2025 ರಲ್ಲಿ ಮದುವೆಗೆ ಶುಭ ಸಮಯ ಯಾವುದಿದೆ; ಜನವರಿಯಿಂದ ಡಿಸೆಂಬರ್‌ವರೆಗಿನ ವಿವಾಹ ಮುಹೂರ್ತದ ಪಟ್ಟಿ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  2025 ರಲ್ಲಿ ಮದುವೆಗೆ ಶುಭ ಸಮಯ ಯಾವುದಿದೆ; ಜನವರಿಯಿಂದ ಡಿಸೆಂಬರ್‌ವರೆಗಿನ ವಿವಾಹ ಮುಹೂರ್ತದ ಪಟ್ಟಿ ಇಲ್ಲಿದೆ

2025 ರಲ್ಲಿ ಮದುವೆಗೆ ಶುಭ ಸಮಯ ಯಾವುದಿದೆ; ಜನವರಿಯಿಂದ ಡಿಸೆಂಬರ್‌ವರೆಗಿನ ವಿವಾಹ ಮುಹೂರ್ತದ ಪಟ್ಟಿ ಇಲ್ಲಿದೆ

ವಿವಾಹ ದಿನಾಂಕ 2025: ಸೂರ್ಯನು ಜನವರಿ 14 ರಂದು ಬೆಳಿಗ್ಗೆ 9.03 ಕ್ಕೆ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಅದೇ ದಿನ, ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ. ಧನುರ್ಮಾಸದಿಂದ ಸ್ಥಗಿತವಾಗಿದ್ದ ಶುಭಕಾರ್ಯಗಳು ಅಂದಿನಿಂದ ಶುರುವಾಗುತ್ತವೆ. ಮದುವೆಯ ಋತುವು ಜನವರಿ 16 ರಂದು ಪ್ರಾರಂಭವಾಗಲಿದೆ. 2025 ರಲ್ಲಿ ಮದುವೆಯ ಶುಭ ಮುಹೂರ್ತಗಳ ಪಟ್ಟಿ ಇಲ್ಲಿ ನೀಡಲಾಗಿದೆ.

2025 ರಲ್ಲಿ ಜನವರಿಯಿಂದ ಡಿಸೆಂಬರ್ ವರಿಗೆ ಮದುವೆ ಶುಭ ಮುಹೂರ್ತಗಳ ಪಟ್ಟಿ ಇಲ್ಲಿದೆ
2025 ರಲ್ಲಿ ಜನವರಿಯಿಂದ ಡಿಸೆಂಬರ್ ವರಿಗೆ ಮದುವೆ ಶುಭ ಮುಹೂರ್ತಗಳ ಪಟ್ಟಿ ಇಲ್ಲಿದೆ

ವಿವಾಹ ದಿನಾಂಕ 2025: ಸಂಕ್ರಾಂತಿ ಮುಗಿದ ನಂತರ, ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ. ಜನವರಿ 14 ರಂದು ಬೆಳಗ್ಗೆ 9.03 ಕ್ಕೆ ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಅದೇ ದಿನ, ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ. ಧನುರ್ಮಾಸ ಕೂಡಾ ಜನವರಿ 13ರಂದೇ ಕೊನೆಗೊಳ್ಳುತ್ತದೆ. ಮದುವೆಯ ಋತುವು ಜನವರಿ 16 ರಿಂದ ಆರಂಭವಾಗುತ್ತದೆ. ಆ ನಂತರ ಯಾವುದೇ ರೀತಿಯ ಶುಭ ಸಮಾರಂಭಗಳನ್ನು ಮಾಡಬಹುದು. ಆಚಾರ್ಯ ಅಂಜನಿ ಕುಮಾರ್ ಠಾಕೂರ್ ಅವರ ಪ್ರಕಾರ, ಸೂರ್ಯನು ಧನು ರಾಶಿಯನ್ನು ಪ್ರವೇಶಿಸಿದಾಗ, ಆತನ ವೇಗವು ಇತರ ಗ್ರಹಗಳಿಗಿಂತ ಸ್ವಲ್ಪ ನಿಧಾನವಾಗುತ್ತದೆ. ಈ ತಿಂಗಳಲ್ಲಿ ಅವುಗಳ ಹೊಳಪು ಕಡಿಮೆಯಾಗುತ್ತದೆ. ಆದ್ದರಿಂದ, ಶುಭ ಚಟುವಟಿಕೆಗಳನ್ನು ನಿಷೇಧಿಸಲಾಗುತ್ತದೆ. ಇದನ್ನು ಖರ್ಮಾಸ್ ಅಥವಾ ಧನುರ್ಮಾಸ ಎಂದು ಕರೆಯಲಾಗುತ್ತದೆ, ಇದು ಸಾಮಾನ್ಯವಾಗಿ ಡಿಸೆಂಬರ್ 15 ರಿಂದ ಜನವರಿ 14 ರವರೆಗೆ ಇರುತ್ತದೆ.

ಆಚಾರ್ಯರು ಹೇಳುವ ಪ್ರಕಾರ, ಫೆಬ್ರವರಿ 2 ರಂದು ಬಸಂತ್ ಪಂಚಮಿ, ಏಪ್ರಿಲ್ 30 ರಂದು ಅಕ್ಷಯ ತೃತೀಯ, ಮೇ 12 ರಂದು ಅರಳಿ ಹುಣ್ಣಿಮೆ, ನವೆಂಬರ್ 1 ರಂದು ಉತ್ಥಾನ ದ್ವಾದಶಿ ಸೇರಿದಂತೆ ಈ ವರ್ಷ ಮದುವೆಗೆ 75 ಶುಭ ಸಮಯಗಳಿವೆ. ಜುಲೈ, ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಮದುವೆ ಮುಹೂರ್ತಗಳಿಲ್ಲ. 2025ರ ಜನವರಿಯಿಂದ ಡಿಸೆಂಬರ್ ನಡುವೆ ಮದುವೆಯ ಶುಭ ಮುಹೂರ್ತದ ದಿನಾಂಕಗಳನ್ನು ಇಲ್ಲಿ ನೀಡಲಾಗಿದೆ.

ಜನವರಿ - 16,17,18,19,20,21,23,24,26 ಹಾಗೂ 27

ಫೆಬ್ರವರಿ - 2,3,6,7,12,13,14,15,16,18,19,21,23 ಹಾಗೂ 25

ಮಾರ್ಚ್ - 1,2,6,7 ಹಾಗೂ 12

ಏಪ್ರಿಲ್ - 14,16,18,19,20,21,25,29 ಹಾಗೂ 30

ಮೇ 1,5,6,8,10.14,15, 16,17,18, 22,23,24,27 ಮತ್ತು 28

ಜೂನ್ - 2,4,5,7 ಹಾಗೂ 8

ನವೆಂಬರ್ 2,3,6,8,12,13,16,17,18,21,22,23,25 ಹಾಗೂ 30

ಡಿಸೆಂಬರ್ - 4,5 ಹಾಗೂ 6

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.