Lucky Girls: ಈ ದಿನಾಂಕಗಳಲ್ಲಿ ಜನಿಸಿದ ಹೆಣ್ಣು ಮಕ್ಕಳಿಂದ ತಂದೆ, ಗಂಡನಿಗೆ ಭಾರಿ ಅದೃಷ್ಟ; ಸಂತೋಷ ಹೆಚ್ಚಿಸುತ್ತಾರೆ
Lucky Girls: ಕೆಲವು ಹುಡುಗಿಯರ ಹುಟ್ಟಿದ ದಿನಾಂಕದ ಆಧಾರದ ಮೇಲೆ ಅವರ ಭವಿಷ್ಯವನ್ನು ಹೇಳಬಹುದು. ಯಾವ ದಿನಾಂಕದಂದು ಜನಿಸಿದ ಹುಡುಗಿಯರು ತಮ್ಮ ಸಂಗಾತಿ ಮತ್ತು ತಂದೆಗೆ ಅದೃಷ್ಟವನ್ನು ತರುತ್ತಾರೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

Lucky Girls: ಕೆಲವು ದಿನಾಂಕಗಳನ್ನು ತುಂಬಾ ಶುಭಕರವೆಂದು ಪರಿಗಣಿಸಲಾಗಿದೆ. ಕೆಲವೊಂದು ದಿನಗಳಲ್ಲಿ ಜನಿಸಿದವರು ತಮ್ಮ ಸುತ್ತಲಿನವರಿಗೆ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತಾರೆ. ಈ ದಿನಾಂಕಗಳಲ್ಲಿ ಜನಿಸಿದವರು ಕೆಲವು ಗುಣಲಕ್ಷಣಗಳನ್ನು ಹೊಂದಿರುತ್ತಾರೆ. ಯಾವ ದಿನಾಂಕಗಳಲ್ಲಿ ಜನಿಸಿದವರು ತುಂಬಾ ಅದೃಷ್ಟವಂತರು ಹಾಗೂ ತಮ್ಮವರಿಗೂ ಅವರು ಅದೃಷ್ಟವನ್ನು ತರುತ್ತಾರೆ ಎಂಬುದನ್ನು ತಿಳಿಯೋಣ.
ಕೆಲವು ಹೆಣ್ಣುಮಕ್ಕಳ ಹುಟ್ಟಿದ ದಿನಾಂಕವನ್ನು ಅವಲಂಬಿಸಿ ಅವರ ಕುರಿತ ಆಸಕ್ತಿಕರ ವಿಷಯಗಳನ್ನು ಹೇಳಬಹುದು. ಯಾವ ದಿನಾಂಕದಂದು ಜನಿಸಿದ ಹುಡುಗಿಯರು ತಮ್ಮ ಸಂಗಾತಿ ಮತ್ತು ತಂದೆಗೆ ಅದೃಷ್ಟವನ್ನು ತರುತ್ತಾರೆ ಎಂದು ನೋಡೋಣ.
ಯಾವುದೇ ತಿಂಗಳ 3, 7, 11, 21 ಮತ್ತು 29 ರಂದು ಜನಿಸಿದವರು ನೈಸರ್ಗಿಕ ಮೋಡಿ ಮತ್ತು ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಈ ಗುಣಗಳನ್ನು ಹೊಂದಿರುವವರು ತಮ್ಮ ಜೀವನವನ್ನು ಬೆಳಗಿಸುವುದಲ್ಲದೆ ಅದೃಷ್ಟವನ್ನು ತರುತ್ತಾರೆ. ವಿಶೇಷವಾಗಿ ಈ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರು ತಂದೆ ಮತ್ತು ಗಂಡನಿಗೆ ಅದೃಷ್ಟವನ್ನು ತರುತ್ತಾರೆ.
ವಿಶೇಷವಾಗಿ ತಂದೆಗೆ ಹೆಚ್ಚು ಅದೃಷ್ಟ
- ಈ ದಿನಾಂಕಗಳಲ್ಲಿ ಹೆಣ್ಣು ಮಗು ಜನಿಸಿದರೆ ಅವರ ತಂದೆಯ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ವೃತ್ತಿ ಜೀವನದಲ್ಲಿ ಪ್ರಗತಿ ಮತ್ತು ಹಣಕಾಸಿನ ಸ್ಥಿತಿ ಹೆಚ್ಚಾಗುತ್ತದೆ.
