Datta Kshetra: ಮಹಾರಾಷ್ಟ್ರದ ಮಹೂರ್ ನಲ್ಲಿದೆ ಹೆಚ್ಚಿನ ವರಗಳನ್ನು ನೀಡುವ ದತ್ತಾತ್ರೇಯನ ಅಪರೂಪದ ದೇವಾಲಯ; ಕಥೆ, ಸ್ಥಳದ ಮಹಿಮೆ ತಿಳಿಯಿರಿ
ಪರ್ವತದ ಮೇಲೆ ಪೂಜೆ ಮಾಡಿದರೆ ಹೆಚ್ಚಿನ ವರವನ್ನು ನೀಡುವುದಾಗಿ ಪರಶುರಾಮರಿಗೆ ರೇಣುಕಾದೇವಿ ಹೇಳುತ್ತಾಳೆ. ಈ ಕಾರಣದಿಂದಾಗಿ ಮಹಾರಾಷ್ಟ್ರದ ದತ್ತಾತ್ರೇಯ ದೇವಾಲಯ ಹೆಚ್ಚು ಪವಿತ್ರ ಮತ್ತು ಜನಪ್ರಿಯವಾಗಿದೆ. ದತ್ತ ಕ್ಷೇತ್ರದ ಕಥೆ ಮತ್ತು ಮಹಿಳೆಯನ್ನು ತಿಳಿಯಿರಿ.
ಧಾರ್ಮಿಕ ಕ್ಷೇತ್ರಗಳ ತಾಣವಾಗಿರುವ ಭಾರತದ ಪ್ರಮುಖ ರಾಜ್ಯಗಳಲ್ಲಿ ಮಹಾರಾಷ್ಟ್ರ ಕೂಡ ಒಂದಾಗಿದ್ದು, ಇಲ್ಲಿ ಪ್ರಾಚೀನ ಕಾಲದ ಹಲವಾರು ದೇವಾಲಯಗಳನ್ನು ಕಾಣಬಹುದು. ಕೆಲವೊಂದು ದೇವಾಲಯಗಳು ಸ್ಥಳದ ಮಹಿಮೆಯಿಂದ ಸಾಕಷ್ಟು ಮಹತ್ವವನ್ನು ಪಡೆದಿವೆ. ಮಹಾರಾಷ್ಟ್ರದಲ್ಲಿ ನಾಂದೇಡ್ ಜಿಲ್ಲೆಯಲ್ಲಿ ಮಹೂರ್ಗಡ್ ಎಂಬ ಪಟ್ಟಣವಿದೆ. ದಿನಕಳೆದಂತೆ ಇದು ಮಹೂರ್ ಎಂಬ ಹೆಸರಿನಿಂದ ಪ್ರಸಿದ್ಧಿಗೆ ಬಂದಿತು. ಇದಕ್ಕೆ ಕಾರಣ ಇದೊಂದು ಖ್ಯಾತ ಧಾರ್ಮಿಕ ಸ್ಥಳವಾಗಿದೆ. ಮಹೂರ್ ಪಟ್ಟಣದಲ್ಲಿ ಶ್ರೀ ಗುರು ದತ್ತಾತ್ರೇಯರ ಜನನವಾಗಿದೆ. ದತ್ತಾತ್ರೇಯರ ತಂದೆ ಅತ್ರಿ ಮಹರ್ಷಿಗಳು ಮತ್ತು ತಾಯಿ ಮಹಾಸತಿ ಅನಸೂಯ. ಈ ಋಷಿ ದಂಪತಿಗಳು ಇದೇ ಪ್ರದೇಶದಲ್ಲಿ ವಾಸವಾಗಿರುತ್ತಾರೆ. ಅನಸೂಯ ಮಾತೆಯು ಅತಿ ಪವಿತ್ರ ಮತ್ತು ಪರಿಶುದ್ದವಾಗಿದ್ದು ಮೂರು ಲೋಕದಲ್ಲಿಯೂ ಇದರ ಬಗ್ಗೆ ತಿಳಿಸಿರುತ್ತದೆ. ಈ ಸುದ್ದಿಯು ಬ್ರಹ್ಮ, ವಿಷ್ಣು ಮತ್ತು ಶಿವನಿಗೆ ತಿಳಿಯುತ್ತದೆ. ಆದ್ದರಿಂದ ತ್ರಿಮೂರ್ತಿಗಳು ಅನಸೂಯೆಯ ಧರ್ಮ ನಿಷ್ಠೆಯನ್ನು ಪರೀಕ್ಷಿಸಲು ಅತ್ರಿ ಮಹರ್ಷಿಗಳ ಆಶ್ರಮಕ್ಕೆ ಬರುತ್ತಾರೆ. ಇವರ ಆಗಮನದಿಂದ ಈ ಸ್ಥಳಕ್ಕೆ ಹೆಚ್ಚಿನ ಶಕ್ತಿ ದೊರೆಯುತ್ತದೆ. ಇಲ್ಲಿ ಪೆಂಗಂಗಾ ಮತ್ತು ಪುಸ್ ನದಿಯ ಸಂಗಮವಿದೆ.
