ವ್ಯಕ್ತಿತ್ವ, ಜೀವನ, ಸಾಮರ್ಥ್ಯದ ಬಗ್ಗೆ ತಿಳಿಸುವ ಹೆಸರಿನ ಮೇಲೆ ಸಂಖ್ಯಾಶಾಸ್ತ್ರದ ಶಕ್ತಿ ಹೇಗಿರುತ್ತೆ; ಈ ಆಸಕ್ತಿಕರ ವಿಚಾರಗಳನ್ನು ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವ್ಯಕ್ತಿತ್ವ, ಜೀವನ, ಸಾಮರ್ಥ್ಯದ ಬಗ್ಗೆ ತಿಳಿಸುವ ಹೆಸರಿನ ಮೇಲೆ ಸಂಖ್ಯಾಶಾಸ್ತ್ರದ ಶಕ್ತಿ ಹೇಗಿರುತ್ತೆ; ಈ ಆಸಕ್ತಿಕರ ವಿಚಾರಗಳನ್ನು ತಿಳಿಯಿರಿ

ವ್ಯಕ್ತಿತ್ವ, ಜೀವನ, ಸಾಮರ್ಥ್ಯದ ಬಗ್ಗೆ ತಿಳಿಸುವ ಹೆಸರಿನ ಮೇಲೆ ಸಂಖ್ಯಾಶಾಸ್ತ್ರದ ಶಕ್ತಿ ಹೇಗಿರುತ್ತೆ; ಈ ಆಸಕ್ತಿಕರ ವಿಚಾರಗಳನ್ನು ತಿಳಿಯಿರಿ

ಪ್ರತಿಯೊಬ್ಬರ ಹೆಸರು ಹಾಗೂ ಹುಟ್ಟಿದ ದಿನಾಂಕದ ಆಧಾರದ ಮೇಲೆ ಅವರ ವ್ಯಕ್ತಿತ್ವ, ಜೀವನ ಹಾಗೂ ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳಬಹುದು ಎಂದು ಸಂಖ್ಯಾಶಾಸ್ತ್ರದಲ್ಲಿ ಹೇಳಲಾಗುತ್ತದೆ. ವಿಶೇಷವಾಗಿ ಹೆಸರಿನ ಮೇಲೆ ಸಂಖ್ಯಾಶಾಸ್ತ್ರದ ಪ್ರಭಾವ ಹೆಚ್ಚಿರುತ್ತದೆ. ಅದು ಹೇಗೆ ಎಂಬುದನ್ನು ತಿಳಿಯೋಣ.

ಹೆಸರಿನಲ್ಲಿ ಸಂಖ್ಯಾಶಾಸ್ತ್ರದ ಶಕ್ತಿ ಹೇಗಿರುತ್ತೆ ಎಂಬುದನ್ನು ತಿಳಿಯಿರಿ
ಹೆಸರಿನಲ್ಲಿ ಸಂಖ್ಯಾಶಾಸ್ತ್ರದ ಶಕ್ತಿ ಹೇಗಿರುತ್ತೆ ಎಂಬುದನ್ನು ತಿಳಿಯಿರಿ

ಸಂಖ್ಯಾಶಾಸ್ತ್ರ ಎಂಬುದು ಅಂಕಿಅಂಶಗಳ ಸಂಗ್ರಹಣ. ಇದನ್ನು ಕೆಲವರು ಗಣಿತ ವಿಜ್ಞಾನ ಅಂತಲೂ ಕರೆಯುತ್ತಾರೆ. ಸಂಖ್ಯಾಶಾಸ್ತ್ರವು ಸಾಮಾನ್ಯವಾಗಿ ವ್ಯಕ್ತಿಯೊಬ್ಬರ ಹೆಸರಿನಲ್ಲಿರುವ ವರ್ಣಮಾಲೆಯಿಂದ ಸಂಖ್ಯೆಗಳನ್ನು ಪಡೆದು ಅದರ ಒಟ್ಟು ಮೊತ್ತದೊಂದಿಗೆ ಅಧ್ಯಯನ ಮಾಡುತ್ತದೆ. ಹೀಗೆ ಬರುವ ಸಂಖ್ಯೆಗಳಿಂದ ವ್ಯಕ್ತಿಯ ಜೀವನ, ವ್ಯಕ್ತಿತ್ವ ಹಾಗೂ ಸಾಮರ್ಥ್ಯವನ್ನು ಅಂದಾಜಿಸುತ್ತದೆ. ಜೊತೆಗೆ ಬೇರೆಯವರು ನಿಮ್ಮನ್ನು ಹೇಗೆ ನೋಡುತ್ತಾರೆ ಎಂಬುದರ ಬಗ್ಗೆ ಸಂಖ್ಯೆಗಳ ಆಧಾರದಲ್ಲಿ ತಿಳಿಸುತ್ತದೆ.

