Bhagavad Gita: ಸಂತೋಷದ ಜೀವನ ನಡೆಸಬೇಕೆಂದಿದ್ದರೆ ಭಗವದ್ಗೀತೆಯ ಈ 4 ಹಿತವಚನಗಳನ್ನು ನೆನಪಿಟ್ಟುಕೊಳ್ಳಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಸಂತೋಷದ ಜೀವನ ನಡೆಸಬೇಕೆಂದಿದ್ದರೆ ಭಗವದ್ಗೀತೆಯ ಈ 4 ಹಿತವಚನಗಳನ್ನು ನೆನಪಿಟ್ಟುಕೊಳ್ಳಿ

Bhagavad Gita: ಸಂತೋಷದ ಜೀವನ ನಡೆಸಬೇಕೆಂದಿದ್ದರೆ ಭಗವದ್ಗೀತೆಯ ಈ 4 ಹಿತವಚನಗಳನ್ನು ನೆನಪಿಟ್ಟುಕೊಳ್ಳಿ

Bhagavad Gita: ಭಗವದ್ಗೀತೆಯು ಮನುಷ್ಯನಿಗೆ ಆಳವಾದ ಜ್ಞಾನವನ್ನು ನೀಡುತ್ತದೆ. ಸಂತೋಷದ ಜೀವನ ನಡೆಸಲು ಏನು ಮಾಡಬೇಕು? ಯಾವ ರೀತಿಯ ನಡೆತೆಗಳನ್ನು ಬೆಳೆಸಿಕೊಳ್ಳಬೇಕು ಎಂಬುದನ್ನು ಶ್ರೀಕೃಷ್ಣನ ಈ ಉಪದೇಶಗಳ ಮೂಲಕ ತಿಳಿಯಿರಿ.

Bhagavad Gita: ಸಂತೋಷದ ಜೀವನ ನಡೆಸಬೇಕೆಂದಿದ್ದರೆ ಭಗವದ್ಗೀತೆಯ ಈ 4 ಹಿತವಚನಗಳನ್ನು ನೆನಪಿಟ್ಟುಕೊಳ್ಳಿ
Bhagavad Gita: ಸಂತೋಷದ ಜೀವನ ನಡೆಸಬೇಕೆಂದಿದ್ದರೆ ಭಗವದ್ಗೀತೆಯ ಈ 4 ಹಿತವಚನಗಳನ್ನು ನೆನಪಿಟ್ಟುಕೊಳ್ಳಿ (PC: HT File Photo)

ಭಗವದ್ಗೀತೆಯು ಹಿಂದೂಗಳ ಪವಿತ್ರ ಗ್ರಂಥ. ಇದು ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಉಪದೇಶಗಳಾಗಿವೆ. ಈ ಮಹಾಭಾರತ ಯುದ್ಧದಲ್ಲಿ ತನ್ನ ಪ್ರತಿಸ್ಪರ್ಧಿಯಾಗಿ ನಿಂತವರು ತನ್ನದೇ ಕುಲದವರು ಹಾಗೂ ತನ್ನದೇ ಸಂಬಂಧಿಕರು ಎಂದು ಅರ್ಜುನನು ಹತಾಶೆಗೆ ಒಳಗಾಗುತ್ತಾನೆ. ಮತ್ತು ತಾನು ಯುದ್ಧ ಮಾಡುವುದಿಲ್ಲವೆಂದು ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸುತ್ತಾನೆ. ಆಗ ಕುಂತಿ ಪುತ್ರ ಅರ್ಜುನನಿಗೆ ಪರಮಾತ್ಮ ಶ್ರೀಕೃಷ್ಣನು ಭಗವದ್ಗೀತೆಯನ್ನು ಬೋಧಿಸಿದನು. ಕೃಷ್ಣ ಪರಮಾತ್ಮನು 'ನಿಜವಾಗಿಯೂ ಸಂತೋಷವಾಗಿರಲು ಬಯಸುವವರು ಎಂದಿಗೂ ಇತರರನ್ನು ಟೀಕಿಸುವುದಿಲ್ಲ. ಇತರರನ್ನು ಟೀಕಿಸಿದರೆ ಅದು ನಮ್ಮ ಸಂತೋಷ ಕಸಿದುಕೊಳ್ಳುತ್ತದೆ.' ಸಂತೋಷವಾಗಿರಲು ಬಯಸುವ ಜನರು ತಮ್ಮ ಸಂತೋಷದ ಜೊತೆಗೆ ಇತರರ ಸಂತೋಷದ ಬಗ್ಗೆಯೂ ಕಾಳಜಿ ವಹಿಸುತ್ತಾರೆ ಎಂದು ಹೇಳಿದನು. ಅಂದರೆ ಮನಸ್ಸಿನಲ್ಲಿ ಅಸೂಯೆಯನ್ನು ತುಂಬಿಕೊಂಡರೆ ಅದು ನಮ್ಮನ್ನು ವಿನಾಶದ ದಾರಿಗೆ ಕರೆದುಕೊಂಡು ಹೋಗುತ್ತದೆ. ಭಗವಾನ್‌ ಕೃಷ್ಣನು, ಭಗವದ್ಗೀತೆಯನ್ನು ಕೇವಲ ಅರ್ಜುನನಿಗೆ ಮಾತ್ರ ಉಪದೇಶಿಸಲಿಲ್ಲ, ಸಮಸ್ತ ಮನುಕುಲಕ್ಕೆ ಬದುಕಲು ಅವಶ್ಯಕವಾದ ಸಂದೇಶವನ್ನು ನೀಡಿದನು.

