2025ರ ಹೊಸ ವರ್ಷದಲ್ಲಿ 11 ಬಾರಿ ಶುಕ್ರ ಸಂಕ್ರಮಣ: ಈ 2 ರಾಶಿಯವರಿಗೆ ಭಾರಿ ಅದೃಷ್ಟ, ವ್ಯಾಪಾರ ವೃತ್ತಿಯಲ್ಲಿ ಅನಿರೀಕ್ಷಿತ ಯಶಸ್ಸು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  2025ರ ಹೊಸ ವರ್ಷದಲ್ಲಿ 11 ಬಾರಿ ಶುಕ್ರ ಸಂಕ್ರಮಣ: ಈ 2 ರಾಶಿಯವರಿಗೆ ಭಾರಿ ಅದೃಷ್ಟ, ವ್ಯಾಪಾರ ವೃತ್ತಿಯಲ್ಲಿ ಅನಿರೀಕ್ಷಿತ ಯಶಸ್ಸು

2025ರ ಹೊಸ ವರ್ಷದಲ್ಲಿ 11 ಬಾರಿ ಶುಕ್ರ ಸಂಕ್ರಮಣ: ಈ 2 ರಾಶಿಯವರಿಗೆ ಭಾರಿ ಅದೃಷ್ಟ, ವ್ಯಾಪಾರ ವೃತ್ತಿಯಲ್ಲಿ ಅನಿರೀಕ್ಷಿತ ಯಶಸ್ಸು

ಪ್ರತಿ ವರ್ಷ ಶುಕ್ರ ಗ್ರಹದ ಸಂಚಾರವು ಬಹಳ ವಿಶೇಷವಾಗಿರುತ್ತದೆ. ಶುಕ್ರನು ಯಾವ ರಾಶಿಯಲ್ಲಿ ಸಾಗುತ್ತಾನೆ ಎಂಬುದರ ಮೂಲಕ ಆ ರಾಶಿಯವರ ಅದೃಷ್ಟ ಬದಲಾಗುತ್ತದೆ. 2025ರ ಮೊದಲ ತಿಂಗಳಲ್ಲಿ ಶುಕ್ರನು, ಶನಿ ಅಧಿಪತಿಯಾಗಿರುವ ಕುಂಭ ರಾಶಿಯಲ್ಲಿ ಇರುತ್ತಾನೆ. ಶುಕ್ರನು ಯಾವ ರಾಶಿಯಲ್ಲಿ ಯಾವ ತಿಂಗಳು ಸಂಚಾರ ಮಾಡುತ್ತಾನೆ ಎಂದು ತಿಳಿಯೋಣ.

2025ರ ಹೊಸ ವರ್ಷದಲ್ಲಿ 11 ಬಾರಿ ಶುಕ್ರ ಸಂಕ್ರಮಣ
2025ರ ಹೊಸ ವರ್ಷದಲ್ಲಿ 11 ಬಾರಿ ಶುಕ್ರ ಸಂಕ್ರಮಣ (PC: Canva)

ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳು ಕಾಲಕಾಲಕ್ಕೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತವೆ. ಪ್ರತಿ ರಾಶಿಯಲ್ಲೂ ನಿರ್ದಿಷ್ಟ ಸಮಯದವರೆಗೆ ಗ್ರಹಗಳು ನೆಲೆಸುತ್ತವೆ. ಜಾತಕದಲ್ಲಿ ಶುಕ್ರನು ಉತ್ತಮ ಮನೆಯಲ್ಲಿದ್ದರೆ, ಸಂಪತ್ತು, ವೈವಾಹಿಕ ಸಂತೋಷ, ಖ್ಯಾತಿ, ಕಲೆ, ಪ್ರತಿಭೆ, ಸೌಂದರ್ಯ, ಪ್ರಣಯ, ಫ್ಯಾಷನ್, ವಿನ್ಯಾಸ ಇತ್ಯಾದಿ ಕ್ಷೇತ್ರಗಳ ಯಶಸ್ಸಿಗೆ ಕಾರಣನಾಗುತ್ತಾನೆ ಎಂದು ಪರಿಗಣಿಸಲಾಗುತ್ತದೆ. ಶುಕ್ರನು ತುಲಾ ಮತ್ತು ವೃಷಭ ರಾಶಿಯ ಅಧಿಪತಿ. ಹೊಸ ವರ್ಷದಲ್ಲಿ ಶುಕ್ರ ಗ್ರಹವು ಒಂದಲ್ಲ, 11 ಬಾರಿ ಸಂಕ್ರಮಿಸುತ್ತದೆ. ಈ ಶುಕ್ರ ಗ್ರಹದ ಸಂಚಾರವು ಪ್ರತಿ ಬಾರಿಯೂ ಬಹಳ ವಿಶೇಷವಾಗಿರುತ್ತದೆ. ಮೊದಲನೆಯದಾಗಿ, 2025ರ ಮೊದಲ ತಿಂಗಳು ಜನವರಿಯಲ್ಲಿ ನೋಡಿದರೆ, ಶುಕ್ರನು ಶನಿ ಅಧಿಪತಿಯಾಗಿರುವ ಕುಂಭದಲ್ಲಿ ಇರುತ್ತಾನೆ. ಜನವರಿ 1, 2025 ಬುಧವಾರದಿಂದ 29 ಜನವರಿ 2025 ರ ತಡರಾತ್ರಿ 12:20ವರೆಗೆ ಕುಂಭ ರಾಶಿಯಲ್ಲಿಯೇ ಸಾಗುತ್ತಾನೆ. ಅದರ ನಂತರ ಶುಕ್ರ ಗ್ರಹವು ಮೀನ ರಾಶಿಯನ್ನು ಪ್ರವೇಶಿಸುತ್ತದೆ.

