ಅಯ್ಯಪ್ಪನ ಭಕ್ತರೇ ಕೇಳಿ; ಖ್ಯಾತ ಗಾಯಕ ಕೆಜೆ ಯೇಸುದಾಸ್ ಹಾಡಿರುವ ಹರಿವರಾಸನಂ ವಿಶ್ವಮೋಹನಮ್ ಹಾಡಿನ ಲಿರಿಕ್ಸ್ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅಯ್ಯಪ್ಪನ ಭಕ್ತರೇ ಕೇಳಿ; ಖ್ಯಾತ ಗಾಯಕ ಕೆಜೆ ಯೇಸುದಾಸ್ ಹಾಡಿರುವ ಹರಿವರಾಸನಂ ವಿಶ್ವಮೋಹನಮ್ ಹಾಡಿನ ಲಿರಿಕ್ಸ್ ಇಲ್ಲಿದೆ

ಅಯ್ಯಪ್ಪನ ಭಕ್ತರೇ ಕೇಳಿ; ಖ್ಯಾತ ಗಾಯಕ ಕೆಜೆ ಯೇಸುದಾಸ್ ಹಾಡಿರುವ ಹರಿವರಾಸನಂ ವಿಶ್ವಮೋಹನಮ್ ಹಾಡಿನ ಲಿರಿಕ್ಸ್ ಇಲ್ಲಿದೆ

ಅಯ್ಯಪ್ಪ ಸ್ವಾಮಿಯ ಭಕ್ತಿ ಗೀತೆಗಳ ಪೈಕಿ ಖ್ಯಾತ ಹಿನ್ನೆಲೆ ಗಾಯಕ ಕೆಜೆ ಯೇಸುದಾಸ್ ಅವರು ಹಾಡಿರುವ ಹರಿವರಾಸನಂ ವಿಶ್ವಮೋಹನಮ್ ತುಂಬಾ ಜನಪ್ರಿಯವಾದ ಹಾಡು. ಅಯ್ಯಪ್ಪನ ಭಕ್ತರು ಮಾಲೆ ಧರಿಸಿ ಶಬರಿಮಲೆಗೆ ಹೋಗಿ ಬರುವವರಿಗೆ ಈ ಹಾಡನ್ನು ಸಾಕಷ್ಟು ಬಾರಿ ಕೇಳಿರುತ್ತಾರೆ. ಈ ಹಾಡಿನ ಲಿರಿಕ್ಸ್ ಇಲ್ಲಿದೆ.

ಖ್ಯಾತ ಹಿನ್ನೆಲೆ ಗಾಯಕ ಕೆಜೆ ಯೇಸುದಾಸ್ ಅವರು ಹಾಡಿರುವ ಹರಿವರಾಸನಂ ವಿಶ್ವಮೋಹನಮ್ ಹಾಡಿನ ಲಿರಿಕ್ಸ್ ಇಲ್ಲಿ ನೀಡಲಾಗಿದೆ
ಖ್ಯಾತ ಹಿನ್ನೆಲೆ ಗಾಯಕ ಕೆಜೆ ಯೇಸುದಾಸ್ ಅವರು ಹಾಡಿರುವ ಹರಿವರಾಸನಂ ವಿಶ್ವಮೋಹನಮ್ ಹಾಡಿನ ಲಿರಿಕ್ಸ್ ಇಲ್ಲಿ ನೀಡಲಾಗಿದೆ

ಓಂ ಸ್ವಾಮಿಯೇ ಶರಣಂ ಅಯ್ಯಪ್ಪ… ಮಕರ ಸಂಕ್ರಾಂತಿಯವರಿಗೆ ದೇಶದ ನಾನಾ ಭಾಗಗಳಿಂದ ಭಕ್ತರು ಮಾಲೆ ಧರಿಸಿ ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಶಬರಿಮಲೆಯಾತ್ರೆ ಕೈಗೊಳ್ಳುವುದನ್ನು ನೋಡುತ್ತೇವೆ. ಅದರಲ್ಲೂ ವಿಶೇಷವಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಯ್ಯಪ್ಪನಿಗೆ ಭಕ್ತರು ಜಾಸ್ತಿ ಎಂದು ಹೇಳಬಹುದು. ಸಾವಿರಾರು ಮಂದಿ ಭಕ್ತರು ನವೆಂಬರ್, ಡಿಸೆಂಬರ್ ಹಾಗೂ ಜನವರಿಯಲ್ಲಿ ಮಾಲೆಯನ್ನು ಧರಿಸಿ ಅಯ್ಯಪ್ಪನ ದರ್ಶನಕ್ಕೆ ಹೋಗುತ್ತಾರೆ. ಮುಂಜಾನೆ ಮತ್ತು ರಾತ್ರಿಯ ಸಮಯದಲ್ಲಿ ಭಜನೆ, ಪೂಜೆ ಹಾಗೂ ವಿಶೇಷ ಪ್ರಾರ್ಥನೆಗಳ ಮೂಲಕ ಭಕ್ತಿಯಲ್ಲಿ ಮಿಂದೇಳುತ್ತಾರೆ. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬ ಮಾಲಾಧಾರಿಯೂ ಅಯ್ಯಪ್ಪನ ಭಕ್ತಿ ಗೀತೆಗಳನ್ನು ಹಾಡುತ್ತಾರೆ ಮತ್ತು ಕೇಳುತ್ತಾರೆ.

