ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Sixth Sense: ಆರನೇ ಇಂದ್ರಿಯ ಜಾಗೃತಗೊಳಿಸೋದು ಹೇಗೆ; ಅಂತಃಪ್ರಜ್ಞೆ ಬಲಪಡಿಸಲು ಜ್ಯೋತಿಷ್ಯ ಸಲಹೆ ಇಲ್ಲಿದೆ

Sixth Sense: ಆರನೇ ಇಂದ್ರಿಯ ಜಾಗೃತಗೊಳಿಸೋದು ಹೇಗೆ; ಅಂತಃಪ್ರಜ್ಞೆ ಬಲಪಡಿಸಲು ಜ್ಯೋತಿಷ್ಯ ಸಲಹೆ ಇಲ್ಲಿದೆ

ನಮ್ಮೊಳಗೆ ಜಾಗೃತವಾಗಿರುವ ಆರನೇ ಇಂದ್ರಿಯವು ಎಲ್ಲಾ ಸಮಯದಲ್ಲೂ ಸಕ್ರಿಯವಾಗಿರುವುದಿಲ್ಲ. ಅದರ ಉಪಸ್ಥಿತಿ ತಿಳಿಯಲು ಮತ್ತು ಅದನ್ನು ಅಭಿವೃದ್ಧಿಪಡಿಸಲು ಮತ್ತು ಒಳಗಿನ ಅಂತಃಪ್ರಜ್ಞೆಯನ್ನು ಹೆಚ್ಚಿಸಲು ನೀವು ಪ್ರಯತ್ನಿಸಬೇಕು. ಅದಕ್ಕಾಗಿ ಕೆಲವೊಂದು ಜ್ಯೋತಿಷ್ಯ ಸಲಹೆಗಳು ಇಲ್ಲಿವೆ.

Sixth Sense: ಆರನೇ ಇಂದ್ರಿಯ ಜಾಗೃತಗೊಳಿಸೋದು ಹೇಗೆ
Sixth Sense: ಆರನೇ ಇಂದ್ರಿಯ ಜಾಗೃತಗೊಳಿಸೋದು ಹೇಗೆ (Canva)

ನಮಗೆ ತಿಳಿದಿರುವಂತೆ ದೃಷ್ಟಿ, ಶ್ರವಣ, ರುಚಿ, ವಾಸನೆ ಮತ್ತು ಸ್ಪರ್ಶ ಇವು ಐದು ಪ್ರಾಥಮಿಕ ಇಂದ್ರಿಯಗಳು. ನಮ್ಮಲ್ಲಿ ಕೆಲವರು ಆರನೇ ಇಂದ್ರಿಯ ಅಥವಾ ಸಿಕ್ಸ್ತ್ ಸೆನ್ಸ್ ಬಗ್ಗೆ ಸದಾ ಜಾಗೃತರಾಗಿರುತ್ತಾರೆ. ಸಾಮಾನ್ಯವಾಗಿ ಮಾತನಾಡುವುದಾಗ ತುಸು ಬುದ್ಧಿವಂತಿಕೆ ತೋರಿದಾಗ ಸಿಕ್ಸ್ತ್ ಸೆನ್ಸ್ ಎಚ್ಚರ ಆಯ್ತು ಎನ್ನುವುದನ್ನು ಕೇಳಿರುತ್ತೇವೆ. ಇದು ನಮ್ಮ ಐದು ಇಂದ್ರಿಯಗಳು ಮಾಡುವ ಕೆಲಸಕ್ಕಿಂತ ಹೆಚ್ಚಿನದಕ್ಕೆ ಸಂಬಂಧಿಸಿದೆ. ನಮ್ಮ ಅತೀಂದ್ರಿಯ ಸಾಮರ್ಥ್ಯವನ್ನು ನಿಯಂತ್ರಿಸುವ ಬ್ರಹ್ಮಾಂಡವೇ ನಮ್ಮ ಮನಸ್ಸಿನೊಳಗೆ ಇರುವ ಆರನೇ ಇಂದ್ರಿಯವಾಗಿದೆ. ವಿಶೇಷವೆಂದರೆ ಆರನೇ ಇಂದ್ರಿಯವು ಉಳಿದ ಐದು ಇಂದ್ರಿಯಗಳಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿದೆ. ಇಷ್ಟೇ ಅಲ್ಲದೆ ಇದು ಆಸಕ್ತಿದಾಯಕವೂ ಹೌದು.

