ಗಲ್ಲ ತ್ರಿಕೋನಾಕಾರವಾಗಿ, ಮೂಗಿನ ಹೊಳ್ಳೆಗಳು ಅಗಲವಾದಿದ್ದರೆ ನಿಮ್ಮ ಭವಿಷ್ಯ ಹೇಗಿರುತ್ತೆ; ಆಸಕ್ತಿಕರ ಮಾಹಿತಿ ಇಲ್ಲಿದೆ
ಮನುಷ್ಯ ದೇಹದ ಬೇರೆ ಬೇರೆ ಭಾಗಗಳಿಂದ ಸ್ವಭಾವ, ವ್ಯಕ್ತಿತ್ವವನ್ನು ತಿಳಿಯಬಹುದು. ಗಲ್ಲ ತ್ರಿಕೋನಾಕಾರವಾಗಿ, ಮೂಗಿನ ಹೊಳ್ಳೆಗಳು ಅಗಲವಾದಿದ್ದರೆ ವ್ಯಕ್ತಿಯ ಸ್ವಭಾವ, ಗುಣ ಲಕ್ಷಣ ಹೇಗಿರುತ್ತೆ ಎಂಬುದನ್ನು ತಿಳಿಯೋಣ.

ಗುರು ಗ್ರಹವು ಉಸಿರಾಟಕ್ಕೆ ಸಂಬಂಧಪಟ್ಟ ಗ್ರಹವಾಗಿದೆ. ಆದ್ದರಿಂದ ಇದು ಮೂಗನ್ನು ಸಹ ಪ್ರತಿನಿಧಿಸುತ್ತದೆ. ಗಲ್ಲವು ಶನಿಗೆ ಸಂಬಂಧಿಸಿದಾಗಿದೆ. ಆದ್ದರಿಂದ ಗಲ್ಲದ ಆಕೃತಿಯಿಂದಲೂ ಒಬ್ಬ ವ್ಯಕ್ತಿಯ ಗುಣ ಧರ್ಮವನ್ನು ತಿಳಿಯಬಹುದಾಗಿದೆ. ಗಲ್ಲವು ತ್ರಿಕೋಣಾಕಾರವಾಗಿ ಮೂಗಿನ ಹೊಳ್ಳೆಗಳು ಅಗಲವಾಗಿದ್ದರೆ ಅವರಲ್ಲಿ ಕುತೂಹಲದ ಬುದ್ದಿ ಇರುತ್ತದೆ. ಇವರಿಗೆ ಜೀವನದಲ್ಲಿ ಹಣಕಾಸಿನ ತೊಂದರೆ ಕಂಡುಬಂದರೂ ಬುದ್ದಿವಂತಿಕೆಯಿಂದ ಪಾರಾಗುತ್ತಾರೆ. ಮನಸ್ಸಿನಲ್ಲಿ ಆತಂಕ ಇರುವುದಿಲ್ಲ. ಹೆಚ್ಚಿನ ಮಟ್ಟದಲ್ಲಿ ಹಣ ಸಂಪಾದನೆ ಮಾಡುವ ಚಾತುರ್ಯ ಇವರಿಗೆ ಇರುತ್ತದೆ. ಇವರ ಮನಸ್ಸಿನಲ್ಲಿ ಸ್ವಾರ್ಥದ ಭಾವನೆ ಇರುವುದಿಲ್ಲ ಆದರೆ ತಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ತಾವು ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ ಜನಸೇವೆ ಮಾಡುತ್ತಾರೆ. ಮಕ್ಕಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಹಣವನ್ನು ಖರ್ಚು ಮಾಡುತ್ತಾರೆ. ಜನಹಿತಕ್ಕಾಗಿ ಸಂಘ ಸಂಸ್ಥೆಗಳನ್ನು ಆರಂಭಿಸಿ ಯಶಸ್ಸನ್ನು ಗಳಿಸುತ್ತಾರೆ.
