ನವರಾತ್ರಿಯ 6ನೇ ದಿನ ಕಾತ್ಯಾಯಿನಿ ದೇವಿ ಪೂಜಾ ವಿಧಾನ ಹೇಗಿರುತ್ತೆ? ಮಂತ್ರ, ಮಹತ್ವ, ತಿಳಿಯಬೇಕಾದ ಅಂಶಗಳಿವು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನವರಾತ್ರಿಯ 6ನೇ ದಿನ ಕಾತ್ಯಾಯಿನಿ ದೇವಿ ಪೂಜಾ ವಿಧಾನ ಹೇಗಿರುತ್ತೆ? ಮಂತ್ರ, ಮಹತ್ವ, ತಿಳಿಯಬೇಕಾದ ಅಂಶಗಳಿವು

ನವರಾತ್ರಿಯ 6ನೇ ದಿನ ಕಾತ್ಯಾಯಿನಿ ದೇವಿ ಪೂಜಾ ವಿಧಾನ ಹೇಗಿರುತ್ತೆ? ಮಂತ್ರ, ಮಹತ್ವ, ತಿಳಿಯಬೇಕಾದ ಅಂಶಗಳಿವು

ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಕಾತ್ಯಾಯಿನಿ ದೇವಿ ರೂಪವು ಬಹಳ ಭವ್ಯ ಮತ್ತು ಪ್ರಕಾಶಮಾನವಾಗಿರುತ್ತೆ. ತಾಯಿಗೆ ಎಂಟು ಕೈಗಳಿದ್ದು, ಒಂದೊಂದು ಕೈಯಲ್ಲಿ ಒಂದೊಂದು ಅಸ್ತ್ರವನ್ನು ಹಿಡಿದಿರುತ್ತಾಳೆ. ದೇವಿಯ ವಾಹನವು ಸಿಂಹವಾಗಿದೆ. ಕಾತ್ಯಾಯಿನಿಯ ಪೂಜಾ ವಿಧಾನವನ್ನು ತಿಳಿಯೋಣ.

ನವರಾತ್ರಿಯ 6ನೇ ದಿನ ಕಾತ್ಯಾಯಿನಿ ದೇವಿ ಪೂಜೆ ವಿಧಾನ ಮತ್ತು ಮಹತ್ವವನ್ನು ಇಲ್ಲಿ ನೀಡಲಾಗಿದೆ.
ನವರಾತ್ರಿಯ 6ನೇ ದಿನ ಕಾತ್ಯಾಯಿನಿ ದೇವಿ ಪೂಜೆ ವಿಧಾನ ಮತ್ತು ಮಹತ್ವವನ್ನು ಇಲ್ಲಿ ನೀಡಲಾಗಿದೆ.

ಹಿಂದೂ ಧರ್ಮದಲ್ಲಿ, ಉದಯ ತಿಥಿಯ ಪ್ರಕಾರ ನವರಾತ್ರಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ವರ್ಷ, ನವರಾತ್ರಿಯಲ್ಲಿ ಚತುರ್ಥಿ ದಿನಾಂಕ ಹೆಚ್ಚಾಗುತ್ತಿದೆ, ಈ ಕಾರಣದಿಂದಾಗಿ ಚತುರ್ಥಿಯ ಉಪವಾಸವು 2 ದಿನ ಇರುತ್ತೆ. ಚತುರ್ಥಿ ಉಪವಾಸವನ್ನು ಅಕ್ಟೋಬರ್ 6 ಮತ್ತು 7 ರಂದು ಆಚರಿಸಲಾಗುತ್ತದೆ. ಅಕ್ಟೋಬರ್ 8 ರಂದು ಪಂಚಮಿ ಉಪವಾಸವನ್ನು ಆಚರಿಸಲಾಗುತ್ತದೆ. ಅಕ್ಟೋಬರ್ 9 ರಂದು ಷಷ್ಠಿ ಉಪವಾಸವನ್ನು ಆಚರಿಸಲಾಗುವುದು. ಹಿಂದೂ ಕ್ಯಾಲೆಂಡರ್ ಪ್ರಕಾರ, ನವರಾತ್ರಿಯ 6ನೇ ದಿನವನ್ನು ಅಕ್ಟೋಬರ್ 8ರ ಮಂಗಳವಾರ ಆಚರಿಸಲಾಗುತ್ತದೆ. ನವರಾತ್ರಿಯ ಸಮಯದಲ್ಲಿ ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಕಾತ್ಯಾಯಿನಿಯ ರೂಪವು ಬಹಳ ಭವ್ಯ ಮತ್ತು ಪ್ರಕಾಶಮಾನವಾಗಿದೆ. ದೇವಿಗೆ 8 ಕೈಗಳಿದ್ದು, ತಾಯಿಯ ವಾಹನವು ಸಿಂಹವಾಗಿದೆ. ಮಾ ಕಾತ್ಯಾಯಿನಿಯ ಪೂಜಾ ವಿಧಾನವನ್ನು ತಿಳಿಯೋಣ.

