New Year Vastu Tips: ಹೊಸ ವರ್ಷದಲ್ಲಿ ಲಕ್ಷ್ಮಿ ದೇವಿ ನಿಮ್ಮ ಮನೆಗೆ ಬರಬೇಕಾ? ಈ ವಾಸ್ತು ಪರಿಹಾರಗಳನ್ನು ಪಾಲಿಸಿ
ಹೊಸ ವರ್ಷದ ವಾಸ್ತು ಸಲಹೆಗಳು: ಹೊಸ ವರ್ಷ ಪ್ರಾರಂಭವಾಗಲು ಕೆಲವೇ ದಿನಗಳು ಉಳಿದಿವೆ. ಹೊಸ ವರ್ಷದಲ್ಲಿ ತಮ್ಮ ಜೀವನ ಸುಖಮಯವಾಗಿರಲಿ ಎಂದು ಎಲ್ಲರೂ ಬಯಸುತ್ತಾರೆ. ಹೊಸ ವರ್ಷದಲ್ಲಿ ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಪ್ರವೇಶಿಸಲು ಬಯಸಿದರೆ, ಶಾಂತಿ ಮತ್ತು ಸಂತೋಷವನ್ನು ಆಹ್ವಾನಿಸಲು ವಾಸ್ತುಶಾಸ್ತ್ರದ ಪ್ರಕಾರ ಕೆಲವೊಂದು ಪರಿಹಾರ ಕ್ರಮಗಳನ್ನು ಪಾಲಿಸಬೇಕು.
ಹೊಸ ವರ್ಷದ ವಾಸ್ತು ಸಲಹೆಗಳು: ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ 2025 ರ ಹೊಸ ವರ್ಷಕ್ಕೆ ಕಾಲಿಡಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಹೊಸ ವರ್ಷಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. 2024 ರ ವರ್ಷವು ಕಳೆಯುತ್ತಿದೆ. ಪ್ರತಿಯೊಬ್ಬರೂ ಹೊಸ ವರ್ಷವು ಸಂತೋಷದಿಂದ ಮತ್ತು ಉತ್ತಮ ಆರ್ಥಿಕ ಬೆಳವಣಿಗೆಯಿಂದ ತುಂಬಬೇಕೆಂದು ಬಯಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಹಳೆಯ ವರ್ಷವನ್ನು ಬಿಟ್ಟು ಹೊಸ ವರ್ಷವನ್ನು ಪ್ರವೇಶಿಸುವಾಗ ಕೆಲವು ಪರಿಹಾರಗಳನ್ನು ಅನುಸರಿಸಬೇಕು. ಇವುಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸಂಪತ್ತು, ಸಂತೋಷ, ಶಾಂತಿ ಹಾಗೂ ಸಮೃದ್ಧಿ ಉಂಟಾಗುತ್ತದೆ ಎಂದು ನಂಬಲಾಗಿದೆ. 2025 ರ ಹೊಸ ವರ್ಷದಲ್ಲಿ ಆರ್ಥಿಕ ಸಮೃದ್ಧಿ ಮತ್ತು ಸಂತೋಷಕ್ಕಾಗಿ ಯಾವ ವಾಸ್ತುಶಾಸ್ತ್ರದ ಪರಿಹಾಗಳನ್ನು ಅನುಸರಿಸಬೇಕು ಎಂದು ಪ್ರಸಿದ್ಧ ವಾಸ್ತು ತಜ್ಞರು ಮುಕುಲ್ ರಸ್ತೋಗಿ ಹೇಳಿದ್ದಾರೆ.
ಹೊಸ ವರ್ಷದಲ್ಲಿ ಲಕ್ಷ್ಮಿ ದೇವಿಯನ್ನು ಮನೆಗೆ ಆಹ್ವಾನಿಸುವುದು ಹೇಗೆ?
