ಮಕರ ಸಂಕ್ರಾಂತಿ ದಿನ ಅಪ್ಪಿತಪ್ಪಿಯೂ ಈ 3 ವಸ್ತುಗಳನ್ನು ದಾನ ಮಾಡಬೇಡಿ; ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು
Makara Sankranti 2025: ಸಂಕ್ರಾಂತಿಯ ದಿನ ಕೆಲವು ವಸ್ತುಗಳನ್ನು ದಾನಗಳನ್ನು ಮಾಡುವುದರಿಂದ ವಿಶೇಷ ಫಲಿತಾಂಶಗಳು ಸಿಗುತ್ತವೆ. ಆದರೆ, ಈ ಹಬ್ಬದಂದು ಅಪ್ಪಿತಪ್ಪಿಯೂ ಕೆಲವೊಂದು ವಸ್ತುಗಳನ್ನು ದಾನ ಮಾಡಬಾರದು. ಇವುಗಳನ್ನು ಕೊಡುವುದರಿಂದ ನೀವು ಅಶುಭ ಫಲಿತಾಂಶಗಳನ್ನು ಎದುರಿಸಬೇಕಾಗುತ್ತದೆ. ಆ ವಸ್ತುಗಳು ಎಂಬುದನ್ನು ತಿಳಿಯಿರಿ.
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜನರು ದೂರದ ಊರುಗಳಿಂದ ತಮ್ಮ ಹಳ್ಳಿಗಳಿಗೆ ಬಂದು ಹಬ್ಬವನ್ನು ಆಚರಿಸುತ್ತಾರೆ. ಮಕರ ಸಂಕ್ರಾಂತಿಯಂದು ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಸಂತೋಷದ ಸಮಯವನ್ನು ಕಳೆಯುತ್ತಾರೆ. ಮಕರ ಸಂಕ್ರಾಂತಿಯ ದಿನದಂದು ದಾನ ಮಾಡುವುದರಿಂದ ಪುಣ್ಯ ಸಿಗುತ್ತದೆ ಎಂದು ನಂಬಲಾಗಿದೆ. ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ವಿಶೇಷ ಫಲಿತಾಂಶಗಳು ದೊರೆಯುತ್ತವೆ. ಆದರೆ, ಸಂಕ್ರಾಂತಿಯಂದು ಅಪ್ಪಿ ತಪ್ಪಿಯೂ ಕೆಲವೊಂದು ವಸ್ತುಗಳನ್ನು ದಾನ ಮಾಡಬಾರದು. ಇವುಗಳನ್ನು ಯಾರಿಗಾದರೂ ನೀಡಿದರೆ ನೀವು ಅಶುಭ ಫಲಿತಾಂಶಗಳನ್ನು ಎದುರಿಸಬೇಕಾಗುತ್ತದೆ.
ಮಕರ ಸಂಕ್ರಾಂತಿ ಹಬ್ಬ ಯಾವಾಗ?
2025ರ ಜನವರಿ 14 ರಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಅಂದು ಬೆಳಿಗ್ಗೆ 9:03 ಕ್ಕೆ ಸೂರ್ಯನು ಧನು ರಾಶಿಯಿಂದ ಹೊರಬಂದು ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದು ಉತ್ತರಾಯಣದ ಆರಂಭವಾಗಿದೆ. ಮಕರ ಸಂಕ್ರಾಂತಿಯ ದಿನದಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಹೆಚ್ಚಿನ ಪುಣ್ಯ ಸಿಗುತ್ತದೆ. ಅದೇ ರೀತಿ, ಸಂಕ್ರಾಂತಿಯಂದು ದಾನ ಮಾಡುವುದರಿಂದಲೂ ಒಳ್ಳೆಯ ಫಲಿತಾಂಶ ಸಿಗುತ್ತದೆ.
ಮಕರ ಸಂಕ್ರಾಂತಿಯಂದು ಇವುಗಳನ್ನು ದಾನ ಮಾಡಬೇಡಿ
1. ಎಣ್ಣೆ
ಸಂಕ್ರಾಂತಿಯಂದು ಎಣ್ಣೆ ದಾನ ಮಾಡುವುದು ಒಳ್ಳೆಯದಲ್ಲ. ಈ ಹಬ್ಬದ ದಿನ ಎಣ್ಣೆ ದಾನ ಮಾಡಿದರೆ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಎಣ್ಣೆಯನ್ನು ದಾನ ಮಾಡುವುದರಿಂದ ನಕಾರಾತ್ಮಕ ಪರಿಣಾಮಗಳೂ ಉಂಟಾಗಬಹುದು. ಆದ್ದರಿಂದ, ಸಂಕ್ರಾಂತಿಯಂದು ಯಾರಿಗೂ ಎಣ್ಣೆ ಕೊಡಬೇಡಿ.
2. ಕಪ್ಪು ಬಟ್ಟೆಗಳು
ಸಂಕ್ರಾಂತಿಯಂದು ಯಾರಿಗೂ ಕಪ್ಪು ಬಟ್ಟೆಗಳನ್ನು ಕೊಡಬಾರದು. ನೀವು ಹಾಗೆ ಮಾಡಿದರೆ ನಿಮ್ಮಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆ. ಜೊತೆಗೆ ಸಕಾರಾತ್ಮಕ ಶಕ್ತಿಯು ಹರಿಯುವುದಿಲ್ಲ. ಕಪ್ಪು ಬಟ್ಟೆಗಳನ್ನು ಕೊಡುವುದರಿಂದ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.
3.ಚೂಪಾದ ವಸ್ತುಗಳು
ಮಕರ ಸಂಕ್ರಾಂತಿಯಂದು ಯಾರಿಗೂ ಚಾಕು, ಕತ್ತರಿ ಇತ್ಯಾದಿಗಳನ್ನು ದಾನ ಮಾಡಬೇಡಿ. ಅಂತಹ ಚೂಪಾದ ವಸ್ತುಗಳನ್ನು ದಾನ ಮಾಡುವುದರಿಂದ ನಕಾರಾತ್ಮಕ ಶಕ್ತಿಯೂ ಬರುತ್ತದೆ. ಜೊತೆಗೆ ಸಕಾರಾತ್ಮಕ ಶಕ್ತಿಯೂ ಬರಿದಾಗುತ್ತದೆ. ಘರ್ಷಣೆಗಳು ಉಂಟಾಗುವ ಸಾಧ್ಯತೆಯೂ ಇದೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