ಶ್ರಾವಣ ಮಾಸದ ಮೊದಲ ಸೋಮವಾರ ವಿಶೇಷ, ಶುಭ ಮುಹೂರ್ತ, ಶಿವನ ಪೂಜೆಯ ಮಹತ್ವ ಮತ್ತು ವಿಧಾನ ತಿಳಿಯಿರಿ-spiritual culture first monday of shravana masa significance and method of worshipping lord shiva ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶ್ರಾವಣ ಮಾಸದ ಮೊದಲ ಸೋಮವಾರ ವಿಶೇಷ, ಶುಭ ಮುಹೂರ್ತ, ಶಿವನ ಪೂಜೆಯ ಮಹತ್ವ ಮತ್ತು ವಿಧಾನ ತಿಳಿಯಿರಿ

ಶ್ರಾವಣ ಮಾಸದ ಮೊದಲ ಸೋಮವಾರ ವಿಶೇಷ, ಶುಭ ಮುಹೂರ್ತ, ಶಿವನ ಪೂಜೆಯ ಮಹತ್ವ ಮತ್ತು ವಿಧಾನ ತಿಳಿಯಿರಿ

ಶ್ರಾವಣ ಮಾಸದ ಮೊದಲ ಸೋಮವಾರವನ್ನು ಅತ್ಯಂತ ಶುಭಕರವಾದ ದಿನ ಎಂದು ಪರಿಗಣಿಸಲಾಗಿದೆ. ಇಂದು ಶಿವನಿಗೆ ಪೂಜೆ ಮಾಡಿದರೆ ಹಲವು ರೀತಿಯ ಆಶೀರ್ವಾದಗಳು ಇರುತ್ತವೆ. ಶಿವನ ಪೂಜೆಯ ಮಹತ್ವ, ವಿಧಾನ ಹಾಗೂ ಶುಭ ಮುಹೂರ್ತವನ್ನು ತಿಳಿಯಿರಿ.

ಶ್ರಾವಣ ಮಾಸದ ಮೊದಲ ಸೋಮವಾರ ವಿಶೇಷ, ಶುಭ ಮುಹೂರ್ತ, ಶಿವನ ಪೂಜೆಯ ಮಹತ್ವ ಮತ್ತು ವಿಧಾನ ತಿಳಿಯಿರಿ
ಶ್ರಾವಣ ಮಾಸದ ಮೊದಲ ಸೋಮವಾರ ವಿಶೇಷ, ಶುಭ ಮುಹೂರ್ತ, ಶಿವನ ಪೂಜೆಯ ಮಹತ್ವ ಮತ್ತು ವಿಧಾನ ತಿಳಿಯಿರಿ

ಹಿಂದೂ ಧರ್ಮದ ಪ್ರಕಾರ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗಿದೆ. ಈ ಮಾಸದಲ್ಲಿ ಭಗವಾನ್ ಶಿವನನ್ನು ಪೂಜಿಸುವುದರಿಂದ ಆಶೀರ್ವಾದ, ಸಮೃದ್ಧಿ ಹಾಗೂ ಎಲ್ಲಾ ಆಸೆಗಳು ಪೂರೈಸಲಾಗುತ್ತದೆ ಎಂದು ಭಕ್ತರು ನಂಬುತ್ತಾರೆ. ಹೀಗಾಗಿ ಜನರು ವಿವಿಧ ಧಾರ್ಮಿಕ ಆಚರಣೆಗಳನ್ನು ಮಾಡುತ್ತಾರೆ. ಅದರಲ್ಲೂ ಶ್ರಾವಣ ಮಾಸದ ಮೊದಲ ಶನಿವಾರ ಶಿವನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. 2024 ರ ಶ್ರಾವಣ ಮಾಸದ ಮೊದಲ ಸೋಮವಾರದಂದು (ಆಗಸ್ಟ್ 5) ಭಕ್ತರು ಶಿವನ ದೇವಾಲಯಗಳಿಗೆ ಭಕ್ತಿ ಪೂರಕವಾಗಿ ಪೂಜೆ ಸಲ್ಲಿಸುತ್ತಾರೆ. ಕೆಲವರು ಮನೆಯಲ್ಲೇ ಶಿವನನ್ನು ಆರಾಧಿಸುತ್ತಾರೆ. ಶ್ರಾವಣ ಮಾಸವನ್ನು ವಿಶೇಷವಾಗಿ ಶಿವನಿಗೆ ಅರ್ಪಿಸಲಾಗಿದೆ. ಶಂಕರನ ಆಶೀರ್ವಾದ ಪಡೆಯಲು ಈ ದಿನ (ಆಗಸ್ಟ್ 5, ಸೋಮವಾರ) ಮಂಗಳಕರ ಎಂದು ಪರಿಗಣಿಸಲಾಗಿದೆ.

