Madhva Navami 2025: ಇಂದು ಮಧ್ವಾಚಾರ್ಯರ ಸ್ಮರಣೆಯ ಮಧ್ವ ನವಮಿ; ಮಹತ್ವ ಮತ್ತು ಆಚರಣೆಯ ಬಗ್ಗೆ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Madhva Navami 2025: ಇಂದು ಮಧ್ವಾಚಾರ್ಯರ ಸ್ಮರಣೆಯ ಮಧ್ವ ನವಮಿ; ಮಹತ್ವ ಮತ್ತು ಆಚರಣೆಯ ಬಗ್ಗೆ ತಿಳಿಯಿರಿ

Madhva Navami 2025: ಇಂದು ಮಧ್ವಾಚಾರ್ಯರ ಸ್ಮರಣೆಯ ಮಧ್ವ ನವಮಿ; ಮಹತ್ವ ಮತ್ತು ಆಚರಣೆಯ ಬಗ್ಗೆ ತಿಳಿಯಿರಿ

ಮಧ್ವ ನವಮಿಯಂದು ತತ್ವಜ್ಞಾನಿ ಮತ್ತು ಆಚಾರ್ಯ ಮಧ್ವಾಚಾರ್ಯರ ಸ್ಮರಣೆಯನ್ನು ಮಾಡಲಾಗುತ್ತದೆ. ಇವರ ಗಮನಾರ್ಹ ಜೀವನ ಮತ್ತು ಅಧ್ಯಾತ್ಮ ಪರಂಪರೆಯನ್ನು ಗೌರವಿಸಲಾಗುತ್ತದೆ. ಮಧ್ವ ನವಮಿಯ ಮಹತ್ವ ಮತ್ತು ಆಚರಣೆಯನ್ನು ತಿಳಿಯೋಣ.

Madhva Navami 2025: ಮಧ್ವಾಚಾರ್ಯರ ಸ್ಮರಣೆಯ ಅಂಗವಾಗಿ ಮಧ್ವ ನವಮಿಯನ್ನು ಆಚರಿಸಲಾಗುತ್ತದೆ. ಮಹತ್ವ ಮತ್ತು ಆಚರಣೆಯ ಬಗ್ಗೆ ತಿಳಿಯೋಣ.
Madhva Navami 2025: ಮಧ್ವಾಚಾರ್ಯರ ಸ್ಮರಣೆಯ ಅಂಗವಾಗಿ ಮಧ್ವ ನವಮಿಯನ್ನು ಆಚರಿಸಲಾಗುತ್ತದೆ. ಮಹತ್ವ ಮತ್ತು ಆಚರಣೆಯ ಬಗ್ಗೆ ತಿಳಿಯೋಣ.

Madhva Navami 2025: ಇಂದು (ಫೆಬ್ರವರಿ 6, ಗುರುವಾರ) ಮಧ್ವ ನವಮಿ. ದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿದ ಮಧ್ವಾಚಾರ್ಯರ ನೆನಪಿನ ಅಂಗವಾಗಿ ಮಧ್ವ ನಮವಿಯನ್ನು ಆಚರಿಸಲಾಗುತ್ತದೆ. ಇದು ಗುರುಗಳು ಬದರಿಕಾಶ್ರಮವನ್ನು ಪ್ರವೇಶಿಸಿದ ದಿನವಾಗಿದ್ದು ಈ ಕಾರಣದಿಂದ ಈ ದಿನವನ್ನು ಮಧ್ವ ನವಮಿ ಅಂತ ಕರೆಯಲಾಗುತ್ತದೆ.