ನವರಾತ್ರಿಯ 6ನೇ ದಿನ ಕಾತ್ಯಾಯಿನಿ ದೇವಿ ಪೂಜಾ ವಿಧಾನ

  • ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿದ ನಂತರ ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು
  • ದೇವಿಯ ಪ್ರತಿಮೆಯನ್ನು ಶುದ್ಧ ನೀರು ಅಥವಾ ಗಂಗಾ ನೀರಿನಿಂದ ಸ್ವಚ್ಛಗೊಳಿಸಿ
  • ದೇವಿಗೆ ಪ್ರಿಯವಾದ ಹಳದಿ ಬಟ್ಟೆಗಳನ್ನು ಅರ್ಪಿಸಬೇಕು
  • ಪೂಜೆಯ ಪ್ರಕ್ರಿಯೆಯ ಭಾಗವಾಗಿ ತಾಯಿಗೆ ಹೂವುಗಳನ್ನು ಅರ್ಪಿಸಬೇಕು
  • ತಾಯಿಗೆ ರೋಲಿ ಕುಂಕುಮವನ್ನು ಹಚ್ಚಬೇಕು
  • ಬಳಿಕ ಐದು ರೀತಿಯ ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ
  • ಕಾತ್ಯಾಯಿನಿ ದೇವಿಗೆ ಜೇನುತುಪ್ಪವನ್ನು ಅರ್ಪಿಸುವುದು ಒಳ್ಳೆಯದು
  • ಸಾಧ್ಯವಾದಷ್ಟು ದೇವಿ ಕಾತ್ಯಾಯಿನಿಯನ್ನು ಧ್ಯಾನಿಸಿ
  • ಅಂತಿಮವಾಗಿ ಆರತಿ ಮಾಡಿ ಪೂಜಾ ವಿಧಾನವನ್ನು ಮುಗಿಸಬೇಕು

ಕಾತ್ಯಾಯಿನಿ ದೇವಿಯನ್ನು ಪೂಜಿಸಿದರೆ ಮಾಡುವ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎಂಬುದನ್ನು ಭಕ್ತರ ನಂಬಿಕೆಯಾಗಿದೆ. ಅಕ್ಟೋಬರ್ 8 ರಂದು ಬಂದಿರುವ ನವರಾತ್ರಿಯ 6ನೇ ದಿನದ ಶುಭ ಮುಹೂರ್ತವನ್ನು ತಿಳಿಯವುದು ಮುಖ್ಯವಾಗಿರುತ್ತದೆ. ಅಕ್ಟೋಬರ್ 8ರ ಮಂಗಳವಾರ ಬೆಳಗ್ಗೆ 11.45 ರಿಂದ ಮಧ್ಯಾಹ್ನ 12.32 ರವರಿಗೆ ಅಭಿಜಿತ್ ಮುಹೂರ್ತ ಇರುತ್ತದೆ. ಅದೇ ದಿನ ಸಂಜೆ 6.42 ರಿಂದ ರಾತ್ರಿ 8.22 ರವರಿಗೆ ಅಮೃತ ಕಾಲ ಇರುತ್ತದೆ.

ಪಂಚಾಂಗದ ಪ್ರಕಾರ, ಪಂಚಮಿ ತಿಥಿ ಸೂರ್ಯೋದಯದ ಸಮಯದಲ್ಲಿ ಇರುತ್ತದೆ. ಬೆಳಿಗ್ಗೆ 11.18 ರಿಂದ ಷಷ್ಠಿ ತಿಥಿ ನಡೆಯುತ್ತಿದೆ. ಅಂತಹ ಪರಿಸ್ಥಿತಿಯಲ್ಲಿರುತ್ತದೆ. ಹಿಂದೂ ಧರ್ಮದಲ್ಲಿ ಪೂಜೆಯ ಸಮಯದಲ್ಲಿ ಉದಯ ತಿಥಿಯನ್ನು ನೋಡಲಾಗುತ್ತದೆ, ಇದರ ಪ್ರಕಾರ ಪಂಚಮಿ ತಿಥಿ ಮಾನ್ಯವಾಗಿರುತ್ತದೆ. ದುರ್ಗಾ ದೇವಿಯ ಆರನೇ ಅವತಾರವಾದ ಕಾತ್ಯಾಯಿನಿ ದೇವಿಯನ್ನು ಅಕ್ಟೋಬರ್ 8 ರಂದು ಪೂಜಿಸಲಾಗುತ್ತದೆ.

ಕಾತ್ಯಾಯಿನಿ ದೇವಿ ಪೂಜೆ ವೇಳೆ ಪಠಿಸಬೇಕಾದ ಮಂತ್ರಗಳು

ಓಂ ದೇವಿ ಕಾತ್ಯಾಯೈ ನಮಃ

ಯಾ ದೇವಿ ಸರ್ವಭೂತೇಷು ಕಾತ್ಯಾಯಿನೀ ರೂಪನ್

ನಮಸ್ತಸ್ತೈ ನಮಸ್ತಸ್ತೈ ನಮಸ್ತಸ್ತೈ ನಮೋ ನಮಃ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.