ಬೇಡಿದ ವರ ಕೊಟ್ಟು ನೆಮ್ಮದಿ ಹೆಚ್ಚಿಸುತ್ತಾಳೆ; ಬೆಂಗಳೂರಿನ ಮಹಾಲಕ್ಷ್ಮಿಲೇಔಟ್‌ನಲ್ಲಿರುವ ಮಂಗಳ ಕರುಮಾರಿಯಮ್ಮನ ಮಹತ್ವ ಹೀಗಿದೆ-spiritual devotional history and significance of mangala karumariamman at mahalakshmi layout bangalore sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬೇಡಿದ ವರ ಕೊಟ್ಟು ನೆಮ್ಮದಿ ಹೆಚ್ಚಿಸುತ್ತಾಳೆ; ಬೆಂಗಳೂರಿನ ಮಹಾಲಕ್ಷ್ಮಿಲೇಔಟ್‌ನಲ್ಲಿರುವ ಮಂಗಳ ಕರುಮಾರಿಯಮ್ಮನ ಮಹತ್ವ ಹೀಗಿದೆ

ಬೇಡಿದ ವರ ಕೊಟ್ಟು ನೆಮ್ಮದಿ ಹೆಚ್ಚಿಸುತ್ತಾಳೆ; ಬೆಂಗಳೂರಿನ ಮಹಾಲಕ್ಷ್ಮಿಲೇಔಟ್‌ನಲ್ಲಿರುವ ಮಂಗಳ ಕರುಮಾರಿಯಮ್ಮನ ಮಹತ್ವ ಹೀಗಿದೆ

ಬೆಂಗಳೂರಿನ ಮಹಾಲಕ್ಷ್ಮಿಲೇಔಟ್‌ನಲ್ಲಿರುವ ಮಂಗಳ ಕರುಮಾರಿಯಮ್ಮ ದೇವಸ್ಥಾನಕ್ಕೆ ನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಬಂದು ದೇವಿಯಲ್ಲಿ ಏನೇ ಬೇಡಿಕೊಂಡರೂ ಈಡೇರಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಕರುಮಾರಿಯಮ್ಮ ದೇವಾಲಯ ಹೇಗೆ ನಿರ್ಮಾಣವಾಯಿತು. ದೇವಸ್ಥಾನದ ಮಹತ್ವವ ಇಲ್ಲಿದೆ.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಮಂಗಳ ಕರುಮಾರಿಯಮ್ಮ ದೇವಾಲಯ ಮತ್ತು ಅಲಂಕಾರಗೊಂಡಿರುವ ದೇವಿಯ ರೂಪ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಮಂಗಳ ಕರುಮಾರಿಯಮ್ಮ ದೇವಾಲಯ ಮತ್ತು ಅಲಂಕಾರಗೊಂಡಿರುವ ದೇವಿಯ ರೂಪ.

ಭಾರತದಲ್ಲಿ ಸಾವಿರಾರು ದೇವಾಲಯಗಳಿದ್ದು, ಒಂದೊಂದು ದೇವಾಲಯ ಹಿನ್ನಲೆಯನ್ನು ನೋಡಿದಾಗ ಒಂದೊಂದು ಕಥೆಯನ್ನು ತಿಳಿಯಬಹುದು. ದೇವಸ್ಥಾನಗಳಲ್ಲಿ ದೇವಿಯ ಪವಾಡ, ಅದ್ಭುತಗಳಿಂದ ಲಕ್ಷಾಂತರ ಮಂದಿ ಭಕ್ತರನ್ನು ತನ್ನತ್ತ ಸೆಳೆದುಕೊಂಡಿರುತ್ತಾಳೆ ಎಂದು ಕೆಲವರು ಹೇಳುತ್ತಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಮಂಗಳ ಕರುಮಾರಿಯಮ್ಮ ವರಗಳನ್ನು ಬೇಡಿಕೊಂಡರೆ ಖಂಡಿತವಾಗಿ ಎಲ್ಲವನ್ನೂ ಪೂರೈಸುತ್ತಾಳೆ ಎಂಬ ನಂಬಿಕೆ ಭಕ್ತರದ್ದು. ಇದಕ್ಕೆ ಸಾಕಷ್ಟು ನಿದರ್ಶನಗಳೂ ಸಿಗುತ್ತವೆ.ಈ ದೇವಾಲಯದ ಮಹಿಮೆ ಮತ್ತು ಮಹತ್ವವನ್ನು ಇಲ್ಲಿ ನೀಡಲಾಗಿದೆ.

