ನಿಮ್ಮ ಮಕ್ಕಳು ಜೀವನದಲ್ಲಿ ಯಶಸ್ವಿಯಾಗಬೇಕಾ; ಆರಂಭದಿಂದಲೇ ಈ 11 ಶಕ್ತಿಯುತ ಮಂತ್ರಗಳನ್ನು ಪಠಿಸುವಂತೆ ಮಾಡಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನಿಮ್ಮ ಮಕ್ಕಳು ಜೀವನದಲ್ಲಿ ಯಶಸ್ವಿಯಾಗಬೇಕಾ; ಆರಂಭದಿಂದಲೇ ಈ 11 ಶಕ್ತಿಯುತ ಮಂತ್ರಗಳನ್ನು ಪಠಿಸುವಂತೆ ಮಾಡಿ

ನಿಮ್ಮ ಮಕ್ಕಳು ಜೀವನದಲ್ಲಿ ಯಶಸ್ವಿಯಾಗಬೇಕಾ; ಆರಂಭದಿಂದಲೇ ಈ 11 ಶಕ್ತಿಯುತ ಮಂತ್ರಗಳನ್ನು ಪಠಿಸುವಂತೆ ಮಾಡಿ

ಮಕ್ಕಳು ಜೀವನದಲ್ಲಿ ಉನ್ನತ ಮಟ್ಟಕ್ಕೆ ಹೋಗಬೇಕು, ಯಶಸ್ಸು ಕಾಣಬೇಕೆಂದು ಪೋಷಕರು ಬಯಸುತ್ತಾರೆ. ಮಕ್ಕಳಲ್ಲಿ ಶ್ರದ್ಧೆ, ಬುದ್ಧಿ ಹೆಚ್ಚಾಗಲು ಅಧ್ಯಾತ್ಮಿಕ ಶಕ್ತಿಯು ಬೇಕಾಗುತ್ತದೆ. ಹೀಗಾಗಿ ತಂದೆ-ತಾಯಿ, ಮಕ್ಕಳಿಗೆ ಈ ಮಂತ್ರಗಳನ್ನು ಹೇಳಿಕೊಟ್ಟರೆ, ನಿತ್ಯ ಪಠಿಸುವಂತೆ ಮಾಡಿದರೆ ಅದ್ಭುತ ಫಲಗಳನ್ನು ಪಡೆಯಬಹುದು. ಮಂತ್ರಗಳು ಮತ್ತು ಅವುಗಳ ಮಹತ್ವವನ್ನು ಇಲ್ಲಿ ನೀಡಲಾಗಿದೆ.

ಜೀವನದಲ್ಲಿ ಯಶಸ್ಸಿಗಾಗಿ ಮಕ್ಕಳು ಪಠಿಸಲೇಬೇಕಾದ ಮಂತ್ರಗಳನ್ನು ಇಲ್ಲಿ ನೀಡಲಾಗಿದೆ
ಜೀವನದಲ್ಲಿ ಯಶಸ್ಸಿಗಾಗಿ ಮಕ್ಕಳು ಪಠಿಸಲೇಬೇಕಾದ ಮಂತ್ರಗಳನ್ನು ಇಲ್ಲಿ ನೀಡಲಾಗಿದೆ

ನಮ್ಮ ಮಕ್ಕಳು ವೈದ್ಯರು, ಇಂಜಿನಿಯರ್ ಗಳು, ಉದ್ಯಮಿಗಳು, ಕ್ರೀಡಾಪಟುಗಳು, ಐಎಎಸ್, ಐಪಿಎಲ್ ಹೀಗೆ ಉನ್ನತ ಸ್ಥಾನದಲ್ಲಿ ಇರಬೇಕೆಂದು ಪೋಷಕರು ಬಯಸುತ್ತಾರೆ. ಮಕ್ಕಳಲ್ಲಿ ಶ್ರದ್ಧೆ ಇದ್ದಾಗ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಇದಕ್ಕಾಗಿ ಅಧ್ಯಾತ್ಮಿಕದಲ್ಲೂ ಆಸಕ್ತಿಯನ್ನು ಹೊಂದಿರಬೇಕು. ದೊಡ್ಡ ಬದಲಾವಣೆಗಳನ್ನು ತರಬಹುದಾದ ಶಕ್ತಿಶಾಲಿ ಮಂತ್ರಗಳನ್ನು ಇಲ್ಲಿ ನೀಡಲಾಗಿದೆ. ಇವುಗಳನ್ನು ನಿತ್ಯ ಪಠಿಸುವುದರಿಂದ ಜ್ಞಾನ ಹೆಚ್ಚಾಗುವುದರ ಜೊತೆಗೆ ಓದಿನಲ್ಲಿ ಆಸಕ್ತಿ ಬೆಳೆಯುತ್ತದೆ.

