Sankashta Chaturthi: ನೂರು ವರ್ಷಗಳ ಬಳಿಕ ಕೂಡಿ ಬಂದಿದೆ ಅಪರೂಪದ ರಾಜಯೋಗ; 4 ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Sankashta Chaturthi: ನೂರು ವರ್ಷಗಳ ಬಳಿಕ ಕೂಡಿ ಬಂದಿದೆ ಅಪರೂಪದ ರಾಜಯೋಗ; 4 ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ

Sankashta Chaturthi: ನೂರು ವರ್ಷಗಳ ಬಳಿಕ ಕೂಡಿ ಬಂದಿದೆ ಅಪರೂಪದ ರಾಜಯೋಗ; 4 ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ

Sankashta Chaturthi: ಸಂಕಷ್ಟ ಚತುರ್ಥಿಯಂದು ಉಪವಾಸ ವ್ರತ ಆಚರಿಸುವುದರಿಂದ ಸಂಕಷ್ಟಗಳು ದೂರಾಗುತ್ತವೆ ಎಂಬ ನಂಬಿಕೆ ಇದೆ. ಆ ಕಾರಣಕ್ಕೆ ಹಲವರು ಪ್ರತಿ ತಿಂಗಳು ತಪ್ಪದೇ ಸಂಕಷ್ಟ ಚತುರ್ಥಿ ಆಚರಿಸುತ್ತಾರೆ. ಇಂದು (ಜ.29) ಸಂಕಷ್ಟ ಚತುರ್ಥಿ. ಈ ದಿನ ಅಪರೂಪದ ರಾಜಯೋಗ ಸಂಭವಿಸಲಿದ್ದು, ಕೆಲವು ರಾಶಿಯವರಿಗೆ ಶುಭವಾಗಲಿದೆ.

ಸಂಕಷ್ಟ ಚತುರ್ಥಿ 2024
ಸಂಕಷ್ಟ ಚತುರ್ಥಿ 2024 (HT File Photo)

ಹಿಂದೂ ಧರ್ಮದಲ್ಲಿ ಪ್ರತಿ ತಿಂಗಳು ಕೃಷ್ಣ ಪಕ್ಷದ ನಾಲ್ಕನೇ ದಿನವನ್ನು ಸಂಕಷ್ಟ ಚತುರ್ಥಿಯನ್ನಾಗಿ ಆಚರಿಸಲಾಗುತ್ತದೆ. ಆ ದಿನ ಗಣೇಶನನ್ನು ಪೂಜಿಸಲಾಗುತ್ತದೆ. ಇದು ಕಷ್ಟಗಳನ್ನು ಪರಿಹಾರ ಮಾಡುವ ವಿನಾಯಕನ ವ್ರತಾಚರಣೆಯಾಗಿದೆ. ಬಹಳಷ್ಟು ಜನರು ತಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಲು ಸಂಕಷ್ಟ ಚತುರ್ಥಿಯನ್ನು ವ್ರತವನ್ನು ಕೈಗೊಳ್ಳುತ್ತಾರೆ. ಮಾಘ ಮಾಸದ ಕೃಷ್ಣ ಪಕ್ಷದ ನಾಲ್ಕನೇ ದಿನವಾದ ಜನವರಿ 29 ರಂದು ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಗಣೇಶನನ್ನು ಪೂಜಿಸುವ ಈ ದಿನದಂದು ಮಹಿಳೆಯರು ತಮ್ಮ ಸಂತತಿಯು ನೂರಾರು ವರ್ಷಗಳ ಕಾಲ ಸಂತೋಷದಿಂದ ಮತ್ತು ದೀರ್ಘಾಯುಷ್ಯದಿಂದ ಇರಬೇಕೆಂದು ಹಾರೈಸಲು ಉಪವಾಸ ಮಾಡುತ್ತಾರೆ. ಸಂಕಷ್ಟ ಚತುರ್ಥಿಯಂದು ಉಪವಾಸವಿದ್ದು ಗಣಪತಿಯನ್ನು ಪೂಜಿಸುವುದರಿಂದ ಇಷ್ಟಾರ್ಥಗಳು ನೆರವೇರುತ್ತವೆ ಮತ್ತು ಎಲ್ಲಾ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.

