Guru Pradosh Vrat: ಇಂದು ಗುರು ಪ್ರದೋಷ ವ್ರತ: ಶುಭ ಸಮಯ, ಪೂಜಾ ವಿಧಾನದ ಮಾಹಿತಿ ಇಲ್ಲಿದೆ
Guru Pradosh Vrat: ಹಿಂದೂ ಕ್ಯಾಲೆಂಡರ್ ಪ್ರಕಾರ ಚೈತ್ರ ಮಾಸದ ಕೃಷ್ಣ ಪಕ್ಷ ತ್ರಯೋದಶಿ ದಿನ ಗುರು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಈ ವ್ರತದಿಂದ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ತಿಳಿಯಿರಿ.

ಮಾರ್ಚ್ ತಿಂಗಳ ಎರಡನೇ ಮತ್ತು ಕೊನೆಯ ಪ್ರದೋಷ ಉಪವಾಸವು ಗುರುವಾರ ಬರುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಚೈತ್ರ ಕೃಷ್ಣ ಪಕ್ಷದ ತ್ರಯೋದಶಿ ದಿನದಂದು ಗುರು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಗುರು ಪ್ರದೋಷ ಉಪವಾಸವನ್ನು ಆಚರಿಸುವುದರಿಂದ ಪಾರ್ವತಿ ದೇವಿ ಮತ್ತು ಶಿವನ ಆಶೀರ್ವಾದ ಸಿಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಇಂದು (2025ರ ಮಾರ್ಚ್ 27) ಗುರು ಪ್ರದೋಷ ಉಪವಾಸವನ್ನು ಆಚರಿಸಬೇಕು. ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಬೇಕು. ನಂತರ ಶಿವ ಮತ್ತು ಪಾರ್ವತಿಯ ಫೋಟೊ ಅಥವಾ ವಿಗ್ರಹವನ್ನು ಪ್ರತಿಷ್ಠಾಪಿಸಿ. ಶಿವನಿಗೆ ಉಮ್ಮತ್ತಿ ಹೂವುಗಳು, ಬಿಳಿ ಹೂವುಗಳು, ಹಣ್ಣುಗಳು ಹಾಗೂ ಸಿಹಿತಿಂಡಿಗಳನ್ನು ಅರ್ಪಿಸಿಬೇಕು. ಗೌರಿ ಚಾಲೀಸಾವನ್ನು ಪಠಿಸಿ. ಗುರು ಪ್ರದೋಷ ಪೂಜೆಯ ಶುಭ ಮುಹೂರ್ತ ಮತ್ತು ವ್ರತದ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಗುರು ಪ್ರದೋಶ ವ್ರತದ ಶುಭ ಮುಹೂರ್ತ
ತ್ರಯೋದಶಿ ತಿಥಿ ಪ್ರಾರಂಭದ ಸಮಯ: 01:42 AM
ತ್ರಯೋದಶಿ ತಿಥಿ ಕೊನೆಗೊಳ್ಳುವ ಸಮಯ: 2025ರ ಮಾರ್ಚ್ 27 ರಂದು ರಾತ್ರಿ 11:03
ಪ್ರದೋಷ ಕಾಲ ಅಥವಾ ಪೂಜಾ ಮುಹೂರ್ತ: ಸಂಜೆ 06:36 ರಿಂದ 08:56
ಪ್ರದೋಷದ ಅವಧಿ: 02 ಗಂಟೆ 20 ನಿಮಿಷಗಳು
ಬ್ರಹ್ಮ ಮುಹೂರ್ತ: 04:43 ರಿಂದ 05:30 ಬೆಳಿಗ್ಗೆ
ಅಭಿಜಿತ್ ಮುಹೂರ್ತ: 12:02 ರಿಂದ 12:51
ಗುರು ಪ್ರದೋಷ ಪೂಜಾ ವಿಧಾನ
- ಸ್ನಾನ ಮಾಡಿದ ನಂತರ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ
- ಶಿವನ ಕುಟುಂಬ ಸೇರಿದಂತೆ ಎಲ್ಲಾ ದೇವರುಗಳನ್ನು ಪೂಜಿಸಬೇಕು
- ಉಪವಾಸ ಮಾಡಲು ಬಯಸಿದರೆ, ಪವಿತ್ರ ನೀರು, ಹೂವುಗಳು ಮತ್ತು ಅಕ್ಷತೆಯೊಂದಿಗೆ ಉಪವಾಸವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿ
- ನಂತರ, ಪೂಜಾ ಕೋಣೆಯಲ್ಲಿ ಸಂಜೆ ದೀಪವನ್ನು ಬೆಳಗಿಸಿ, ನಂತರ ಶಿವ ದೇವಾಲಯ ಅಥವಾ ಮನೆಯಲ್ಲಿ ಶಿವನ ಪ್ರತಿಷ್ಠಾಪನೆಯನ್ನು ಮಾಡಿ
- ಶಿವನ ಕುಟುಂಬವನ್ನು ಪೂಜಿಸಿದ ನಂತರ ಗುರು ಪ್ರದೋಷ ವ್ರತದ ಕಥೆಯನ್ನು ಓದಿ
- ಬಳಿಕ ತುಪ್ಪದ ದೀಪದಿಂದ ಶಿವನ ಆರತಿಯನ್ನು ಭಕ್ತಿಯಿಂದ ಮಾಡಬೇಕು
- ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿ ಮತ್ತು ಅಂತಿಮವಾಗಿ ತಿಳಿದೋ, ತಿಳಿಯದೆಯೋ ತಪ್ಪುಗಳನ್ನು ಮಾಡಿದ್ದರೆ ಕ್ಷಮಿಸುವಂತೆ ಪ್ರಾರ್ಥಿಸಿ
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
