ಇಂದು ಭೀಮನ ಅಮಾವಾಸ್ಯೆ 2024: ಶುಭ ಮುಹೂರ್ತ, ಪೂಜೆ ವಿಧಾನ, ಪರಿಹಾರ ಮತ್ತು ಪ್ರಾಮುಖ್ಯ ತಿಳಿಯಿರಿ -Bheemana Amavasya
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಇಂದು ಭೀಮನ ಅಮಾವಾಸ್ಯೆ 2024: ಶುಭ ಮುಹೂರ್ತ, ಪೂಜೆ ವಿಧಾನ, ಪರಿಹಾರ ಮತ್ತು ಪ್ರಾಮುಖ್ಯ ತಿಳಿಯಿರಿ -Bheemana Amavasya

ಇಂದು ಭೀಮನ ಅಮಾವಾಸ್ಯೆ 2024: ಶುಭ ಮುಹೂರ್ತ, ಪೂಜೆ ವಿಧಾನ, ಪರಿಹಾರ ಮತ್ತು ಪ್ರಾಮುಖ್ಯ ತಿಳಿಯಿರಿ -Bheemana Amavasya

Bheemana Amavasya 2024: ದಕ್ಷಿಣ ಭಾರತದಲ್ಲಿ ತುಂಬಾ ಜನಪ್ರಿಯವಾಗಿರುವ ಭೀಮನ ಅಮಾವಾಸ್ಯೆಯನ್ನು ಪ್ರತಿಯೊಬ್ಬರು ಆಚರಿಸುತ್ತಾರೆ. ವಿಶೇವಾಗಿ ಕರ್ನಾಟಕ, ತಮಿಳುನಾಡಿನಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಭೀಮನ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ. ಈ ಮಂಗಳಕರ ಸಂದರ್ಭದಲ್ಲಿ ಮದುವೆಯಾಗಿರುವ ಹೆಣ್ಣು ಮಕ್ಕಳು ತಮ್ಮ ಪತಿಯರ ಪಾದೆ ಪೂಜೆ ಮಾಡಿ ಆಶೀರ್ವಾದ ಪಡೆಯುತ್ತಾರೆ.

ಇಂದು ಭೀಮನ ಅಮಾವಾಸ್ಯೆ 2024: ಶುಭ ಮುಹೂರ್ತ, ಪೂಜೆ ವಿಧಾನ, ಪರಿಹಾರ ಮತ್ತು ಪ್ರಾಮುಖ್ಯ ತಿಳಿಯಿರಿ
ಇಂದು ಭೀಮನ ಅಮಾವಾಸ್ಯೆ 2024: ಶುಭ ಮುಹೂರ್ತ, ಪೂಜೆ ವಿಧಾನ, ಪರಿಹಾರ ಮತ್ತು ಪ್ರಾಮುಖ್ಯ ತಿಳಿಯಿರಿ

ಭೀಮನ ಅಮಾವಾಸ್ಯೆ (Bheemana Amavasya 2024) ಬಂತೆಂದರೆ ಸಾಕು ಮಹಿಳೆಯರು ತುಂಬಾ ಬ್ಯುಸಿಯಾಗಿಬಿಡುತ್ತಾರೆ. ಮನೆಗಳನ್ನು ಸ್ವಚ್ಛಗೊಳಿಸಿ, ಮನೆ ಮುಂದೆ ರಂಗೋಲಿ ಹೂವುಗಳಿಂದ ದೇವರ ಪೋಟೋಗಳಿಗೆ ಅಲಂಕಾರ ಮಾಡಿ ವಿಶೇಷ ಪೂಜೆ ಮಾಡುತ್ತಾರೆ. ಈ ದಿನ ವಿಶೇಷವಾಗಿ ಪತಿಯ ಪಾದಕ್ಕೆ ಪೂಜೆ ಮಾಡಿ ಆಶೀರ್ವಾದ ಪಡೆಯುತ್ತಾರೆ. ಇಂದು (ಆಗಸ್ಟ್ 4, ಭಾನುವಾರ) ಎಲ್ಲೆಡೆ ಭೀಮನ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ.