2025ರಲ್ಲಿ ರಾಶಿಗಳ ಮೇಲೆ ಶುಕ್ರನ ಪ್ರಭಾವ

ಶುಕ್ರ ಗ್ರಹವು 2025ರಲ್ಲಿ ಅನೇಕ ರಾಶಿಗಳ ಮೇಲೆ ತನ್ನ ಪರಿಣಾಮ ಬೀರುತ್ತದೆ. ಶುಕ್ರನಿಂದಾಗಿ ಮೀನ ರಾಶಿಯವರಿಗೆ ಹೆಚ್ಚಿನ ಲಾಭದ ಸಾಧ್ಯತೆಗಳಿವೆ. 2025ರಲ್ಲಿ ಶುಕ್ರನು ಈ ರಾಶಿಯಲ್ಲಿ ದೀರ್ಘಕಾಲ ಉಳಿಯುತ್ತಾನೆ ಮತ್ತು ಈ ರಾಶಿಯವರಿಗೆ ಆಶೀರ್ವಾದವನ್ನು ನೀಡುತ್ತಾನೆ. ಇದಲ್ಲದೆ ಶುಕ್ರನು ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಲಾಭವನ್ನು ತರುತ್ತಾನೆ. 2025ರಲ್ಲಿ ಪ್ರತಿ ರಾಶಿಯಲ್ಲಿ ಶುಕ್ರನು ಯಾವಾಗ ಬದಲಾಗುತ್ತಾನೆ ಎಂಬುದನ್ನು ಇಲ್ಲಿ ತಿಳಿಯೋಣ.

ಮೀನ ರಾಶಿ

ಶುಕ್ರ ಗ್ರಹವು, 2025ರ ಜನವರಿ 29 ಬುಧವಾರದಂದು ಮಧ್ಯಾಹ್ನ 12:20 ನಿಂದ ಮೇ 31 ಶನಿವಾರ ಮಧ್ಯಾಹ್ನ 3:08 ವರೆಗೆ ಮೀನ ರಾಶಿಯಲ್ಲಿ ಸಾಗುತ್ತದೆ. ಅದರ ನಂತರ ಶುಕ್ರನು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ.

ಮೇಷ ರಾಶಿ

ಶುಕ್ರ ಗ್ರಹವು, 2025ರ ಮೇ 31 ಶನಿವಾರದಂದು ಬೆಳಿಗ್ಗೆ 3:08 ರಿಂದ ಜೂನ್ 28 ಶನಿವಾರ ಮಧ್ಯಾಹ್ನ 2:34 ರವರೆಗೆ ಮೇಷ ರಾಶಿಯಲ್ಲಿ ಸಾಗಲಿದೆ. ಅದರ ನಂತರ ಅದು ತನ್ನದೇ ಆದ ವೃಷಭ ರಾಶಿಯನ್ನು ಪ್ರವೇಶಿಸುತ್ತದೆ.

ವೃಷಭ ರಾಶಿ

2025ರ ಜೂನ್ 28, ಶನಿವಾರದಂದು ಬೆಳಿಗ್ಗೆ 2:34 ರಿಂದ ಜುಲೈ 24 ಗುರುವಾರ ಮಧ್ಯಾಹ್ನ 3:18 ರವರೆಗೆ ಶುಕ್ರ ಗ್ರಹವು ವೃಷಭ ರಾಶಿಯಲ್ಲಿ ಸಾಗುತ್ತದೆ. ಅದರ ನಂತರ ಅದು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ.