ನಿಯಮಗಳ ಪ್ರಕಾರ ಸಂಕಷ್ಟ ಚತುರ್ಥಿಯಂದು ಉಪವಾಸ ಮತ್ತು ಪೂಜೆಯನ್ನು ಮಾಡಿದರೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಗೆ ಯಾವುದೇ ರೀತಿಯ ಕೊರತೆಯಾಗುವುದಿಲ್ಲ ಎಂದು ನಂಬಲಾಗಿದೆ. ಪಂಚಾಂಗದ ಪ್ರಕಾರ ಈ ವರ್ಷ ಸಂಕಷ್ಟ ಚತುರ್ಥಿಯ ಉಪವಾಸವನ್ನು ಜನವರಿ 29, 2024 ರಂದು ಆಚರಿಸಲಾಗುತ್ತದೆ. ಈ ವ್ರತವನ್ನು ಆಚರಿಸುವುದರಿಂದ ಮಕ್ಕಳ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ಗಣೇಶನ ಭಕ್ತರು ನಂಬುತ್ತಾರೆ. ಸಂಕಷ್ಟ ಚೌತಿಯಂದು ಬೆಳಿಗ್ಗೆ ಬೇಗ ಎದ್ದು, ಸ್ನಾನ ಮಾಡಿ ಗಣೇಶನ ಪೂಜೆ ಮಾಡಬೇಕು. ಧೂಪ, ದೀಪ, ನೈವೇದ್ಯಗಳಿಂದ ಪೂಜಿಸಬೇಕು. ಲಡ್ಡು, ಎಳ್ಳು, ಬೆಲ್ಲ ಮತ್ತು ತುಪ್ಪವನ್ನು ನೈವೇದ್ಯ ಮಾಡಬೇಕು. ಪೂಜೆಯ ನಂತರ ಕುಟುಂಬ ಸದಸ್ಯರು ಎಳ್ಳು–ಬೆಲ್ಲದಿಂದ ಮಾಡಿದ ಪದಾರ್ಥಗಳನ್ನು ಪ್ರಸಾದದ ರೂಪದಲ್ಲಿ ತೆಗೆದುಕೊಳ್ಳಬಹುದು. ಸುಮಾರು ನೂರು ವರ್ಷಗಳ ನಂತರ ಸಂಕಷ್ಟ ಚತುರ್ಥಿಯ ದಿನದಂದು ಶುಭ ಯೋಗಗಳು ಕೂಡಿಬಂದಿದೆ.

ಧನು ರಾಶಿಯಲ್ಲಿ ಸೂರ್ಯ, ಶುಕ್ರ ಮತ್ತು ಬುಧ ಗ್ರಹಗಳು ಸೇರುವುದರಿಂದ ತ್ರಿಗ್ರಾಹಿ ಯೋಗ ಉಂಟಾಗುತ್ತದೆ. ಅಷ್ಟೇ ಅಲ್ಲದೇ, ಶೋಭನ ಯೋಗದ ರಚನೆಯಿಂದಾಗಿ, ಕುಂಭ ರಾಶಿಯವರು ಇತರ ರಾಶಿಯವರೊಂದಿಗೆ ಅತ್ಯುತ್ತಮ ಲಾಭವನ್ನು ಪಡೆಯಲಿದ್ದಾರೆ. ಇದು ಕೆಲವು ರಾಶಿಗಳ ಜಾತಕಗಳಿಗೆ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಆ ಅದೃಷ್ಟದ ರಾಶಿಗಳು ಯಾವುವು ಮತ್ತು ಅವರ ಜೀವನದಲ್ಲಿ ಹೇಗೆ ಸಂತೋಷ ಹೆಚ್ಚುತ್ತದೆ?