ಅಯ್ಯಪ್ಪನ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸುವ ಸಮಯದಲ್ಲಿ ಹೆಚ್ಚಾಗಿ ಸ್ವಾಮಿಗೆ ಸಂಬಂಧಿಸಿದ ತುಂಬಾ ಜನಪ್ರಿಯವಾದ ಹರಿವರಾಸನಂ ವಿಶ್ವಮೋಹನಮ್ ಹಾಡನ್ನು ಮೊಳಗಿಸಲಾಗುತ್ತದೆ. ಖ್ಯಾತ ಹಿನ್ನೆಲೆ ಗಾಯಕ ಕೆಜೆ ಯೇಸುದಾಸ್ ಅವರು ಹಾಡಿರುವ ತುಂಬಾ ಜನಪ್ರಿಯವಾಗಿರುವ ಹಾಗೂ ಸಾಮಾನ್ಯವಾಗಿ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಕೇಳಲಾಗುವ ಹರಿವರಾಸನಂ ವಿಶ್ವಮೋಹನಮ್ ಹಾಡಿನ ಲಿರಿಕ್ಸ್ ಅನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ.

ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ |
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ ||

ಹರಿವರಾಸನಂ ವಿಶ್ವಮೋಹನಮ್
ಹರಿದಧೀಶ್ವರಂ ಆರಾಧ್ಯಪಾದುಕಮ್ |
ಅರಿವಿಮರ್ದನಂ ನಿತ್ಯನರ್ತನಮ್
ಹರಿಹರಾತ್ಮಜಂ ದೇವಮಾಶ್ರಯೇ || 1 ||

ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ |
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ ||

ಶರಣಕೀರ್ತನಂ ಸ್ವಾಮಿ ಭಕ್ತಮಾನಸಮ್
ಭರಣಲೋಲುಪಂ ಸ್ವಾಮಿ ನರ್ತನಾಲಸಮ್ |
ಅರುಣಭಾಸುರಂ ಸ್ವಾಮಿ ಭೂತನಾಯಕಮ್
ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ || 2 ||

ಪ್ರಣಯಸತ್ಯಕಂ ಸ್ವಾಮಿ ಪ್ರಾಣನಾಯಕಮ್
ಪ್ರಣತಕಲ್ಪಕಂ ಸ್ವಾಮಿ ಸುಪ್ರಭಾಂಚಿತಮ್ |
ಪ್ರಣವಮಂದಿರಂ ಸ್ವಾಮಿ ಕೀರ್ತನಪ್ರಿಯಮ್
ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ || 3 ||

ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ |
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ ||

ತುರಗವಾಹನಂ ಸ್ವಾಮಿ ಸುಂದರಾನನಮ್
ವರಗದಾಯುಧಂ ಸ್ವಾಮಿ ವೇದವರ್ಣಿತಮ್ |
ಗುರುಕೃಪಾಕರಂ ಸ್ವಾಮಿ ಕೀರ್ತನಪ್ರಿಯಮ್
ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ || 4 ||

ತ್ರಿಭುವನಾರ್ಚಿತಂ ಸ್ವಾಮಿ ದೇವತಾತ್ಮಕಮ್
ತ್ರಿನಯನಪ್ರಭುಂ ಸ್ವಾಮಿ ದಿವ್ಯದೇಶಿಕಮ್ |
ತ್ರಿದಶಪೂಜಿತಂ ಸ್ವಾಮಿ ಚಿಂತಿತಪ್ರದಮ್
ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ || 5 ||

ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ |
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ ||

ಭವಭಯಾಪಹಂ ಸ್ವಾಮಿ ಭಾವುಕಾವಕಮ್
ಭುವನಮೋಹನಂ ಸ್ವಾಮಿ ಭೂತಿಭೂಷಣಮ್ |
ಧವಳವಾಹನಂ ಸ್ವಾಮಿ ದಿವ್ಯವಾರಣಮ್
ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ || 6 ||

ಕಳಮೃದುಸ್ಮಿತಂ ಸ್ವಾಮಿ ಸುಂದರಾನನಮ್
ಕಳಭಕೋಮಲಂ ಸ್ವಾಮಿ ಗಾತ್ರಮೋಹನಮ್ |
ಕಳಭಕೇಸರಿ ಸ್ವಾಮಿ ವಾಜಿವಾಹನಂ
ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ || 7 ||

ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ |
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ ||

ಶ್ರಿತಜನಪ್ರಿಯಂ ಸ್ವಾಮಿ ಚಿಂತಿತಪ್ರದಮ್
ಶ್ರುತಿವಿಭೂಷಣಂ ಸ್ವಾಮಿ ಸಾಧುಜೀವನಮ್ |
ಶ್ರುತಿಮನೋಹರಂ ಸ್ವಾಮಿ ಗೀತಲಾಲಸಮ್
ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ || 8 ||

ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ |
ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ ||

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.