Bhagavad Gita: ಈ ವಿಷಯಗಳ ಮೇಲಿನ ಅಹಂಕಾರವೇ ನಾಶಕ್ಕೆ ಕಾರಣ: ಜ್ಞಾನದ ಬಗ್ಗೆ ಶ್ರೀಕೃಷ್ಣನ ಉಪದೇಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಈ ವಿಷಯಗಳ ಮೇಲಿನ ಅಹಂಕಾರವೇ ನಾಶಕ್ಕೆ ಕಾರಣ: ಜ್ಞಾನದ ಬಗ್ಗೆ ಶ್ರೀಕೃಷ್ಣನ ಉಪದೇಶ ಹೀಗಿದೆ

Bhagavad Gita: ಈ ವಿಷಯಗಳ ಮೇಲಿನ ಅಹಂಕಾರವೇ ನಾಶಕ್ಕೆ ಕಾರಣ: ಜ್ಞಾನದ ಬಗ್ಗೆ ಶ್ರೀಕೃಷ್ಣನ ಉಪದೇಶ ಹೀಗಿದೆ

Bhagavad Gita: ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಉದ್ದೇಶ, ಕೆಲಸ, ಭಕ್ತಿ, ಜ್ಞಾನ ಮತ್ತು ಯೋಗದ ಅಗತ್ಯವಿದೆ. ಮನುಷ್ಯನು ಸದಾ ಸಂತೋಷದಿಂದ ಬದುಕಲು ಕೆಲವು ವಿಷಯಗಳ ಬಗ್ಗೆ ಜಾಗರೂಕರಾಗಿರಬೇಕು. ಮನಸ್ಸಿನಲ್ಲಿ ಅಹಂಕಾರ ಮನೆಮಾಡಿದರೆ ಅದರಿಂದ ನಾಶವೇ ಆಗುತ್ತದೆ ಎಂಬುದು ಗೀತೆಯ ಸಾರಾಂಶವಾಗಿದೆ.

ಈ ವಿಷಯಗಳ ಮೇಲಿನ ಅಹಂಕಾರವೇ ನಾಶಕ್ಕೆ ಕಾರಣ: ಜ್ಞಾನದ ಬಗ್ಗೆ ಶ್ರೀಕೃಷ್ಣನ ಉಪದೇಶ ಹೀಗಿದೆ
ಈ ವಿಷಯಗಳ ಮೇಲಿನ ಅಹಂಕಾರವೇ ನಾಶಕ್ಕೆ ಕಾರಣ: ಜ್ಞಾನದ ಬಗ್ಗೆ ಶ್ರೀಕೃಷ್ಣನ ಉಪದೇಶ ಹೀಗಿದೆ (PC: HT File Photo)

ಸನಾತನ ಧರ್ಮದಲ್ಲಿ ಜೀವನ ನಡೆಸುವ ಮಾರ್ಗವನ್ನು ಹೇಳುವ ಅನೇಕ ಗ್ರಂಥಗಳಿವೆ. ಆ ಗ್ರಂಥಗಳಲ್ಲಿ ಭಗವದ್ಗೀತೆಯು ಬಹಳ ವಿಶೇಷವಾಗಿದೆ. ಗೀತೆಯನ್ನು ಓದುವ ವ್ಯಕ್ತಿ ಇತರರಿಗಿಂತ ತುಂಬಾ ಭಿನ್ನವಾಗಿರುತ್ತಾನೆ. ಇಂಥ ವ್ಯಕ್ತಿಗಳು ಭೌತಿಕ ಜಗತ್ತಿನ ಜಂಜಾಟಗಳಿಗೆ ಸಿಲುಕಿ ಹಾಕಿಕೊಳ್ಳುವುದಿಲ್ಲ. ಭಗವದ್ಗೀತೆ ಮನುಷ್ಯನನ್ನು ಮುನ್ನಡೆಯಲು ಪ್ರೇರೇಪಿಸುತ್ತದೆ. ತನ್ನ ಜೀವನದಲ್ಲಿ ಗೀತಾ ಬೋಧನೆಗಳನ್ನು ಅನುಸರಿಸುವವನು, ನಿಸ್ಸಂದೇಹವಾಗಿ ಒಂದು ದಿನ ತನ್ನ ಗಮ್ಯಸ್ಥಾನವನ್ನು ತಲುಪುತ್ತಾನೆ. ಗೀತಾ ಬೋಧನೆಗಳು ಮನುಷ್ಯನ ಧಾರ್ಮಿಕ, ನೈತಿಕ ಮತ್ತು ತಾತ್ವಿಕ ದೃಷ್ಟಿಕೋನವನ್ನು ಬಲಪಡಿಸುತ್ತದೆ. ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಉದ್ದೇಶಪೂರ್ವಕ ಕೆಲಸ, ಭಕ್ತಿ, ಜ್ಞಾನ ಮತ್ತು ಯೋಗದ ಅಗತ್ಯವಿದೆ ಎಂಬುದು ಗೀತೋಪದೇಶದ ಸಾರವಾಗಿದೆ. ಇದು ಮಾನಸಿಕ ಶಾಂತಿ ಮತ್ತು ಆತ್ಮಸಾಕ್ಷಾತ್ಕಾರದ ಕಡೆಗೆ ವ್ಯಕ್ತಿಯನ್ನು ಕರೆದುಕೊಂಡು ಹೋಗುತ್ತದೆ. ಉತ್ತಮ ಮಾರ್ಗದರ್ಶನ ನೀಡುತ್ತದೆ. ಇದೇ ರೀತಿ ಭಗವದ್ಗೀತೆಯಲ್ಲಿ ಕೆಲವು ವಿಷಯಗಳ ಬಗ್ಗೆ ಅಹಂಕಾರ ಪಡಬಾರದು. ಅದರಿಂದ ಜೀವನವೇ ನಾಶವಾಗುತ್ತದೆ ಎಂದು ಹೇಳಲಾಗಿದೆ.

