ಒತ್ತಡ, ಮಾನಸಿಕ ಸಮಸ್ಯೆ, ಸವಾಲುಗಳನ್ನು ಎದುರಿಸಲು ಶಕ್ತಿ ನೀಡುತ್ತದೆ ಭಗವದ್ಗೀತೆಯ ಈ ಅತ್ಯಮೂಲ್ಯ ಸಂದೇಶಗಳು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಒತ್ತಡ, ಮಾನಸಿಕ ಸಮಸ್ಯೆ, ಸವಾಲುಗಳನ್ನು ಎದುರಿಸಲು ಶಕ್ತಿ ನೀಡುತ್ತದೆ ಭಗವದ್ಗೀತೆಯ ಈ ಅತ್ಯಮೂಲ್ಯ ಸಂದೇಶಗಳು

ಒತ್ತಡ, ಮಾನಸಿಕ ಸಮಸ್ಯೆ, ಸವಾಲುಗಳನ್ನು ಎದುರಿಸಲು ಶಕ್ತಿ ನೀಡುತ್ತದೆ ಭಗವದ್ಗೀತೆಯ ಈ ಅತ್ಯಮೂಲ್ಯ ಸಂದೇಶಗಳು

Bhagavad Gita: ಜೀವನದ ಪ್ರತಿ ಹಂತದಲ್ಲೂ ಕಷ್ಟ, ಮಾನಸಿಕ ಆಘಾತ, ಒತ್ತಡ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ನೀವು ಅಂತಹ ಪರಿಸ್ಥಿಯಲ್ಲಿ ಸಾಗುತ್ತಿದ್ದರೆ ಭಗವದ್ಗೀತೆಯ ಈ ಉಪದೇಶಗಳು ನಿಮಗೆ ದಾರೀದೀಪಗಳಾಗಿವೆ.

ಒತ್ತಡ, ಮಾನಸಿಕ ಆಘಾತ, ಕಷ್ಟಗಳನ್ನು ಎದುರಿಸಲು ಶಕ್ತಿ ನೀಡುತ್ತದೆ ಭಗವದ್ಗೀತೆಯ ಈ ಅತ್ಯಮೂಲ್ಯ ಸಂದೇಶಗಳು
ಒತ್ತಡ, ಮಾನಸಿಕ ಆಘಾತ, ಕಷ್ಟಗಳನ್ನು ಎದುರಿಸಲು ಶಕ್ತಿ ನೀಡುತ್ತದೆ ಭಗವದ್ಗೀತೆಯ ಈ ಅತ್ಯಮೂಲ್ಯ ಸಂದೇಶಗಳು (PC: HT File Photo)

ಮನುಷ್ಯನ ಜೀವನವೆನ್ನುವುದು ಸದಾ ಹರಿಯುವ ನದಿಯಂತೆ. ನದಿ ಗಮ್ಯ ತಲುಪಲು ಹೇಗೆ ನಿರಂತರ ಓಡುತ್ತದೆಯೋ ಅದೇ ರೀತಿ ಮನುಷ್ಯನ ಜೀವನವೂ ಕೂಡಾ ನಿರಂತರ ಹೋರಾಟದಿಂದ ಕೂಡಿರುತ್ತದೆ. ಕಷ್ಟ, ನೋವು, ಮಾನಸಿಕ ಆಘಾತಗಳು ಜೀವನದ ಒಂದಲ್ಲಾಒಂದು ತಿರುವಿನಲ್ಲಿ ಎದುರಾಗುತ್ತದೆ. ಅಂತಹ ಸಂದರ್ಭದಲ್ಲಿ ಮನುಷ್ಯ ಒತ್ತಡ, ಹತಾಶೆಗಳಿಂದ ಕುಗ್ಗುತ್ತಾ ಹೋಗುತ್ತಾನೆ. ಇಂತಹ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಪರಿಹಾರಗಳಿವೆ. ಈ ಪವಿತ್ರ ಗ್ರಂಥದಲ್ಲಿನ ಭೋದನೆಗಳು ಅತ್ಯಮೂಲ್ಯವಾಗಿದೆ. ಬಿಸಿಯಾದ ಹಾಲಿಗೆ ನೀರನ್ನು ಹಾಕಿ ತಂಪುಗೊಳಿಸುವಂತೆ ಶ್ರೀಕೃಷ್ಣನ ಅಮೃತದಂತಹ ಮಾತುಗಳು ಚಂಚಲ ಮನಸ್ಸಿನ ಮೇಲೆ ತಂಪಾದ ಮಂಜಿನ ಹನಿಯಂತೆ ಪ್ರಭಾವ ಬೀರುತ್ತದೆ. ಭಗವದ್ಗೀತೆಯ ಸಾರವನ್ನು ಅರಿತವರು ಹೇಳುವಂತೆ, ಚಂಚಲ ಮನಸ್ಸು ಇರುವವರು ಅದರಿಂದ ಹೊರಬರಲು ಗೀತೆಯು ಮಾರ್ಗವನ್ನು ತೋರಿಸುತ್ತದೆ. ಆದ್ದರಿಂದ ಮನಸ್ಸಿನಲ್ಲಿ ಮನೆಮಾಡಿರುವ ನೋವಿನ ಗಂಟನ್ನು ಬಿಡಿಸಿ, ಒತ್ತಡದಿಂದ ಹೊರಬಂದು ಪ್ರಶಾಂತವಾದ, ನಿರ್ಮಲ ಮನಸ್ಸು ಹೊಂದಲು ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಬೋಧಿಸಿರುವ ಈ ಉಪದೇಶಗಳು ನಿಮಗೆ ಸಹಾಯ ಮಾಡುತ್ತವೆ.

