ಈ ನಕ್ಷತ್ರದಲ್ಲಿ ಜನಿಸಿದ ಅವಿವಾಹಿತರಿಗೆ 2025 ರಲ್ಲಿ ಮದುವೆಯಾಗುತ್ತೆ; ಸಪ್ತಪದಿ ತುಳಿಯಲು ಸಿದ್ಧರಾಗಿ
Marriage: ನಕ್ಷತ್ರಗಳ ಆಧಾರ ಮೇಲೆ ಕೆಲವರಿಗೆ 2025 ಶುಭಕರ ವರ್ಷವಾಗಿದೆ. ಇವರು 2024 ರಲ್ಲಿ ಸಾಧ್ಯವಾಗದ್ದನ್ನು ಈ ವರ್ಷ ಸಾಧ್ಯವಾಗಿಸಿಕೊಳ್ಳಲಿದ್ದಾರೆ. ಈ ನಾಲ್ಕು ನಕ್ಷತ್ರಗಳಲ್ಲಿ ಜನಿಸಿರುವ ಅವಿವಾಹಿತರಿಗೆ 2025 ರಲ್ಲಿ ಮದುವೆಯಾಗಲಿದೆ. ಸಪ್ತಪದಿ ತುಳಿಯಲಿರುವ ಅದೃಷ್ಟ ನಕ್ಷತ್ರದವರ ಬಗ್ಗೆ ತಿಳಿಯೋಣ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕ, ಕುಂಡಲಿಯ ಫಲಾಫಲಗಳ ಮೇಲೆ ಗ್ರಹಗತಿಗಳ ಪ್ರಭಾವ ಇದ್ದೇ ಇದೆ. ಅಂತೆಯೇ, ನಕ್ಷತ್ರಗಳ ಸ್ಥಾನದಲ್ಲಿನ ಬದಲಾವಣೆಯು ವ್ಯಕ್ತಿಯ ಜೀವನದಲ್ಲಿ ಪ್ರಮುಖ ಬೆಳವಣಿಗೆಗಳಿಗೆ ಕಾರಣವಾಗಬಹುದು. ಮದುವೆಯನ್ನು ಜೀವನದ ಪ್ರಮುಖ ಘಟನೆ ಎಂದು ಪರಿಗಣಿಸಲಾಗುತ್ತದೆ. ಕೆಲವು ಗ್ರಹಗತಿಗಳ ಸಂದರ್ಭದಲ್ಲಿ ವಿಶೇಷವಾಗಿ ಮದುವೆ ವಿಚಾರಕ್ಕೆ ಬಂದಾಗ ವ್ಯಕ್ತಿಯ ಕುಂಡಲಿಯಲ್ಲಿ ಗ್ರಹಗತಿಗಳು ಪೂರಕವಾಗಿರುವಾಗ ಯಾರು ಎಷ್ಟೇ ಪ್ರಯತ್ನ ಮಾಡಿದರೂ ಅಂಥವರ ಮದುವೆಯನ್ನು ತಡೆಯಲಾಗದು. ಇನ್ನೊಂದೆಡೆ, ಕುಂಡಲಿ ಪ್ರಕಾರ ಗ್ರಹಗತಿಗಳು ಸರಿಯಾಗಿಲ್ಲದೇ ಇರುವಂತಹ ಸನ್ನಿವೇಶದಲ್ಲಿ ಯಾರು ಎಷ್ಟೇ ಪ್ರಯತ್ನಪಟ್ಟರೂ ಅಂಥವರಿಗೆ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ. ಕೆಲವರು 2024 ರಲ್ಲಿ ಸಾಧ್ಯವಾಗದ್ದನ್ನು ಈ ಹೊಸ ವರ್ಷದಲ್ಲಿ ಸಾಧ್ಯವಾಗಿಸಿಕೊಳ್ಳಲಿದ್ದಾರೆ. ನಕ್ಷತ್ರಗಳ ಆಧಾರದ ಮೇಲೆ 2025 ರಲ್ಲಿ ಮದುವೆಯಾಗುವ ಸಾಧ್ಯತೆಯಿದೆ. ಯಾವ ನಕ್ಷತ್ರದಲ್ಲಿ ಜನಿಸಿದವರು 2025 ರಲ್ಲಿ ಸಪ್ತಪದಿ ತುಳಿಯುವ ಸಾಧ್ಯತೆ ಇದೆ ಎಂಬುದನ್ನು ತಿಳಿಯೋಣ.