ಪರಶುರಾಮರ ತಾಯಿಯಾದ ರೇಣುಕಾ ದೇವಿಯ ದೇವಾಲಯ ಇಲ್ಲಿದೆ. ಇದಲ್ಲದೆ ದತ್ತ ದೇವರ ಮತ್ತು ಅತ್ರಿ ಅನಸೂಯ ದೇವಾಲಯಗಳು ಇಲ್ಲಿವೆ. ಆದರೆ ದತ್ತ ದೇವರ ದೇವಾಲಯವು ಹೆಚ್ಚಿನ ಶ್ರೇಷ್ಠತೆಯನ್ನು ಪಡೆದಿದೆ. ಇಲ್ಲಿನ ರೇಣುಕಾ ಮಾತೆಯ ಪವಿತ್ರ ದೇವಾಲಯದ ಕಾರಣ ಶಕ್ತಿ ಪೀಠಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಪ್ರತಿ ವರ್ಷ ವಿಜಯದಶಮಿಯಂದು ವಿಶೇಷ ಪೂಜೆ ಪುನಸ್ಕಾರಗಳು ನಡೆಯುವುದಲ್ಲದೆ, ಜಾತ್ರಾ ಮಹೋತ್ಸವವು ಇಲ್ಲಿ ಆಯೋಜಿಸಲ್ಪಡುತ್ತದೆ.
ಜಮದಗ್ನಿ ಮಹರ್ಷಿ, ಪರಶುರಾಮ, ಕಾಳಿಕಾ ಮಾತೆಯ ದೇವಾಲಯಗಳು ಇಲ್ಲಿವೆ
ಅತ್ರಿ ಮುನಿಗಳ ಆಶ್ರಮದಲ್ಲಿ ಕೇಳಿದ ವರವನ್ನು ನೀಡುವ ಕಾಮಧೇನು ಇರುತ್ತದೆ. ಇದರ ಬಗ್ಗೆ ಸಹಸ್ರಾರ್ಜುನನಿಗೆ ತಿಳಿಯುತ್ತದೆ. ಈ ಕಾಮಧೇನುವನ್ನು ಪಡೆಯುವ ಸಲುವಾಗಿ ಅವನು ರೇಣುಕಾ ದೇವಿಯ ಮೇಲೆ ಆಕ್ರಮಣ ಮಾಡುತ್ತಾನೆ. ಆಗ ನಡೆವ ಯುದ್ದದಲ್ಲಿ ಆಕೆಯು ಪ್ರಾಣತ್ಯಾಗ ಮಾಡಿದಳೆಂಬ ಕಥೆಯಿದೆ. ಸಾಕ್ಷಾತ್ ದತ್ತಾತ್ರೇಯರ ಮಾರ್ಗದರ್ಶನದಲ್ಲಿ ಮಹೂರ್‌ನಲ್ಲಿ ಅಂತಿಮ ಸಂಸ್ಕಾರ ಮಾಡಲು ಸಾಧ್ಯವಾಗುತ್ತದೆ. ಪರಶುರಾಮರಿಗೆ ರೇಣುಕಾದೇವಿಯು ಪರ್ವತದ ಮೇಲೆ ನಿನಗೆ ಪೂಜೆ ಮಾಡಲು ಕಾಣಿಸುತ್ತಾಳೆ ಎಂಬ ವರವನ್ನು ನೀಡುತ್ತಾಳೆ. ಈ ಕಾರಣದಿಂದಾಗಿ ಇಲ್ಲಿನ ದೇವಾಲಯ ಹೆಚ್ಚು ಪವಿತ್ರ ಮತ್ತು ಜನಪ್ರಿಯವಾಯಿತು. ಇಲ್ಲಿನ ಕಲ್ಯಾಣಿಯನ್ನು "ಮಾತೃ ತೀರ್ಥ" ಎಂದು ಕರೆಯುತ್ತಾರೆ. ಈ ಪರ್ವತದ ಮೇಲಿರುವ ಸ್ಥಳದಲ್ಲಿ ಹಿಂದು ಎಂಬ ಹೆಸರಿನ ಸರೋವರವಿದ್ದು ಅಲ್ಲಿ ಮರಣದ ನಂತರ ಮಾಡುವ ಅಂತಿಮ ವಿಧಿಗಳನ್ನು ನಡೆಸುತ್ತಾರೆ. ಇದರ ಜೊತೆಯಲ್ಲಿ ಮಹೂರ್‌ನಲ್ಲಿ ಜಮದಗ್ನಿ ಮಹರ್ಷಿಗಳ ದೇವಾಲಯ, ಪರಶುರಾಮರ ದೇವಾಲಯ, ಕಾಳಿಕಾ ಮಾತೆಯ ದೇವಾಲಯಗಳಿವೆ. ಈ ಪ್ರದೇಶದಲ್ಲಿ ಗುಹೆಗಳು ಮತ್ತು ವಿಶಾಲವಾದ ಕೋಟೆ ಇರುತ್ತದೆ.