ನಮಗೆ ತಿಳಿಯದಂತೆ ನಮ್ಮ ಮನಸ್ಸಿನೊಳಗೆ ಜಾಗೃತವಾಗಿರುವ ಈ ಆರನೇ ಇಂದ್ರಿಯವನ್ನು ನಾವು ಆಗಾಗ್ಗೆ ನಿರ್ಲಕ್ಷಿಸಿದರೂ, ನಮ್ಮ ಅತೀಂದ್ರಿಯ ಕೌಶಲ್ಯಗಳು ಮತ್ತು ಅಂತಃಪ್ರಜ್ಞೆಯನ್ನು ಪ್ರವೇಶಿಸಲು ಇದು ನಮಗೆ ಅನುಮತಿಸುತ್ತದೆ. ಹಾಗಂತಾ ಎಲ್ಲರಲ್ಲೂ ಎಲ್ಲಾ ಸಮಯದಲ್ಲೂ ಆರನೇ ಇಂದ್ರಿಯ ಸಕ್ರಿಯವಾಗಿರುವುದಿಲ್ಲ. ಅದರ ಉಪಸ್ಥಿತಿ ತಿಳಿಯಲು ಮತ್ತು ಅದನ್ನು ಅಭಿವೃದ್ಧಿಪಡಿಸಲು ಮತ್ತು ಒಳಗಿನ ಅಂತಃಪ್ರಜ್ಞೆಯನ್ನು ಹೆಚ್ಚಿಸಲು ನೀವು ಪ್ರಯತ್ನಿಸಬೇಕು. ಅದಕ್ಕಾಗಿ ಕೆಲವೊಂದು ಸಲಹೆಗಳಿವೆ.

ಆಂತರಿಕ ಆಲೋಚನೆಗಳನ್ನು ಆಲಿಸಿ

ಆರನೇ ಇಂದ್ರಿಯದ ಸಾಮರ್ಥ್ಯ ಹೆಚ್ಚಿಸಲು ನೀವು ಬಯಸಿದರೆ, ಮೊದಲಿಗೆ ನಿಮ್ಮ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಿ. ನಿಮ್ಮ ಸಾಮರ್ಥ್ಯವನ್ನು‌ ನೀವಾಗಿಯೇ ಎಂದಿಗೂ ಕಡಿಮೆ ಎಂದು ಭಾವಿಸಬೇಡಿ. ಪ್ರತಿಯೊಬ್ಬರ ಅಂತರ್‌ ಆಲೋಚನೆಗಳೇ ಭಿನ್ನ. ನಿಮ್ಮ ಸಾಮ್ರಾಜ್ಯಕ್ಕೆ ನೀವೇ ಅಧಿಪತಿ. ನಿಮ್ಮ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳಬೇಕು. ಅದಕ್ಕೂ ಮೊದಲು ನಿಮ್ಮೊಂದಿಗೆ ನೀವು ಮಾತನಾಡಬೇಕು. ನಿಮ್ಮ ಆಂತರಿಕ ಮಾರ್ಗದರ್ಶನವನ್ನು ಆಲಿಸಲು ಮತ್ತು ಅದನ್ನು ನಂಬಿ ಒಪ್ಪಿಕೊಳ್ಳಲು ಕಲಿಯಿರಿ. ಯಾವಾಗಲೂ ನಿಮ್ಮ ಅಂತಃಪ್ರಜ್ಞೆ ಮತ್ತು ಹೃದಯವನ್ನು ಅನುಸರಿಸಿ. ಎಲ್ಲವನ್ನೂ ಸಂಪೂರ್ಣ ವಿಶ್ಲೇಷಿಸಿದ ನಂತರವೇ ಮುಂದುವರೆಯಿರಿ. ನೀವು ಬಯಸಿದ್ದನ್ನು ಮಾತ್ರ ಮಾಡಿ. ಆರನೇ ಇಂದ್ರಿಯ ಬಲಪಡಿಸುವಲ್ಲಿ ಸ್ವಯಂ-ಅರಿವು ಮತ್ತು ಆತ್ಮಾವಲೋಕನಕ್ಕೆ ಗಮನ ಕೊಡಬೇಕು.

