ದೇವಾಲಯಕ್ಕೆ ಭೇಟಿ ನೀಡಿದಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ; ದೇವರ ಆಶೀರ್ವಾದ ಪಡೆಯಲು ಈ ಮಾಹಿತಿ ತಿಳಿದಿರಲಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೇವಾಲಯಕ್ಕೆ ಭೇಟಿ ನೀಡಿದಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ; ದೇವರ ಆಶೀರ್ವಾದ ಪಡೆಯಲು ಈ ಮಾಹಿತಿ ತಿಳಿದಿರಲಿ

ದೇವಾಲಯಕ್ಕೆ ಭೇಟಿ ನೀಡಿದಾಗ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ; ದೇವರ ಆಶೀರ್ವಾದ ಪಡೆಯಲು ಈ ಮಾಹಿತಿ ತಿಳಿದಿರಲಿ

ದೇವಾಲಯಕ್ಕೆ ಭೇಟಿ ನೀಡಿದಾಗ ಕೆಲ ನಿಯಮಗಳನ್ನು ಪಾಲಿಸುವುದರಿಂದ ಹೆಚ್ಚಿನ ಆಶೀರ್ವಾದವನ್ನು ಪಡೆಯಬಹುದು. ಇವು ಕಡ್ಡಾಯದ ನಿಯಮಗಳು ಅಲ್ಲದಿದ್ದರೂ ದೇವರ ಕೃಪೆಗಾಗಿ ಹೀಗೆ ಮಾಡಿದರೆ ಹೆಚ್ಚಿನ ಪ್ರಯೋಜನಗಳು ನಿಮ್ಮದಾಗುತ್ತವೆ.

ದೇವಾಲಯಕ್ಕೆ ಭೇಟಿ ನೀಡಿದಾಗ ನಮ್ಮ ನಡವಳಿಕೆ ಹೇಗೆ ಇರಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ
ದೇವಾಲಯಕ್ಕೆ ಭೇಟಿ ನೀಡಿದಾಗ ನಮ್ಮ ನಡವಳಿಕೆ ಹೇಗೆ ಇರಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ

ಕೆಲವರು ಪ್ರತಿನಿತ್ಯ ದೇವಾಲಯಕ್ಕೆ ತೆರಳುತ್ತಾರೆ. ಬಹುಕಾಲ ದೇವಾಲಯದಲ್ಲಿ ಹೆಚ್ಚಿನ ವೇಳೆಯನ್ನು ಕಳೆಯುತ್ತಾರೆ. ಆದರೆ ಯಾವುದೇ ಪ್ರಯೋಜನ ಉಂಟಾಗುವುದಿಲ್ಲ. ಇದಕ್ಕೆ ಕಾರಣ ನಾವು ಮಾಡುವ ಹತ್ತು ಹಲವು ತಪ್ಪುಗಳು. ಬೆಳಗಿನ ವೇಳೆ ದೇವಾಲಯಕ್ಕೆ ಹೋಗುವ ಮುನ್ನ ಸ್ನಾನಾದಿಗಳನ್ನು ಮುಗಿಸಿರಬೇಕು. ಆದರೆ ದೇವಾಲಯದಿಂದ ಮನೆಗೆ ಮರಳಿದ ನಂತರ ಯಾವುದೇ ಕಾರಣಕ್ಕೂ ಸ್ನಾನವನ್ನು ಮಾಡಬಾರದು. ಸ್ನಾನವನ್ನು ಮಾಡಿದಲ್ಲಿ ನಾವು ಪೂಜೆ ಮಾಡಿಸಿದ ಫಲಗಳು ಲಭಿಸದೇ ಹೋಗುತ್ತದೆ. ಸಂಜೆಯ ವೇಳೆ ದೇವಾಲಯಕ್ಕೆ ತೆರಳುವವರು ಸ್ನಾನವನ್ನು ಮಾಡಿ ದೇವಾಲಯಕ್ಕೆ ತೆರಳಬೇಕೆಂಬ ನಿಯಮವಿಲ್ಲ. ಅನಿವಾರ್ಯವಾದಲ್ಲಿ ಸೂರ್ಯಾಸ್ತದ ಮುನ್ನ ಸ್ನಾನವನ್ನು ಮುಗಿಸಿ ದೇವಾಲಯಕ್ಕೆ ತೆರಳಬೇಕು. ಶ್ರೀ ಸೂರ್ಯದೇವರ ಮತ್ತು ಶ್ರೀ ನಾಗಪ್ಪನಿಗೆ ರಾತ್ರಿಯ ವೇಳೆ ಪೂಜೆಯನ್ನು ಸಲ್ಲಿಸಬಾರದು. ಆದರೆ ಸೂರ್ಯನಿಗೆ ಸೂರ್ಯಾಸ್ತದ ಮುನ್ನ ಪೂಜೆಯನ್ನು ಸಲ್ಲಿಸಬಹುದು. ಆದರೂ ಸೂರ್ಯನ ಪೂಜೆಯನ್ನು ಬೆಳೆಗಿನ ವೇಳೆ ಮಾಡುವುದು ಒಳ್ಳೆಯದು. ದೇವಾಲಯದಲ್ಲಿ ಕತ್ತಲಿರುವ ವೇಳೆಯಲ್ಲಿ ಪೂಜೆಯನ್ನು ಸಲ್ಲಿಸಬಾರದು. ಇದರಿಂದ ಯಾವುದೇ ರೀತಿಯಲ್ಲಿ ಶುಭ ಫಲಗಳನ್ನು ಪಡೆಯಲು ಸಾದ್ಯವಾಗುವುದಿಲ್ಲ. ದೇವಸ್ಥಾನಕ್ಕೆ ತೆರಳುವ ಸ್ತ್ರೀ ಪುರುಷರು ಹಣೆಯಲ್ಲಿ ಕುಂಕುಮ ಅಥವಾ ತಿಲಕವನ್ನು ಧರಿಸಿರಬೇಕು.

