ಕುಜ ದೋಷದ ಬಗ್ಗೆ ಜನರಲ್ಲಿ ಏನೆಲ್ಲಾ ತಪ್ಪು ಕಲ್ಪನೆಗಳಿವೆ; ಜನ್ಮ ಕುಂಡಲಿಯಲ್ಲಿಯೇ ಕುಜದೋಷಕ್ಕೆ ಪರಿಹಾರವಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕುಜ ದೋಷದ ಬಗ್ಗೆ ಜನರಲ್ಲಿ ಏನೆಲ್ಲಾ ತಪ್ಪು ಕಲ್ಪನೆಗಳಿವೆ; ಜನ್ಮ ಕುಂಡಲಿಯಲ್ಲಿಯೇ ಕುಜದೋಷಕ್ಕೆ ಪರಿಹಾರವಿದೆ

ಕುಜ ದೋಷದ ಬಗ್ಗೆ ಜನರಲ್ಲಿ ಏನೆಲ್ಲಾ ತಪ್ಪು ಕಲ್ಪನೆಗಳಿವೆ; ಜನ್ಮ ಕುಂಡಲಿಯಲ್ಲಿಯೇ ಕುಜದೋಷಕ್ಕೆ ಪರಿಹಾರವಿದೆ

ಕುಜ ದೋಷದ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆಗಳೇನು, ಜನ್ಮ ಕುಂಡಲಿಯಲ್ಲಿಯೇ ಕುಜ ದೋಷಕ್ಕೆ ಪರಿಹಾರಗಳಿವೆ ಎಂದು ಜ್ಯೋತಿಷಿ ಎಸ್ ಸತೀಶ್ ಅವರು ವಿವರಿಸಿದ್ದಾರೆ. ಯಾವ ನಕ್ಷತ್ರದಲ್ಲಿ ಜನಿಸಿದವರಿಗೆ ದೋಷಗಳು ಇರುವುದಿಲ್ಲ ಹಾಗೂ ಪರಿಹಾರಗಳ ಬಗ್ಗೆ ತಿಳಿಯೋಣ.

ಕುಜ ದೋಷದ ಬಗ್ಗೆ ಜನರಲ್ಲಿ ಏನೆಲ್ಲಾ ತಪ್ಪು ಕಲ್ಪನೆಗಳಿವೆ ಹಾಗೂ ಜನ್ಮ ಕುಂಡಲಿಯಲ್ಲಿ ಕುಜ ದೋಷಕ್ಕೆ ಪರಿಹಾರವಿದೆ
ಕುಜ ದೋಷದ ಬಗ್ಗೆ ಜನರಲ್ಲಿ ಏನೆಲ್ಲಾ ತಪ್ಪು ಕಲ್ಪನೆಗಳಿವೆ ಹಾಗೂ ಜನ್ಮ ಕುಂಡಲಿಯಲ್ಲಿ ಕುಜ ದೋಷಕ್ಕೆ ಪರಿಹಾರವಿದೆ

ಕುಜದೋಷದ ಕಾರಣ ಉತ್ತಮ ಸಾಲಾವಳಿ ಇರುವ ವಿವಾಹಗಳು ಇಂದಿಗೂ ನಡೆಯದೆ ಹೋಗುತ್ತಿವೆ. ಆದರೆ ಕುಜದೋಷ ಇರುವ ಕುಂಡಲಿಯಲ್ಲಿ ಪರಿಹಾರವೂ ಇರುತ್ತದೆ. ಕುಜನು ಕೇವಲ ಪತಿಯನ್ನು ಸೂಚಿಸುವ ಗ್ರಹವಾಗಿಲ್ಲ. ಕುಜನಿಂದ ಭೂಮಿಯ ಬಗ್ಗೆ ತಿಳಿಯಬಹುದು. ಕೊನೆಯ ಸೋದರನ ಬಗ್ಗೆಯೂ ತಿಳಿಯಬಹುದು. ಒಂದು ಕುಟುಂಬದಲ್ಲಿ ಅಥವಾ ಬಂಧು ಬಳಗದಲ್ಲಿ ಇಲ್ಲವೆ ನೆರೆ ಹೊರೆಯವರ ಜೊತೆ ಉಂಟಾಗಬಹುದಾದ ವಾದ ವಿವಾದ ಮತ್ತು ಮನಸ್ತಾಪಗಳನ್ನು ಸಹ ಕುಜನಿಂದ ತಿಳಿಯಬಹುದು. ಕುಟುಂಬದಲ್ಲಿ ಉಂಟಾಗಬಹುದಾದ ಬೆಂಕಿ ಅಥವಾ ಲೋಹದ ವಸ್ತುವಿನಿಂದಾಗುವ ಅವಘಡಗಳನ್ನು ಸಹ ಕುಜನಿಂದ ತಿಳಿಯಬಹುದು. ಆದ್ದರಿಂದ ಕೇವಲ ಕುಜದೋಷದ ಕಾರಣ ವಿವಾಹಕಾರ್ಯದಲ್ಲಿ ತೊಂದರೆ ಉಂಟಾಗಬಾರದು. ಸಮಾಜದ ಒಂದು ದುರಂತ ಎಂದರೆ “ ಕುಜದೋಷದ ವಿಚಾರ “ವನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದು. ಕುಜದೋಷ ಇದ್ದಲ್ಲಿ ವರ ಅಥವಾ ವಧುವಿನ ಮರಣವಾಗುತ್ತದೆ ಎಂದು ತಪ್ಪಾಗಿ ಕಲ್ಪಿಸಿಕೊಂಡಿದ್ದೇವೆ.