ಅಶ್ವಿನಿ ನಕ್ಷತ್ರ
ಅಶ್ವಿನಿ ನಕ್ಷತ್ರದಲ್ಲಿ ಜನಿಸಿದ ಜನರು ಯಾವಾಗಲೂ ಸ್ವತಂತ್ರರಾಗಿರುತ್ತಾರೆ ಮತ್ತು ಗುಲಾಮಗಿರಿಯನ್ನು ಇಷ್ಟಪಡುವುದಿಲ್ಲ. 2025 ವರ್ಷವು ಇವರ ಜೀವನವನ್ನು ಬದಲಾಯಿಸುವ ವರ್ಷವಾಗಿರುತ್ತದೆ. ಇವರಿಗೆ ಉತ್ತಮ ವರ್ಷವಾಗಲಿದೆ. ನಿಮ್ಮ ಎಲ್ಲಾ ಆಸೆಗಳು ಈಡೇರುವ ಸಾಧ್ಯತೆಗಳು ಹೆಚ್ಚು. ನಿಮ್ಮ ಜೀವನದ ಬಗ್ಗೆ ಪರಸ್ಪರ ತಿಳಿವಳಿಕೆಯೊಂದಿಗೆ ಜೀವನ ಸಂಗಾತಿಯನ್ನು ಪಡೆಯುವ ನಿರೀಕ್ಷೆಯಿದೆ.
ರೋಹಿಣಿ ನಕ್ಷತ್ರ
2025 ವರ್ಷವು ನಿಮಗೆ ತುಂಬಾ ಅದೃಷ್ಟಶಾಲಿಯಾಗಲಿದೆ. ಗ್ರಹಗಳ ಸಂಚಾರವು ನಿಮಗೆ ಅನುಕೂಲಕರವಾಗಿರುತ್ತದೆ. ಇದರ ಪರಿಣಾಮವಾಗಿ ನೀವು ಶುಭಕರವಾದ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತೀರಿ. ನಿಮಗೆ ವಿವಾಹ ಯೋಗ ಇದೆ, ವೈಯಕ್ತಿಕ ಜೀವನದಲ್ಲಿ ಅದೃಷ್ಟಶಾಲಿಯಾಗುವ ಸಾಧ್ಯತೆಗಳಿವೆ. ಗ್ರಹಗತಿ ಬದಲಾವಣೆಯಿಂದಾಗಿ ನಿಮ್ಮ ವೈವಾಹಿಕ ಜೀವನವು ತುಂಬಾ ಉತ್ತಮವಾಗಿರುತ್ತದೆ. ಜೀವನದಲ್ಲಿ ಉತ್ತಮ ಬದಲಾವಣೆಗಳು ಉಂಟಾಗಬಹುದು.
ಮೃಗಶಿರ ನಕ್ಷತ್ರವು
2025 ರಲ್ಲಿ ನೀವು ಬಯಸಿದ ರೀತಿಯಲ್ಲಿ ಮದುವೆಯಾಗಬಹುದು. ಮಂಗಳ ಗ್ರಹದ ಆಳ್ವಿಕೆ ಇರುವಂತಹ ನಕ್ಷತ್ರ ನಿಮ್ಮದು. ಈ ಹೊಸ ವರ್ಷವು ನಿಮಗೆ ಬಹಳ ಸಕಾರಾತ್ಮಕ ಫಲಿತಾಂಶಗಳನ್ನು ನೀಡಬಹುದು. ವಿವಾಹಿತರು ಸಂತೋಷವಾಗಿರುತ್ತಾರೆ. ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆಯೇ ಇರುವುದಿಲ್ಲ, ಎಲ್ಲಾ ಆಸೆಗಳು ಈಡೇರುತ್ತವೆ ಮತ್ತು ನೀವು ತುಂಬಾ ಸುಂದರವಾದ ಜೀವನ ಸಂಗಾತಿಯನ್ನು ಹೊಂದುವ ನಿರೀಕ್ಷೆಯಿದೆ.
ಪುಷ್ಯಮಿ ನಕ್ಷತ್ರ
ನೀವು ಶನಿಯ ನಕ್ಷತ್ರದವರು. 2025ರ ಹೊಸ ವರ್ಷವು ನಿಮಗೆ ಬಹಳ ವಿಶೇಷವಾಗಿದೆ. ವೈವಾಹಿಕ ಜೀವನಕ್ಕೆ ಪ್ರವೇಶಿಸುವವರಿಗೆ ಈ ವರ್ಷವು ಅನುಕೂಲಕರವಾಗಿರುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಒಳ್ಳೆಯ ಗುಣಗಳನ್ನು ಹೊಂದಿರುವ ಜೀವನ ಸಂಗಾತಿಯೊಂದಿಗೆ ಸಪ್ತಪದಿ ತುಳಿಯುತ್ತೀರಿ. 2025 ರಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುವ ನಿರೀಕ್ಷೆಯಿದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)