ಮಿಥುನ ರಾಶಿ

2025 ರ ಜುಲೈ 24 ಗುರುವಾರ ಮಧ್ಯಾಹ್ನ 3:18 ರಿಂದ ಆಗಸ್ಟ್ 19 ಮಂಗಳವಾರ ರಾತ್ರಿ 11:59 ರವರೆಗೆ ಶುಕ್ರ ಗ್ರಹವು ಮಿಥುನ ರಾಶಿಯಲ್ಲಿ ಸಾಗಲಿದೆ. ಅದರ ನಂತರ ಕಟಕ ರಾಶಿಯನ್ನು ಪ್ರವೇಶಿಸುತ್ತದೆ.

ಕಟಕ ರಾಶಿ

2025 ಆಗಸ್ಟ್ 19, ಮಂಗಳವಾರ ರಾತ್ರಿ 11:59 ರಿಂದ ಸೆಪ್ಟೆಂಬರ್ 13 ಶನಿವಾರ ಸಂಜೆ 4:40 ರವರೆಗೆ ಕಟಕ ರಾಶಿಯಲ್ಲಿ ಶುಕ್ರ ಗ್ರಹವು ಸಾಗುತ್ತದೆ. ಅದರ ನಂತರ ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ.

ಸಿಂಹ ರಾಶಿ

ಸೆಪ್ಟೆಂಬರ್ 13, ಶನಿವಾರ ಸಂಜೆ 4:40 ರಿಂದ ಅಕ್ಟೋಬರ್ 8 ಬುಧವಾರ ರಾತ್ರಿ 7:13 ರವರೆಗೆ ಸಿಂಹ ರಾಶಿಯಲ್ಲಿ ಶುಕ್ರ ಗ್ರಹವು ಸಾಗಲಿದೆ. ಅದರ ನಂತರ ಕನ್ಯಾ ರಾಶಿಗೆ ಪ್ರವೇಶಿಸುತ್ತದೆ.

ಕನ್ಯಾ ರಾಶಿ

ಅಕ್ಟೋಬರ್ 8 ಬುಧವಾರ ಸಂಜೆ 7:13 ರಿಂದ ನವೆಂಬರ್ 1 ಶನಿವಾರ ಸಂಜೆ 4:04 ರವರೆಗೆ ಶುಕ್ರ ಗ್ರಹವು ಕನ್ಯಾ ರಾಶಿಯಲ್ಲಿ ಸಾಗಲಿದೆ. ಅದರ ನಂತರ ಶುಕ್ರ ಗ್ರಹವು ತುಲಾ ರಾಶಿಯನ್ನು ಪ್ರವೇಶಿಸುತ್ತದೆ.

ತುಲಾ ರಾಶಿ

ನವೆಂಬರ್ 1 ಶನಿವಾರ ರಾತ್ರಿ 4:04 ರಿಂದ ನವೆಂಬರ್ 26 ಬುಧವಾರ, 7:55 ರವರೆಗೆ ತುಲಾ ರಾಶಿಯಲ್ಲಿ ಶುಕ್ರ ಗ್ರಹವು ಸಾಗುತ್ತದೆ. ನಂತರ ಅದು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತದೆ.

ವೃಶ್ಚಿಕ ರಾಶಿ

ನವೆಂಬರ್ 26 ಬುಧವಾರದಂದು ಬೆಳಿಗ್ಗೆ 7:55 ರಿಂದ ಡಿಸೆಂಬರ್ 19 ಶುಕ್ರವಾರದವರೆಗೆ/ 20ನೇ ಡಿಸೆಂಬರ್ ಶನಿವಾರದಂದು ಬೆಳಿಗ್ಗೆ ಅಂದರೆ ಡಿಸೆಂಬರ್ 20ನೇ ತಾರೀಖಿನಂದು ಸೂರ್ಯೋದಯಕ್ಕೆ ಮುನ್ನ ಬೆಳಗ್ಗೆ 6.42 ಗಂಟೆಗೆ ವೃಶ್ಚಿಕ ರಾಶಿಯಲ್ಲಿರುತ್ತದೆ.

ಧನು ರಾಶಿ

ಡಿಸೆಂಬರ್‌ 19/20, ಶುಕ್ರವಾರ/ಶನಿವಾರ, ಬೆಳಿಗ್ಗೆ 6:42 ರಿಂದ, ಅಂದರೆ ಶನಿವಾರ, ಡಿಸೆಂಬರ್ 20 ರಂದು, ಸೂರ್ಯೋದಯಕ್ಕೆ ಬೆಳಗ್ಗೆ 6:42ಕ್ಕೆ ಧನು ರಾಶಿಯನ್ನು ಪ್ರವೇಶಿಸುತ್ತದೆ. ಧನು ರಾಶಿಯಲ್ಲಿ ಶುಕ್ರ ಸಂಚಾರವು ವರ್ಷಾಂತ್ಯದವರೆಗೆ ಮುಂದುವರಿಯುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.