ಸಣ್ಣ ವಿಷಯಗಳಿಗೆ ಗಮನ ಕೊಡಿ

ಸುತ್ತಮುತ್ತಲಿನ ಪರಿಸರದಲ್ಲಿನ ಸಣ್ಣ ಹಾಗೂ ಸೂಕ್ಷ್ಮ ವಿಚಾರಗಳಿಗೂ ಗಮನ ಕೊಡಿ. ಇವೆಲ್ಲಾ ನಿಮ್ಮ ಆರನೇ ಇಂದ್ರಿಯಕ್ಕೆ ಸಿಗುವ ಸುಳಿವು. ದೊಡ್ಡ ವಿಷಯದಷ್ಟೇ ಸಣ್ಣ ಅಂಶಗಳಿಗೂ, ಪ್ರತಿಯೊಂದಕ್ಕೂ ಗಮನ ಕೊಡಬೇಕು. ನಿಮ್ಮ ನಿಮ್ಮ ಮಾನಸಿಕ ಸಾಮರ್ಥ್ಯಗಳನ್ನು ಗಮನಿಸಿ ಗುರುತಿಸಬೇಕು. ಸಾಮಾನ್ಯವಾಗಿ ಕಾಕತಾಳೀಯ ಎನ್ನವ ಮಾತಿದೆ. ಈ ಕೋ-ಇನ್ಸಿಡೆನ್ಸ್‌ಗೂ ನಿಮ್ಮ ಆರನೇ ಇಂದ್ರಿಯಕ್ಕೂ ಸಂಬಂಧವಿದೆ. ನಿಮ್ಮೊಂದಿಗೆ ಸಂವಹನ ನಡೆಸುವ ಅತ್ಯಂತ ಪ್ರಬಲ ಮಾರ್ಗವೇ ಈ ಕಾಕತಾಳೀಯ.

ಪರಿಸ್ಥಿತಿಗೆ ನಿಮ್ಮನ್ನು ಹೊಂದಿಕೊಳ್ಳಲು ಪ್ರಯತ್ನಿಸಿ

ಈ ಸೃಷ್ಟಿಯನ್ನು ಬದಲಾಯಿಸುವ ಪ್ರಯತ್ನ ಮಾಡದಿರಿ. ಸೃಷ್ಟಿಯ ನಿಯಮಗಳಿಗೆ ಅನುಗುಣವಾಗಿ ನಿಮ್ಮನ್ನು ಸರಿಹೊಂದಿಸಲು ಪ್ರಯತ್ನಿಸಿ. ಬದುಕಿನಲ್ಲಿ ಏನಾಗುತ್ತಿದೆಯೋ ಅದನ್ನು ಸ್ವೀಕರಿಸುವುದು ಮುಖ್ಯ. ನಿಮ್ಮ ಅಂತಃಪ್ರಜ್ಞೆಯನ್ನು ಅನುಸರಿಸಿಕೊಂಡು ಮುದುವರೆಯಿರಿ. ಒಳಗಡೆ ಜಾಗೃತವಾಗಿರುವ ಉಪಪ್ರಜ್ಞೆಯು, ನಿಮಗೆ ಅರಿವಿಲ್ಲದಂತೆ ನಿಮಗಾಗಿ ಹೆಚ್ಚು ಬುದ್ಧಿವಂತ ವಿಚಾರಗಳನ್ನು ಕೊಡುತ್ತದೆ. ನಿಮ್ಮ ಉದ್ದೇಶಗಳನ್ನು ತಲುಪಲು ಅದು ನಿಮಗೆ ಸಹಾಯ ಮಾಡುತ್ತದೆ. ನೀವು ಅದಕ್ಕೆ ಸಿದ್ಧರಾದಾಗ ಮಾತ್ರ ನಿಮ್ಮ ಆರನೇ ಇಂದ್ರಿಯ ಸಕ್ರಿಯವಾಗುತ್ತದೆ.