  • ಓಂ ನಮಃ ಶಿವಾಯ

ಅಜ್ಞಾನ, ಋಣಾತ್ಮಕ ವಿಚಾರಗಳ ನಾಶಕ. ಅಂತಿಮ ಸತ್ಯವಾದ ಮಂಗಳಕರ ಶಿವನಿಗೆ ಕೃತಜ್ಞತೆ ಸಲ್ಲಿಸುತ್ತೇನೆ

  • ಓಂ ಗಣ ಗಣಪತಯೇ ನಮಃ

ಎಲ್ಲಾ ಅಡೆತಡೆಗಳನ್ನು ನಿವಾರಿಸುವಾತ ಮತ್ತು ಬುದ್ದಿವಂತಿಕೆ ಮತ್ತು ಯಶಸ್ಸನ್ನು ನೀಡುವ ಪರಮಾತ್ಮನಾದ ಗಣಪತಿಗೆ ನಮಸ್ಕರಿಸುತ್ತೇನೆ

  • ಓಂ ಹ್ರೀಂ ಘ್ರೀಂ ಸೂರ್ಯಾಯ ನಮಃ

ಜೀವನ ಮತ್ತು ಚೈತನ್ಯದ ಮೂಲವಾದ ಸೂರ್ಯ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ

  • ಓಂ ನಮೋ ಭಗವತೇ ವಾಸುದೇವಾಯ

ಮಂತ್ರ ಆಳವಾದ ಅರ್ಥ ಮತ್ತು ಮಹತ್ವವನ್ನು ಹೊಂದಿದೆ. ನಾನು ಭಗವಾನ್ ವಾಸುದೇವನಿಗೆ ನಮಸ್ಕರಿಸುತ್ತಾ ಅಹಂಕಾರವನ್ನು ಬಿಡುವುದು ಎಂಬ ಅರ್ಥವನ್ನು ಹೊಂದಿದೆ.

  • ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ, ಉರ್ವಾರುಕಮಿವ ಬಂಧನಾ, ಮೃತ್ಯೋ ಮುಕ್ಷೀಯ ಮಾಮೃತಾತ್

ಸರ್ವಶಕ್ತ ಮಹಾ ಮೃತ್ಯುಂಜಯ ಮಂತ್ರವು ಶಿವನ ಪ್ರಾರ್ಥನೆಯಾಗಿದೆ. ಆರೋಗ್ಯ, ದೀರ್ಘಾಯುಷ್ಯ, ಸಾವು ಮತ್ತು ಸಾವಿನ ಭಯದಿಂದ ಮುಕ್ತಿ ಮತ್ತು ಪರಮಾತ್ಮನ ಆಶೀರ್ವಾದವನ್ನು ಪಡೆಯಲು ಈ ಮಂತ್ರವನ್ನು ಪಠಿಸಲಾಗುತ್ತದೆ. ಭಯ ಪಡದಂತೆ ಧೈರ್ಯ ನೀಡುತ್ತದೆ. ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ.

  • ಓಂ ಭೂರ್ ಭುವಃ ಸ್ವಾಹಾ, ತತ್ಸವಿತುರ್ ವರೇಣ್ಯಂ, ಭರ್ಗೋ ದೇವಸ್ಯ ಧೀಮಹಿ, ಧಿಯೋ ಯೋ ನಃ ಪ್ರಚೋದಯಾತ್ ॥

ಇದು ಅತ್ಯಂತ ಶಕ್ತಿಶಾಲಿ ಗಾಯತ್ರಿ ಮಂತ್ರ. ಇದು ಪ್ರಬಲ ಸೂರ್ಯ ಭಗವಂತನ ಮಂತ್ರ. ಇದು ಬೌದ್ಧಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಓಂಕಾರದಿಂದ ಪ್ರಾರಂಭವಾಗುವ ಈ ಸ್ತೋತ್ರವು ಅವರ ಸುತ್ತಲಿನ ವಾತಾವರಣದಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ. ದಿನವಿಡೀ ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ.