- ಪುರಾಣಗಳ ಪ್ರಕಾರ, ಲಕ್ಷ್ಮಿ ದೇವಿಯ ಆಶೀರ್ವಾದಕ್ಕಾಗಿ ಮನೆಯನ್ನು ಶುದ್ಧೀಕರಿಸುವುದು ಬಹಳ ಮುಖ್ಯ. ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದಲ್ಲದೆ ದೇವರ ಆಶೀರ್ವಾದವೂ ದೊರೆಯುತ್ತದೆ. ಮನೆಯಲ್ಲಿ ಎಲ್ಲಿಯೂ ಕೊಳಕು ಅಥವಾ ಧೂಳು ಇರಬಾರದು. ಕೊಠಡಿಗಳನ್ನು ಸ್ವಚ್ಛವಾಗಿಡುವುದು ಮುಖ್ಯ.
ಇದನ್ನೂ ಓದಿ: ಬೇರೆಯವರ ಚಪ್ಪಲಿ ಧರಿಸಿದರೆ ಅವರ ಬಡತನ ನಮಗೆ ಬರುತ್ತಾ? ಇದರಲ್ಲಿ ಎಷ್ಟು ಸತ್ಯಾಂಶವಿದೆ
- ಮನೆಯಲ್ಲಿನ ದೇವರ ಕೋಣೆಯನ್ನು ವಿಶೇಷವಾಗಿ ಸ್ವಚ್ಛಗೊಳಿಸಿ, ಕಾಲಕಾಲಕ್ಕೆ ಹೂವುಗಳನ್ನು ಇರಿಸಿ ಮತ್ತು ಪವಿತ್ರ ವಸ್ತುಗಳನ್ನು ಬಳಸುವುದು ಉತ್ತಮ. ಅರಿಶಿನ ಹಾಲು ಅಥವಾ ಅರಿಶಿನ ನೀರಿನಿಂದ ಮನೆಯನ್ನು ಸ್ವಚ್ಛಗೊಳಿಸುವುದು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ತರುತ್ತದೆ. ಹಳೆಯ, ಅನಗತ್ಯ ವಸ್ತುಗಳನ್ನು ಖಾಲಿ ಮಾಡಿಸುವ ಮೂಲಕ ಮನೆಯಲ್ಲಿ ಶುಚಿತ್ವವನ್ನು ಹೆಚ್ಚಿಸಬೇಕು.
- ಮನೆಯಲ್ಲಿ ಬೆಳಕು ಬರಲು ಕಿಟಕಿಗಳನ್ನು ತೆರೆದಿಡಿ. ಮನೆಯಲ್ಲಿ ಹಣಕ್ಕೆ ಸಂಬಂಧಿಸಿದ ವಿಶೇಷ ಸ್ಥಳಗಳಿದ್ದರೆ, ಅವುಗಳನ್ನು ಸ್ವಚ್ಛವಾಗಿಡುವುದು ಮುಖ್ಯ, ಅವುಗಳ ಗಾತ್ರ ಮತ್ತು ಸ್ಥಳವೂ ಮುಖ್ಯವಾಗಿದೆ. ಮನೆಯನ್ನು ಸುಗಂಧ ದ್ರವ್ಯಗಳಿಂದ ಅಲಂಕರಿಸುವುದು ದೇವತೆಗಳಿಗೂ ಪ್ರಿಯವಾದದ್ದು. ಈ ರೀತಿ ಮನೆಯನ್ನು ಶುದ್ಧೀಕರಿಸುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಬಹುದು.
- ಮನೆಯ ಪ್ರತಿಯೊಂದು ಗೋಡೆ (ಶೌಚಾಲಯ ಹೊರತುಪಡಿಸಿ)ಯ ಬಾಗಿಲಿನ ಮೇಲೆ ಅರಿಶಿನ ಮತ್ತು ಕುಂಕುಮದೊಂದಿಗೆ ಸ್ವಸ್ತಿಕ ಚಿಹ್ನೆಯನ್ನು ಬರೆಯಿರಿ. ಈ ರೀತಿ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸುವುದನ್ನು ತಡೆಯುವುದಲ್ಲದೆ ಜೀವನದಲ್ಲಿ ಆರ್ಥಿಕ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
- ಮನೆಯಲ್ಲಿರುವ ಎಲ್ಲಾ ದೇವರ ಚಿತ್ರಗಳನ್ನು ಸ್ವಚ್ಛಗೊಳಿಸಿ. ನಂತರ ಅವುಗಳನ್ನು ನಲ್ಲಿ ನೀರಿನಿಂದ ಶುದ್ಧೀಕರಿಸಿದ ಬಳಿಕ ಸುಂದರವಾಗಿ ಅಲಂಕರಿಸಿ. ಕರ್ಪೂರವನ್ನು ಬೆಳಗಿಸಿ ಮತ್ತು ಅದನ್ನು ಮನೆಯ ಎಲ್ಲಾ ಮೂಲೆಗಳಲ್ಲಿ ಮತ್ತು ಮುಖ್ಯ ಸ್ಥಳಗಳಲ್ಲಿ ತೋರಿಸಿ.