ಬುದ್ಧಿವಂತಿಕೆ ಮತ್ತು ವಿವೇಚನೆಯಿಂದ ಕೆಲಸ ಮಾಡಿ

ಶ್ರೀಕೃಷ್ಣನು ಬೋಧಿಸಿದ ಗೀತೆಯ ಪ್ರಕಾರ, ಏನೇ ಕೆಲಸ ಮಾಡುವುದಿದ್ದರು ಬುದ್ದಿವಂತಿಕೆ ಮತ್ತು ಆತ್ಮಸಾಕ್ಷಿಯೊಂದಿಗೆ ಮಾಡಬೇಕು. ಆಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ. ಬುದ್ದಿವಂತಿಕೆ ಮತ್ತು ವಿವೇಚನೆಗೆ ಆದ್ಯತೆ ನೀಡುವುದರಿಂದ ಜೀವನದಲ್ಲಿ ಎದುರಾಗುವ ಕಷ್ಟಗಳಿಗೂ ಸಹ ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಮನಸ್ಸನ್ನು ಸದಾ ಶಾಂತವಾಗಿಟ್ಟುಕೊಂಡು ತ್ಯಾಗ ಮನೋಭಾವನೆಯಿಂದ ಕೆಲಸವನ್ನು ಮಾಡಬೇಕು. ಫಲವನ್ನು ಅಪೇಕ್ಷಿಸದೆ ಕೆಲಸ ಮಾಡುವುದನ್ನು ಕಲಿಯಬೇಕು ಎಂದು ಶ್ರೀಕೃಷ್ಣನು ಹೇಳುತ್ತಾನೆ.

ಭಕ್ತಿಯು ದೇವರಲ್ಲಿ ಕೊನೆಗೊಳ್ಳುತ್ತದೆ

ಭಗವದ್ಗೀತೆಯ 18 ನೇ ಅಧ್ಯಾಯವು, ನಾವು ಎಲ್ಲಾ ಧರ್ಮವನ್ನು ತೊರೆದು ದೇವರನ್ನು ಮಾತ್ರ ಆಶ್ರಯಿಸಿದಾಗ ಎಲ್ಲಾ ರೀತಿಯ ಭಯ ಮತ್ತು ಆತಂಕಗಳು ದೂರವಾಗುತ್ತವೆ ಎಂದು ಹೇಳುತ್ತದೆ. ಅರ್ಜುನನ ಮನಸ್ಸಿನಲ್ಲಿ ಉಂಟಾದ ಸಂಶಯಗಳಿಗೆ ಶ್ರೀಕೃಷ್ಣನು ಎಲ್ಲಾ ಧರ್ಮಗಳನ್ನು ತ್ಯಜಿಸಿ ನನ್ನಲ್ಲಿ ಆಶ್ರಯವನ್ನು ಪಡೆಯಬೇಕೆಂದು ಎಂದು ಹೇಳುತ್ತಾನೆ. ನನ್ನಲ್ಲಿ ಭರವಸೆಯನ್ನು ಇಡು, ನಾನು ನಿನ್ನನ್ನು ಎಲ್ಲಾ ಪಾಪಗಳಿಂದ ಮುಕ್ತಗೊಳಿಸುತ್ತೇನೆ. ಆದ್ದರಿಂದ ನೀನು ದುಃಖಿಸಬೇಡ ಎಂದು ಹೇಳುತ್ತಾನೆ.

ಬಂಧನಗಳ ಬಗ್ಗೆ ಎಚ್ಚರದಿಂದಿರಿ

ಗೀತೆಯ ಒಂದು ಶ್ಲೋಕದಲ್ಲಿ ನಾವು ಲೌಕಿಕ ಸುಖಗಳ ಬಾಂಧವ್ಯದ ಬಗ್ಗೆ ಎಚ್ಚರದಿಂದಿರಬೇಕು ಎಂದು ಹೇಳಲಾಗಿದೆ. ಬಾಂಧವ್ಯದಿಂದಾಗಿ ಲೌಕಿಕ ವಸ್ತುಗಳ ಮೇಲಿನ ಮೋಹ ಹೆಚ್ಚುತ್ತದೆ. ಭೌತಿಕ ವಸ್ತುಗಳ ಮೇಲಿನ ಈ ಬಾಂಧವ್ಯವು ಒತ್ತಡ ಮತ್ತು ಗೊಂದಲಕ್ಕೆ ಮೂಲ ಕಾರಣವಾಗಿದೆ. ಆದ್ದರಿಂದ, ನಾವು ಲೌಕಿಕ ವಸ್ತುಗಳಿಂದ ದೂರವಿರಲು ಪ್ರಯತ್ನಿಸಬೇಕು. ಮೋಹದಿಂದ ಬಯಕೆ ಉಂಟಾಗುತ್ತದೆ ಮತ್ತು ಆ ಬಯಕೆಯಿಂದಲೇ ಕೋಪವು ಉಂಟಾಗುತ್ತದೆ ಎಂದು ಗೀತೆಯು ಹೇಳುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.