ಶ್ರಾವಣ ಮಾಸದಲ್ಲಿ ತಿಂಗಳ ಉದ್ದಕ್ಕೂ ವಿಶೇಷ ಪೂಜೆ ಮತ್ತು ವಿಧಾನಗಳು, ಸಮಾರಂಭಗಳನ್ನು ನಡೆಸಲಾಗುತ್ತದೆ. ವಿಶೇಷವಾಗಿ ಶ್ರಾವಣ ಸೋಮವಾರ ವ್ರತ, ನಾಗ ಪಂಚಮಿ ಹಾಗೂ ರಕ್ಷಣಾ ಬಂಧವನ್ನು ಆಚರಿಸಲಾಗುತ್ತದೆ. ಸೋಮವಾರದ ವ್ರತವನ್ನು ಮಾಡಿ ಶಿವನ ಪೂಜೆ ಮಾಡುವುದರಿಂದ ಹತ್ತಾರು ಪ್ರಯೋಜನಗಳಿವೆ. ಸಮೃದ್ಧಿ ಮತ್ತು ಇಷ್ಟಾರ್ಥಗಳು ನೆರವೇರುತ್ತವೆ ಎಂದು ಭಕ್ತರು ನಂಬರುತ್ತಾರೆ. ಶಿವನ ಸ್ವರ್ಗೀಯ ಅಶೀರ್ವಾದ ಮತ್ತು ಅಧ್ಯಾತ್ಮಿಕ ಪ್ರಗತಿಯನ್ನು ಪಡೆಯಲು ಹಲವಾರು ಪ್ರಾರ್ಥನೆ, ಮಂತ್ರ ಪಠಣೆ ಹಾಗೂ ಉಪವಾಸಗಳನ್ನು ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ಶಿವಲಿಂಗಕ್ಕೆ ಜಲಾಭಿಷೇಕ ಅತ್ಯಂತ ಮಹತ್ವದ ವಿಧಿವಿಧಾನಗಳಲ್ಲಿ ಒಂದಾಗಿದೆ. ಅಲ್ಲದೆ, ಸ್ವರ್ಗೀಯ ಆಶೀರ್ವಾದವನ್ನು ಪಡೆಯಲು ರುದ್ರಾಭಿಷೇಕವನ್ನು ಮಾಡಲಾಗುತ್ತದೆ.

ಶ್ರಾವಣ ಮಾಸದಲ್ಲಿ ಎಷ್ಟು ಸೋಮವಾರಗಳಿವೆ?

ಆಗಸ್ಟ್ 5 ರಂದು ಮೊದಲ ಸೋಮವಾರ ಆಚರಣೆ

ಆಗಸ್ಟ್ 12 ರಂದು ಎರಡನೇ ಸೋಮವಾರ ಆಚರಣೆ

ಆಗಸ್ಟ್ 19 ರಂದು ಮೂರನೇ ಸೋಮವಾರ ಆಚರಣೆ

ಆಗಸ್ಟ್ 26 ರಂದು ನಾಲ್ಕನೇ ಸೋಮವಾರ ಆಚರಣೆ

ಶ್ರಾವಣ ಮಾಸದ ಮೊದಲ ಸೋಮವಾರದ ಪೂಜಾ ವಿಧಾನ

  • ಬೆಳಗ್ಗೆ ಬೇಗ ಎದ್ದು ಸ್ನಾನ ಇತ್ಯಾದಿಗಳನ್ನು ಪೂರೈಸಿದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ ಪೂಜಾ ವಿಧಾನ ಶುರು ಮಾಡಬೇಕು
  • ಮನೆಯ ದೇವ ಕೋಟೆಯಲ್ಲಿ ದೀಪವನ್ನು ಹಚ್ಚಬೇಕು
  • ಗಂಗಾಜಲದಿಂದ ಎಲ್ಲ ದೇವತೆಗಳ ವಿಗ್ರಹಗಳಿಗೆ ಅಭಿಷೇಕ ಮಾಡಬೇಕು
  • ಶಿವಲಿಂಗಕ್ಕೆ ಗಂಗಾಜಲ ಹಾಗೂ ಹಾಲನಿಂದ ಅಭಿಷೇಕ ಮಾಡಬೇಕು
  • ಬಳಿಕ ಶಿವನಿಗೆ ಇಷ್ಟವಾಗುವ ಹೂವುಗಳನ್ನು ಅರ್ಪಿಸಬೇಕು
  • ಬಿಲ್ವ ಪತ್ರೆ ಎಲೆಗಳನ್ನು ಶಿವನಿಗೆ ಅರ್ಪಿಸಿದರೆ ಹೆಚ್ಚು ಆಶೀರ್ವಾದಕರವಾಗಿರುತ್ತದೆ
  • ಬಳಿಕ ಆರತಿ, ದೂಪ ಬಳಿಕ ನೈವೇದ್ಯಗಳನ್ನು ಅರ್ಪಿಸುವ ಮೂಲಕ ಶಿವನ ಪೂಜೆಯನ್ನು ಮುಕ್ತಾಯಗೊಳಿಸಲಾಗುತ್ತದೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.