  • ಜನ್ಮ ಕುಂಡಲಿಯಲ್ಲಿಯೇ ಕುಜದೋಷಕ್ಕೆ ಪರಿಹಾರವೂ ಇರುತ್ತದೆ. ಆದ್ದರಿಂದ ಪ್ರತಿಯೊಂದು ಜಾತಕಕ್ಕೂ ಕುಜದೋಷವು ಮುಖ್ಯವಾಗುವುದಿಲ್ಲ. ಕುಜದೋಷವನ್ನು ನಿರ್ಧರಿಸಲು ವಧು ಅಥವಾ ವರನ ನಕ್ಷತ್ರಗಳು ಹೆಚ್ಚಿನ ಪ್ರಾಮುಖ್ಯವನ್ನು ಪಡೆಯುತ್ತದೆ.
  • ವಧು ವರರು ಅಶ್ವಿನಿ ನಕ್ಷತ್ರದಲ್ಲಿ ಜನಿಸಿದ್ದರೆ ಅವರದು ಮೇಷರಾಶಿ ಆಗುತ್ತದೆ. ಅಶ್ವಿನಿ ನಕ್ಷತ್ರದ ನಾಲ್ಕೂ ಪಾದಗಳೂ ಮೇಷರಾಶಿಗೆ ಸೇರುತ್ತವೆ. ಮೇಷವು ಕುಜನಿಗೆ ಸ್ವಕ್ಷೇತ್ರವಾಗುತ್ತದೆ. ಆದ್ದರಿಂದ ಮೇಷರಾಶಿಯಲ್ಲಿ ಅಶ್ವಿನಿ ನಕ್ಷತ್ರದಲ್ಲಿ ಜನಿಸಿರುವವರಿಗೆ ಕುಜದೋಷದ ತೊಂದರೆ ಇರದು. ಆದರೆ ಭರಣಿ ನಕ್ಷತ್ರದ ನಾಲ್ಕೂ ಪಾದಗಳು ಮತ್ತು ಕೃತ್ತಿಕ ನಕ್ಷತ್ರದ ಮೊದಲನೆಯ ಪಾದವು ಮೇಷರಾಶಿಯಲ್ಲಿ ಜನಸಿದರೂ ಅವರಿಗೆ ಭಾಗಶಃ ಕುಜದೋಷವಿರುತ್ತದೆ.
  • ಪುರಾತನ ಗ್ರಂಥಗಳ ಅನ್ವಯ ಮೃಗಶಿರ ನಕ್ಷತ್ರವನ್ನು ಮಹಾನಕ್ಷತ್ರಗಳ ಗುಂಪಿಗೆ ಸೇರಿಸಲಾಗಿದೆ. ಆದ್ದರಿಂದ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಕುಜದೋಷದ ಸಮಸ್ಯೆ ಇರುವುದಿಲ್ಲ. ಗ್ರಹಮೈತ್ರ ಕೂಟ ಇದ್ದಲ್ಲಿ ಹೆಚ್ಚಿನ ಶುಭ ಎಂದು ತಿಳಿದುಬರುತ್ತದೆ.
