Mercury Rahu Conjunction: ಮೀನ ರಾಶಿಯಲ್ಲಿ ರಾಹು–ಬುಧ ಸಂಯೋಗ; ಈ 3 ರಾಶಿಯವರಿಗೆ ಎಲ್ಲಾ ವಿಚಾರಗಳಲ್ಲೂ ಒಳಿತಾಗುವ ಕಾಲ
ಸದ್ಯದಲ್ಲೇ ಬುಧನು ಮೀನ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ರಾಹು ಈಗಾಗಲೇ ಮೀನ ರಾಶಿಯಲ್ಲಿದ್ದು ಈ 2 ಗ್ರಹಗಳ ಸಂಯೋಗದಿಂದ ಕೆಲವು ರಾಶಿಯವರಿಗೆ ಒಳಿತಾಗಲಿದೆ.

ವೈದಿಕ ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಬುದ್ಧಿಶಕ್ತಿ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗುತ್ತದೆ. ಫೆಬ್ರವರಿ 27 ರಂದು ಬುಧನು ಮೀನ ರಾಶಿಗೆ ಪ್ರವೇಶಿಸುತ್ತಾನೆ. ಮೇ 7 ರವರೆಗೆ ಬುಧನು ಮೀನ ರಾಶಿಯಲ್ಲಿ ಇರುತ್ತಾನೆ. ಈಗಾಗಲೇ ರಾಹು ಮೀನು ರಾಶಿಯಲ್ಲಿದ್ದು ಈ 2 ಗ್ರಹಗಳ ಸಂಯೋಜನೆ ಆಗಲಿದೆ. ಅಂದರೆ ಮೀನ ರಾಶಿಯಲ್ಲಿ ಬುಧ ಮತ್ತು ರಾಹು ಸಂಧಿಸಲಿದ್ದಾರೆ.
ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಬುಧ ಮತ್ತು ರಾಹುವಿನ ಸಂಯೋಜನೆಯು ಕೆಲವು ರಾಶಿಯವರಿಗೆ ತುಂಬಾ ಶುಭ ಮತ್ತು ಪ್ರಯೋಜನಕಾರಿಯಾಗಿದೆ. ಈ ರಾಶಿಯವರು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಅದೃಷ್ಟ ಇವರ ಕಡೆಗೆ ತಿರುಗುತ್ತದೆ.
ವೃಷಭ ರಾಶಿ
ಬುಧ ಮತ್ತು ರಾಹುವಿನ ಸಂಯೋಜನೆಯು ವೃಷಭ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಕೆಲಸದಲ್ಲಿನ ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ. ಉದ್ಯೋಗಗಳಲ್ಲಿ ಪ್ರಗತಿ ಕಂಡುಬರಲಿದೆ. ವ್ಯವಹಾರದಲ್ಲಿ ಯಶಸ್ವಿಯಾಗುತ್ತೀರಿ. ಸಕಾರಾತ್ಮಕ ಶಕ್ತಿ ಹರಡುತ್ತದೆ. ಏನು ಬೇಕೋ ಅದು ಸಿಗುತ್ತದೆ. ಅದೃಷ್ಟವಶಾತ್, ಕೆಲವು ಕೆಲಸಗಳು ಆಗುತ್ತವೆ. ಪ್ರಯಾಣದಲ್ಲಿ ಲಾಭ ಉಂಟಾಗಲಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಬುಧ ಮತ್ತು ರಾಹುವಿನ ಸಂಯೋಜನೆಯು ಅನುಕೂಲಕರವಾಗಿದೆ. ಈ ಎರಡು ಗ್ರಹಗಳು ನಿಮ್ಮ ಹಣ ಮತ್ತು ಸಂಪತ್ತಿನ ಮನೆಯಲ್ಲಿ ಒಟ್ಟಿಗೆ ಬರುತ್ತವೆ, ಇದು ನಿಮಗೆ ಅನಿರೀಕ್ಷಿತವಾಗಿ ಸಂಪತ್ತನ್ನು ಗಳಿಸುವ ಅವಕಾಶವನ್ನು ನೀಡುತ್ತದೆ. ನೀವು ನಿಮ್ಮ ಮಾತುಗಳಿಂದ ಜನರನ್ನು ನಿಮ್ಮತ್ತ ಆಕರ್ಷಿಸುತ್ತೀರಿ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಪ್ರಗತಿ ಸಾಧ್ಯ. ನಿಮಗೆ ಬರಬೇಕಿರುವ ಬಾಕಿ ಹಣವನ್ನು ಮರುಪಡೆಯಬಹುದು.
ಮಿಥುನ ರಾಶಿ
ಸ್ಥಗಿತಗೊಂಡ ಕೆಲಸ ಮುಂದುವರಿಯುತ್ತದೆ. ವಿದೇಶ ಪ್ರಯಾಣ ಅನುಕೂಲಕರವಾಗಲಿದೆ. ನೀವು ನಿಮ್ಮ ಉದ್ಯೋಗದಲ್ಲಿ ಬದಲಾವಣೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಈ ಸಮಯ ಅನುಕೂಲಕರವಾಗಿರುತ್ತದೆ. ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ಶುಭ ಕಾರ್ಯಗಳು ಹೆಚ್ಚಾಗುತ್ತವೆ. ಅದೃಷ್ಟ ನಿಮ್ಮ ಪರವಾಗಿರುತ್ತದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯಲಿದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