ಬೆಳಗಿನ ವೇಳೆಯಾಗಲಿ ಅಥವಾ ಸಂಜೆಯ ವೇಳೆಯಾಗಲಿ ದೇವಾಲಯಕ್ಕೆ ತೆರಳುವ ಮುನ್ನ ಮನೆಯಲ್ಲಿನ ದೇವರಮುಂದೆ ದೀಪವನ್ನು ಬೆಳಗಿಸಬೇಕು. ಆದರೆ ಕೇವಲ ಊದಿನ ಕಡ್ಡಿಯನ್ನು ಮಾತ್ರ ಬೆಳಗಿಸಬಾರದು. ಕಾರಣವೆಂದರೆ ದೇವರಿಗೆ ಊದಿನಕಡ್ಡಿಯನ್ನು ಹೊತ್ತಿಸಿದ ತಕ್ಷಣ ಭಗವಂತನಿಗೆ ಹಸಿವು ಆರಂಭವಾಗುತ್ತದೆ. ಇದು ನಮ್ಮಲ್ಲಿರುವ ನಂಬಿಕೆ. ಆದ್ದರಿಂದ ಶುದ್ಧ ತುಪ್ಪ ಅಥವಾ ಎಣ್ಣೆಯ ದೀಪವನ್ನು ಹೊತ್ತಿಸುವುದು ಬಲುಮುಖ್ಯ. ಆನಂತರ ಮನೆಯಿಂದಲೇ ಪೂಜಾಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬಹುದು. 1.3 ಅಥವಾ 8 ಸಂಖ್ಯೆಗಳಲ್ಲಿ ಹಣ್ಣನ್ನು ತೆಗೆದುಕೊಂಡು ಹೋಗಬಾರದು. ಮನೆಯಲ್ಲಿ ಬಳಸುವ ಅಕ್ಕಿ, ಬೇಳೆ ಮುಂತಾದುವುಗಳನ್ನು ದೇವರಿಗೆ ಅರ್ಪಿಸುವುದರಲ್ಲಿ ಯಾವುದೇ ತಪ್ಪಿಲ್ಲ. ತಲೆಯನ್ನು ಶುಭ್ರವಾಗಿ ಇಟ್ಟುಕೊಂಡಿರಬೇಕು. ಮನೆಯಿಂದ ದೇವಾಲಯಕ್ಕೆ ಹೊರಡುವ ಕುಟುಂಬದ ಹಿರಿಯರಿಗೆ ದೇವಾಲಕ್ಕೆ ತೆರಳುವ ಬಗ್ಗೆ ತಿಳಿಸಬೇಕು. ಅವರ ಆಶೀರ್ವಾದ ಅಥವಾ ಶುಭ ಹಾರೈಕೆಯನ್ನು ಪಡೆಯಬೇಕು. ಕೆಲವೊಮ್ಮೆ ಮನೆಯಲ್ಲಿರುವ ಮಕ್ಕಳು ತಿನ್ನವ ಮತ್ತು ಕುಡಿಯುವ ಆಹಾರವನ್ನು ನೀಡಿ ದೇವಾಲಯಕ್ಕೆ ತೆರಳಲು ತಿಳಿಸುತ್ತಾರೆ. ಅವಶ್ಯಕವಾಗಿ ಅವರ ಬೇಡಿಕೆಯನ್ನು ಪೂರೈಸಿ ದೇವಾಯಕ್ಕೆ ತೆರಳುವುದು ಒಳ್ಳೆಯದು.