ಇವರಿಗೆ ಇಷ್ಟವಾಗುವ ಮನೆ ಮತ್ತು ವಾಹನಗಳನ್ನು ಕೊಳ್ಳುತ್ತಾರೆ. ಸಾಲಕ್ಕೆ ಹೆದರುವ ಕಾರಣ ಕಷ್ಟ ಸುಖವನ್ನು ಸಮಾನವಾಗಿ ಸ್ವೀಕರಿಸುತ್ತಾರೆ. ಹೆಚ್ಚಿನ ಆದಾಯವಿದ್ದರೂ ಸಹ ಅಲ್ಪ ಪ್ರಮಾಣದ ಸಾಲ ಇವರ ಬಳಿ ಇರುತ್ತದೆ. ತಾವು ಕಷ್ಟದಲ್ಲಿದ್ದರೂ ಆತ್ಮೀಯರಿಗೆ ಸಹಾಯ ಮಾಡುವರು. ಕುಟುಂಬದ ಹಿರಿಯರ ಹೆಸರಿನಲ್ಲಿ ಅನಾಥಾಶ್ರಮ ಮತ್ತ್ ಧಾರ್ಮಿಕ ಕೇಂದ್ರಗಳಿಗೆ ಹಣದ ಸಹಾಯ ಮಾಡುವರು. ದುಡುಕದೆ ಆಡುವ ಇವರ ಮಾತಿನಲ್ಲಿ ಸತ್ಯ ಧರ್ಮ ಇರುತ್ತದೆ. ಯಾರಿಗೂ ಹೆದರದೆ ನೇರ ಮತ್ತು ನಿಷ್ಠುರದ ಮಾತುಗಳನ್ನು ಆಡುತ್ತಾರೆ. ಉದ್ಯೋಗದಲ್ಲಿ ಯಾವುದೇ ಲೋಪವನ್ನು ಮಾಡುವುದಿಲ್ಲ. ಅದೃಷ್ಟದಿಂದ ಉದ್ಯೋಗದಲ್ಲಿ ಉನ್ನತ ಸ್ಥಾನ ಗಳಿಸುತ್ತಾರೆ. ಇವರಿಗೆ ವಿರೋಧಿಗಳ ತೊಂದರೆ ಇರುವುದಿಲ್ಲ. ಎಲ್ಲರ ಜೊತೆ ಸ್ನೇಹ ಬೆಳೆಸುವುದು ಇವರ ಹೆಗ್ಗಳಿಕೆ. ಆರೋಗ್ಯದಲ್ಲಿ ಯಾವುದೆ ತೊಂದರೆ ಇರುವುದಿಲ್ಲ. ಸ್ವಂತ ವ್ಯಾಪಾರ ವ್ಯವಹಾರವಿದ್ದಲ್ಲಿ ಉತ್ತಮ ಆದಾಯವನ್ನು ಗಳಿಸುತ್ತಾರೆ. ಬಾಳ ಸಂಗಾತಿಯನ್ನು ವಿಶ್ವಾಸ ಮತ್ತು ಗೌರವದಿಂದ ನಡೆಸಿಕೊಳ್ಳುವರು. ಮಕ್ಕಳಜೀವನವನ್ನು ರೂಪಿಸುವಲ್ಲಿ ಹೆಚ್ಚು ಪ್ರಯತ್ನ ಪಡುವರು.
