ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Saturday Remedies: ಮನೆಯಲ್ಲಿ ಹಣ ಉಳಿಯುತ್ತಿಲ್ವಾ? ಧನಲಕ್ಷ್ಮಿ ಅನುಗ್ರಹಕ್ಕಾಗಿ ಶನಿವಾರ ಲವಂಗ, ಕರ್ಪೂರದಿಂದ ಹೀಗೆ ಮಾಡಿ

Saturday Remedies: ಮನೆಯಲ್ಲಿ ಹಣ ಉಳಿಯುತ್ತಿಲ್ವಾ? ಧನಲಕ್ಷ್ಮಿ ಅನುಗ್ರಹಕ್ಕಾಗಿ ಶನಿವಾರ ಲವಂಗ, ಕರ್ಪೂರದಿಂದ ಹೀಗೆ ಮಾಡಿ

Saturday Remedies: ಶನಿವಾರ ಲವಂಗ ಮತ್ತು ಕರ್ಪೂರದಿಂದ ಈ ಸಣ್ಣ ಕಾರ್ಯವನ್ನು ಮಾಡಿದರೆ ಧನಲಕ್ಷ್ಮಿ ನಿಮ್ಮ ಮನೆಯಲ್ಲಿ ನಿಲ್ಲುತ್ತಾಳೆ. ಸಮಸ್ಯೆಗಳು ಏನೇ ಇದ್ದರೂ ದೂರವಾಗುತ್ತವೆ. ಸಂಪತ್ತು ಹೆಚ್ಚಾಗುತ್ತೆ.

ಮನೆಯಲ್ಲಿ ಹಣ ಉಳಿಯುತ್ತಿಲ್ವಾ? ಧನಲಕ್ಷ್ಮಿ ಅನುಗ್ರಹಕ್ಕಾಗಿ ಶನಿವಾರ ಲವಂಗಾ, ಕರ್ಪೂರದಿಂದ ಹೀಗೆ ಮಾಡಿ
ಮನೆಯಲ್ಲಿ ಹಣ ಉಳಿಯುತ್ತಿಲ್ವಾ? ಧನಲಕ್ಷ್ಮಿ ಅನುಗ್ರಹಕ್ಕಾಗಿ ಶನಿವಾರ ಲವಂಗಾ, ಕರ್ಪೂರದಿಂದ ಹೀಗೆ ಮಾಡಿ

Saturday Remedies: ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲು ಹಲವು ಮಾರ್ಗಗಳಿವೆ. ಆದಾಯವನ್ನು ಹೆಚ್ಚಿಸಲು, ಮನೆಯ ಮೇಲೆ ಕೆಟ್ಟ ಕಣ್ಣುಗಳು ಬೀಳುವುದನ್ನು ತೊಡೆದುಹಾಕಲು, ಉದ್ಯೋಗ ಪಡೆಯುವುದು ಸೇರಿದಂತೆ ಉತ್ತಮ ಫಲಿತಾಂಶಗಳನ್ನು ಪಡೆಯಲು ನೀವು ಒಂದು ಸಣ್ಣ ಕೆಲಸವನ್ನು ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತೆ. ಇದರ ಪ್ರಕಾರ, ಕರ್ಪೂರ ಮತ್ತು ಲವಂಗವನ್ನು ಸುಡುವುದರಿಂದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು.

ಕರ್ಪೂರ ಮತ್ತು ಲವಂಗವನ್ನು ತಪ್ಪದೆ ಪೂಜೆಯಲ್ಲಿ ಬಳಸಲಾಗುತ್ತದೆ. ಆದರೆ ಮನೆಯಲ್ಲಿ ಅವುಗಳನ್ನು ಬೇಯಿಸುವುದರಿಂದ ಅನೇಕ ಉಪಯೋಗಗಳಿವೆ. ವಿಶೇಷವಾಗಿ ಶನಿವಾರ ಸಂಜೆ ಕರ್ಪೂರ ಮತ್ತು ಲವಂಗವನ್ನು ಸುಡುವುದರಿಂದ ಆಗುವ ಪ್ರಯೋಜಗಳನ್ನು ತಿಳಿಯೋಣ.

ಸಂಪತ್ತು ಹೆಚ್ಚಳ

ಅದೃಷ್ಟ ಮತ್ತು ಸಂಪತ್ತು ಹೆಚ್ಚಾಗಲು ಈ ಪ್ರಕ್ರಿಯೆ ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ರಾತ್ರಿ ಸಮಯದಲ್ಲಿ ಲವಂಗದಿಂದ ಕರ್ಪೂರವನ್ನು ಉರಿಸುವುದರಿಂದ ನಿಮ್ಮ ಮನೆಯಲ್ಲಿ ಸದಾ ಸಂಪತ್ತು ಕೂಡಿರುತ್ತದೆ. ಕರ್ಪೂರಕ್ಕೆ ಆಸೆಗಳನ್ನು ಈಡೇರಿಸುವ ಶಕ್ತಿ ಇದೆ. ನಿಮ್ಮ ಹಾರೈಕೆ ಒಳ್ಳೆಯದಾಗಿದ್ದರೆ ಖಂಡಿತ ಈಡೇರುತ್ತದೆ.

