ಮೇಷದಿಂದ ಮೀನವರೆಗೆ; ಅಧ್ಯಾತ್ಮಿಕ ಬೆಳವಣಿಗೆಗಾಗಿ ಯಾವ ರಾಶಿಯವರು ಯಾವ ಮಂತ್ರಗಳನ್ನು ಪಠಿಸಬೇಕು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೇಷದಿಂದ ಮೀನವರೆಗೆ; ಅಧ್ಯಾತ್ಮಿಕ ಬೆಳವಣಿಗೆಗಾಗಿ ಯಾವ ರಾಶಿಯವರು ಯಾವ ಮಂತ್ರಗಳನ್ನು ಪಠಿಸಬೇಕು?

ಮೇಷದಿಂದ ಮೀನವರೆಗೆ; ಅಧ್ಯಾತ್ಮಿಕ ಬೆಳವಣಿಗೆಗಾಗಿ ಯಾವ ರಾಶಿಯವರು ಯಾವ ಮಂತ್ರಗಳನ್ನು ಪಠಿಸಬೇಕು?

ರಾಶಿಗಳಿಗೆ ಅನುಗುಣವಾಗಿ ಮಂತ್ರಗಳನ್ನು ಪಠಿಸಿದರೆ ನಿಮ್ಮ ಅಧ್ಯಾತ್ಮಿಕ ಬೆಳವಣಿಗೆಯಾಗುತ್ತದೆ. ಧೈರ್ಯ, ಸಂಪತ್ತು, ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಸೇರಿದಂತೆ ದೊಡ್ಡ ಬದಲಾವಣೆಗಳನ್ನು ಕಾಣಬಹುದು. ನಿರ್ದಿಷ್ಟ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಏನೆಲ್ಲಾ ಪರಿವರ್ತನೆಗಳು ಆಗಲಿವೆ ಅನ್ನೋದನ್ನು ಇಲ್ಲಿ ತಿಳಿಯೋಣ.

ಮೇಷದಿಂದ ಮೀನವರೆಗೆ; ಅಧ್ಯಾತ್ಮಿಕ ಬೆಳವಣಿಗೆಗಾಗಿ ಯಾವ ರಾಶಿಯವರು ಯಾವ ಮಂತ್ರಗಳನ್ನು ಪಠಿಸಬೇಕು?
ಮೇಷದಿಂದ ಮೀನವರೆಗೆ; ಅಧ್ಯಾತ್ಮಿಕ ಬೆಳವಣಿಗೆಗಾಗಿ ಯಾವ ರಾಶಿಯವರು ಯಾವ ಮಂತ್ರಗಳನ್ನು ಪಠಿಸಬೇಕು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ರಾಶಿಯವರಿಗೆ ನಿರ್ದಿಷ್ಟ ಮಂತ್ರಗಳಿವೆ ಎಂದು ನಂಬಲಾಗಿದೆ. ಎಲ್ಲಾ ರಾಶಿಯವರ ಅಂತರ್ಗತ ಗುಣಗಳು ಮತ್ತು ಅಧ್ಯಾತ್ಮಿಕ ಆಕಾಂಕ್ಷಗಳು ಈ ಮಂತ್ರಗಳಿಗೆ ಹೊಂದಿಕೊಳ್ಳುತ್ತವೆ ಎಂದು ಹೇಳಲಾಗಿದೆ. ಮಂತ್ರಗಳನ್ನು ಶ್ರದ್ದಭಕ್ತಿಯಿಂದ, ಪ್ರಮಾಣಿಕವಾಗಿ ಪಠಿಸಿದಾಗ ಪ್ರತಿಯೊಬ್ಬರಲ್ಲೂ ಅಧ್ಯಾತ್ಮಿಕ ಬೆಳವಣಿಗೆಯಾಗುತ್ತದೆ. ಜೀವನದ ಶಕ್ತಿಗಳಿಗೆ ಸಮತೋಲವನ್ನು ತರುತ್ತದೆ. ಯಾವ ರಾಶಿಯವರು ಯಾವ ಮಂತ್ರಗಳನ್ನು ಪಠಿಸಬೇಕೆಂಬುದನ್ನು ಇಲ್ಲಿ ನೀಡಲಾಗಿದೆ.