  • ಪುನರ್ವಸು ಗುರುವಿನ ನಕ್ಷತ್ರವಾಗುತ್ತದೆ. ಆದ್ದರಿಂದ ಇವರಿಗೆ ಕುಜದೋಷ ಇರುವುದಿಲ್ಲ. ಆದರೂ ಪುನರ್ವಸುವಿನ 1,2, ಮತ್ತು 2 ನೆಯ ಪಾದದಲ್ಲಿ ಜನಿಸಿರುವವರು ಕುಜಶಾಂತಿಯನ್ನು ಮಾಡುವುದು ಒಳ್ಳೆಯದು. ಪುನರ್ವಸುವಿನ ನಾಲ್ಕನೆಯ ಪಾದದಲ್ಲಿ ಜನಿಸಿದವರಿಗೆ ಯಾವುದೆ ದೋಷ ಇರುವುದಿಲ್ಲ.
  • ಪುಷ್ಯ ನಕ್ಷತ್ರವು ಶನಿಯ ನಕ್ಷತ್ರವಾಗುತ್ತದೆ. ಕುಜ ಮತ್ತು ಶನಿಗ್ರಹಗಳು ಮಿತ್ರರಲ್ಲ. ಆದರೆ ಚಂದ್ರನು ಸ್ವಕ್ಷೇತ್ರದಲ್ಲಿ ಇರುತ್ತಾನೆ . ಈ ಕಾರಣದಿಂದ ಕುಜದೋಷದ ತೊಂದರೆ ಬಾರದು. ಪುಷ್ಯ ನಕ್ಷತ್ರವನ್ನು ಶುಭ ನಕ್ಷತ್ರವೆಂದು ಪರಿಗಣಿಸಲಾಗಿದೆ. ಪುಷ್ಯ ನಕ್ಷತ್ರವನ್ನು ಮಂಗಳಕಾರ್ಯಗಳಲ್ಲಿ ಬಳಸಲಾಗುತ್ತದೆ.
  • ಆಶ್ಲೇಷ ನಕ್ಷತ್ರವು ಬುಧನ ನಕ್ಷತ್ರವಾಗುತ್ತದೆ. ಈ ನಕ್ಷತ್ರದ ಎಲ್ಲಾ ಪಾದಗಳೂ ಕಟಕದಲ್ಲಿ ಬರುತ್ತವೆ. ಬುಧನು ಸಹ ಶುಭಗ್ರಹವಾಗುತ್ತಾನೆ. ಆದ್ದರಿಂದ ಈ ನಕ್ಷತ್ರದಲ್ಲಿ ಜನಿಸಿರುವವರಿಗೆ ಕುಜದೋಷದಿಂದ ತೊಂದರೆ ಉಂಟಾಗುವುದಿಲ್ಲ. ಬುಧನ ಅಧಿದೇವತೆಯು ವಿಷ್ಣು. ವಧು ಮತ್ತು ವರರನ್ನು ಲಕ್ಷ್ಮಿ ನಾರಾಯಣರಿಗೆ ಹೋಲಿಸುತ್ತಾರೆ. ಇದರಿಂದ ಕುಜದೋಷದ ಭಯ ಬೇಡ.
  • ಜೋತಿಷ್ಯದಲ್ಲಿ ರವಿಯನ್ನು ರಾಜಗ್ರಹ ಎಂದು ಪರಿಗಳಿಸಲಾಗಿದೆ. ರವಿಯು ಆತ್ಮಕಾರಕನಾಗುತ್ತಾನೆ. ಉತ್ತರಾ ನಕ್ಷತ್ರವು ರವಿಯ ನಕ್ಷತ್ರವಾಗುತ್ತದೆ. ಆದ್ದರಿಂದ ಈ ನಕ್ಷತ್ರದಲ್ಲಿ ಜನಿಸಿದ ವಧು ವರರಿಗೆ ಕುಜದೋಷ ಇರುವುದಿಲ್ಲ.
