Dhana Trayodashi 2024: ಧನತ್ರಯೋದಶಿ ದಿನ ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಖರೀದಿಸಬೇಡಿ; ಇಲ್ಲಿದೆ ಕಾರಣ
ಧನತ್ರಯೋದಶಿ ದಿನ ಯಾವುದೇ ವಸ್ತುವನ್ನು ಖರೀದಿಸಿ ಮನೆಗೆ ತಂದರೆ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಆದರೆ ಕೊಳ್ಳಲು ಮಾತ್ರವಲ್ಲದೆ ಕೆಲವು ವಸ್ತುಗಳನ್ನು ಖರೀದಿಸಬಾರದು. ಅಪ್ಪಿತಪ್ಪಿಯೂ ಇವುಗಳನ್ನು ಕೊಳ್ಳಬೇಡಿ, ಬಡತನ ನಿಮ್ಮನ್ನು ಹಿಂಬಾಲಿಸುತ್ತೆ ಎಂದು ತಜ್ಞರು ಹೇಳುತ್ತಾರೆ.
ಪ್ರತಿ ವರ್ಷ ಆಶ್ವಯುಜ ಮಾಸದ ತ್ರಯೋದಶಿಯಂದು ಧನತ್ರಯೋದಶಿ ಹಬ್ಬವನ್ನು ಆಚರಿಸಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ, ಈ ವರ್ಷ ಧನತ್ರಯೋದಶಿಯನ್ನು ಅಕ್ಟೋಬರ್ 29 ರ ಮಂಗಳವಾರ ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಧನತ್ರಯೋದಶಿಯಂದು ಚಿನ್ನ, ಬೆಳ್ಳಿ, ಹಿತ್ತಾಳೆ-ತಾಮ್ರದ ಪಾತ್ರೆಗಳ ಜೊತೆಗೆ ಕೆಲವು ವಸ್ತುಗಳನ್ನು ಖರೀದಿಸುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಧನತ್ರಯೋದಶಿ ಖರೀದಿಸಿದ ವಸ್ತುಗಳು ಹದಿಮೂರು ಪಟ್ಟು ಹೆಚ್ಚಾಗುತ್ತದೆ ಮತ್ತು ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಆದರೆ ಈ ನಿರ್ದಿಷ್ಟ ಸಂದರ್ಭದಲ್ಲಿ ಕೆಲವು ವಸ್ತುಗಳನ್ನು ಖರೀದಿಸುವುದು ಶುಭವಲ್ಲ. ಧನತ್ರಯೋದಶಿಯಂದು ಕೆಲವು ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ, ದುರಾದೃಷ್ಟವನ್ನು ತರಲಾಗುತ್ತದೆ. ಹಾಗಾದರೆ ಧನ ತ್ರಯೋದಶಿಯಂದು ಯಾವುದನ್ನು ಖರೀದಿಸಬಾರದು ಎಂದು ತಿಳಿಯೋಣ.
ಕಬ್ಬಿಣದ ಪಾತ್ರೆಗಳು
ಕಬ್ಬಿಣವು ಶನಿಯೊಂದಿಗೆ ಸಂಬಂಧಿಸಿದೆ. ಮಂಗಳಕರ ದಿನವೆಂದು ಪರಿಗಣಿಸಲಾದ ಧನತ್ರಯೋದಶಿಯ ದಿನ ಕಬ್ಬಿಣವನ್ನು ತೆಗೆದುಕೊಳ್ಳಬಾರದು. ಈ ದಿನ ಪಾತ್ರೆಗಳನ್ನು ಖರೀದಿಸುವಾಗ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಖರೀದಿಸಬಾರದು. ಹಾಗೆಯೇ ಸ್ಟೀಲ್ ಅಥವಾ ಅಲ್ಯೂಮಿನಿಯಂ ಪಾತ್ರೆಗಳನ್ನು ಖರೀದಿಸಬೇಡಿ. ಇವುಗಳ ಬದಲಿಗೆ ಮಣ್ಣಿನ ಪಾತ್ರೆಗಳನ್ನು ಖರೀದಿಸಿ ಮನೆಗೆ ತರುವುದು ಉತ್ತಮ.