ಮೇಷ ರಾಶಿ: ಓಂ ನಮೋ ಭಗವತೇ ವಾಸುದೇವಾಯ

ಮೇಷ ರಾಶಿಯವರು ಓಂ ನಮೋ ಭಗವತೇ ವಾಸುದೇವಾಯ ಮಂತ್ರವನ್ನು ಪಠಿಸುವುದರಿಂದ ಪರಮ ಅನಂತ ಚೇತನ ಅಥವಾ ವ್ಯಕ್ತಿಯನ್ನು ಸೂಚಿಸುತ್ತದೆ. ಓಂ ಶಬ್ದ ಬ್ರಹ್ಮನನ್ನು ಪ್ರತಿನಿಧಿಸುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ಭಗವಾನ್ ವಿಷ್ಣುವಿನೊಂದಿಗೆ ಸಂಪರ್ಕಿಸುತ್ತದೆ. ಇದು ಧೈರ್ಯ, ನಾಯಕತ್ವ ಮತ್ತು ರಕ್ಷಣೆಯನ್ನು ಉತ್ತೇಜಿಸುತ್ತದೆ.

ವೃಷಭ ರಾಶಿ: ಓಂ ಶ್ರೀಂ ಮಹಾಲಕ್ಷ್ಮಿಯೈ ನಮಃ

ವೃಷಭ ರಾಶಿಯು ಸ್ಥಿರತೆ ಮತ್ತು ವಸ್ತು ಸಮೃದ್ಧಿಯನ್ನು ಬಯಸುತ್ತದೆ. ಓಂ ಶ್ರೀಂ ಮಹಾಲಕ್ಷ್ಮಿಯೇ ನಮಃ ಎಂಬ ಮಂತ್ರವನ್ನು ಪಠಿಸಿದಾಗ ಸಮೃದ್ಧಿ, ಸಂಪತ್ತು ಹಾಗೂ ಪೋಷಣೆ ಶಕ್ತಿಗಳಿಗಾಗಿ ಲಕ್ಷ್ಮಿ ದೇವಿಯನ್ನು ಆಹ್ವಾನಿಸಿದಂತಾಗುತ್ತದೆ.

ಮಿಥುನ ರಾಶಿ: ಓಂ ಬುಧಾಯ ನಮಃ

ಈ ರಾಶಿಯ ಬುದ್ದಿಶಕ್ತಿ ಮತ್ತು ಹೊಂದಿಕೊಳ್ಳುವಿಕೆಗೆ ಹೆಸರುವಾಸಿಯಾಗಿದೆ. ಬುದ್ಧನನ್ನು ಗೌರವಿಸಲು ಓಂ ಬುಧಾಯ ನಮಃ ಎಂದು ಪಠಿಸುತ್ತಾರೆ. ಅವರ ಅನ್ವೇಷಣೆಯಲ್ಲಿ ಸ್ಪಷ್ಟ ಸಂವಹನ, ಕಲಿಕೆ ಮತ್ತು ಬಹುಮುಖತೆಯನ್ನು ಉತ್ತೇಜಿಸುತ್ತೆ

ಕಟಕ ರಾಶಿ: ಓಂ ಐಂ ಹ್ರೀಂ ಕ್ಲೀಂ ಚಾಮುಂಡಯೇ ವಿಚೇ

ಕಟಕ ರಾಶಿಯವರು ಭಾವನೆಗಳು ಮತ್ತು ಕುಟುಂಬದೊಂದಿಗೆ ಆಳವಾದ ಸಂಬಂಧವನ್ನು ಹೊಂದಿರುತ್ತಾರೆ. ಭಾವನಾತ್ಮಕ ಶಕ್ತಿ, ರಕ್ಷಣೆ ಹಾಗೂ ಆಂತರಿಕ ಶಾಂತಿಯನ್ನು ಉತ್ತೇಜಿಸಲು ಚಾಮುಂಡಿ ದೇವಿಯನ್ನು ಆವಾಹಿಸಲು ಓಂ ಐಂ ಹ್ರೀಂ ಕ್ಲೀಂ ಚಾಮುಂಡಯೇ ವಿಚೇ ಮಂತ್ರವನ್ನು ಜಪಿಸಬೇಕು.

