Bhagavad Gita: ಜೀವಿಗಳಿಗೆ ಸಂಬಂಧಿಸಿದ ಎಲ್ಲ ಪರಿವರ್ತನೆ, ವೈವಿದ್ಯಕ್ಕೆ ದೇಹವೇ ಕಾರಣ; ಭಗವದ್ಗೀತೆಯ ಅರ್ಥ ತಿಳಿಯಿರಿ-spiritual bhagavad gita updesh lord krishna body is the cause of diversity bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಜೀವಿಗಳಿಗೆ ಸಂಬಂಧಿಸಿದ ಎಲ್ಲ ಪರಿವರ್ತನೆ, ವೈವಿದ್ಯಕ್ಕೆ ದೇಹವೇ ಕಾರಣ; ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita: ಜೀವಿಗಳಿಗೆ ಸಂಬಂಧಿಸಿದ ಎಲ್ಲ ಪರಿವರ್ತನೆ, ವೈವಿದ್ಯಕ್ಕೆ ದೇಹವೇ ಕಾರಣ; ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಜೀವಿಗಳಿಗೆ ಸಂಬಂಧಿಸಿದ ಎಲ್ಲ ಪರಿವರ್ತನೆ, ವೈವಿದ್ಯಕ್ಕೆ ದೇಹವೇ ಕಾರಣ ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 20ನೇ ಶ್ಲೋಕದಲ್ಲಿ ವಿವರಿಸಲಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - ಶ್ಲೋಕ - 20

ಪ್ರಕೃತಿಂ ಪುರುಷಂ ಚೈವ ವಿದ್ಧ್ಯನಾದೀ ಉಭಾವಪಿ |

ವಿಕಾರಾಂಶ್ಚ ಗುಣಾಂಶ್ಚೈವ ವಿದ್ಧಿ ಪ್ರಕೃತಿಸಮ್ಭವಾನ್ ||20||

ಅನುವಾದ: ಪ್ರಕೃತಿ ಮತ್ತು ಜೀವಿಗಳು ಅನಾದಿ ಎಂದು ತಿಳಿಯಬೇಕು. ಅವರ ಮಾರ್ಪಾಡುಗಳೂ ಗುಣಗಳೂ ಪ್ರಕೃತಿಯಿಂದ ಆದವು.

ಭಾವಾರ್ಥ: ಈ ಅಧ್ಯಾಯದಲ್ಲಿ ನೀಡಿರುವ ಜ್ಞಾನದಿಂದ ಕ್ಷೇತ್ರವನ್ನೂ, ಕ್ಷೇತ್ರಜ್ಞರನ್ನೂ (ವ್ಯಕ್ತಿಗತ ಆತ್ಮ ಮತ್ತು ಪರಮಾತ್ಮರನ್ನೂ) ಅರ್ಥಮಾಡಿಕೊಳ್ಳಬಹುದು. ದೇಹವು ಕ್ಷೇತ್ರ, ಇದು ಐಹಿಕ ಪ್ರಕೃತಿಯಿಂದ ಆದದ್ದು. ದೇಹಧಾರಿಯಾಗಿ ದೇಹ ಚಟುವಟಿಕೆಗಳನ್ನು ಸವಿಯುತ್ತಿರುವ ವ್ಯಕ್ತಿಗತ ಆತ್ಮವು ಪುರುಷ ಅಥವಾ ಜೀವಿ. ಅವನೊಬ್ಬ ಕ್ಷೇತ್ರಜ್ಞ. ಇನ್ನೊಬ್ಬನು ಪರಮಾತ್ಮ. ಪರಮಾತ್ಮನೂ, ವ್ಯಕ್ತಿಯ ಆತ್ಮವೂ ದೇವೋತ್ತಮ ಪರಮ ಪುರುಷನ ಬೇರೆ ಬೇರೆ ಅಭಿವ್ಯಕ್ತಿಗಳು ಎಂಬುದನ್ನು ತಿಳಿದುಕೊಳ್ಳಬೇಕು. ವ್ಯಕ್ತಿಗತ ಆತ್ಮನು ಭಗವಂತನ ಶಕ್ತಿಯ ವರ್ಗಕ್ಕೆ ಸೇರಿದವನು. ಪರಮಾತ್ಮನು ಭಗವಂತನ ಸ್ವಾಂಶ ವಿಸ್ತರಣೆಗೆ ಸೇರಿದವನು. (Bhagavad Gita Updesh in Kannada)