ವಿಳುಪುರಂಗೆ ಸೇರಿದ ಸುಂದರಮೂರ್ತಿ ಮತ್ತು ರಂಗನಾಯಕಮ್ಮ ಎಂಬುವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಅವರಲ್ಲಿ ಒಬ್ಬರು ಸರಸ್ವತಿ. ಈಕೆಯ ಪತಿಯ ಹೆಸರೇ ದಕ್ಷಿಣ ಮೂರ್ತಿ. ಇವರಿಬ್ಬರಿಗೆ ಗಂಡು ಸಂತಾನವಾಗುತ್ತದೆ. ಅವರ ಹೆಸರೇ ರಾಜಶೇಖರ್. ರಾಜಶೇಖರ್ ರವರು ಯಾರೊಂದಿಗೂ ಮಾತನಾಡದೆ ಮೌನವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಇವರಿಗೆ ಶಿವಬಾಲಯೋಗಿ ಆಶ್ರಮಕ್ಕೆ ಉತ್ತಮ ಒಡನಾಟ ಇತ್ತು. ಇವರ ಅಕ್ಕಪಕ್ಕದಲ್ಲಿದ್ದ ಜನರು ಗಣಪತಿ ದೇವಸ್ಥಾನವನ್ನು ಪ್ರತಿಷ್ಠಾಪಿಸಲು ತೀರ್ಮಾನಿಸಿ ಬಾಲಯೋಗಿ ಸ್ವಾಮಿಗಳನ್ನು ಆಹ್ವಾನಿಸುತ್ತಾರೆ. ಆ ವೇಳೆಯಲ್ಲಿ ರಾಜಶೇಖರರಿಗೆ ಭಾವೋದ್ವೇಗ ಉಂಟಾಗುತ್ತದೆ.

ವಿದ್ಯೆ ಇಲ್ಲದಿದ್ರೂ ಪುತ್ರ ದೊಡ್ಡ ವ್ಯಕ್ತಿಯಾಗುತ್ತಾನೆ ಎಂಬ ಮಾತಿಗೆ ನಕ್ಕ ತಾಯಿ

ಪವಿತ್ರ ಜಲದಿಂದ ಅವರನ್ನು ಸರಿದಾರಿಗೆ ತರುತ್ತಾರೆ. ಆನಂತರ ಇವರು ಮುಂದೆ ದೇವಿಯ ಅಂಶವನ್ನು ಅರಿತ ಭಕ್ತನಾಗುವನು ಎಂದು ಹೇಳುತ್ತಾರೆ. ರಾಜಶೇಖರರಿಗೆ ಓದಿನಲ್ಲಿ ಆಸಕ್ತಿ ಮೂಡುವುದಿಲ್ಲ. ಬೇರೆ ವಿಧಿ ಇಲ್ಲದೆ ಎಲ್ಲರೂ ಸುಮ್ಮನಾಗುತ್ತಾರೆ. ಒಂದು ದಿನ ರಾಜಶೇಖರ್ ಅವರ ತಾಯಿಯವರು ಆಂಜನೇಯನ ಬೊಂಬೆಯನ್ನು ತರುತ್ತಾರೆ. ರಾಜಶೇಖರ್ ಅವರು ಮಂಟಪವನ್ನು ಮಾಡಿಸಿ ಅದರಲ್ಲಿ ಬೊಂಬೆಯನ್ನು ಇಟ್ಟು ಪೂಜೆಯನ್ನು ಮಾಡಲು ಆರಂಭಿಸುತ್ತಾರೆ. ನೆರೆಹೊರೆಯ ಮನೆಯಿಂದ ಹೂಗಳನ್ನು ತಂದು ಪೂಜೆಯನ್ನು ಮಾಡಿ ನಂತರ ಅಕ್ಕಿಯಿಂದ ಮಾಡಿದ ಪೊಂಗಲ್ ನೈವೇದ್ಯವನ್ನು ಮಾಡುತ್ತಾರೆ. ದಿನಂಪ್ರತಿ ಇದು ಸಾಗುತ್ತಿರುತ್ತದೆ.

