಳನ್ನು ಮನೆಗೆ ಅನುಗುಣವಾಗಿ ಗೃಹ ಪ್ರವೇಶಕ್ಕೆ ಪರಿಗಣಿಸಲಾಗುತ್ತದೆ. ಏಕಾದಶಿ, ದ್ವಾದಶಿ ಹಾಗೂ ತ್ರಯೋದಶಿಯಂದು ಹೊಸ ಮನೆಗೆ ಪ್ರವೇಶಿಸಬಹುದು.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)