ಜೀವನ, ಕರ್ಮ, ಜ್ಞಾನ ಮತ್ತು ಭಕ್ತಿ ಎಂದರೇನು? ಭಗವದ್ಗೀತೆಯ ಈ ಶ್ಲೋಕಗಳಿಂದ ತಿಳಿದುಕೊಳ್ಳಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜೀವನ, ಕರ್ಮ, ಜ್ಞಾನ ಮತ್ತು ಭಕ್ತಿ ಎಂದರೇನು? ಭಗವದ್ಗೀತೆಯ ಈ ಶ್ಲೋಕಗಳಿಂದ ತಿಳಿದುಕೊಳ್ಳಿ

ಜೀವನ, ಕರ್ಮ, ಜ್ಞಾನ ಮತ್ತು ಭಕ್ತಿ ಎಂದರೇನು? ಭಗವದ್ಗೀತೆಯ ಈ ಶ್ಲೋಕಗಳಿಂದ ತಿಳಿದುಕೊಳ್ಳಿ

ಭಗವದ್ಗೀತೆಯು ಹಿಂದೂ ಧರ್ಮದ ಪ್ರಮುಖ ಗ್ರಂಥವಾಗಿದೆ. ಇದರಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಜೀವನ, ಕರ್ಮ, ಜ್ಞಾನ, ಸನ್ಯಾಸ ಮತ್ತು ಭಕ್ತಿ ಮುಂತಾದವುಗಳ ಬಗ್ಗೆ ಉಪದೇಶ ನೀಡಿದ್ದಾನೆ. ಇದರಲ್ಲಿನ ಪ್ರತಿಯೊಂದು ಅಧ್ಯಾಯವು ಅದ್ಭುತ ಸಂದೇಶವನ್ನು ನೀಡುತ್ತದೆ.

ಜೀವನ, ಕರ್ಮ, ಜ್ಞಾನ ಮತ್ತು ಭಕ್ತಿ ಎಂದರೇನು? ಭಗವದ್ಗೀತೆಯ ಈ ಶ್ಲೋಕಗಳಿಂದ ತಿಳಿದುಕೊಳ್ಳಿ
ಜೀವನ, ಕರ್ಮ, ಜ್ಞಾನ ಮತ್ತು ಭಕ್ತಿ ಎಂದರೇನು? ಭಗವದ್ಗೀತೆಯ ಈ ಶ್ಲೋಕಗಳಿಂದ ತಿಳಿದುಕೊಳ್ಳಿ (PC: HT File Photo)

ಭಗವದ್ಗೀತೆ ಕೇವಲ ಧಾರ್ಮಿಕ ಗ್ರಂಥವಲ್ಲ. ಅದು ಜ್ಞಾನದ ಭಂಡಾರ. ಬದುಕುವ ಕಲೆಯನ್ನು ಕಲಿಸುವ ಸಮಗ್ರ ವಿಷಯಗಳಿರುವ ಪುಸ್ತಕ. ಭಗವದ್ಗೀತೆ ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗದಂತಹ ಪರಿಕಲ್ಪನೆಗಳ ಬಗ್ಗೆ ಆಳವಾದ ಜ್ಞಾನವನ್ನು ತಿಳಿಸುತ್ತದೆ. ಜೀವನದಲ್ಲಿ ಬರುವ ವಿವಿಧ ಸನ್ನಿವೇಶಗಳನ್ನು ಎದುರಿಸುವುದು ಹೇಗೆ? ಮತ್ತು ಅದಕ್ಕಾಗಿ ನಮ್ಮ ಮನಸ್ಸನ್ನು ಸಜ್ಜುಗೊಳಿಸುವುದು ಹೇಗೆ ಎಂಬುದನ್ನು ಗೀತೆಯು ಕಲಿಸುತ್ತದೆ. ಭಗವದ್ಗೀತೆಯು ಹಿಂದೂ ಧರ್ಮದ ಪವಿತ್ರ ಗ್ರಂಥ. ಈ ಪುಸ್ತಕದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಜೀವನ, ಕರ್ಮ, ಜ್ಞಾನ ಮತ್ತು ಭಕ್ತಿಯ ಬಗ್ಗೆ ಉಪದೇಶಿಸುತ್ತಾನೆ. ಇದರ ಮೂಲಕ ಅರ್ಜುನನ ಮನದಲ್ಲಿ ಆವರಿಸಿದ್ದ ಭಯ, ಆತಂಕಗಳನ್ನು ಹೋಗಲಾಡಿಸುತ್ತಾನೆ.