- ಮನೆಯ ಈಶಾನ್ಯದಲ್ಲಿ ಒಂದು ಬಟ್ಟಲಿನಲ್ಲಿ ಹಳದಿ ಸಾಸಿವೆ ಹಾಕಿ. ನೀಲಿ ಕುಂಡದಲ್ಲಿ ಉತ್ತರ ದಿಕ್ಕಿಗೆ ಸ್ನೇಕ್ ಪ್ಲಾಂಟ್ ಬೆಳೆಸಿ. ವಾಸ್ತು ಶಾಸ್ತ್ರದ ಪ್ರಕಾರ ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತಾರೆ.
- ಉತ್ತರ ದಿಕ್ಕಿನಲ್ಲಿ ವಾಟರ್ ಫಾಂಟೇನ್ ಇಡಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಸಂತೋಷ ಹೆಚ್ಚಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
- ಮನೆಯ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಕುಟುಂಬದ ಎಲ್ಲಾ ಸದಸ್ಯರು ಸಂತೋಷದಿಂದ ಒಟ್ಟಿಗೆ ಇರುವ ಫೋಟೋವನ್ನು ಇರಿಸಿ. ಇದು ಮನೆಯಲ್ಲಿನ ಜನರ ಜಗಳ ಮತ್ತು ಕಿರಿಕಿರಿಯನ್ನು ನಿವಾರಿಸುತ್ತದೆ.
ಇದನ್ನೂ ಓದಿ: ನಾವು ಗೊತ್ತಿಲ್ಲದೇ ಮಾಡುವ ಈ ಸಣ್ಣ ತಪ್ಪುಗಳೇ ನಕಾರಾತ್ಮಕ ಶಕ್ತಿ ಹೆಚ್ಚಲು ಕಾರಣ: ಪರಿಹಾರಕ್ಕೆಇಲ್ಲಿದೆ ವಾಸ್ತು ಸಲಹೆ
- ಮಲಗುವ ಕೋಣೆಯಲ್ಲಿ ಮುಖ್ಯ ಬಾಗಿಲಿನ ಮೇಲೆ ಮೂರು ನವಿಲು ಗರಿಗಳನ್ನು ಮತ್ತು ತಲೆಯ ಮೇಲೆ 11 ನವಿಲು ಗರಿಗಳನ್ನು ಇರಿಸಿ. ಮನೆಯಲ್ಲಿ ನವಿಲು ಗರಿಗಳನ್ನು ಇಡುವುದು ತುಂಬಾ ಶುಭ ಎಂದು ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರ ಹೇಳುತ್ತದೆ.
- ನವಿಲು ಗರಿಗಳು ಆರ್ಥಿಕ ಸಮೃದ್ಧಿ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಆಕರ್ಷಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತವೆ. ಮಂಗಳಕರ ಶಕ್ತಿಯನ್ನು ಆಕರ್ಷಿಸುವ ಮತ್ತು ಮನೆಯ ವಾತಾವರಣವನ್ನು ಶಾಂತಿಯುತವಾಗಿರಿಸುವ ಸಾಮರ್ಥ್ಯವನ್ನು ಹೊಂದಿವೆ. ಅಲ್ಲದೆ, ನವಿಲು ಗರಿಗಳು ಹಣಕಾಸಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ, ಉತ್ತಮ ಆರ್ಥಿಕ ಫಲಿತಾಂಶಗಳನ್ನು ತರುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಮನೆಯವರಿಗೂ ಮಾನಸಿಕ ನೆಮ್ಮದಿ ಮತ್ತು ಸಂತೋಷ ಸಿಗುತ್ತದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.