ಹೋಲಿಕೆ ಮಾಡಬೇಡಿ

ಜೀವನದಲ್ಲಿ ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಬಾರದು ಎಂದು ಶ್ರೀಕೃಷ್ಣ ಪರಮಾತ್ಮ ಹೇಳುತ್ತಾನೆ. ದೇವರು ನಿನಗೆ ಕೊಟ್ಟಿದ್ದರಲ್ಲಿ ನೀನು ಸಂತೃಪ್ತನಾಗಿರಬೇಕು. ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದು ನಮಗೆ ಕೇವಲ ದುಃಖವನ್ನು ಮಾತ್ರ ತರುತ್ತದೆ. ತಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವವರು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಇದಲ್ಲದೆ, ಅವರು ಸದಾ ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾ ತಮ್ಮ ಕರ್ತವ್ಯವನ್ನು ಮರೆತುಬಿಡುತ್ತಾರೆ.

ಯಾರನ್ನೂ ದೂರಬೇಡಿ

ಜೀವನದಲ್ಲಿ ಯಾರನ್ನೂ ಎಂದಿಗೂ ದೂರಬೇಡಿ. ಇತರರ ಬಗ್ಗೆ ದೂರು ನೀಡುವುದರಿಂದ ನಿಮ್ಮ ಬಗ್ಗೆ ನಿಮಗೆ ಒಳ್ಳೆಯ ಭಾವನೆ ಬರಬಹುದು. ಆದರೆ, ಅದರಿಂದ ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ. ಸಂತೋಷದ ಜನರು ಎಲ್ಲರನ್ನೂ ಸಮಾನವಾಗಿ ನಡೆಸಿಕೊಳ್ಳುತ್ತಾರೆ. ಅವರು ಯಾವುದರ ಬಗ್ಗೆಯೂ, ಯಾರ ಬಗ್ಗೆಯೂ ದೂರು ನೀಡುವುದಿಲ್ಲ. ಆದ್ದರಿಂದ, ನಿಮ್ಮ ಸ್ವಂತ ವಿಷಯಗಳ ಮೇಲೆ ಗಮನಹರಿಸಿ ಮತ್ತು ಅವುಗಳನ್ನು ಹೆಚ್ಚು ಹೆಚ್ಚು ಉತ್ಸಾಹದಿಂದ ಮಾಡಲು ಪ್ರುಯತ್ನಿಸಿ.

ಹಿಂದೆ ನಡೆದ ಘಟನೆಗಳ ಬಗ್ಗೆ ಚಿಂತಿಸಬೇಡಿ

ಹಿಂದೆ ನಡೆದ ಘಟನೆಗಳ ಬಗ್ಗೆ ಚಿಂತಿಸುವುದರಲ್ಲಿ ಅರ್ಥವಿಲ್ಲ. ಅದು ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತದೆ. ಅದರಿಂದ ನಿಮಗೆ ಯಾವುದೇ ಒಳ್ಳೆಯದಾಗುವುದಿಲ್ಲ. ಹಿಂದಿನ ಘಟನೆಗಳು, ಸಂದರ್ಭಗಳು ಮತ್ತು ಸಂಬಂಧಗಳ ಬಗ್ಗೆ ಯೋಚಿಸದೆ, ವರ್ತಮಾನದ ಕ್ಷಣದಲ್ಲಿ ಬದುಕುವುದೇ ಸಂತೋಷದ ಮಾರ್ಗ ಎಂದು ಶ್ರೀಕೃಷ್ಣ ಪರಮಾತ್ಮನು ಗೀತೆಯಲ್ಲಿ ಹೇಳಿದ್ದಾನೆ.

ದೇವರು ನಿರಾಕಾರನಾಗಿದ್ದಾನೆ

ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ದೇವರಿಗೆ ಯಾವುದೇ ರೂಪವಿಲ್ಲ, ಅವನು ನಿರಾಕಾರನಾಗಿದ್ದಾನೆ ಎಂದು ಹೇಳಿದ್ದಾನೆ. ಅವನನ್ನು ಯಾವುದೇ ರೂಪದಲ್ಲಿ ಪೂಜಿಸಿದರೂ, ಅವನು ಅದೇ ರೂಪದಲ್ಲಿಯೇ ಅವನನ್ನು ಆಶೀರ್ವದಿಸುತ್ತಾನೆ. ಆದ್ದರಿಂದ ನಂಬಿಕೆ, ಶ್ರದ್ಧೆಯನ್ನು ರೂಢಿಸಿಕೊಳ್ಳಿ ಎಂದು ಹೇಳಿದ್ದಾನೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.