OM NAMAH SHIVAYA: 1008 ಸಲ ಓಂ ನಮಃ ಶಿವಾಯ ಪಠಿಸುವುದರಿಂದ ಏನೆಲ್ಲಾ ಲಾಭಗಳಿವೆ; ಮಹತ್ವವನ್ನೂ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Om Namah Shivaya: 1008 ಸಲ ಓಂ ನಮಃ ಶಿವಾಯ ಪಠಿಸುವುದರಿಂದ ಏನೆಲ್ಲಾ ಲಾಭಗಳಿವೆ; ಮಹತ್ವವನ್ನೂ ತಿಳಿಯಿರಿ

OM NAMAH SHIVAYA: 1008 ಸಲ ಓಂ ನಮಃ ಶಿವಾಯ ಪಠಿಸುವುದರಿಂದ ಏನೆಲ್ಲಾ ಲಾಭಗಳಿವೆ; ಮಹತ್ವವನ್ನೂ ತಿಳಿಯಿರಿ

ಶಿವನಿಗೆ ಅತ್ಯಂತ ಪವಿತ್ರವಾದ ಮಂತ್ರ ಎಂದರೆ ಓಂ ನಮಃ ಶಿವಾಯ. ಈ ಮಂತ್ರವನ್ನು ಶಿವನಿಗೆ ಸಮರ್ಪಿಸಲಾಗಿದೆ. ಓಂ ಎಂಬುದು ಸಾರ್ವತ್ರಿಕ ಶಬ್ದವಾಗಿದ್ದು, ಇಂದು ಶಾಂತಿ ಮತ್ತು ಪ್ರೀತಿಯ ಸಂಕೇತವಾಗಿದೆ. ಓಂ ನಮಃ ಶಿವಾಯ ಮಂತ್ರವನ್ನು 1008 ಬಾರಿ ಪಠಿಸುವುದರಿಂದ ಆಗುವ ಪ್ರಯೋಜನಗಳು ಹಾಗೂ ಮಹತ್ವವನ್ನು ತಿಳಿಯೋಣ.

1008 ಸಲ ಓಂ ನಮಃ ಶಿವಾಯ ಪಠಿಸುವುದರಿಂದ ಏನೆಲ್ಲಾ ಲಾಭಗಳಿವೆ; ಮಹತ್ವವನ್ನೂ ತಿಳಿಯಿರಿ
1008 ಸಲ ಓಂ ನಮಃ ಶಿವಾಯ ಪಠಿಸುವುದರಿಂದ ಏನೆಲ್ಲಾ ಲಾಭಗಳಿವೆ; ಮಹತ್ವವನ್ನೂ ತಿಳಿಯಿರಿ

ಮಂತ್ರಗಳನ್ನು ಪಠಣ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಶಾಂತಿ ಸಿಗುತ್ತದೆ. ಮಾನಸಿಕವಾಗಿ ಬಲಗೊಳ್ಳುವುದಕ್ಕೂ ಮಂತ್ರಗಳು ನೆರವಾಗುತ್ತದೆ. ಸಾಮಾನ್ಯವಾಗಿ ಬಳಸುವ ಹಾಗೂ ಅತ್ಯಂತ ಪ್ರಬಲವಾದ ಮಂತ್ರವೆಂದರೆ ಓಂ ನಮಃ ಶಿವಾಯ (om namah shivaya). ಈ ಮಂತ್ರವನ್ನು ಶತಮಾನಗಳಿಂದ ಪಠಿಸಲಾಗುತ್ತಿದೆ. ಓಂ ನಮಃ ಶಿವಾಯ ಮಂತ್ರವನ್ನು 1008 ಬಾರಿ ಪಠಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವಗೆ ಇದರ ಮಹತ್ವದ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.

ಮೂದಲಿಗೆ ಓಂ ನಮಃ ಶಿವಾಯ ಅರ್ಥವನ್ನು ನೋಡುವುದಾದದರೆ ನಾ ಮಾ ಶಿ ವಾ ಯಾ ಎಂಬ ಪದಗಳು ಐದು ಅಂಶಗಳನ್ನು ಪ್ರತಿನಿಧಿಸುತ್ತವೆ. ಸಂಸ್ಕೃತದಲ್ಲಿ ಪಂಚ ಭೂತ ಎಂದು ಕರೆಯಲಾಗುತ್ತದೆ. ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ. ಸೃಷ್ಟಿಯಲ್ಲಿ ಎಲ್ಲಾ ವಸ್ತುಗಳು ಮಾನವ ದೇಹವನ್ನು ಒಳಗೊಂಡಂತೆ ಈ 5 ಅಂಶಗಳಿಂದ ಕೂಡಿವೆ. ಈ ಎಲ್ಲಾ ಭೂತಗಳಿಗೆ ಭಗವಂತ ಶಿವನು ಅಧಿಪತಿಯಾಗಿದ್ದಾನೆ. ಇದಕ್ಕೆ ಬ್ರಹ್ಮಾಂಡದ ಧ್ವನಿಯು ಓಂ ಆಗಿದೆ.