ಆರ್ಥಿಕ ಸಮಸ್ಯೆಗಳಿಂದ ಮುಕ್ತಿ

ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದಲು ಶನಿವಾರ ರಾತ್ರಿ ಮಲಗುವ ಮುನ್ನ ಬೆಳ್ಳಿ ಬಟ್ಟಲಿನಲ್ಲಿ ಲವಂಗ ಮತ್ತು ಕರ್ಪೂರವನ್ನು ಸುಡಬೇಕು. ಹೀಗೆ ಮಾಡುವುದರಿಂದ ಹಣದ ಕೊರತೆಯನ್ನು ನೀಗಿಸಬಹುದು.

ನಕಾರಾತ್ಮಕ ಶಕ್ತಿ ದೂರವಾಗುತ್ತೆ

ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಓಡಿಸಲು ಕರ್ಪೂರ, ಲವಂಗ ಹಾಗೂ ಏಳಕ್ಕಿ ಚೆನ್ನಾಗಿ ಕೆಲಸ ಮಾಡುತ್ತದೆ. ಈ ಕಾಂಬಿನೇಷನ್ ದುಷ್ಟಶಕ್ತಿಗಳನ್ನು ಮನೆಯಿಂದ ದೂರ ಇರುತ್ತದೆ. ಕರ್ಪೂರ, ಐದು ಏಲಕ್ಕಿ ಮತ್ತು ಐದು ಲವಂಗವನ್ನು ತೆಗೆದುಕೊಂಡು ಬಟ್ಟಲಿನಲ್ಲಿ ಹುರಿದುಕೊಳ್ಳಿ. ಇವುಗಳನ್ನು ಪೂಜಾ ಮನೆಯಲ್ಲಿ ಸುಟ್ಟ ನಂತರ ಇದರಿಂದ ಬರುವ ಹೊಗೆಯನ್ನು ಮನೆಯ ಮೂಲೆ ಮೂಲೆಗೂ ಹೊಗೆ ಹರಡಬೇಕು. ಈ ರೀತಿ ಮಾಡುವುದರಿಂದ ಮನೆಗೆ ಶಾಂತಿ ಸಿಗುತ್ತದೆ. ದೃಷ್ಟಿ ದೋಷ ನಿವಾರಣೆಯಾಗುತ್ತದೆ. ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕಲಾಗುತ್ತದೆ. ಮನೆಯಲ್ಲಿರುವ ವ್ಯಕ್ತಿಯ ಮೇಲೆ ಕೆಟ್ಟ ಕಣ್ಣು ಇದ್ದರೆ ಅದನ್ನು ತೆಗೆದುಹಾಕಲಾಗುತ್ತದೆ. ಇವುಗಳನ್ನು ಸುಡುವುದರಿಂದ ಮನೆಯಲ್ಲಿರುವ ಯಾವುದೇ ಅನಾರೋಗ್ಯದ ವ್ಯಕ್ತಿಯ ದೇಹದಿಂದ ಆ ಸಮಸ್ಯೆಗಳು ದೂರವಾಗುತ್ತವೆ. ಆರೋಗ್ಯ ಸುಧಾರಿಸುತ್ತದೆ.

ಸಂತೋಷ ಹೆಚ್ಚಾಗುತ್ತೆ

ಶನಿವಾರ ಸಂಜೆ ಮನಯಲ್ಲಿ ಲವಂಗ ಮತ್ತು ಕರ್ಪೂರವನ್ನು ಸುಡುವುದರಿಂದ ಕುಟುಂಬದ ಸದಸ್ಯರ ನಡುವೆ ಸಂತೋಷ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ. ಎಲ್ಲರೂ ಸಂತೋಷವಾಗಿರುತ್ತಾರೆ. ಶತ್ರುಗಳಿಂದ ಮುಕ್ತಿ ಪಡೆಯುತ್ತೀರಿ. ಈ ಪರಿಹಾರವು ಎದುರಾಳಿಗಳ ಮೇಲೆ ಮೇಲುಗೈ ಸಾಧಿಸಲು ಸಹಾಯ ಮಾಡುತ್ತದೆ. ಲವಂಗ ಮತ್ತು ಕರ್ಪೂರವನ್ನು ಸುಡುವುದರಿಂದ ಮನೆಯಲ್ಲಿನ ಕಲಹಗಳು ದೂರವಾಗುತ್ತವೆ.

