Gondavalekar Maharaj Jayanti: ಧಾರ್ಮಿಕ ಜಾಗೃತಿ ಮೂಡಿಸಿದ ಬ್ರಹ್ಮಚೈತನ್ಯ ಮಹಾರಾಜ ಗೊಂದವಲೇಕರ್ ಜಯಂತಿ ಯಾವಾಗ ದಿನಾಂಕ ಸೇರಿ ತಿಳಿಯಬೇಕಾದ
ಫೆಬ್ರವರಿ 10ರ ಸೋಮವಾರ ಧಾರ್ಮಿಕ ಜಾಗೃತಿಯನ್ನು ಮೂಡಿಸಿದ್ದ ಸಂತ, ಬ್ರಹ್ಮಚೈತನ್ಯ ಮಹಾರಾಜ ಗೊಂದವಲೇಕರ್ ಅವರ ಜನ್ಮ ದಿನಾಚರಣೆ. ಮಹಾರಾಜ ಗೊಂದವಲೇಕರ್ ಅವರ ಕುರಿತ ಮಾಹಿತಿ ಇಲ್ಲಿದೆ.

19ನೇ ಶತಮಾನದ ಉತ್ತರಾರ್ಧದಲ್ಲಿ ಪ್ರಸಿದ್ಧ ಸಂತರಾಗಿದ್ದವರು ಬ್ರಹ್ಮಚೈನತ್ಯ ಮಹಾರಾಜ್. ಇವರು ಗೊಂದವಲೇಕರ್ ಮಹಾರಾಜ್ ಅಂತಲೇ ಖ್ಯಾತರಾಗಿದ್ದರು. ಈ ವರ್ಷ ಫೆಬ್ರವರಿ 19 ರ ಬುಧವಾರ ಗೊಂದವಲೇಕರ್ ಮಹಾರಾಜ್ ಅವರ ಜನ್ಮ ದಿನಾಚರಣೆ ಮಾಡಲಾಗುತ್ತದೆ. ಮಹಾರಾಷ್ಟ್ರ ಸೇರಿದಂತ ಹಲವು ಕಡೆಗಳಲ್ಲಿ ಈ ಸಂತನ ಜನ್ಮ ದಿನಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಕೆಲವೆಡೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಗೊಂಡವಾಲೆ ಬುದ್ರುಕ್ ಎಂಬ ಹಳ್ಳಿಯಲ್ಲಿ ಬ್ರಾಹ್ಮಣ ರಾವ್ಜಿ ಮತ್ತು ಗೀತಾಬಾಯಿ ಗುಗರ್ದಾರೆ ದಂಪತಿಯ ಮಗನಾಗಿ ಮಾಘ ಶುದ್ಧ ದ್ವಾದಶ 1766ರ ಫೆಬ್ರವರಿ 19 ರಂದು ಜನಿಸಿದ್ದರು. ಈ ಕುಟುಂಬ ಕೃಷ್ಣನ ಅವತಾರವೆಂದು ಪರಿಗಣಿಸಲಾಗಿದ್ದ ಹಿಂದೂ ದೇವರಾದ ವಿಠಲ ಆರಾಧಕರಾಗಿದ್ದರು. ಆರಂಭದಲ್ಲಿ ಬ್ರಹ್ಮಚೈತನ್ಯ ಅವರಿಗೆ ಗಣಪತಿ ಎಂದು ಹೆಸರಿಡಲಾಗಿತ್ತು. ತುಕಾಮಾಯಿ ಗುರೂಜಿಯಿಂದ ಅಲ್ಪಾವಧಿಯಲ್ಲಿಯೇ ಜ್ಞಾನವನ್ನು ಪಡೆದುಕೊಂಡರು. ಆದರೆ ಅಧಾತ್ಮಿಕ ಬಯಕೆ ಹೆಚ್ಚಾದ ಪರಿಣಾಮ ಗಣಪತಿ, ತಮ್ಮ ಇಬ್ಬರು ಸಹಚರರೊಂದಿಗೆ ಒಂಬತ್ತನೇ ವಯಸ್ಸಿನಲ್ಲಿ ಗುರುವನ್ನು ಹುಡುಕಲು ಮನೆಯಿಂದ ಹೊರಟರು.