ಸನಾತನ ಧರ್ಮದಲ್ಲಿ ಭೀಮನ ಅಮಾವಸ್ಯೆಯನ್ನು ಸಾವನ್ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಶ್ರಾವಣಿ ಮತ್ತು ಹರಿಯಾಲಿ ಅಮಾವಾಸ್ಯೆ ಅಂತಲೂ ಕರೆಯುತ್ತಾರೆ. ಭೀಮನ ಅಮಾವಸ್ಯೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಉದಯ ತಿಥಿಯ ದೃಷ್ಟಿಯಿಂದ ಈ ವರ್ಷ ಆಗಸ್ಟ್ 4 ರಂದು ಭೀಮನ ಅಮಾವಾಸ್ಯೆ ಬಂದಿದೆ. ಈ ದಿನ ವಿಷ್ಣುವನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಆದ್ದರಿಂದ, ಭೀಮನ ಅಮಾವಾಸ್ಯೆಯ ಶುಭ ಸಮಯ, ಪೂಜಾ ವಿಧಾನ, ಪರಿಹಾರಗಳು ಮತ್ತು ಪ್ರಾಮುಖ್ಯತೆಯನ್ನು ತಿಳಿದುಕೊಳ್ಳೋಣ.

ಭೀಮನ ಅಮಾವಾಸ್ಯೆ ಯಾವಾಗ ಪ್ರಾರಂಭವಾಗುತ್ತದೆ?

ಶ್ರಾವಣ, ಅಮಾವಾಸ್ಯೆ ತಿಥಿ ಪ್ರಾರಂಭದ ಸಮಯ: 2024ರ ಆಗಸ್ಟ್ 03 ರಂದು ಮಧ್ಯಾಹ್ನ 03:50

ಅಮಾವಾಸ್ಯೆ ತಿಥಿ ಕೊನೆಗೊಳ್ಳುವ ಸಮಯ: 2024ರ ಆಗಸ್ಟ್ 04 ರ ಸಂಜೆ 04:42

ಅಭಿಜಿತ್ ಮುಹೂರ್ತ: ಮಧ್ಯಾಹ್ನ 12:00 ರಿಂದ 12:54

ಗೋಧೂಲಿ ಮುಹೂರ್ತ: ಸಂಜೆ 07:10 ರಿಂದ 07:31

ಸ್ನಾನ-ದಾನ ಮುಹೂರ್ತ: ಬೆಳಿಗ್ಗೆ 05:10 ರಿಂದ 07:30

ಭೀಮನ ಅಮಾವಾಸ್ಯೆಯ ವಿಶೇಷ ದಿನದಂದು, ಕೆಲವು ಪರಿಹಾರಗಳ ಸಹಾಯದಿಂದ, ಪಿತೃ ದೋಷ ಮತ್ತು ಕಾಲ ಸರ್ಪ ದೋಷವನ್ನು ತೊಡೆದುಹಾಕಬಹುದು. ಆದ್ದರಿಂದ, ಈ ದಿನ ಶಿವನನ್ನು ಪೂರ್ಣ ಭಕ್ತಿಯಿಂದ ಪೂಜಿಸಿ. ಅದೇ ಸಮಯದಲ್ಲಿ, ಪೂರ್ವಜರ ಆಶೀರ್ವಾದವನ್ನು ಪಡೆಯಲು, ಈ ದಿನದಂದು ಪಿತೃ ಸ್ತೋತ್ರ ಮತ್ತು ಪಿತೃ ಕವಚವನ್ನು ಪಠಿಸುತ್ತಾರೆ. ಶ್ರಾವಣ ಅಮಾವಾಸ್ಯೆಯಂದು ಬ್ರಾಹ್ಮಣರಿಗೆ ಆಹಾರ ಮತ್ತು ನೈವೇದ್ಯಗಳನ್ನು ಅರ್ಪಿಸುವ ಮೂಲಕ, ಪೂರ್ವಜರ ಅನುಗ್ರಹವು ಮನೆಯ ಸದಸ್ಯರ ಮೇಲೆ ಉಳಿಯುತ್ತದೆ.