1. ಒಬ್ಬ ವ್ಯಕ್ತಿಯು ತನ್ನ ಜ್ಞಾನದ ಬಗ್ಗೆ ಎಂದಿಗೂ ಅಹಂಕಾರವನ್ನು ಹೊಂದಿರಬಾರದು ಎಂದು ಶ್ರೀಕೃಷ್ಣನು ಗೀತೆಯಲ್ಲಿ ಹೇಳುತ್ತಾನೆ. ಅಹಂಕಾರದಿಂದ ಕಲಿತ ಜ್ಞಾನವು ಖಂಡಿತವಾಗಿಯೂ ಒಂದಲ್ಲಾ ಒಂದು ದಿನ ನಮ್ಮನ್ನು ಬಿಟ್ಟು ಹೋಗುತ್ತದೆ. ವಿನಯದಿಂದ ಸಂಪಾದಿಸಿದ ಜ್ಞಾನವು ವ್ಯಕ್ತಿಯ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿಯನ್ನು ಸಾಧಿಸಲು ಸಹಾಯಮಾಡುತ್ತದೆ. ಆ ಜ್ಞಾನವು ಎಂದೆಂದಿಗೂ ಅವನೊಂದಿಗೆ ಇರುತ್ತದೆ.

2. ಭಗವದ್ಗೀತೆಯ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಸೌಂದರ್ಯದ ಬಗ್ಗೆ ಎಂದಿಗೂ ಅಹಂಕಾರ ಪಡಬಾರದು. ಏಕೆಂದರೆ ದೇಹವು ಕಾಲಾನಂತರದಲ್ಲಿ ವಿರೂಪಗೊಳ್ಳುತ್ತದೆ ಮತ್ತು ಕ್ಷೀಣಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶ್ರೀಕೃಷ್ಣ ಪರಮಾತ್ಮನು ಹೇಳುತ್ತಾನೆ, ನಾವು ನಮ್ಮ ದೇಹ ಮತ್ತು ಬಾಹ್ಯ ಸೌಂದರ್ಯದ ಬಗ್ಗೆ ಅಹಂಕಾರ ತೋರಬಾರದು. ಮನುಷ್ಯನು ತನ್ನ ಆತ್ಮವನ್ನು ಶುದ್ದೀಕರಿಸಲು ಪ್ರಯತ್ನಿಸಬೇಕು. ಆತ್ಮ ಅಂದರೆ ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಸುಂದರವಾಗಿ ಕಾಣುತ್ತದೆ.

3. ಕುಟುಂಬಕ್ಕಿಂತ ಮನುಷ್ಯ ದೊಡ್ಡವನಲ್ಲ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ನಾವೆಲ್ಲರೂ ಒಂದೇ ಕುಟುಂಬದವರು. ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಉನ್ನತ ಜಾತಿ ಎಂದು ಕರೆಯಲ್ಪಡುವಲ್ಲಿ ಜನಿಸಿದರೂ, ಅವನು ಅದರ ಬಗ್ಗೆ ಹೆಮ್ಮೆಪಡಬಾರದು. ಉನ್ನತ ಜಾತಿಯಲ್ಲಿ ಜನಿಸಿದ ವ್ಯಕ್ತಿಗೆ ಇತರರ ಬಗ್ಗೆ ಅಹಂಕಾರದ ಭಾವನೆ ಇದ್ದರೆ, ತಪ್ಪು ದಾರಿಯಲ್ಲಿ ಹೋಗುವ ಸಾಧ್ಯತೆಗಳು ಹೆಚ್ಚಾಗುತ್ತದೆ.

4. ಮನುಷ್ಯನು ತನ್ನ ಸಂಪತ್ತಿನ ಬಗ್ಗೆ ಎಂದಿಗೂ ಅಹಂಕಾರಪಡಬಾರದು ಎಂದು ಶ್ರೀಕೃಷ್ಣ ಹೇಳುತ್ತಾನೆ. ಏಕೆಂದರೆ ಸಂಪತ್ತು ಇಂದು ಇರುತ್ತದ, ನಾಳೆ ಇರುವುದಿಲ್ಲ. ಆದ್ದರಿಂದ ಹಣದ ಬಗ್ಗೆ ಮನಸ್ಸಿನಲ್ಲಿ ಅಹಂಕಾರದ ಭಾವನೆ ಇರಬಾರದು. ಏಕೆಂದರೆ ಹಣದ ಅಹಂಕಾರವು ಜೀವನದಲ್ಲಿ ಎಂದಿಗೂ ಸಂತೋಷದಿಂದಿರಲು ಬಿಡುವುದಿಲ್ಲ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.