ಪ್ರಕೃತಿಯೂ ಜೀವಿಯೂ ನಿತ್ಯವಾದವರು. ಎಂದರೆ, ಅವರು ಸೃಷ್ಟಿಗೆ ಮೊದಲೇ ಇದ್ದರು. ಪ್ರಕೃತಿಯ ಅಭಿವ್ಯಕ್ತಿಯು ಪರಮ ಪ್ರಭುವಿನ ಶಕ್ತಿಯಿಂದ ಆದದ್ದು. ಜೀವಿಗಳೂ ಹಾಗೆಯೇ. ಆದರೆ ಜೀವಿಗಳು ಶ್ರೇಷ್ಠಶಕ್ತಿಗೆ ಸೇರಿದವರು. ಈ ಸೃಷ್ಟಿಯು ರೂಪತಾಳುವ ಮೊದಲೇ ಜೀವಿಗಳೂ ಐಹಿಕ ಪ್ರಕೃತಿಯೂ ಅಸ್ತಿತ್ವದಲ್ಲಿದ್ದವು. ಐಹಿಕ ಪ್ರಕೃತಿಯು ದೇವೋತ್ತಮ ಪರಮ ಪುರುಷನಾದ ಮಹಾವಿಷ್ಣುವಿನಲ್ಲಿ ಸೇರಿ ಹೋಯಿತು. ಅಗತ್ಯವಾದಾಗ ಅದು ಮಹತ್ ತತ್ತ್ವದ ಮೂಲ ಪ್ರಕಟವಾಯಿತು. ಹೀಗೆಯೇ ಜೀವಿಗಳೂ ಅವನಲ್ಲಿವೆ.

ಅವು ಬದ್ಧವಾಗಿರುವುದರಿಂದ ಅವಕ್ಕೆ ಪರಮ ಪ್ರಭುವಿನ ಸೇವೆಯನ್ನು ಮಾಡಲು ಇಷ್ಟವಿಲ್ಲ. ಹೀಗೆ ಅವು ಅಧ್ಯಾತ್ಮಿಕ ಗಗನವನ್ನು ಪ್ರವೇಶಿಸಲು ಅವಕಾಶವನ್ನು ಕೊಡುವುದಿಲ್ಲ. ಆದರೆ ಐಹಾಕಿ ನಿಸರ್ಗವು ಹೊರ ಬಂದಾಗ ಈ ಜೀವಿಗಳಿಗೆ ಮತ್ತೊಮ್ಮೆ ಐಹಿಕ ಜಗತ್ತಿನಲ್ಲಿ ಕ್ರಿಯೆಯಲ್ಲಿ ತೊಡಗಲು ಮತ್ತು ದಿವ್ಯ ಜಗತ್ತನ್ನು ಪ್ರವೇಶಿಸಲು ಸಿದ್ಧಮಾಡಿಕೊಳ್ಳಲು ಇನ್ನೊಂದು ಅವಕಾಶವನ್ನು ಕೊಡಲಾಗುವುದು. ಐಹಿಕಸೃಷ್ಟಿಯ ರಹಸ್ಯ ಇದು. ಜೀವಿಯು ಮೂಲತಃ ಪರಮ ಪ್ರಭುವಿನ ವಿಭಿನ್ನಾಂಶ ಆದರೆ ತನ್ನ ಬಂಡಾಯದ ಸ್ವಭಾವದಿಂದ ಅವನು ಐಹಿಕ ಪ್ರಕೃತಿಯಲ್ಲಿ ಬದ್ಧನಾಗುತ್ತಾನೆ.

ಈ ಜೀವಿಗಳು ಅಥವಾ ಭಗವಂತನ ಶ್ರೇಷ್ಠಶಕ್ತಿಯ ಅಂಶಗಳು ಐಹಿಕ ಪ್ರಕೃತಿಯ ಸಂಪರ್ಕವನ್ನು ಹೇಗೆ ಪಡೆದವು ಎಂಬುದು ವಾಸ್ತವವಾಗಿ ಮುಖ್ಯವೇ ಅಲ್ಲ. ಆದರೆ ಇದು ವಾಸ್ತವವಾಗಿ ಏಕೆ ಮತ್ತು ಹೇಗೆ ಆಯಿತು ಎನ್ನುವುದು ದೇವೋತ್ತಮ ಪರಮ ಪುರುಷನಿಗೆ ತಿಳಿದಿರುತ್ತದೆ. ಈ ಐಹಿಕ ಪ್ರಕೃತಿಯಿಂದ ಆಕರ್ಷಿತರಾದವರು ಅಸ್ತಿತ್ವಕ್ಕಾಗಿ ಕಠಿಶ್ರಮ ಪಡುತ್ತಿದ್ದಾರೆ ಎಂದು ಧರ್ಮಗ್ರಂಥಗಳಲ್ಲಿ ಪ್ರಭುವು ಹೇಳುತ್ತಾನೆ. ಆದರೆ ಐಹಿಕ ಪ್ರಕೃತಿಯಲ್ಲಿ ತ್ರಿಗುಣಗಳಿಂದ ಆಗುವ ಎಲ್ಲ ಪರಿವರ್ತನೆಗಳೂ ಪ್ರಭಾವಗಳೂ ಐಹಿಕ ಪ್ರಕೃತಿಯಿಂದಾದುವು ಎನ್ನುವುದನ್ನು ನಾವು ನಿಶ್ಚಯವಾಗಿ ತಿಳಿದುಕೊಳ್ಳಬೇಕು. ಜೀವಿಗಳಿಗೆ ಸಂಬಂಧಿಸಿದ ಎಲ್ಲ ಪರಿವರ್ತನೆಗಳಿಗೂ ವೈವಿದ್ಯಕ್ಕೂ ದೇಹವೇ ಕಾರಣ. ಚೇತನದ ಮಟ್ಟಿಗೆ, ಎಲ್ಲ ಜೀವಿಗಳೂ ಒಂದೇ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.