ಓಂ ಪ್ರೀತಿ ಮತ್ತು ಶಾಂತಿಯ ಸಂಕೇತವಾಗಿದೆ. ಹೀಗೆ ಓಂ ನಮಃ ಶಿವಾಯ ಎಂಬ ಮಂತ್ರ ಪರಿಸರದ ಐದು ಭೂತಗಳು ಸಮನ್ವಯಗೊಳ್ಳುತ್ತವೆ. ಐದು ಅಂಶಗಳ ನಡುವೆ ಸಾಮರಸ್ಯ, ಪ್ರೀತಿ ಮತ್ತು ಶಾಂತಿ ಇದ್ದಾಗ ನಿಮ್ಮೊಳಗೆ ಮಾತ್ರವಲ್ಲ, ನಿಮ್ಮ ಸುತ್ತಲೂ ಭಾವಪರವಶತೆ ಹಾಗೂ ಸಂತೋಷವನ್ನು ಅನುಭವಿಸುತ್ತೀರಿ.

ಮನಸ್ಸನ್ನು ಶಾಂತಗೊಳಿಸುವ ಮೂಲಕ ಓಂ ನಮಃ ಶಿವಾಯ ಪಠಣವು ನಮ್ಮೊಳಗೆ ಇರುವ ಐದು ಅಂಶಗಳನ್ನು ಕರಗತ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೌನದಿಂದ ಶಿವತತ್ತ್ವದ ಅನುಭವ ಉಂಟಾಗುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ಶಿವ ಎಲ್ಲರಲ್ಲೂ ಸೇರುತ್ತಾನೆ. ಮಂತ್ರವನ್ನು ಪಠಣ ಮಾಡುವುದರಿಂದ ನಮ್ಮೊಳಗೆ ಶಿವನ ಗುಣಲಕ್ಷಣಗಳು ಹೆಚ್ಚಾಗುತ್ತವೆ. ಇದು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಧ್ಯಾನಕ್ಕೆ ಮುನ್ನ ಈ ಮಂತ್ರವನ್ನು ಪಠಿಸುವುದು ಉತ್ತಮ ವಿಧಾನವಾಗಿದೆ.

ಓಂ ನಮಃ ಶಿವಾಯ ಮಂತ್ರವನ್ನು 1008 ಬಾರಿ ಪಠಿಸುವುದರಿಂದ ಆಗುವ ಪ್ರಯೋಜನಗಳು

ಓಂ ನಮಃ ಶಿವಾಯ ಪಠಿಸುವುದರಿಂದ ನಮ್ಮಲ್ಲಿ ಧನಾತ್ಮಕ ಶಕ್ತಿ ತುಂಬಿ ಕೆಟ್ಟ ಶಕ್ತಿ ನಿವಾರಣೆಯಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ ವಿಶ್ರಾಂತಿಗೆ ನೆರವಾಗುತ್ತದೆ

ಈ ಮಂತ್ರವನ್ನು ನಿಯಮಿತವಾಗಿ ಜಪಿಸುವುದರಿಂದ ಚಂಚಲ ಮನಸ್ಸು ದೂರವಾಗಿ ಮನಸ್ಸು ಗಟ್ಟಿಯಾಗುತ್ತೆ. ಪ್ರಶಾಂತವಾಗಲು ಸಹಾಯ ಮಾಡುತ್ತದೆ

ಓಂ ನಮಃ ಶಿವಾಯ ಮಂತ್ರ ಪಠಣದಿಂದ ನಿಮ್ಮ ಇಂದ್ರಿಯಗಳನ್ನು ನಿಯಂತ್ರಿಸಬಹುದು. ನಿಮ್ಮ ಆಲೋಚನೆಗಳನ್ನು ನಿಯಂತ್ರಿಸಲು ನೆರವಾಗುತ್ತದೆ

ಓಂ ನಮಃ ಶಿವಾಯ ಮಂತ್ರ ಜಪಿಸಿದಾಗ ಜೀವನದಲ್ಲಿ ಉದ್ದೇಶ ಮತ್ತು ನಿರ್ದೇಶನದ ಭಾವನೆಯನ್ನು ಪಡೆಯುತ್ತೀರಿ

ಈ ಮಂತ್ರವನ್ನು ಪಠಿಸುವುದರಿಂದ ದುಷ್ಟ ಗ್ರಹಗಳ ಋಣಾತ್ಮಕ ಪರಿಣಾಮಗಳನ್ನು ಸ್ವಲ್ಪ ಮಟ್ಟಿಗೆ ಪ್ರತಿರೋಧಿಸಬಹುದು. 27 ನಕ್ಷತ್ರಪುಂಜಗಳು ಮತ್ತು 9 ಗ್ರಹಳಿವೆ

ಓಂ ನಮಃ ಶಿವಾಯ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಯಶಸ್ಸು, ಬೆಳವಣಿಗೆಯನ್ನು ಕಾಣಬಹುದು. ಶಿವನ ಆಶೀರ್ವಾದ ಪಡೆಯಲು ಸಹಾಯ ಮಾಡುತ್ತದೆ

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.