ಈ ಸ್ಥಳವನ್ನು ಮಾತ್ರಿಪುರ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಸ್ಥಳೀಯರ ಪ್ರಕಾರ ಪಂಡಿತ ಸಾವಿತ್ರಿಬಾಯಿ ಮಹೂರ್‌ನ ಆಡಳಿತವನ್ನು ವಹಿಸಿಕೊಳ್ಳುತ್ತಾರೆ. ಬೇರಾರ್ ಪ್ರಾಂತ್ಯದಲ್ಲಿ ಜಹಾಂಗೀರ್ ನಿರ್ವಹಿಸುತ್ತಿದ್ದರು. ಸರ್ದಾರ್ ಹರ್‌ಚಂದ್ರಾಯ್‌ನ ದಂಗೆಯನ್ನು ಹತ್ತಿಕ್ಕುವ ಜವಾಬ್ದಾರಿಯನ್ನು ಹೊರುತ್ತಾಳೆ. ಆಗ ನಡೆವ ದೊಡ್ಡ ಯುದ್ದದಲ್ಲಿ ಹರಚಂದ್ರರಾಯನನ್ನು ಸೋಲಿಸುತ್ತಾಳೆ. ಶಿವಾಜಿಯನ್ನು ಗೌರವದಿಂದ ಸಿಂಹ ಎಂದು ಕರೆಯುತ್ತಾಳೆ. ಇದಕ್ಕೆ ಕಾರಣ ಈ ಸ್ಥಳದ ಮಹಿಮೆ ಎಂದು ಹೇಳಲಾಗುತ್ತದೆ.
ಈ ದೇವಾಲಯವು ಶಕ್ತಿ ಪಂಥದವರಿಗೆ ಸೇರಿದ ಕ್ಷೇತ್ರವಾಗಿದೆ. ಪುರಾಣ ಪುಣ್ಯಕತೆಯ ಪ್ರಕಾರ, ಜಮದಗ್ನಿಯ ಮಗನೆ ಪರಶುರಾಮ. ತನ್ನ ತಂದೆಯ ಆಜ್ಞೆಯಂತೆ ತಾಯಿ ರೇಣುಕಾಮಾತೆಯ ಶಿರಚ್ಛೇದವನ್ನು ಮಾಡುತ್ತಾನೆ. ಜಮದಗ್ನಿಯು ವರವೊಂದನ್ನು ಕೇಳಲು ಮಗನಿಗೆ ಹೇಳುತ್ತಾನೆ. ಆಗ ಪರಶುರಾಮನು ತಾಯಿಗೆ ಮರುಜನ್ಮ ನೀಡಲು ಕೇಳುತ್ತಾನೆ. ರೇಣುಕಾದೇವಿಗೆ ಮರುಜನ್ಮ ದೊರೆಯುತ್ತದೆ. ದಕ್ಷಯಾಗದ ಸಂಬಧವೂ ಈ ದೇವಾಲಯಕ್ಕಿದೆ. ಶಿವನು ತನ್ನ ಸತಿಯನ್ನು ಹೊತ್ತುಕೊಂಡು ಅಲೆದಾಡಿದಾಗ ಸತಿ ದೇವಿಯ ಶವದ ದೇಹದ ಭಾಗಗಳು ಬಿದ್ದ ಕಾರಣ ಶಕ್ತಿಯದೇಗುಲಗಳು ಉದ್ಭವಿಸಿವೆ ಎಂದು ನಂಬಲಾಗಿದೆ. ಈ ಕ್ಷೇತ್ರದಲ್ಲಿ ದತ್ತಗುರುಗಳ ಪೂಜೆ ಸಲ್ಲಿಸಿದಲ್ಲಿ ಪೂರ್ಣ ಅನುಗ್ರಹ ಉಂಟಾಗುತ್ತದೆ.