  • ಸ್ವಾತಿ ನಕ್ಷತ್ರವು ರಾಹುವಿನ ನಕ್ಷತ್ರವಾಗುತ್ತದೆ. ಸಾಮಾನ್ಯವಾಗಿ ರಾಹು ಎಂದರೆ ಎಲ್ಲರಿಗೂ ಅಗೋಚರ ಭಯವಿರುತ್ತದೆ. ಆದರೆ ಸ್ವಾತಿಯನ್ನು ಬಹುತೇಕ ಎಲ್ಲಾ ಮಂಗಳ ಕಾರ್ಯಗಳಿಗೆ ಬಳಸುತ್ತೇವೆ. ಇದಕ್ಕೆ ಕಾರಣ ಸ್ವಾತಿ ನಕ್ಷತ್ರವನ್ನುಮಹಾನಕ್ಷತ್ರ ಎಂದು ಪರಿಗಣಿಸಲಾಗಿದೆ. ಅದ್ದರಿಂದ ಸ್ವಾತಿ ನಕ್ಷತ್ರ ಸಂಜಾತರಿಗೆ ಕುಜದೋಷ ಇರುವುದಿಲ್ಲ.
  • ಅನೂರಾಧ ನಕ್ಷತ್ರವು ವೃಶ್ಚಿಕ ರಾಶಿಯಲ್ಲಿ ಬರುತ್ತದೆ. ಈ ರಾಶಿಯಲ್ಲಿ ಚಂದ್ರನು ನೀಚನಾಗುತ್ತಾನೆ. ಆದರೂ ಸಹ ಅನುರಾಧ ನಕ್ಷತ್ರವನ್ನು ಮಂಗಳಕಾರ್ಯಗಳಿಗೆ ಬಳಸುತ್ತೇವೆ. ಇದಕ್ಕೆ ಕಾರಣವೆಂದರೆ ಅನೂರಾಧ ನಕ್ಷತ್ರವು ಶನಿಯ ನಕ್ಷತ್ರವಾದರೂ ಮಹಾ ನಕ್ಷತ್ರ ಎಂದು ಪರಿಗಣಿಸಲಾಗಿದೆ. ಈ ರಾಶಿಯು ಕುಜನ ಸ್ವಕ್ಷೇತ್ರವಾಗುತ್ತದೆ. ಆದ್ದರಿಂದ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಕುಜದೋಷ ಇರುವುದಿಲ್ಲ.
  • ಪೂರ್ವಾಷಾಢ ನಕ್ಷತ್ರವು ಶುಕ್ರನ ನಕ್ಷತ್ರವಾದರೂ ಗುರುವಿನ ರಾಶಿಯಲ್ಲಿ ಬರುತ್ತದೆ. ಆದ್ದರಿಂದ ಪೂರ್ವಾಷಾಢ ನಕ್ಷತ್ರದಲ್ಲಿ ಜನಿಸಿದವರಿಗೆ ಕುಜದೋಷದ ತೊಂದರೆ ಇರುದು.
  • ಉತ್ತಾರಾಷಾಢ ನಕ್ಷತ್ರವು ರವಿಯ ನಕ್ಷತ್ರವಾಗುತ್ತದೆ. ಆದ್ದರಿಂದ ಇವರಿಗೆ ಕುಜದೋಷ ಇರದು. ಮಕರ ರಾಶಿಯು ಕುಜನಿಗೆ ಉಚ್ಚಕ್ಷೇತ್ರ ಆಗುತ್ತದೆ.
  • ಶ್ರವಣ ನಕ್ಷತ್ರವಾದಲ್ಲಿ ಮಕರ ರಾಶಿ ಆಗುತ್ತದೆ ಮತ್ತು ಉಚ್ಚ ಕ್ಷೇತ್ರವಾಗುತ್ತದೆ. ಆದ್ದರಿಂದ ಕುಜದೋಷದ ತೊಂದರೆ ಇರದು.
  • ಮೀನ ರಾಶಿಯು ಗುರುವಿನ ರಾಶಿಯಾಗುತ್ತದೆ. ಉತ್ತರಾಭಾದ್ರ ಮತ್ತು ರೇವತಿ ನಕ್ಷತ್ರಗಳು ಮೀನರಾಶಿಯಲ್ಲಿ ಬರುತ್ತವೆ. ರಾಶಿ ಸಂಧಿ ಇಲ್ಲದ ಪಕ್ಕದಲ್ಲಿ ಉತ್ತರಾಭಾದ್ರ ಮತ್ತು ರೇವತಿ ನಕ್ಷತ್ರದಲ್ಲಿ ಜನಿಸಿದವರಿಗೂ ಕುಜದೋಷ ಇರದು.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.