ಉತ್ತಮ ವೃತ್ತಿಜೀವನ

ಕೆಲವೊಮ್ಮೆ ನೀವು ಎಷ್ಟೇ ಪ್ರಯತ್ನಿಸಿದರೂ ನಿಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಕರ್ಪೂರದೊಂದಿಗೆ ಈ ಪರಿಹಾರವನ್ನು ಪ್ರಯತ್ನಿಸಿ. ಈ ವಿಧಾನವು ನಿಮಗೆ ಅಪೇಕ್ಷಿತ ಯಶಸ್ಸನ್ನು ನೀಡುತ್ತದೆ. ಕೆಲಸದ ಸಂದರ್ಶನಕ್ಕೆ ಹೋಗುವಾಗ ಕರ್ಪೂರ ಮತ್ತು ಲವಂಗವನ್ನು ಸುಡುವುದು ಒಳ್ಳೆಯದು. ಹಾಗೆಯೇ ಎರಡು ಲವಂಗವನ್ನು ಬಾಯಿಗೆ ಹಾಕಿಕೊಂಡು ಹೊರಗೆ ಹೋಗಿ. ಸಂದರ್ಶನಕ್ಕೆ ಹೋಗುವ ಮೊದಲು ಬಾಯಿಯಲ್ಲಿ ಲವಂಗವನ್ನು ಅಲ್ಲಾಡಿಸಿ. ಹೀಗೆ ಮಾಡುವುದರಿಂದ ಉದ್ಯೋಗ ಪಡೆಯುವ ಸಾಧ್ಯತೆ ಬಹಳಷ್ಟಿರುತ್ತದೆ. ಸಾಸಿವೆ ಎಣ್ಣೆಯಲ್ಲಿ ಎರಡು ಲವಂಗ ಹಾಕಿ ದೇವರ ಬಳಿ ಬೆಳಗ್ಗೆ ದೀಪ ಹಚ್ಚಿ. ಬಳಿಕ ಸಂದರ್ಶನಕ್ಕೆ ಹಾಜರಾಗಬೇಕು. ಹೀಗೆ ಮಾಡುವುದರಿಂದ ಕೆಲಸದಲ್ಲಿನ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ.

ವೈವಾಹಿಕ ಸಮಸ್ಯೆಗಳ ನಿವಾರಣೆ

ವೈವಾಹಿಕ ಸಂಬಂಧದಲ್ಲಿ ತೊಂದರೆಯಾದರೆ ಬೆಳ್ಳಿ ಅಥವಾ ಇತರೆ ಯಾವುದೇ ಬಟ್ಟಲಿನಲ್ಲಿ ಕರ್ಪೂರವನ್ನು ಸುಡಬೇಕು. ಕೋಣೆಯ ಮೂಲೆಯಲ್ಲಿ ಎರಡು ಕರ್ಪೂರ ಇಡಬೇಕು. ಹೀಗೆ ಮಾಡುವುದರಿಂದ ದಂಪತಿಗಳ ನಡುವೆ ಸಾಮರಸ್ಯ ಹೆಚ್ಚಾಗುತ್ತದೆ. ಹಾಗೆಯೇ ರಾತ್ರಿಯಲ್ಲಿ ಕರ್ಪೂರ ಮತ್ತು ಲವಂಗವನ್ನು ಸುಡುವುದರಿಂದ ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸಬಹದು. ನಿಮ್ಮ ವೈವಾಹಿಕ ಜೀವನದಲ್ಲಿನ ಅಡತಡೆಗಳನ್ನು ತೊಡೆದುಹಾಕಲು ಕರ್ಪೂರದ ಆರು ತುಂಡುಗಳ ಮತ್ತು 36 ಲವಂಗಗಳನ್ನು ತೆಗೆದುಕೊಂಡು ಮನೆಯಲ್ಲಿ ಸಂಪಡಿಸಿ.

(ಗಮನಿಸಿ: ಜನಪ್ರಿಯ ನಂಬಿಕೆಗಳು ಮತ್ತು ಶಾಸ್ತ್ರದ ಆಧಾರದ ಮೇಲೆ ಈ ಬರಹವನ್ನು ಪ್ರಕಟಿಸಲಾಗಿದೆ. ಈ ಬರಹವು ಓದುಗರಿಗೆ ಮಾಹಿತಿ ನೀಡುವ ಉದ್ದೇಶವನ್ನು ಮಾತ್ರ ಹೊಂದಿದೆ. ಅನುಸರಿಸುವ ಮೊದಲು ವಿಷಯತಜ್ಞರ ಸಲಹೆ ಪಡೆಯುವುದು ಒಳ್ಳೆಯದು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)