ಪೂಜಾ ಸಾಮಗ್ರಿಗಳ ಜೊತೆಯಲ್ಲಿ 1 ಹಣದ ನಾಣ್ಯ ಇರಿಸುವುದು ಅತಿಮುಖ್ಯ

ದೇವಾಲಯವು ಮನೆಯ ಬಳಿಯುಲ್ಲಿ ಇದ್ದರೂ, ಅವಶ್ಯಕವಾಗಿ ಕಾಲನ್ನು ತೊಳೆದು ದೇವಾಲಯವನ್ನು ಪ್ರವೇಶಿಸಬೇಕು. ದೇವಾಲಯಕ್ಕೆ ಕೇವಲ ಹೂವು, ಊದಿನಕಡ್ಡಿ, ಕರ್ಪೂರ, ಹಣ್ಣು ಅಥವಾ ತೆಂಗಿನಕಾಯಿಯನ್ನು ಮಾತ್ರಾ ತೆಗೆದುಕೊಂಡುಹೋಗಬಾರದು. ಹೂವು, ಊದಿನಕಡ್ಡಿ, ಕರ್ಪೂರದ ಜೊತೆಯಲ್ಲಿ ಹಣ್ಣು ಅಥವಾ ತೆಂಗಿನಕಾಯಿಯನ್ನು ತೆಗೆದುಕೊಂಡುಹೋಗಬೇಕು. ಇದರ ಜೊತೆಯಲ್ಲಿ ವಿಳ್ಳೆದೆಲೆ ಮತ್ತು ಚೂರು ಅಡಿಕೆಯನ್ನು ತೆಗೆದುಕೊಂಡು ಹೋಗುವುದು ಅತಿಮುಖ್ಯ. ಪೂಜಾ ಸಾಮಗ್ರಿಗಳ ಜೊತೆಯಲ್ಲಿ ಒಂದು ಹಣದ ನಾಣ್ಯವನ್ನು ಇರಿಸುವುದು ಅತಿಮುಖ್ಯ. ಇದರಿಂದ ಮಾತ್ರ ನಮಗೆ ನಿರೀಕ್ಷಿತ ಫಲಗಳು ಲಭ್ಯವಾಗುತ್ತವೆ.

ಪ್ರತಿ ದಿನವೂ ಪೂಜಾಸಾಮಗ್ರಿಗಳನ್ನು ತೆಗೆದುಕೊಂಡುಹೋಗಬೇಕೆಂಬ ನಿಯಮವಿಲ್ಲ. ಆದರೆ ದೇವರಿಗೆ ಮಂಗಳಾರತಿ ಮಾಡುವ ವೇಳೆ ನಿಮ್ಮ ಮನದ ಬೇಡಿಕೆಯನ್ನು ಸಲ್ಲಿಸುವುದು ಒಳ್ಳೆಯದು. ಮೂಲ ದೇವರ ಬಳಿಯಲ್ಲಿ ಜನಸಂದಣಿ ಹೆಚ್ಚಿದ್ದರೆ ಕೆಲವರು ನವಗ್ರಹಗಳಿಗೆ ನಮಸ್ಕಾರ ಮಾಡುತ್ತಾರೆ. ಇದು ತಪ್ಪಾದ ಅಭ್ಯಾಸ. ಯಾವುದೇ ದೇವಾಲಯವಾದರೂ ಮೊದಲು ಗಣಪತಿಗೆ ವಂದಿಸಬೇಕು. ಆನಂತರ ಹೆಣ್ಣುದೇವರಿಗೆ ನಮಸ್ಕರಿಸಬೇಕು. ಆನಂತರವಷ್ಟೆ ಮೂಲ ದೇವರಿಗೆ ನಮಸ್ಕರಿಸಬೇಕು. ಮನೆಗೆ ಮರಳುವ ವೇಳೆಯಲ್ಲಿ ಮಾತ್ರ ನವಗ್ರಹಗಳಿಗೆ ಪೂಜೆ ಸಲ್ಲಿಸಬೇಕು. ಆದರೆ ನವಗ್ರಗಳಿಗೆ ಬಾಗಿ ನಮಸ್ಕರಿಸಬಾರದು. ಆದರೆ ದೇವಾಲಯಕ್ಕೆ ತೆಗೆದುಕೊಂಡುಹೋದ ಹಣದ ನಾಣ್ಯಗಳನ್ನು ಮನೆಗೆ ಮರಳಿ ತರಬಾರದು. ಆನಂತರ ನಿಮ್ಮ ಮನೆಗೆ ಮಾತ್ರ ತೆರಳಬೇಕು. ಮನೆಗೆ ತೆರಳಿದ ಬಳಿಕ ಕಾಲನ್ನು ತೊಳೆಯಬಾರದು.

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ದೇವಾಲಯದ ನಿಯಮಗಳ ಮಾಹಿತಿಯನ್ನು ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.