ಮಾನವನ ಜೀವನದಲ್ಲಿ ಭಗವದ್ಗೀತೆಯ ಮಹತ್ವ

ಮಾನವನ ಜೀವನದಲ್ಲಿ ಭಗವದ್ಗೀತೆಗೆ ಬಹಳಷ್ಟು ಮಹತ್ವವಿದೆ. ಅನಾದಿ ಕಾಲದಿಂದ ಹಿಡಿದು ಇಂದಿನವರೆಗೂ ಪ್ರಸ್ತುತವಾಗಿರುವ ಗೀತೋಪದೇಶಗಳು ಮಾನವನಿಗೆ ಬದುಕುವ ಕಲೆಯನ್ನು ಕಲಿಸುತ್ತದೆ. ಸಂತೋಷ ಮತ್ತು ಸಂತೃಪ್ತಿಯ ಜೀವನ ನಡೆಸಲು ಸಹಾಯ ಮಾಡುತ್ತದೆ. ಸತ್ಯ, ಅಹಿಂಸೆ, ಕರುಣೆ, ಕ್ಷಮೆ, ಧೈರ್ಯ, ತಾಳ್ಮೆ ಮತ್ತು ನಿಸ್ವಾರ್ಥ ಸೇವೆಯಂತಹ ನೈತಿಕ ಮೌಲ್ಯಗಳನ್ನು ಕಲಿಸುತ್ತದೆ. ಈ ಮೌಲ್ಯಗಳು ಉತ್ತಮ ವ್ಯಕ್ತಿಯಾಗಿ ಬಾಳಲು ನಮಗೆ ಸಹಾಯ ಮಾಡುತ್ತವೆ. ಇದು ನಮಗೆ ನಾವೇ ತೋರಿಸಿಕೊಳ್ಳಬಹುದಾದ ಅರಿವಿನ ಮಾರ್ಗವಾಗಿದೆ. ಗೀತೆಯು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಪ್ರೇರೇಪಿಸುತ್ತದೆ. ಭಗವದ್ಗೀತೆಯು ಅಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಲು ಮತ್ತು ಆತ್ಮಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಭಗವದ್ಗೀತೆಯ ಈ ಶ್ಲೋಕಗಳು ಜೀವನ, ಕರ್ಮ, ಜ್ಞಾನ ಮತ್ತು ಭಕ್ತಿಯ ಬಗ್ಗೆ ತಿಳಿಸಿಕೊಡುತ್ತವೆ

ಕರ್ಮ ಯೋಗಃ

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |

ಮಾ ಕರ್ಮಫಲಹೇತುರ್ಭೂರ್‌ ಮಾ ತೇ ಸಂಙ್ಗೋsಸ್ತ್ವಕರ್ಮಣಿ ||

ಇದರ ಅರ್ಥ, ಹೇ ಮನುಷ್ಯನೇ, ನಿನಗೆ ನಿಯೋಜಿತ ಕರ್ಮವನ್ನು ಮಾಡುವುದಕ್ಕಷ್ಟೇ ಅಧಿಕಾರವಿದೆ, ಅದು ಫಲ ನೀಡುತ್ತದೆಯೋ, ಇಲ್ಲವೋ ಎಂದು ಚಿಂತಿಸಬೇಡ. ಕರ್ಮವನ್ನು ಮಾಡಲು ಹಿಂಜರಿಯಬೇಡ. ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ನಿನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡು.

ಜ್ಞಾನ ಯೋಗಃ

ಅನಾಶಯಃ ಶಾಶ್ವತಃ ತಮಃ ಪ್ರಕೃತಿಜಃ|

ಜ್ಞಾನಂ ಯದಾ ತದಾಶ್ರಿತಃ, ಸರ್ವಂ ಕಲ್ವಿದಂ ಬ್ರಹ್ಮ ||

ಇದರ ಅರ್ಥ, ಆತ್ಮವು ಅಮರವಾಗಿದೆ ಮತ್ತು ಅಜ್ಞಾನವು ಪ್ರಕೃತಿಯಿಂದ ಉಂಟಾಗುತ್ತದೆ. ಜ್ಞಾನ ಪ್ರಾಪ್ತಿಯಾದಾಗ ಎಲ್ಲವೂ ಬ್ರಹ್ಮವಾಗಿ ಗೋಚರಿಸುತ್ತದೆ.

ಭಕ್ತಿ ಯೋಗಃ

ಮತ್ಕರ್ಮಫಲಂ ಯದಾ ವಿಹೀನಃ ಮನಸಾ ಮೆ ನಿದಿಧ್ಯಾಸತಿ |

ನ ಮಯ್ಯಸ್ಯಕ್ತಮನಾಃ ಪರಂ ಗತಿಂ ವಿಂದತಿ ನಾನ್ಯಥಾ ||

ಮನುಷ್ಯ ಕರ್ಮಫಲಕ್ಕಾಗಿ ಭಗವಂತನನ್ನು ಪೂಜಿಸಿದಾಗ ಅವನು ಪರಮಾತ್ಮನಲ್ಲಿ ಮಗ್ನನಾಗುತ್ತಾನೆ ಮತ್ತು ಅನ್ಯಮಾರ್ಗದಿಂದ ಮುಕ್ತಿಯನ್ನು ಪಡೆಯಲು ಸಾಧ್ಯವಿಲ್ಲ.

ನಿಷ್ಕಾಮ ಕರ್ಮಃ

ನ ಕರ್ಮಣಾ ನ ಪ್ರಜಾಯಾ ಧನೇನ ತ್ಯಜ್ಯತೆ ಮನುಷ್ಯಃ |

ಪುಣ್ಯೇನೈವ ತದಾತ್ಮಾನಂ ವಿಮುಕ್ತೆ ಯೇನ ಸೋsಚ್ಯತೆ ||

ಇದರ ಅರ್ಥ, ಮನುಷ್ಯನು ಕರ್ಮ, ಸಂತತಿ ಅಥವಾ ಸಂಪತ್ತಿನಿಂದ ಮುಕ್ತನಾಗಲು ಸಾಧ್ಯವಿಲ್ಲ. ಪುಣ್ಯ ಕಾರ್ಯಗಳು ಆತ್ಮವನ್ನು ಮುಕ್ತಗೊಳಿಸಲು ಇರುವ ದಾರಿ ಎಂದು ಶ್ರೀಕೃಷ್ಣನು ಹೇಳುತ್ತಾನೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.