ಸಂಖ್ಯಾಶಾಸ್ತ್ರದಲ್ಲಿ ವರ್ಣಮಾಲೆಯ ಪ್ರತಿಯೊಂದು ಅಕ್ಷರವು ನಿರ್ದಿಷ್ಟ ಸಂಖ್ಯೆಗೆ ಅನುರೂಪವಾಗಿದೆ. ಉದಾಹರಣೆಗೆ - A = 1, B = 2, C = 3, ಇತ್ಯಾದಿ. ನಿಮ್ಮ ಹೆಸರಿನ ಸಂಖ್ಯೆಯನ್ನು ಕಂಡುಹಿಡಿಯಲು ನಿಮ್ಮ ಪೂರ್ಣ ಹೆಸರಿನ ಅಕ್ಷರಗಳಿಗೆ ಅನುಗುಣವಾದ ಸಂಖ್ಯೆಗಳನ್ನು ಸೇರಿಸಬೇಕಾಗುತ್ತದೆ. ಉದಾಹರಣೆಗೆ ಹೆಸರು ರಮೇಶ್ ಅಂತ ಇಟ್ಟುಕೊಳ್ಳೋಣ. ವರ್ಣಮಾಲೆಯ ನಿರ್ದಿಷ್ಟ ಸಂಖ್ಯೆಗೆ ಅನುಗುಣವಾಗಿ ಚಾರ್ಟ್ ಬಳಸಿ ಹೇಳುವುದಾದರೆ, RAMESH ಹೆಸರಿಗೆ R -8, A - 1, M - 4, E - 5, S - 9, H - 8 = 35 ಆಗುತ್ತದೆ.

ಇವುಗಳನ್ನು ಒಟ್ಟಿಗೆ ಸೇರಿದಾಗ 8 + 1 + 4 + 5 + 9 + 8 = 35. ಇದನ್ನು ಒಂದೇ ಅಂಕಿಗೆ ಇಳಿಸಿದಾಗ 3 + 5 = 8 ಆಗುತ್ತದೆ. ಅಂತಿಮ ಸಂಖ್ಯೆ 8. ವ್ಯಕ್ತಿತ್ವ ಸುಧಾರಣೆ, ಜ್ಞಾನ, ಪರಿಶ್ರಮ ಹಾಗೂ ಸಾಮರಸ್ಯದಂತಹ ಲಕ್ಷಣಗಳನ್ನು ಪ್ರತಿನಿಧಿಸುತ್ತದೆ.

ನಿಮ್ಮ ಹೆಸರಿನ ಸಂಖ್ಯೆಯು ನಿಮ್ಮ ಗುಣಗಳನ್ನು ಮತ್ತು ನಿಮ್ಮನ್ನು ನೀವು ಹೇಗೆ ವ್ಯಕ್ತಪಡಿಸುತ್ತೀರಿ ಎಂಬುದನ್ನು ತಿಳಿಸುತ್ತದೆ. ಉದಾಹರಣೆಗೆ - ಹೆಸರು ಸಂಖ್ಯೆ 1 ನಾಯಕತ್ವ ಮತ್ತು ಸ್ವಾತಂತ್ರ್ಯವನ್ನು ಸೂಚಿಸುತ್ತದೆ. ಹೆಸರಿನ ಸಂಖ್ಯೆ 7 ಆತ್ಮಾವಲೋಕನ ಮತ್ತು ಜ್ಞಾನದ ಪ್ರೀತಿಯನ್ನು ಸೂಚಿಸುತ್ತದೆ. ಪ್ರತಿಯೊಂದು ಸಂಖ್ಯೆಯು ನಿಮ್ಮ ವ್ಯಕ್ತಿತ್ವ ಮತ್ತು ಸಾಮರ್ಥ್ಯವನ್ನು ರೂಪಿಸುವ ತನ್ನದೇ ಆದ ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ.

ನಿಮ್ಮ ಹೆಸರಿನ ಸಂಖ್ಯಾಶಾಸ್ತ್ರವನ್ನು ತಿಳಿದುಕೊಳ್ಳುವುದು ನಿಮ್ಮ ಸಾಮರ್ಥ್ಯ ಮತ್ತು ಸವಾಲುಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ವ್ಯಾಪಾರ, ಮಕ್ಕಳು ಅಥವಾ ವೇದಿಕೆಯ ಹೆಸರುಗಳಂತಹ ವಿಷಯಗಳಿಗೆ ಹೆಸರುಗಳನ್ನು ಆಯ್ಕೆ ಮಾಡುವಾಗ ಇದು ನಿಮಗೆ ಮಾರ್ಗದರ್ಶನ ನೀಡುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.