ಅಧ್ಯಾತ್ಮಿಕ ಗುರುಗಳಾಗಿದ್ದ ಮಧ್ವಾಚಾರ್ಯರು 1238 ರಲ್ಲಿ ವಿಜಯ ದಶಮಿಯಂದು ಕರ್ನಾಟಕ ಕರಾವಳಿ ಭಾಗದ ಉಡುಪಿ ಜಿಲ್ಲೆಯ ಪಾಜಕ ಎಂಬಲ್ಲಿ ಒಂದು ಸಣ್ಣ ಕುಟೀರದಲ್ಲಿ ಜನಿಸಿದರು. ಮಧ್ವಾಚಾರ್ಯರ ತಂದೆ ಮಧ್ಯಗೇಹ ಭಟ್ಟ ಮತ್ತು ತಾಯಿ ವೇದವತಿ. ಇವರ ಮೂಲ ಹೆಸರು ವಾಸುದೇವ. ಇವರ ಗುರುಗಳಾದ ಅಚ್ಯುತ ಪ್ರಜ್ಞರು ಸನ್ಯಾಸವನ್ನು ನೀಡಿ ಪೂರ್ಣಪ್ರಜ್ಞರೆಂಬ ಹೆಸರು ನೀಡುತ್ತಾರೆ. ಮಧ್ವಾಚಾರ್ಯರು 1317 ರಲ್ಲಿ 79ನೇ ವಯಸ್ಸಿನಲ್ಲಿ ಬದರಿ ಆಶ್ರಮಕ್ಕೆ ನಿರ್ಗಮಿಸಲು ನಿಗದಿಯಾದ ದಿನ, ಮಧ್ವ ನಮವಿ ಅಥವಾ ಮಧ್ವ ಆಚಾರ್ಯ ಕಣ್ಮರೆ ದಿನ ಎಂದು ಕರೆಯಲ್ಪಡುವ ಈ ದಿನವು ಮಾಘ ಮಾಸದ ಶುಕ್ಲ ಪಕ್ಷದ ನಮವಿ ತಿಥಿಯಂದು ಬರುತ್ತದೆ. ಭಕ್ತರು ಮಧ್ವಾಚಾರ್ಯರ ಗಮನಾರ್ಹ ಜೀವನ ಮತ್ತು ಅಧ್ಯಾತ್ಮಿಕ ಪರಂಪರೆಯನ್ನು ಗೌರಿವಿಸಲು ಈ ದಿನವನ್ನು ಆಚಿರಸುತ್ತಾರೆ.

ಮಧ್ವ ಮನವಿ 2025 ದಿನಾಂಕ ಮತ್ತು ಸಮಯ

ಮಧ್ವ ನವಮಿ 2025: ಫೆಬ್ರವರಿ 6, ಗುರುವಾರ

ನವಮಿ ತಿಥಿ ಆರಂಭ: 2025ರ ಫೆಬ್ರವರಿ 6ರ ಬೆಳಗ್ಗೆ 12.35

ನವಮಿ ತಿಥಿ ಕೊನೆಯುವ ಸಮಯ: 2025ರ ಫೆಬ್ರವರಿ 6ರ ರಾತ್ರಿ 10.53

ಮಧ್ವ ನವಮಿ ಆಚರಣೆ

  • ಈ ದಿನ ಮುಂಜಾನೆ ಎದ್ದು ಪವಿತ್ರ ಸ್ನಾನ ಮಾಡಬೇಕು
  • ನಂತರ ನೈವೇದ್ಯಗಳ ಮೂಲಕ ಮಧ್ವಾಚಾರ್ಯರಿಗೆ ವಿಶೇಷ ಪೂಜೆ
  • ಭಗವದ್ಗೀತೆ, ಉಪನಿಷತ್ತುಗಳಂತಹ ಪವಿತ್ರ ಗ್ರಂಥಗಳ ಪಠಣ ಮಾಡಬೇಕು
  • ಸತ್ಸಂಗಗಳಲ್ಲೂ ಭಾಗವಹಿಸುವುದು ಒಳ್ಳೆಯದು
  • ಅಧ್ಯಾತ್ಮಿಕ ಚರ್ಚೆಗಳು ಮತ್ತು ಚಿಂತನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು

ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರಂತೆ ಶ್ರೀ ಮದ್ವಾಚಾರ್ಯರು ಸಹ ನಮ್ಮ ದೇಶ ಕಂಡ ಪ್ರಮುಖ ತತ್ವಜ್ಞಾನಿಗಳಾಗಿದ್ದಾರೆ. ಇವರು ಆಂಜನೇಯ ಸ್ವಾಮಿ ಮತ್ತು ಭೀಮನಂತೆ ವಾಯುದೇವರ 3ನೇ ಅವತಾರವೆಂದು ಧರ್ಮ ಗ್ರಂಥಗಳಿಂದ ತಿಳಿದು ಬರುತ್ತದೆ. ಇವರು ದ್ವೈತವಾದದ ತತ್ತ್ವಶಾಸ್ತ್ರವನ್ನು ಪ್ರತಿಪಾದಿಸುತ್ತಾರೆ. ತಮ್ಮ ಸಾಧನೆಗೆ ತಕ್ಕಂತೆ ಜೀವಿಗಳು ಮೋಕ್ಷ ಪಡೆಯುತ್ತವೆ. ಮೋಕ್ಷ ಪಡೆಯುವ ಅವಕಾಶ ಎಲ್ಲರಿಗೂ ಇದೆ, ಆದರೆ ಮೋಕ್ಷ ಎನ್ನುವುದು ಒಂದೇ ಅಲ್ಲ. ಆ ಜೀವ ಎಲ್ಲಿ ಜನ್ಮ ತಳೆಯುತ್ತದೆ ಎನ್ನುವುದು (ಜಾತಿ, ಧರ್ಮ ಇತ್ಯಾದಿ) ಸಾಧನೆಗೆ ಮುಖ್ಯ ಆಗುವುದಿಲ್ಲ. ಮೋಕ್ಷಕ್ಕೆ ಹಲವು ಜನ್ಮಗಳ ಸಾಧನೆ ಬೇಕಾಗುತ್ತದೆ. ಕರ್ನಾಟಕದಲ್ಲಿ ದಾಸ ಸಾಹಿತ್ಯ ಪ್ರವರ್ಧಮಾನಕ್ಕೆ ಬರಲು ಮಧ್ವಾಚಾರ್ಯರ ಆಧ್ಯಾತ್ಮ ಪ್ರತಿಪಾದನೆಗಳು ಮುಖ್ಯ ಕಾರಣ. ಇದರಿಂದ ನಮ್ಮ ಕರ್ನಾಟಕದಲ್ಲಿ ಭಾಗವತ ಸಂಪ್ರದಾಯವು ಆರಂಭವಾಗುತ್ತದೆ. ಉಡುಪಿಯ ಶ್ರೀ ಕೃಷ್ಣ ಮಠಕ್ಕೂ ಶ್ರೀಮದ್ವಾಚಾರ್ಯರಿಗೂ ಅವಿನಾಭಾವ ಸಂಬಂಧವಿದೆ.

ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಸ್ಥಾಪಿಸಿದವರು ಎಂದು ಹೇಳಲಾಗುತ್ತದೆ. ಆ ಕೃಷ್ಣನ ವಿಗ್ರಹವನ್ನು ಹೇಗೆ ಪಡೆದರು ಎಂಬುದಕ್ಕೆ ಒಂದು ಸ್ವಾರಸ್ಯಕರ ಕಥೆಯಿದೆ. ಒಮ್ಮೆ ಗುರುಗಳು ಗೋಪಿ ಚಂದನದ ದೊಡ್ಡ ಉಂಡೆಯನ್ನು ತಯಾರಿಸಿ ಉಡುಪಿಗೆ ಹೊರಡಲು ಸಿದ್ದರಾಗುತ್ತಾರೆ. ಆದರೆ ಸಮುದ್ರ ತೀರದ ಬಳಿ ಉಂಡೆಯು ಎರಡು ಭಾಗವಾಗಿ ಒಡೆಯುತ್ತದೆ. ಇದರ ಫಲವಾಗಿ ಕಡಲ ತೀರದಲ್ಲಿನ ಒಳಬಾಂಡೇಶ್ವರ ದೇವಸ್ಥಾನದಲ್ಲಿ ಬಾಲಕೃಷ್ಣ ಮತ್ತು ಬಲರಾಮನ ಪ್ರತಿಷ್ಠಾಪನೆ ಮಾಡುತ್ತಾರೆ. ಆನಂತರ ಈ ವಿಗ್ರಹಗಳನ್ನು ಉಡುಪಿಯ ಮಠದಲ್ಲಿ ಸ್ಥಾಪಿಸುತ್ತಾರೆ. ಶ್ರೀ ಮಧ್ವಾಚಾರ್ಯರು ದೇವಾಲಯದ ಸುತ್ತಲೂ ಅಷ್ಟಮಠಗಳನ್ನು ಸ್ಥಾಪಿಸುತ್ತಾರೆ. ಪ್ರತಿಯೊಂದು ಮಠಗಳಿಗೂ ಅವರೇ ಸನ್ಯಾಸಿಗಳನ್ನು ನೇಮಕ ಮಾಡುತ್ತಾರೆ. ಮಧ್ವಾಚಾರ್ಯರ ಸ್ಮರಣಾರ್ಥ ಇಂದು (ಫೆಬ್ರವರಿ 6, ಗುರುವಾರ) ಶ್ರದ್ಧಾ ಭಕ್ತಿಯಿಂದ ಮಧ್ವ ನಮವಿಯನ್ನು ಆಚರಿಸಲಾಗುತ್ತಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.