ಸಿಂಹ ರಾಶಿ: ಓಂ ಸೂರ್ಯಾಯ ನಮಃ

ಸಿಂಹ ರಾಶಿಯವರು ವರ್ಚಸ್ಸು ಮತ್ತು ನಾಯಕತ್ವ ಆಧಾರಿತವಾಗಿದ್ದಾರೆ. ಭಗವಾನ್ ಸೂರ್ಯ ನೊಂದಿಗೆ ಸಂಪರ್ಕ ಸಾಧಿಸಲು ಓಂ ಸೂರ್ಯಾಯ ನಮಃ ಎಂದು ಪಠಿಸಬೇಕು. ಹೀಗೆ ಮಾಡಿದಾಗ ಎಲ್ಲಾ ಪ್ರಯತ್ನಗಳಿಗೆ ಚೈತನ್ಯ, ಆತ್ಮವಿಶ್ವಾಸ ಹಾಗೂ ಧಾನಾತ್ಮಕ ಶಕ್ತಿ ಹೆಚ್ಚಲಿದೆ.

ಕನ್ಯಾ ರಾಶಿ: ಓಂ ಶ್ರೀ ಧನ್ವಂತರಿ ನಮಃ

ಕನ್ಯಾ ರಾಶಿಯವರು, ನಿಖರವಾದ ಮತ್ತು ಆರೋಗ್ಯ ಪ್ರಜ್ಞೆಯುಳ್ಳವರು, ತಮ್ಮ ಹಾದಿಯಲ್ಲಿ ಚಿಕಿತ್ಸೆ, ಯೋಗಕ್ಷೇಮ ಹಾಗೂ ಅಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ಭಗವಂತನ ಧನ್ವಂತರಿಯನ್ನು ಆಹಾವಿಸಲು ಓಂ ಶ್ರೀ ಧನ್ವಂತರೇ ನಮಃ ಮಂತ್ರವನ್ನು ಪಠಿಸಬೇಕು.

ತುಲಾ ರಾಶಿ: ಓಂ ಶುಕ್ರಾಯ ನಮಃ

ಸಾಮರಸ್ಯ ಮತ್ತು ಸಮತೋಲವನ್ನು ತುಲಾ ರಾಶಿಯವರು ಬಯಸುತ್ತಾರೆ. ಶುಕ್ರನನ್ನು ಗೌರವಿಸಲು ಓಂ ಶುಕ್ರಾಯ ನಮಃ ಮಂತ್ರವನ್ನು ಜಪಿಸಬೇಕು. ಹೀಗೆ ಮಾಡುವುದರಿಂದ ಜೀವನದಲ್ಲಿ ಪ್ರೀತಿ, ಸೌಂದರ್ಯ ಹಾಗೂ ಕಲಾತ್ಮಕ ಅಭಿವ್ಯಕ್ತಿಯನ್ನು ಉತ್ತೇಜಿಸುತ್ತದೆ.

ವೃಶ್ಚಿಕ ರಾಶಿ: ಓಂ ದಂ ದುರ್ಗಾಯೈ ನಮಃ

ವೃಶ್ಚಿಕ ರಾಶಿಯವರು ತೀವ್ರವಾದ ಮತ್ತು ಪರಿವರ್ತಿತ ಸವಾಲಿನ ಸಮಯದಲ್ಲಿ ರಕ್ಷಣೆ, ಧೈರ್ಯ ಹಾಗೂ ಅಧ್ಯಾತ್ಮಿಕ ಶಕ್ತಿಯನ್ನು ಆಹ್ವಾನಿಸಲು, ದುರ್ಗಾದೇವಿಯೊಂದಿಗೆ ಸಂಪರ್ಕ ಸಾಧಿಸಲು ಓಂ ದಂ ದುರ್ಗಾಯೇಯೈ ನಮಃ ಮಂತ್ರವನ್ನು ಪಠಿಸಬೇಕು.