ರಾಜಶೇಖರ್ ಅವರಿಗೆ ಒಂಬತ್ತು ವರ್ಷಗಳಾಗುತ್ತವೆ. ಅವರ ಜೀವನ ಶೈಲಿಯಲ್ಲಿ ಯಾವುದೇ ರೀತಿಯ ಬದಲಾವಣೆಗಳು ಉಂಟಾಗುವುದಿಲ್ಲ. ಆಗ ಭಯಗೊಂಡು ಹಸ್ತಸಾಮುದ್ರಿಕೆಯನ್ನು ಬಲ್ಲವರೊಬ್ಬರಿಗೆ ಇವರ ಕೈಯನ್ನು ತೋರಿಸುತ್ತಾರೆ. ಆಗ ಅವರು ಇವರ ಕೈಯಲ್ಲಿ ಧನರೇಖೆಗಳು ಮತ್ತು ಶಕ್ತಿ ರೇಖೆಗಳು ಎರಡು ಇವೆ. ಆದ್ದರಿಂದ ಕೇವಲ ಹಣ ಮಾತ್ರವಲ್ಲ ಸಮಾಜದ ಪ್ರತಿಷ್ಠಿತ ವ್ಯಕ್ತಿಗಳ ಗೌರವವು ಇವರಿಗೆ ದೊರೆಯುತ್ತದೆ ಎಂದು ಹೇಳುತ್ತಾರೆ. ಇದನ್ನು ಕೇಳಿ ನಕ್ಕ ತಾಯಿಯು ಇವನಿಗೆ ವಿದ್ಯೆಯೆ ಇಲ್ಲ ಇವರನ್ನು ಯಾರು ಗೌರವಿಸುತ್ತಾರೆ ಎಂದು ಮನದಲ್ಲಿ ಅಂದುಕೊಳ್ಳುತ್ತಾರೆ. ಇವರ ಮನಸ್ಸನ್ನು ಅರಿತ ಜ್ಯೋತಿಷಿಗಳು ಕಾದು ನೋಡಿ ಎಂದಷ್ಟೇ ಹೇಳುತ್ತಾರೆ.

ವಿದ್ಯಾಭ್ಯಾಸವನ್ನು ಮುಂದುವರೆಸುವ ಅಭಿಪ್ರಾಯ ರಾಜಶೇಖರ್ ಅವರಿಗೆ ಇರುವುದಿಲ್ಲ. ರಾಜಶೇಖರ್ ಅವರಿಗೆ 14 ವರ್ಷಗಳಾಯಿತು.ಭಜನೆ ಕಾರ್ಯಕ್ರಮಗಳನ್ನು ನೀಡುವ ನೆರೆಮನೆಯ ಕುಮಾರ್ ಎಂಬುವವರು ಇವರನ್ನು ಎಲ್ಲಾ ಕಡೆಯೂ ಕರೆದೊಯುತ್ತಿದ್ದರು. ಕುಮಾರ್ ಅವರು ಸುಬ್ರಹ್ಮಣ್ಯ ಸ್ವಾಮಿಯ ಹೇಳುತ್ತಿದ್ದರು ಆ ಕ್ಷಣದಲ್ಲಿ ಆವೇಶದಿಂದ ವರ್ತಿಸಿ, ನಾನೇ ಸುಬ್ರಹ್ಮಣ್ಯ ಬಂದಿದ್ದೇನೆ ಇನ್ನು ಮುಂದೆ ಬರುತ್ತೇನೆ ಹೇಳು ಎಂದು ಹೇಳಿ ಸಹಜ ಸ್ಥಿತಿಗೆ ಮರಳುತ್ತಾರೆ. ಈ ಬಗ್ಗೆ ತಿಳಿದ ಮನೆಯವರು ಗಾಬರಿಯಿಂದ ನೆಮ್ಮದಿ ಕಳೆದುಕೊಳ್ಳುತ್ತಾರೆ.