  • ಸರಸ್ವತಿ ನಮಸ್ತುಭ್ಯಂ, ವರದೇ ಕಾಮ ರೂಪಿಣೀ ವಿದ್ಯಾರಂಭಂ ಕರಿಷ್ಯಾಮಿ, ಸಿದ್ಧಿರ್ಭವತು ಮೇ ಸದಾ

ಮಕ್ಕಳು ತಮ್ಮ ಓದಿನ ಸಮಯದಲ್ಲಿ ಪಠಿಸಬೇಕಾದ ಮಂತ್ರ ಇದಾಗಿದೆ. ಜ್ಞಾನ ಮತ್ತು ಬುದ್ಧಿವಂತಿಕೆಯ ದೇವತೆಯಾದ ಸರಸ್ವತಿ ದೇವಿಗೆ ನಮಸ್ಕಾರಗಳು ಎಂಬ ಅರ್ಥವನ್ನು ಈ ಮಂತ್ರ ನೀಡುತ್ತದೆ.

  • ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ, ಕರಮೂಲೇ ತು ಗೋವಿಂದಾ ಪ್ರಭಾತೇ ಕರದರ್ಶನಂ

ಈ ಮಂತ್ರವು ಅಂಗೈ ಮೇಲ್ಭಾಗದಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ ಮತ್ತು ಅಂಗೈ ಮಧ್ಯದಲ್ಲಿ ಸರಸ್ವತಿ ದೇವಿ ನೆಲೆಸಿದ್ದಾಳೆ ಎಂಬ ಅರ್ಥವನ್ನು ಕೊಡುತ್ತದೆ

  • ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ, ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ

ದಿನದ ಯಾವುದೇ ಸಮಯದಲ್ಲಿ ಪಠಿಸಬಹುದಾದ ಸರಳ ಮಂತ್ರ ಇದಾಗಿದೆ. ಇದು ಬಹಳ ಶಕ್ತಿಶಾಲಿ ಮಂತ್ರವಾಗಿದೆ. ವಿಷ್ಣು, ಕೃಷ್ಣ ಮತ್ತು ರಾಮನಿಗೆ ಸಂಬಂಧಿಸಿದ ದೈವಿಕ ಶಕ್ತಿಗಳನ್ನು ಆಹ್ವಾನಿಸುತ್ತದೆ. ಮಕ್ಕಳ ಆಧ್ಯಾತ್ಮಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ.

  • ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರವೇ ನಮಃ

ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಹಿರಿಯರು ಮತ್ತು ಶಿಕ್ಷಕರನ್ನು ಗೌರವಿಸುವುದನ್ನು ಕಲಿಸಬೇಕು. ಈ ಗುರು ಮಂತ್ರವು ಮಕ್ಕಳಿಗೆ ಶಿಕ್ಷಕರು ಮತ್ತು ಮಾರ್ಗದರ್ಶಕರು ಎಷ್ಟು ಮುಖ್ಯ ಎಂಬುದನ್ನು ತಿಳಿಸುತ್ತದೆ. ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಪಾಲಕರ ನಂತರ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಅವರು ಕೂಡಾ ದೇವರ ಸಮ ಎಂಬುದನ್ನು ತಿಳಿಸುತ್ತದೆ.

  • ಯಾ ದೇವಿ ಸರ್ವಭೂತೇಷು, ಮಾತೃರೂಪೇಣ ಸಂಸ್ಥಿತಾ । ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ಇದು ವಿದ್ಯೆಗೆ ಅಧಿದೇವತೆ ಸರಸ್ವತಿ ದೇವಿಗೆ ಸಮರ್ಪಿತವಾದ ಮಂತ್ರವಾಗಿದೆ. ಈ ಮಂತ್ರವು ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಹಾಯ ಮಾಡುತ್ತದೆ. ಸರಸ್ವತಿ ಮಂತ್ರವು ಮಕ್ಕಳಲ್ಲಿ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ಮಕ್ಕಳು ಸರಸ್ವತಿ ದೇವಿಯ ಅನುಗ್ರಹವನ್ನು ಪಡೆಯುತ್ತಾರೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.