ಬ್ರಹ್ಮಚೈತನ್ಯ ಎಂಬ ಹೆಸರು ಹೇಗೆ ಬಂತು
ಬಾಲ್ಯದಿಂದಲೂ ರಾಮನಿಗೆ ತನ್ನನ್ನು ಅರ್ಪಿಸಿಕೊಂಡಿದ್ದ ಗಣಪತಿ, ಗುರುವಿನ ಬಗ್ಗೆ ಒಲವು ಬೆಳೆಸಿಕೊಂಡಿದ್ದರು. ಚಿಕ್ಕ ವಯಸ್ಸಿಗೆ ಮನೆಯಿಂದ ಹೊರ ಬಂದಿದ್ದ ಧಾರ್ಮಿಕ ಸಂತ, ತಮ್ಮ ಈ ಪ್ರಯಾಣದಲ್ಲಿ ಅನೇಕ ಸ್ಥಳಗಳಿಗೆ ಭೇಟಿ ನೀಡಿ ಹತ್ತಾರು ಮಂದಿಯನ್ನು ಸಂಪರ್ಕಿಸಿದರು. ಈ ಅವಧಿಯಲ್ಲಿ ಶ್ರೀ ಮಹಾರಾಜರು ಯೋಗ ಜ್ಞಾನವನ್ನು ಪಡೆಯುತ್ತಾರೆ. ಆದರೆ, ಮನಸ್ಸು ತೃಪ್ತಿ ಹೊಂದುವುದಿಲ್ಲ. ಇದೇ ಸಮಯದಲ್ಲಿ ನಾಂದೇಡ್ ಬಳಿಯ ಯೆಹಲೆಂಗಾವ್ ಎಂಬ ಹಳ್ಳಿಗೆ ಆಗಮಿಸಿ ಅಲ್ಲಿ ಗುರುಗಳಾದ ತುಕಾಮಾಯಿ ಅವರ ಬಳಿಗೆ ಹೋಗುತ್ತಾರೆ. ಗುರು ತುಕಾಮಾಯಿ ಅವರು ಗಣಪತಿ ಅವರಿಗೆ ಬ್ರಹ್ಮಚೈತನ್ಯ ಎಂಬ ಬಿರುದನ್ನು ನೀಡುತ್ತಾರೆ.
ಧರ್ಮೋಪದೇಶ, ಭಜನೆ, ಕೀರ್ತನೆಗಳ ಮೂಲಕ ಸಮಾಜ ತಿದ್ದುವ ಕೆಲಸ
ಗೊಂದವಲೇಕರ್ ಮಹಾರಾಜ್ ಅವರು ಅಸಂಖ್ಯಾತ ಜನರನ್ನು ವ್ಯಸನಗಳು, ಕೆಟ್ಟ ನಡವಳಿಕೆ, ಅಹಂಕಾರ ಮತ್ತು ಲೌಕಿಕ ಚಿಂತೆಗಳಿಂದ ಮುಕ್ತಗೊಳಿಸಿದರು. ಕೌಟುಂಬಿಕ ಜಗಳಗಳನ್ನು ಪರಿಹರಿಸಿದರುಯ. ಅಷ್ಟೇ ಅಲ್ಲ ಅನೇಕ ಜನರ ಜೀವನವನ್ನು ಸಂತೋಷಪಡಿಸಿದರು. ಇದಕ್ಕಾಗಿ ಅವರು ವೈಯಕ್ತಿಕ ಧರ್ಮೋಪದೇಶಗಳು, ಭಜನೆಗಳು ಹಾಗೂ ಕೀರ್ತನೆಗಳನ್ನು ಬಳಸಿಕೊಂಡರು. ಬಡವರನ್ನು ಬೆಂಬಲಿಸಿದರು. ಬರಗಾಲ ಪೀಡಿತರಿಗೆ ಕೆಲಸ ಮತ್ತು ಆಹಾರವನ್ನು ಒದಗಿಸಿದರು. ಆಧುನಿಕ ವಿದ್ಯಾವಂತರಲ್ಲಿದ್ದ ಮೂಢನಂಬಿಕೆಗಳನ್ನು ಹೋಗಲಾಡಿಸಿ, ಅವರಲ್ಲಿ ಧರ್ಮದ ಬಗ್ಗೆ ಗೌರವ ಮತ್ತು ಭಕ್ತಿಯನ್ನು ಮೂಡಿಸಿದರು. ಆ ಮೂಲಕ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದರು.