ಇದನ್ನೂ ಓದಿ: Naivedyam: ಯಾವ ದೇವರಿಗೆ ಯಾವ ನೈವೇದ್ಯ ಅರ್ಪಿಸಿದರೆ ಶ್ರೇಷ್ಠ? ಇಲ್ಲಿದೆ ಮಾಹಿತಿ

ತುಲಾ ರಾಶಿ

ಒಂದೇ ಗ್ರಹದಲ್ಲಿ ಮೂರು ರಾಶಿಗಳ ಆಗಮನದಿಂದ ಉಂಟಾಗುವ ತ್ರಿಗ್ರಾಹಿ ಯೋಗವು ತುಲಾ ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಅವರು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಕಾಣಲಿದ್ದಾರೆ. ಗಣೇಶನ ಕೃಪೆಯಿಂದ ಅವರ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ. ಈ ರಾಶಿಯ ಜಾತಕದಲ್ಲಿದ್ದ ದೀರ್ಘಕಾಲದ ಸಮಸ್ಯೆಗಳು ದೂರವಾಗುತ್ತವೆ. ವ್ಯಾಪಾರದಲ್ಲಿ ಬೆಳವಣಿಗೆಗೆ ಅವಕಾಶಗಳಿವೆ. ಹೊಸ ಆದಾಯ ಮಾರ್ಗಗಳು ಸೃಷ್ಟಿಯಾಗಲಿವೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಸಂಕಷ್ಟ ಚತುರ್ಥಿಯು ಒಳ್ಳೆಯದನ್ನು ಮಾಡಲಿದೆ. ಅವರಿಗೆ ಕೆಲಸದ ಸ್ಥಳದಲ್ಲಿ ಒಳ್ಳೆಯ ಸುದ್ದಿ ಸಿಗಲಿದೆ. ಭೂಮಿ ಅಥವಾ ವಾಹನ ಖರೀದಿ ಮಾಡುವ ಸಾಧ್ಯತೆಯಿದೆ. ಹಿಂದೆ ನೀವು ಮಾಡಿದ ಹೂಡಿಕೆಗಳಿಂದ ಉತ್ತಮ ಆದಾಯವನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರಿಂದ ಬೆಂಬಲ ಸಿಗಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ.

ಕುಂಭ ರಾಶಿ

ಧನು ರಾಶಿಯನ್ನು ಪ್ರವೇಶಿಸುವ ಮೂರು ಗ್ರಹಗಳು ಹಣದ ಹರಿವಿಗೆ ಹೊಸ ಮಾರ್ಗಗಳನ್ನು ರೂಪಿಸುತ್ತವೆ. ಸಾಮಾಜದಲ್ಲಿ ಈ ರಾಶಿಯವರ ಪ್ರತಿಷ್ಠೆ ಹೆಚ್ಚುತ್ತದೆ. ಈ ರಾಶಿಯವರಿಗೆ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ. ಶುಭ ಯೋಗದ ಪರಿಣಾಮವಾಗಿ ನೀವು ನಿಮ್ಮ ಜೀವನವನ್ನು ಆರಾಮವಾಗಿ ಕಳೆಯುತ್ತೀರಿ.

ಮೀನ ರಾಶಿ

ಸಂಕಷ್ಟ ಚತುರ್ಥಿ ದಿನದಂದು, ಮೀನ ರಾಶಿಯವರು ತಮಗೆ ಬರಬೇಕಾದ ಹಣವನ್ನು ಮರಳಿ ಪಡೆಯುತ್ತಾರೆ. ಸಂಪತ್ತು ಹೆಚ್ಚುತ್ತದೆ. ವ್ಯಾಪಾರದಲ್ಲಿ ಬೆಳವಣಿಗೆಗೆ ಅವಕಾಶಗಳಿವೆ. ಆರೋಗ್ಯ ಸುಧಾರಿಸುತ್ತದೆ. ದಾಂಪತ್ಯ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.