ಒಮ್ಮೆ ದುರ್ಗೆಯು ರಾಜಶೇಖರ ಸ್ವಾಮಿಗಳ ಮೇಲೆ ಬಂದು ಇನ್ನು ಮುಂದೆ ಸ್ವತಃ ನಾನೇ ಬಂದು ಭಕ್ತಾದಿಗಳ ಬೇಡಿಕೆಗಳನ್ನು ಈಡೇರಿಸುವೆ ಎಂದು ಹೇಳುತ್ತಾಳೆ. ನನಗೆ ಪೂಜೆಯನ್ನು ಮಾಡಿ ಪೊಂಗಲ್ ನೈವೇದ್ಯವನ್ನು ಮಾಡಿದರೆ ಈ ಸ್ಥಳಕ್ಕೆ ಮಹಾಶಕ್ತಿ ಬಂದು ಜನರೆಲ್ಲರ ಕೋರಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು ಹೇಳುತ್ತಾಳೆ. ಆನಂತರ ರಾಜಶೇಖರ ಸ್ವಾಮಿಗಳು ಜನಸಾಮಾನ್ಯರ ಸಹಾಯ ಸಹಕಾರದಿಂದ ಬೆಂಗಳೂರಿನ ಮಹಾಲಕ್ಷ್ಮಿಪುರದಲ್ಲಿ ಅಂದರೆ ಮಹಾಲಕ್ಷ್ಮಿಲೇಔಟ್ ನಲ್ಲಿ ಮಂಗಳ ಕರುಮಾರಿಯಮ್ಮ ದೇವರ ದೇವಸ್ಥಾನವನ್ನು ಕಟ್ಟುತ್ತಾರೆ. ನಲವತ್ತೆಂಟು ದಿನಗಳ ಕಾಲ ಅಭಿಷೇಕ ಪೂಜೆಗಳನ್ನು ಮಾಡಿ ಆ ಪ್ರದೇಶವನ್ನು ಪುಣ್ಯಕ್ಷೇತ್ರವನ್ನಾಗಿ ಮಾಡುತ್ತಾರೆ. ಈ ದೇವಾಲಯವು ಉನ್ನತ ಮಟ್ಟಕ್ಕೆ ಬರುತ್ತದೆ. ಇಂದಿಗೂ ಈ ದೇಗುಲದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ಅಮಾವಾಸ್ಯೆ, ಹುಣ್ಣಿಮೆ, ಶುಕ್ರವಾರ ಮತ್ತು ಮಂಗಳವಾರಗಳನ್ನು ಕರ್ಮಾರಿಯಮ್ಮನ ಆವಾಹನೆಯಾಗುತ್ತದೆ. ಇಲ್ಲಿ ನೀಡುವ ಮೂಲಿಕೆಯಿಂದ ತಯಾರಿಸಿದ ಔಷಧಿಯನ್ನು ಸೇವಿಸಿದರೆ ಸಿಹಿ ಮೂತ್ರ ಯೋಗವು ಸಂಪೂರ್ಣವಾಗಿ ತಹಬಂದಿಗೆಬರುತ್ತದೆ. ಮೇ ತಿಂಗಳಿನಲ್ಲಿ ನಡೆಯುವ ಪೂಜೆಗಳಿಗೆ ದೇಶದ ನಾನಾ ಕಡೆಗಳಿಂದ ಜನರು ಬರುತ್ತಾರೆ. ಕರುಮಾರಿಯಮ್ಮನ ಜೊತೆ ಗಣಪತಿ ಮತ್ತು ಸುಬ್ರಹ್ಮಣ್ಯ ಸ್ವಾಮಿ ದೇವರುಗಳ ವಿಗ್ರಹವು ಇಲ್ಲಿ ರಾರಾಜಿಸುತ್ತಿವೆ. ಈ ದೇವಾಲಯಕ್ಕೆ ಭೇಟಿ ನೀಡಿದರೆ ಧನಾತ್ಮಕ ಶಕ್ತಿಯು ಬರುವುದಂತೂ ಸತ್ಯ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.