- ಈ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರನ್ನು ಮದುವೆಯಾಗುವ ಗಂಡನ ಜೀವನದಲ್ಲಿ ಅದೃಷ್ಟವನ್ನು ತರುತ್ತದೆ. ಪತಿಯ ಬೆಳವಣಿಗೆಯಲ್ಲಿ ಪ್ರಗತಿಯ ಬದಲಾವಣೆಗಳು ಇರುತ್ತವೆ.
ಇದನ್ನೂ ಓದಿ: ಈ ದಿನಾಂಕಗಳಲ್ಲಿ ಜನಿಸಿದವರಿಗೆ ಸುಳ್ಳು ಅಂದ್ರೆ ಕೆಂಡದಂಥ ಕೋಪ; ನಿಮ್ಮ ಜನ್ಮ ದಿನಾಂಕ ಇದೆಯಾ ನೋಡಿ
ಸಂಖ್ಯಾಶಾಸ್ತ್ರ ಏನು ಹೇಳುತ್ತದೆ?
- ಸಂಖ್ಯೆ 3 ಸೃಜನಶೀಲತೆ ಸಂವಹನವನ್ನು ಸೂಚಿಸುತ್ತದೆ
- ಸಂಖ್ಯೆ 7 ಜ್ಞಾನ, ಅಧ್ಯಾತ್ಮಿಕ ಮತ್ತು ಒಳನೋಟವನ್ನು ಒಳಗೊಂಡಿದೆ
- ಸಂಖ್ಯೆಗಳು 11 ಮತ್ತು 29 ಒಳನೋಟ ಮತ್ತು ನಾಯಕತ್ವಕ್ಕೆ ಸಂಬಂಧಿಸಿವೆ
- ಸಂಖ್ಯೆ 21 ಹೆಚ್ಚಾಗಿ ಸಾಮರಸ್ಯದ ಅದೃಷ್ಟಕ್ಕೆ ಸಂಬಂಧಿಸಿದೆ
ಈ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರು ತಮ್ಮ ಗುಣಲಕ್ಷಣಗಳೊಂದಿಗೆ ಮತ್ತು ಅವರ ಸುತ್ತಲಿನವರೊಂದಿಗೆ ಜನರನ್ನು ಪ್ರೇರೇಪಿಸುತ್ತಾರೆ. ಅದೃಷ್ಟ ನಕ್ಷತ್ರಗಳಲ್ಲಿ ಜನಿಸಿದ ಹುಡುಗಿಯನ್ನು ಅವರ ಕುಟುಂಬಗಳಿಗೆ ಆಶೀರ್ವಾದವೆಂದು ಪರಿಗಣಿಸಲಾಗುತ್ತದೆ. ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತಾರೆ. ಕೆಟ್ಟ ದೃಷ್ಟಿಗಳಿಂದ ಮನೆಯವರನ್ನು ರಕ್ಷಿಸುತ್ತಾರೆ ಎಂದು ನಂಬಲಾಗಿದೆ. ಯಶಸ್ವಿ ಪುರುಷರ ಹಿಂದೆ ಇಂತಹ ಅದೃಷ್ಟದ ಹೆಂಡತಿಯರು ಇರುತ್ತಾರೆ ಎಂದು ಹೇಳಲಾಗುತ್ತದೆ.
ಈ ಮೇಲೆ ಹೇಳಿದಂತೆ, ಈ ದಿನಾಂಕಗಳಲ್ಲಿ ಜನಿಸಿದವರು, ಒಬ್ಬ ಮಗಳಾ, ಹೆಂಡತಿಯಾಗಿರಲಿ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ, ಇವರಿಗೆ ಅದೃಷ್ಟವು ಒಟ್ಟಿಗೆ ಬರುತ್ತದೆ, ಸಂತೋಷದ ಜೀವನವನ್ನು ನಡೆಸುತ್ತಾರೆ, ದುಃಖಗಳಿಂದ ಹೊರಬರುತ್ತಾರೆ. ತಂದೆ ಅಥವಾ ಪತಿಯ ಮನೆಯಲ್ಲಿ ಯಾವಾಗಲೂ ನೆಮ್ಮದಿಯಾಗಿ ಜೀವನ ನಡೆಸುತ್ತಾರೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