ಕಪ್ಪು ವಸ್ತುಗಳು
ಕಪ್ಪು ಬಣ್ಣವನ್ನು ಮಂಗಳಕರ ಚಿಹ್ನೆ ಎಂದು ಪರಿಗಣಿಸಲಾಗುವುದಿಲ್ಲ. ಧನತ್ರಯೋದಶಿಯ ಶುಭ ದಿನದಂದು ಕಪ್ಪು ಬಣ್ಣದ ಚೀಲಗಳು, ಬಟ್ಟೆಗಳು, ಶೂಗಳು, ಕಪ್ಪು ಕಂಬಳಿ ಮುಂತಾದವುಗಳನ್ನು ಖರೀದಿಸುವುದು ಶುಭವಲ್ಲ. ಅಲ್ಲದೆ ಚರ್ಮ ಮತ್ತು ಪ್ರಾಣಿಗಳ ಚರ್ಮದ ಉತ್ಪನ್ನಗಳನ್ನು ಖರೀದಿಸಬೇಡಿ.
ಗಾಜಿನ ಸಾಮಾನುಗಳು
ಅನೇಕ ಜನರು ತಮ್ಮ ಮನೆಯನ್ನು ಅಲಂಕರಿಸಲು ಗಾಜಿನ ವಸ್ತುಗಳನ್ನು ಬಳಸುತ್ತಾರೆ. ಆದರೆ ಧನ ತ್ರಯೋದಶಿಯಂದು ಗಾಜಿನ ವಸ್ತುಗಳನ್ನು ಖರೀದಿಸಬಾರದು ಎಂಬ ನಂಬಿಕೆ ಇದೆ. ಈ ದಿನ ಗಾಜಿನ ಪಾತ್ರೆಗಳು ಅಥವಾ ಗಾಜಿನ ಆಭರಣಗಳನ್ನು ಖರೀದಿಸಬಾರದು. ಇವು ನಕಾರಾತ್ಮಕ ಶಕ್ತಿಯನ್ನು ಮನೆಗೆ ತರುತ್ತವೆ. ಅದಕ್ಕಾಗಿಯೇ ಇವುಗಳನ್ನುು ದೂರ ಇಡಬೇಕು. ಈ ವಸ್ತುಗಳನ್ನು ಧನತ್ರಯೋದಶಿ ದಿನವನ್ನು ಹೊರತುಪಡಿಸಿ ಇತರ ದಿನಗಳಲ್ಲಿ ಖರೀದಿಸಬಹುದು.
ಹರಿತವಾದ ವಸ್ತುಗಳು
ಧನತ್ರಯೋದಶಿಯಂದು ಚಾಕು, ಕತ್ತರಿ, ಸೂಜಿ, ಕತ್ತರಿ ಮುಂತಾದ ಹರಿತವಾದ ವಸ್ತುಗಳನ್ನು ಖರೀದಿಸಬೇಡಿ. ಇವು ಹಾನಿಕಾರಕ ಸಂಕೇತಗಳಾಗಿ ನೋಡಲಾಗುತ್ತದೆ. ಹಾಗಾಗಿ ಧನತ್ರಯೋದಶಿ ದಿನ ಇವುಗಳನ್ನು ಮನೆಗೆ ತರಬೇಡಿ.
ಕೃತಕ ಆಭರಣ
ಇತ್ತೀಚಿನ ದಿನಗಳಲ್ಲಿ ಜನರು ಚಿನ್ನಾಭರಣಗಳಿಗಿಂತ ಕೃತಕ ಆಭರಣಗಳನ್ನು ಧರಿಸಲು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ ಮತ್ತು ವಿವಿಧ ಮಾದರಿಗಳಲ್ಲಿ ಲಭ್ಯವಿದೆ. ಆದ್ದರಿಂದ ಇವುಗಳನ್ನು ಹೆಚ್ಚು ಖರೀದಿಸಲಾಗುತ್ತದೆ. ಧನತ್ರಯೋದಶಿಯಂದು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಖರೀದಿಸುವುದು ಶುಭ. ಆದರೆ ಈ ದಿನ ಕೃತಕ ಆಭರಣಗಳನ್ನು ಖರೀದಿಸಬಾರದು.
ಪ್ಲಾಸ್ಟಿಕ್ ವಸ್ತುಗಳು
ಧಂತೇರಸ್ ದಿನ ಪ್ಲಾಸ್ಟಿಕ್ ವಸ್ತುಗಳನ್ನು ಖರೀದಿಸುವುದು ಶುಭವಲ್ಲ. ಇದು ನಕಾರಾತ್ಮಕ ಶಕ್ತಿಯನ್ನು ಒಯ್ಯುತ್ತದೆ. ಹಾಗಾಗಿ ಇವುಗಳನ್ನೂ ನಿಮ್ಮ ಖರೀದಿಯ ಪಟ್ಟಿಯಿಂದ ದೂರವಿಡಿ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.