ಜ್ಯೋತಿರ್ ಭೀಮೇಶ್ವರ ವ್ರತದ ಮಹತ್ವ

2024ರ ಆಗಸ್ಟ್ 4 ರ ಭಾನುವಾರ ಬಂದಿರುವ ಭೀಮನ ಅಮಾವಾಸ್ಯೆಯಂದು ಮಹಿಳೆಯರು ಜ್ಯೋತಿರ್ ಭೀಮೇಶ್ವರ್ ವ್ರತವನ್ನು ಆಚರಿಸುತ್ತಾರೆ. ಇದರ ಮಹತ್ವವನ್ನು ನೋಡುವುದಾದರೆ, ಭೀಮನ ಅಮಾವಾಸ್ಯೆಯಂದು ಮಹಿಳೆಯರು ತಮ್ಮ ವೈವಾಹಿಕ ಸ್ಥಿತಿಯನ್ನು ನೋಡದೆ ಪತಿ, ತಂದೆ, ಸಹೋದರರು ಹಾಗೂ ಪುತ್ರರು ಸೇರಿದಂತೆ ತಮ್ಮ ಕುಟುಂಬದ ಪುರುಷ ಸದಸ್ಯರ ಯೋಗ ಕ್ಷೇಮಕ್ಕಾಗಿ, ಸಮೃದ್ಧಿಗಾಗಿ ಉಪವಾಸವನ್ನು ಆಚರಿಸುತ್ತಾರೆ. ವಿವಾಹಿತ ಮಹಿಳೆಯರು ಸಾಮಾನ್ಯವಾಗಿ ಕನಿಷ್ಠ 9 ವರ್ಷಗಳ ಕಾಲ ಈ ಉಪವಾಸ ವ್ರತವನ್ನು ಆಚರಿಸುತ್ತಾರೆ. ಪತಿಯ ದೀರ್ಗಾಯುಷ್ಯ ಮತ್ತು ಸಂತೋಷವನ್ನು ಬಯಸುತ್ತಾರೆ. ಅವಿವಾಹಿತ ಹುಡುಗಿಯರು ಉತ್ತಮ ಗುಣಗಳಿಂದ ಕೂಡಿದ ವರ ಪ್ರಾಪ್ತಿಯಾಗಲೆಂದು ಪೂಜೆ ಮಾಡುತ್ತಾರೆ.

ಭೀಮನ ಅಮಾವಾಸ್ಯೆಯ ದಿನದಂದು ದಾನ ಮಾಡುವುದು ಮತ್ತು ಸ್ನಾನ ಮಾಡುವುದು ವಿಶೇಷ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ. ಶ್ರಾವಣದ ಅಮಾವಾಸ್ಯೆಯಂದು ದಾನ ಮಾಡುವುದರಿಂದ ಪಿತ್ರ ದೋಷದ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಬಹುದು. ಇದಲ್ಲದೆ, ಪವಿತ್ರ ನದಿಗಳಲ್ಲಿ ಸ್ನಾನ ಮಾಡಬೇಕು. ಅದೇ ಸಮಯದಲ್ಲಿ, ಈ ದಿನದಂದು ಹಸುಗಳು, ಕಾಗೆಗಳು ಮತ್ತು ನಾಯಿಗಳಿಗೆ ಆಹಾರವನ್ನು ನೀಡುವುದರಿಂದ ಜೀವನದ ಕಷ್ಟಗಳನ್ನು ತೆಗೆದುಹಾಕಬಹುದು.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.