ಮೂಗಿನ ಹೊಳ್ಳೆಗಳು ಅಗಲವಾಗಿದ್ದರೆ ನಿಮ್ಮ ಭವಿಷ್ಯ ಹೇಗಿರುತ್ತೆ
ಮೂಗಿನ ಹೊಳ್ಳೆಗಳು ಅಗಲವಾಗಿದ್ದು, ಗಲ್ಲವೂ ಮೃದುವಾಗಿದ್ದರೆ ಅವರ ಜೀವನದಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಸ್ವಂತ ಕೆಲಸ ಕಾರ್ಯಗಳು ಆತ್ಮೀಯರ ಸಹಾಯದಿಂದ ನೆರವೇರುತ್ತವೆ. ಇವರು ಭಾಗ್ಯಶಾಲಿಯಾಗಿ ಜೀವನ ನಡೆಸುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಇವರು ಸಮಾಜದ ನಾಯಕರಾಗಿ ಬಾಳುತ್ತಾರೆ. ಸುಖ ಸಂತೃಪ್ತಿಯ ಜೀವನವನ್ನು ನಡೆಸುತ್ತಾರೆ. ಬಾಲ್ಯದಲ್ಲಿ ಇವರಿಗೆ ನಾಯಕತ್ವದ ಗುಣವು ಇರುತ್ತದೆ. ಕಷ್ಟ ಪಟ್ಟು ದುಡಿಯುವವರನ್ನು ಗೌರವಿಸುತ್ತಾರೆ. ಅನಾವಶ್ಯಕವಾಗಿ ಸಮಯವನ್ನು ವ್ಯರ್ಥ ಮಾಡುವುದು ಇವರಿಗೆ ಇಷ್ಟವಾಗದ ವಿಚಾರ. ಸರಳವಾದ ಕೆಲಸ ಕಾರ್ಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇವರಿಗೆ ಶುಚಿಯಾದ ಮತ್ತು ರುಚಿಯಾದ ಆಹಾರ ಇಷ್ಟವೆನಿಸುತ್ತದೆ. ಸಣ್ಣಪುಟ್ಟ ವಿಚಾರಗಳಿಗೂ ಇವರು ಮಕ್ಕಳನ್ನು ಅವಲಂಬಿಸುತ್ತಾರೆ. ತಮ್ಮ ಬಿಡುವಿನ ಸಮಯದಲ್ಲಿಯೂ ಕೆಲಸ ಕಾರ್ಯದ ಬಗ್ಗೆ ಯೋಚಿಸುತ್ತಾರೆ. ಇವರಿಗೆ ಆಡಂಬರದ ಜೀವನ ಇಷ್ಟವಾಗುವುದಿಲ್ಲ. ಇವರ ದಾಂಪತ್ಯ ಜೀವನದಲ್ಲಿ ಅವಿಶ್ವಾಸಕ್ಕೆ ಸ್ಥಳವಿರುವುದಿಲ್ಲ.
ಎಲ್ಲರ ತಪ್ಪನ್ನು ಮರೆತು ಕುಟುಂಬದ ಸದಸ್ಯರನ್ನು ಬೆಂಬಲಿಸುತ್ತಾರೆ. ದೀರ್ಘ ಕಾಲದ ಪ್ರವಾಸಕ್ಕೆ ತೆರಳುವುದು ಇವರ ಒಂದು ಹವ್ಯಾಸವಾಗಿರುತ್ತದೆ. ಮನೆತನದ ಹಣದಲ್ಲಿ ಇವರ ಪಾಲಿಗೆ ಹೆಚ್ಚಿನ ಪಾಲು ದೊರೆಯುತ್ತದೆ. ಸೋದರ ಸೋದರಿಯ ಜೊತೆ ಉತ್ತಮ ಒಡನಾಟ ಇರುತ್ತದೆ. ಹಣಕಾಸಿನ ಮತ್ತು ಅಧಿಕಾರದ ಬಗ್ಗೆ ದುರಾಸೆ ಇರುವುದಿಲ್ಲ. ಬೇರೆಯವರಿಗೆ ದೊರೆಯ ಬೇಕಾದ ಅವಕಾಶಗಳನ್ನು ಬಯಸುವುದಿಲ್ಲ. ಅನಾವಶ್ಯಕವಾಗಿ ಚಿಂತೆ ಮಾಡುವುದಿಲ್ಲ. ವಾದ ವಿವಾದವೆಂದರೆ ಇವರಿಗೆ ಬೇಸರ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ತೆಗೆದುಕೊಳ್ಳುತ್ತಾರೆ. ಆದಾಯಕ್ಕೆ ತಕ್ಕಂತಹ ಖರ್ಚು ವೆಚ್ಚಗಳಿರುತ್ತದೆ. ಕುಟುಂಬದ ಹಿರಿಯರು ಒಪ್ಪಿದಂತೆ ತಮ್ಮ ತೀರ್ಮಾನವನ್ನು ಬದಲಿಸುವರು. ಸ್ತ್ರೀಯರಾಗಲಿ ಪುರುಷರಾಗಲಿ ತಮ್ಮ ಬಾಳ ಸಂಗಾತಿಯ ಮೇಲೆ ಅಧಿಕಾರ ಚಲಾಯಿಸುತ್ತಾರೆ.
ಬರಹ: ಹೆಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).