ಗೊಂದವಲೇಕರ್ ಮಹಾರಾಜರ ಸ್ಪೂರ್ತಿದಾಯಕ ನುಡಿ ಮುತ್ತುಗಳು
ಬ್ರಹ್ಮಚೈತನ್ಯ ಮಹಾರಾಜ್ ಅವರ ಅನೇಕ ಮಾತುಗಳು ಮತ್ತು ಧರ್ಮೋಪದೇಶಗಳು ಪ್ರಸಿದ್ಧವಾಗಿವೆ. ಇವರು ಧ್ಯಾನದ ಮೂಲಕ ಸಾಕಷ್ಟು ಸಾಧಿಸಿದ್ದಾರೆ. ಇವರ ಒಂದೊಂದು ಮಾತುಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ದೇವರ ನಾಮವು ಸಾಧನವಾಗಿದೆ. ಅದು ಅಹಂಕಾರವನ್ನು ನಿವಾರಿಸುತ್ತದೆ ಎಂದು ಗೊಂದವಲೇಕರ್ ಮಹಾರಾಜ್ ಹೇಳುತ್ತಾರೆ. ಮನುಷ್ಯನು ತನ್ನ ಜೀವನದಲ್ಲಿ ದೇವರನ್ನು ಸ್ಮರಿಸಬೇಕು ಮತ್ತು ಜಗತ್ತನ್ನು ಸಂತೋಷದಾಯಕ ಮತ್ತು ಅಧ್ಯಾತ್ಮಿಕ ಸ್ಥಳವನ್ನಾಗಿ ಮಾಡಬೇಕು ಎಂದು ಹೇಳಿದ್ದಾರೆ. ಗೊಂದವಲೇಕರ್ ಅವರ ಇತರೆ ನುಡಿ ಮುತ್ತುಗಳು
- ದೇವರು ಸರ್ವವ್ಯಾಪಿ
- ಮನುಷ್ಯನು ಸೋಮಾರಿತನ, ಭಯ ಮತ್ತು ದ್ವೇಷವನ್ನು ತ್ಯಜಿಸಿದರೆ ಸಂತೋಷವಾಗಿರುತ್ತಾನೆ
- ಬುದ್ದಿವಂತಿಕೆ, ಸಂಶೋಧನೆಯನ್ನು ಎಂದಿಗೂ ತಪ್ಪಿಸಿಕೊಳ್ಳಬೇಡಿ
- ಯಾವಾಗಲೂ ಸಿಹಿಯಾಗಿ ಮಾತನಾಡಿ, ವಿನಮ್ರರಾಗಿ ಮತ್ತು ಎಲ್ಲರಿಂದಲೂ ಜನಪ್ರಿಯರಾಗಿರಿ
1835 ರ ಮಾರ್ಗಶೀರ್ಷ ವಾದ್ಯ ದಶಮಿ ಶಕದ ಹತ್ತನೇ ದಿನದಂದು (ಡಿಸೆಂಬರ್ 22, 1913) ಇವರ ದೇಹವನ್ನು ಗೊಂದವಾಲೆಯಲ್ಲಿ ಸಮಾಧಿ ಮಾಡಲಾಗಿದೆ. ಬ್ರಹ್ಮಚೈತನ್ಯ ಮಹಾರಾಜ್ ಅವರ ಅನೇಕ ಮಾತುಗಳು ಮತ್ತು ಧರ್ಮೋಪದೇಶಗಳು ಇಂದಿಗೂ ಪ್ರಸಿದ್ಧವಾಗಿವೆ.