ಧನು ರಾಶಿ: ಓಂ ನಮೋ ನಾರಾಯಾಣ

ಈ ರಾಶಿಯವರು ತಾತ್ವಿಕ ಮತ್ತು ಸಾಹಿಸಿಗಳಾಗಿದ್ದಾರೆ. ಭಗವಾನ್ ವಿಷ್ಣುವನ್ನು ಸ್ಮರಣೆ ಮತ್ತು ಗೌರವಿಸಲು ಓಂ ನಮೋ ನಾರಾಯಾಣ ಎಂದು ಪಠಿಸಬೇಕು. ಈ ರಾಶಿಯವ ಜೀವನದಲ್ಲಿ ಅಧ್ಯಾತ್ಮಿಕ ಬೆಳವಣಿಗೆ, ಬುದ್ದಿವಂತಿಕೆ ಹಾಗೂ ದೈವಿಕ ಆಶೀರ್ವಾದವನ್ನು ಈ ಮಂತ್ರ ಉತ್ತೇಜಿಸುತ್ತದೆ.

ಮಕರ ರಾಶಿ: ಓಂ ಶಾನ್ ಶನೈಶ್ಚರಾಯ ನಮಃ

ಮಕರ ರಾಶಿಯವರು ಶಿಸ್ತುಬದ್ದ ಮತ್ತು ಮಹತ್ವಕಾಂಕ್ಷೆಯುಳ್ಳವರು. ಶನಿಯೊಂದಿಗೆ ಸಂಪರ್ಕ ಸಾಧಿಸಲು ಓಂ ಶಾನ್ ಶನಿಚರಾಯ ನಮಃ ಎಂದು ಪಠಿಸಿಬೇಕು. ಅನ್ವೇಷಣೆ, ಶಿಸ್ತು, ಕರ್ಮದ ಸಮತೋಲನವನ್ನು ಬೆಳಿಸಿಕೊಳ್ಳಬಹುದು.

ಕುಂಭ ರಾಶಿ: ನಮೋ ಭಗವತೇ ವಾಸುದೇವಾಯ

ಕುಂಭ ರಾಶಿ ಮಾನವೀಯ ಹಾಗೂ ಪ್ರಗತಿಪರರು. ಓಂ ನಮೋ ಭಗವತೇ ವಾಸುದೇವಯ ಎಂದು ಪಠಿಸಿದಾಗ ಸಾಮರಸ್ಯ, ಸಹಾನುಭೂತಿ ಮತ್ತು ಅಧ್ಯಾತ್ಮಿಕ ಜ್ಞಾನೋದಯದ ಮೂಲಕ ಭಗವಾನ್ ವಿಷ್ಣುವನ್ನು ಆಹ್ವಾನಿಸುತ್ತಾರೆ.

ಮೀನ ರಾಶಿ: ಓಂ ನಮೋ ನಾರಾಯಣ

ಮೀನ ರಾಶಿಯವರು ಸಹಾನುಭೂತಿ ಮತ್ತು ಅರ್ಥಗರ್ಭಿತದ ಸಂಕೇತ. ಭಗವಾನ್ ವಿಷ್ಣುವಿನ ಫೋಷಣೆ ಮತ್ಸ್ಯ ಅವತಾರದಲ್ಲಿ ಸಂಪರ್ಕಿಸಲು ಓಂ ನಮೋ ನಾರಾಯಾಣ ಎಂದು ಪಠಿಸಿ. ಆಗ ಅಧ್ಯಾತ್ಮಿಕ ಅರಿವು ಹೆಚ್ಚಾಗುತ್ತೆ, ಸಹಾನುಭೂತಿ ಹಾಗೂ ದೈವಿಕ ರಕ್ಷಣೆಯನ್ನು ಉತ್ತೇಜಿಸುತ್ತದೆ.

ಗಮನಿಸಿ: ಈ ಬರಹದಲ್ಲಿರುವ ಸಲಹೆಯು ಜನ್ಮದಿನಾಂಕವನ್ನು ಆಧರಿಸಿದೆ. ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.