ನಿಮ್ಮ ಆಲೋಚನೆಗಳನ್ನು ಡೈರಿಯಲ್ಲಿ ಬರೆಯಿರಿ

ನಿತ್ಯ ಡೈರಿ ಬರೆಯುವುದು ಉತ್ತಮ ಹವ್ಯಾಸ ಮಾತ್ರವಲ್ಲ. ಇದು ನಿಮ್ಮ ಆರನೇ ಇಂದ್ರಿಯವನ್ನು ಜಾಗೃತಗೊಳಿಸಲು ನೆರವಾಗುತ್ತದೆ. ನಿಮ್ಮ ಭಾವನೆಗಳು, ಆಲೋಚನೆಗಳು, ಮನಸಿನ ಮಾತು, ಅಂತಃಪ್ರಜ್ಞೆಗಳು ಮತ್ತು ಕನಸುಗಳ ಬಗ್ಗೆ ಎಲ್ಲವನ್ನೂ ಬರೆಯಿರಿ. ಅವುಗಳನ್ನು ನೆನಪು ಮಾಡಿಕೊಳ್ಳುತ್ತಿರಿ.

ಕಂಪನಗಳ ಮೇಲೆ ಕೇಂದ್ರೀಕರಿಸಿ

ಹೊರ ಪ್ರಪಂಚದಿಂದ ನಿಮ್ಮ ಅನುಭವಕ್ಕೆ ಬರುವ ಪ್ರಜ್ಞಾಪೂರ್ವಕ ಅಂತಃಪ್ರಜ್ಞೆ ಅಥವಾ ಸಂವೇದನೆಗಳನ್ನು ವೈಬ್ಸ್ ಅಥವಾ ಕಂಪನ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ನೀವು ಯಾರನ್ನಾದರೂ ಭೇಟಿಯಾದಾಗ, ಅವರ ಬಗ್ಗೆ ನಿಮಗೆ ಏನಾದರೂ ಅಸಮಾಧಾನ ಆಗಬಹುದು. ಅಥವಾ ಕಂಫರ್ಟ್‌ ಅನಿಸದಿರಬಹುದು. ಆ ವ್ಯಕ್ತಿಯ ಬಗ್ಗೆ ನೀವು ಚೆನ್ನಾಗಿ ಭಾವಿಸುತ್ತಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಆ ಸೂಚನೆಯನ್ನು ನಿರ್ಲಕ್ಷಿಸಬೇಡಿ. ಕಲವೊಮ್ಮೆ ಅಪಾಯಕಾರಿ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ನಮ್ಮ ಆರನೇ ಇಂದ್ರಿಯ ನಮಗೆ ಅವಕಾಶ ಮಾಡಿಕೊಡುತ್ತವೆ. ಅದನ್ನು ಅಷ್ಟು ಬೇಗ ಜಾಗೃತವಾಗಿಸಬೇಕು. ಅಂಥಾ ಧನಾತ್ಮಕ ಶಕ್ತಿಯನ್ನು ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಬದುಕು ನಿಮ್ಮನ್ನು ಆಶೀರ್ವಸಿಸುವ ಅಂಶಗಳ ಮೇಲೆ ಕೇಂದ್ರೀಕರಿಸಿ. ಮುಕ್ತ ಮನಸ್ಸಿನಿಂತ ಯೋಚಿಸಿ ಹಾಗೂ ಕೆಲಸ ಮಾಡಿ. ಸಬ್‌ಕಾನ್ಶಿಯಸ್‌ ಅಥವಾ ಮನಸ್ಸಿನ ಉಪಪ್ರಜ್ಞೆಯಿಂದ ಅಗತ್ಯ ಎಚ್ಚರಿಕೆ ಸಂದೇಶಗಳನ್ನು ಪಡೆಯುವ ಮೂಲಕ ನಿಮ್ಮ ಆರನೇ ಇಂದ್ರಿಯ ಬೆಳೆಯುತ್ತಿದೆ ಎಂಬ ಬಲವಾದ ಭಾವನೆ ನಿಮ್ಮಲ್ಲಿ ಮೂಡುತ್ತದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.